ನಾನು ನನ್ನ ಹೆಂಡತಿಯ ಜೀವವನ್ನು ಮರಳಿ ತರಲಾರೆ, ಆದರೆ ಈ 46 ಜನರ ಜೀವವನ್ನಾದರೂ ಉಳಿಸಬಹುದು ಅಲ್ಲವೇ?

*ಒಬ್ಬ ಲಾಯರ್ 46 ಜನ ಅಪರಾಧಿಗಳನ್ನು ಗಲ್ಲುಶಿಕ್ಷೆಯಿಂದ ಪಾರು ಮಾಡುವುದಕ್ಕೆ ವಾದ ಮಾಡುತ್ತಿದ್ದ.*

ಆಗಲೇ ಆತನ ಸಹಾಯಕ ಬಂದು ಸಣ್ಣ ಚೀಟಿಯನ್ನು ಅವನ ಕೈಗೆ ತುರುಕಿದ. ಅದನ್ನು ನೋಡಿದ ಆ ನ್ಯಾಯವಾದಿ, ತನ್ನ ಜೇಬಿನಲ್ಲಿ ಅದನ್ನು ಇಟ್ಟುಕೊಂಡು, ವಾದವನ್ನು ಮುಂದುವರಿಸಿದ. ಮಧ್ಯಾಹ್ನದ ಊಟದ ವೇಳೆಯಾಯಿತು, ಆಗ ಜಡ್ಜ್ ನ್ಯಾಯವಾದಿಯನ್ನು ಕರೆಸಿ, “ವಾದ ಮಾಡುವಾಗ ನಿಮಗೆ ಒಂದು ಸಂದೇಶ ಬಂದಿದ್ದು ನಾನು ನೋಡಿದೆ, ಏನದು?”, ಎಂದು ಕೇಳಿದರು. ಆಗ ಆ ಲಾಯರ್, *”ನನ್ನ ಹೆಂಡತಿ ಸತ್ತಿದ್ದಾಳೆ ಜಡ್ಜ್ ಸಾಹೇಬರೇ” ಎಂದರು.* ಆ ಜಡ್ಜ್ ಆಘಾತ ಮತ್ತು ಆಶ್ಚರ್ಯದಿಂದ, “ಇಲ್ಲೇನು ಮಾಡುತ್ತಿದ್ದೀರಿ ಮೊದಲು ಮನೆಗೆ ಹೋಗಿ”, ಎಂದರು. ಆಗ ಆ ಲಾಯರ್, ನಾನು ನನ್ನ ಹೆಂಡತಿಯ ಜೀವವನ್ನು ಮರಳಿ ತರಲಾರೆ, ಆದರೆ ಈ 46 ಜನರ ಜೀವವನ್ನಾದರೂ ಉಳಿಸಬಹುದು ಅಲ್ಲವೇ? ಎಂದರು.

ಆ ಜಡ್ಜ್ ಒಬ್ಬ ಬ್ರಿಟಿಷ್ ಆಗಿದ್ದ, ಆ ಎಲ್ಲಾ 46 ಜನರನ್ನು ಬಿಡುಗಡೆ ಮಾಡುವುದಕ್ಕೆ ಆದೇಶಿಸಿದ. ಅವರೆಲ್ಲ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು.

ಆ ಲಾಯರ್ ಮತ್ತೆ ಯಾರು ಅಲ್ಲ ಸ್ನೇಹಿತರೆ, ಮಹಾನ್ ಚೇತನ *ಸರ್ದಾರ್ ವಲ್ಲಭಭಾಯಿ ಪಟೇಲ್* …

ಈಗ ಹೇಳಿ ಅವರಿಗಾಗಿ ಆ ಮೂರ್ತಿಯು ಕೂಡ ಸಣ್ಣದೇ ಅಲ್ಲವೇ?
ಇಂತಹ ವ್ಯಕ್ತಿಯನ್ನು ನಮ್ಮ ದೇಶದ ಹೃದಯದ ನೆನಪಿಗೆ ಮರಳಿ ತಂದ ಮೋದಿಯವರಿಗೆ ಶತಶತ ನಮನಗಳು.🙏🙏🙏🚩🚩🚩🇮🇳🇮🇳🇮🇳

City Today News

(Tj vision media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s