20 ತಿಂಗಳು ವಯಸ್ಸಿನ ಮಗು ನಾರ್ಮಲ್ ಜೀವನ ನಡೆಸುತ್ತಿದ್ದು ವರ್ಷದ ನಂತರದ ಅಪರೂಪದ ಸರ್ಜರಿಯಲ್ಲಿ ತಲೆಯನ್ನು ಕುತ್ತಿಗೆಯ ಮೇಲೆ ಸರಿಯಾಗಿ ಹೊಂದಿಸಲಾಗಿತ್ತು.

ಪ್ರಪಂಚದಲ್ಲೇ ಅತಿ ಚಿಕ್ಕ ವಯಸ್ಸಿನದಾದ ಮಗು ಬೆಂಗಳೂರಿನ ಸಾಗರ್ ಹಾಸ್ಪಿಟಲ್ ನಲ್ಲಿ ಅಟ್ಲಾಂಟೊ-ಆಕ್ಸಿಯಲ್ ಡಿಸ್ಲೊಕೇಷನ್ (ಎಎಡಿ) ಎಂಬ ಸರಿಹೊಂದಿಸುವ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಈಗ ಯಶಸ್ವಿಯಾಗಿದೆ.

ನವೆಂಬರ್ 13, 201 ಬೆಂಗಳೂರು: ದೇಶವು ಬುಧವಾರ ಮಕ್ಕಳ ದಿನಾಚರಣೆಯನ್ನು ಸೂಚಿಸುತ್ತಿರುವಾಗ, ಇಲ್ಲೊಂದು ಶಕ್ತಿ ಮತ್ತು ಸ್ಥಿತಿ ಸ್ಥಾಪಕತ್ವದಿಂದ ಜೀವನವನ್ನು ಸಂಭ್ರಮಿಸುತ್ತಿರುವ ಎಂಟು ತಿಂಗಳ ಮಗುವಿನ ಕಥೆಯಿದೆ. ‘ತಲೆ ಕುತ್ತಿಗೆಯ ಮೇಲೆ ಸ್ಥಳಾಂತರಗೊಂಡ’ ಒಂದು ಅಸಹಜತೆಯಿಂದ ಹುಟ್ಟಿದ ತೇಜಸ್, ಒಂದು ವರ್ಷದ ಹಿಂದೆಯೇ ಅಪರೂಪದ ಶಸ್ತ್ರಚಿಕಿತ್ಸೆಗೆ ಒಳಗಾದರು. ಎಂಟು ತಿಂಗಳ ಮಗುವಾಗಿದ್ದಾಗಲೇ ಡಾ. ಮುರಳಿ ಮೋಹನ್ ನೇತೃತ್ವದ ನರಶಸ್ತ್ರ ಚಿಕಿತ್ಸಕ ತಜ್ಞರ ತಂಡ ಸಾಗರ್ ಹಾಸ್ಪಿಟಲ್ ನಲ್ಲಿ ವೈದ್ಯಕೀಯ ವಿಜ್ಞಾನದ ಇತಿಹಾಸದಲ್ಲಿ ಅಪರೂಪದ ಶಸ್ತ್ರಚಿಕಿತ್ಸೆಗಳಲ್ಲಿ ಒಂದನ್ನು ನಡೆಸಿದೆ.
ಸಮಸ್ಯೆ ಏನಾಗಿತ್ತು? ಮಗುವಿಗೆ ಅಟ್ಲಾಂಟೊ-ಆಕ್ಸಿಯಲ್ ಡಿಸ್ಲೊಕೇಷನ್ (ಎಎಡಿ) ಎಂಬ ರೋಗ ಪತ್ತೆಯಾಗುವ ಮೂಲಕ ಇದು ಶುರುವಾಗಿದೆ. ಇದೊಂದು ಅಪರೂಪದ ಪ್ರಕರಣವಾಗಿದ್ದು ತಲೆ ಬುರುಡೆಯು ಅಸಮಂಜಸ ಆಧಾರದಲ್ಲಿದ್ದು ಅಗಲವಾದ ದೊಡ್ಡ ರಂಧ್ರವನ್ನು ಹೊಂದಿದೆ. ಬೆನ್ನುಹುರಿಯು ಮೆದುಳನ್ನು ಪ್ರವೇಶಿಸುವ ಜಾಗದಲ್ಲಿ ತಲೆಬುರುಡೆಯಲ್ಲಿ ರಂಧ್ರವು ಪ್ರಾರಂಭವಾಗುತ್ತದೆ. ಇದರಿಂದಾಗಿ ತಲೆಬುರುಡೆಗೆ ಸಾಮಾನ್ಯವಾಗಿ ಆಧಾರವಾಗಬೇಕಾದ ಮೊದಲ ಬೆನ್ನುಮೂಳೆಗೆ ವಿರುದ್ಧವಾಗಿ ಎರಡನೇ ಬೆನ್ನುಮೂಳೆಯ ಮೇಲೆ ತಲೆಬುರುಡೆಯು ಕುಳಿತಿದೆ. ಇದಲ್ಲದೇ ತಲೆ ಬುರುಡೆಯು ಮುಂದಕ್ಕೆ ಕುತ್ತಿಗೆಯ ನರದ ಮೇಲೆ ಜಾರಿದೆ.

ಕಠಿಣವಾದ ಮೇಲ್ವಿಚಾರಣೆ ಮತ್ತು ಅಬ್ಸರ್ವೇಷನ್ ನಲ್ಲಿದ್ದ ಮಗು ಈಗ ಒಂದು ವರ್ಷದ ನಂತರ ದೃಢಕಾಯನಾಗಿ ಹೃದಯಪೂರ್ವಕ ಜೀವನ ನಡೆಸುವಲ್ಲಿ ಯಶಸ್ವಿಯಾಗಿದ್ದಾನೆ. ಮಗುವನ್ನು ತನ್ನ ತೋಳುಗಳಲ್ಲಿಟ್ಟುಕೊಂಡು ಶಸ್ತ್ರಚಿಕಿತ್ಸೆ ನಡೆಸಿದ ನರಶಸ್ತ್ರಚಿಕಿತ್ಸೆಯ ಮುಖ್ಯಸ್ಥ ಡಾ. ಮುರಳಿ, ಸಾಗರ್ ಬ್ರೇನ್ ಮತ್ತು ಸ್ಪೈನ್ ಇನ್ಸ್ಟಿಟ್ಯೂಟ್, ಸಾಗರ್ ಹಾಸ್ಪಿಟಲ್ಸ್ ಅವರು, “ಆ ಚಿಕ್ಕ ವಯಸ್ಸಿನಲ್ಲಿ ಅಂತಹ ಗಂಭೀರ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದು ಮಾತ್ರವಲ್ಲದೇ ಯಶಸ್ವಿಯಾಗಿ ಹೊರಬಂದಿದ್ದಕ್ಕೆ ನಾವು ಆನಂದಿಸುತ್ತೇವೆ. ಕಳೆದ ಒಂದು ವರ್ಷದಿಂದ ಅವರ ಆರೋಗ್ಯದ ಮೇಲೆ ನಾವು ಟ್ಯಾಬ್ ಇರಿಸಿದ್ದೇವೆ ಮತ್ತು ಇಂದು ಅವರು ಛೇತರಿಸಿಕೊಂಡು ಸಾಮಾನ್ಯ ಜೀವನಕ್ಕೆ ಹೊಂದಿಕೊಳ್ಳುತ್ತಿದ್ದಾರೆ. ಈ ವಯಸ್ಸಿನಲ್ಲಿ ಅಂತಹ ಸವಾಲಿನ ಸಮಯವನ್ನು ಎದುರಿಸಿದ ಇದು ನನ್ನ ಜೀವನದಲ್ಲಿ ನಾನು ನೋಡಿದ ಪ್ರಥಮ ಅತ್ಯಂತ ವೇಗದ ಛೇತರಿಕೆಯಾಗಿದೆ” ಎಂದಿದ್ದಾರೆ.

“ಇಂತಹ ಗಂಭೀರ ಪರಿಸ್ಥಿತಿಯಲ್ಲಿ, ಮೆದುಳಿನ – ಬೆನ್ನು ಹುರಿಯ ಜಂಕ್ಷನ್ ನ ಸಂಕುಚಿತತೆ, ಕುತ್ತಿಗೆಯ ಹಿಡಿತ ಮತ್ತು ಸ್ನಾಯುವಿನ ಬೆಳವಣಿಗೆಯ ಕೊರತೆಯ ಹೊರತಾಗಿಯೂ ಮಗು ಉಳಿದುಕೊಂಡಿದ್ದು ಒಂದು ಪವಾಡವೇ ಸರಿ. ಉಳಿವನ್ನು ಖಾತರಿಪಡಿಸುವ ಏಕೈಕ ಆಯ್ಕೆ ಶಸ್ತ್ರಚಿಕಿತ್ಸೆಯಾಗಿತ್ತು. ಇದು ಎರಡು ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಾಗಿತ್ತು. ಮೊದಲಿಗೆ, ತೀವ್ರವಾದ ಬೆನ್ನುಹುರಿ ಸಂಕೋಚನ ಮತ್ತು ಎರಡನೆಯದಾಗಿ, ಮತ್ತಷ್ಟು ಜಾರುವಿಕೆಯನ್ನು ತಡೆಗಟ್ಟುವುದು.” ಎಂದು ಡಾ. ಆನ್ ಆಗ್ನೆಸ್ ಮ್ಯಾಥ್ಯೂ, ಕನ್ಸಲ್ಟೆಂಟ್ ಪೀಡಿಯಾಟ್ರಿಕ್ ನರವಿಜ್ಞಾನಿ, ಸಾಗರ್ ಹಾಸ್ಪಿಟಲ್ಸ್ ಅವರು ಹೇಳಿದರು.

ತಲೆಬುರುಡೆಯೊಳಗಿನಿಂದ ಮೊದಲ ಬೆನ್ನು ನರವನ್ನು ಹೊರತೆಗೆಯಲಾಯಿತು. ಉಪಕರಣಗಳಿಗೆ ಜಾಗವಿಲ್ಲದೆ ನರದ ಮುಚ್ಚಿದ ಭಾಗವು ಬೆನ್ನು ಹುರಿಯಿಂದ ಹೊರಬಂದಿತು. ಒಮ್ಮೆ ವಿಭಜನೆಯಾದ ನಂತರ ಮತ್ತೆ ಕುತ್ತಿಗೆಯ ನರದ ಮೇಲೆ ತಲೆ ಬೀಳದಂತೆ ಅದನ್ನು ಹೊಂದಿಸುವುದು ಮುಂದಿನ ಸವಾಲಾಗಿತ್ತು. ಮೂಳೆಗಳು ಪೂರ್ತಿಯಾಗಿ ಅಭಿವೃದ್ಧಿಯಾಗದ ಕಾರಣ ಮಕ್ಕಳ ಗಾತ್ರದ ಇಂಪ್ಲಾಂಟ್ಸ್ ಗಳನ್ನು ಹೊಂದಿಸುವುದೂ ಸಹ ಕಷ್ಟಕರವಾಗಿತ್ತು. ಈ ಸ್ಥಿರತೆಯನ್ನು ಗಳಿಸಲು ಸರ್ಜನ್ ಹೊಸ ವಿಧಾನಗಳನ್ನು ಅನುಸರಿಸಬೇಕಾಯಿತು. ಈ ಗುರಿಯನ್ನು ಸಾಧಿಸಲು ಟಿಟೇನಿಯಮ್ ಸ್ಕ್ರ್ಯೂ ಮತ್ತು ಪ್ಲೇಟ್ ಗಳನ್ನು ಬಳಸಲಾಯಿತು. ಇದೊಂದು ಅಪಾಯಕಾರಿ ಶಸ್ತ್ರ ಚಿಕಿತ್ಸೆಯಾಗಿದ್ದರೂ ಯಶಸ್ವಿಯಾಗಿ ಪೂರ್ಣಗೊಳಿಸಲಾಯಿತು. ಇದೊಂದು ವಿಶ್ವದಲ್ಲೇ ಮೊದಲ ಬಾರಿಗೆ ಶಿಶುವಿನ ಮೇಲೆ ನಡೆಸಲಾದ ಎಎಡಿ ಸರ್ಜರಿಯಾಗಿದೆ!.

“ಒಬ್ಬ ಶಸ್ತ್ರ ಚಿಕಿತ್ಸಕರಾಗಿ ಅದರದೇ ರೀತಿಯಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸಲು ಬಹಳಷ್ಟು ಧೈರ್ಯ ಬೇಕಾಗುತ್ತದೆ. ಮೆಡಿಕಲ್ ಸೈನ್ಸ್ ನ ಸ್ಟಾಂಡರ್ಡ್ ಬೋಧನೆಯೆಂದರೆ ನಾವು ಟ್ರೀಟ್ ಮಾಡುವ ಎಲ್ಲಾ ಪ್ರಕರಣಗಳು ನಮ್ಮ ಪಠ್ಯ ಪುಸ್ತಕದಲ್ಲಿರುವುದಿಲ್ಲ. ಇಂತಹ ಪರಿಸ್ಥಿತಿಗಳನ್ನು ನಿಭಾಯಿಸುವುದು ಒಂದು ಅಸಾಧಾರಣ ಸವಾಲಾಗಿದ್ದು ಈ ಸರ್ಜರಿಯು ಒಂದು ಮೇಜರ್ ವಿಧಾನವಾಗಿದ್ದು ಬಹಳಷ್ಟು ಗಂಟೆಗಳ ಸಮಯವನ್ನು ಇದು ತೆಗೆದುಕೊಂಡಿದೆ. ಈ ಸರ್ಜರಿ ಯಶಸ್ವಿಯಾಗಿದ್ದಕ್ಕೆ ನಮಗೆ ಬಹಳಷ್ಟು ಸಂತೋಷವಿದೆ. ಇದಕ್ಕಿಂತ ಹೆಚ್ಚಾಗಿ ಮಗುವು ಇಷ್ಟು ವೇಗವಾಗಿ ಛೇತರಿಸಿಕೊಳ್ಳುವುದನ್ನು ನೋಡುತ್ತಿದ್ದರೆ ನನ್ನ ಹೃದಯ ಸಂತೋಷ ಮತ್ತು ಆನಂದದಿಂದ ತುಂಬಿದೆ”. ಎಂದು ಡಾ. ಮುರುಳಿ ಹೇಳಿದ್ದಾರೆ.

“ನಾವು ಸಾಗರ್ ನಲ್ಲಿರುವ ವೈದ್ಯರಿಗೆ ವಿಶೇಷವಾಗಿ ಕೃತಜ್ಞರಾಗಿದ್ದೇವೆ, ವಿಶೇಷವಾಗಿ ಡಾ. ಮೋಹನ್ ಅವರು ನಮಗೆ ಹೊಸ ಜೀವನವನ್ನು ನೀಡಿದರು. ಯಾವುದೇ ಪರಿಹಾರಗಳು ಕಾಣದೆ ನಾವು ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದೆವು. ಡಾಕ್ಟರ್ಸ್ ಕೇವಲ ಸರ್ಜರಿಯನ್ನಷ್ಟೆ ಮಾಡದೇ ಕಳೆದ ಒಂದು ವರ್ಷದಿಂದ ನಮ್ಮೊಂದಿಗೆ ಸಂಪರ್ಕವಿರಿಸಿಕೊಂಡು ಮೇಲ್ವಿಚಾರಣೆ ಮಾಡುತ್ತಾ ನಮ್ಮ ಮಗುವಿನ ಪ್ರಗತಿಯನ್ನು ನೋಡಿಕೊಳ್ಳುತ್ತಿದ್ದಾರೆ” ಎಂದು ತೇಜಸ್ ನ ತಂದೆ ಶ್ರೀನಿವಾಸ್ ಅವರು ಹೇಳಿದ್ದಾರೆ.

City Today News

(Tj vision media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s