ಕೌನ್ಸಿಲ್ ಫಾರ್ ಮೀಡಿಯಾ ಮತ್ತು ಸ್ಯಾಟಲೈಟ್ ಬ್ರಾಡ್’ಕಾಸ್ಟಿಂಗ್  (ಸಿಎಂಎಸ್’ಬಿ) ವತಿಯಿಂದ 2018 ರ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರಧಾನ ಮಾಡಲಾಯಿತು. ‘ಕಾಸಿಯಾ ಆಡಿಟೋರಿಯಂ’ ಬೆಂಗಳೂರನಲ್ಲಿ ಈ ಅಭೂತಪೂರ್ವ ಪ್ರಶಸ್ತಿ ಪ್ರಧಾನ ಸಮಾರಂಭ ಜರುಗಿತು.

ರಾಜ್ಯ ಜೆಡಿಎಸ್ ವಕ್ತಾರ ಮತ್ತು ಮಾಜಿ ಸಚಿವರಾದ ವೈ.ಎಸ್.ವಿ ದತ್ತ, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ ಸಿದ್ದರಾಜು, ಹಿರಿಯ ಪತ್ರಕರ್ತ ಡಾ. ಬಾಬು ಕೃಷ್ಣಮೂರ್ತಿ, ಸಿಎಂಎಸ್’ಬಿ ಸಂಸ್ಥಾಪಕ ಮತ್ತು ಅಧ್ಯಕ್ಷ ಶ್ರೀ ಬಿಕ್ಕಿ ಬಂಗರಿ, ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಎಂ.ಕೆ. ಜೈನ್, ರಾಜ್ಯ ಗೌರವ ಅಧ್ಯಕ್ಷ ಜಗಳೂರು ಲಕ್ಷ್ಮಣರಾವ್, ರಾಷ್ಟ್ರೀಯ ಕಾರ್ಯದರ್ಶಿ ಅರುಣ್ ಅಗರ್ವಾಲ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ ಟಿ.ಎ ಮತ್ತು ಪ್ರಖ್ಯಾತ ಜಾನಪದ ಗಾಯಕ ಗುರುರಾಜ್ ಹೊಸಕೋಟೆ ಈ ಅದ್ದೂರಿ ಸಮಾರಂಭವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಮೀಡಿಯಾ ಅಕಾಡೆಮಿ ಅಧ್ಯಕ್ಷ ಎಂ ಸಿದ್ದರಾಜು, ಸಾರ್ವಜನಿಕರಿಗೆ ಮಾಹಿತಿಯನ್ನು ಒದಗಿಸಲು ಪತ್ರಕರ್ತರು 24X7 ದಿನ ಮತ್ತು ರಾತ್ರಿ ಕೆಲಸ ಮಾಡುತ್ತಾರೆ ಎಂತಹ ಒತ್ತಡಗಳಲ್ಲಿ ಸಿಲುಕಿಯೂ ಸಹ ತಮ್ಮ ಕರ್ತವ್ಯವನ್ನು ಮಾತ್ರ ಪ್ರಾಮಾಣಿಕವಾಗಿ ಮಾಡುತ್ತಾರೆ ಪತ್ರಕರ್ತರು ಸಮಾಜದಲ್ಲಿ ಸುರಕ್ಷಿತ ಮತ್ತು ಆರೋಗ್ಯಯುತ ಜೀವನದ ಕಡೆ ಸಹ ಗಮನಹರಿಸಬೇಕು ಎಂದು ನುಡಿದರು. ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಕೌನ್ಸಿಲ್ ಫಾರ್ ಮೀಡಿಯಾ ಮತ್ತು ಬ್ರಾಡ್’ಕಾಸ್ಟಿಂಗ್ (ಸಿಎಂಎಸ್’ಬಿ) ಸಂಸ್ಥೆಯು ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಸಾಮಾನ್ಯ ಸೇವೆ ಸಲ್ಲಿಸಿದವರನ್ನು ಗುರುತಿಸಲು ಒಂದು ಉತ್ತಮ ವೇದಿಕೆಯನ್ನು ಸಿದ್ಧಪಡಿಸಿದ್ದಾರೆ, ಅತ್ಯುತ್ತಮ ಸೇವೆಸಲ್ಲಿಸಿರುವ ಪತ್ರಕರ್ತರನ್ನು ಗೌರವಿಸುತ್ತಿರುವುದು ಹೆಮ್ಮೆಯ ಸಂಗತಿ ಮತ್ತು ಮಾಧ್ಯಮ ಲೋಕದ ಅನೇಕ ಸಂಸ್ಥೆಗಳಿಗೂ ಸಿಎಂಎಸ್’ಬಿ ತಂಡ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ ಸಂಗತಿ ಎಂದು ನುಡಿದರು. ಈ ಕಾರ್ಯಕ್ರಮದಲ್ಲಿ ಪ್ರಶಸ್ತಿ ವಿಜೇತರನ್ನು ಅಭಿನಂದಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಶಾಸಕ ವೈ.ಎಸ್.ವಿ ದತ್ತಾರವರು ರಾಜಕೀಯ ಸುದ್ದಿಗಳು ಟೆಲಿವಿಷನ್ ಮಾಧ್ಯಮಗಳಿಗೆ ಟಿಆರ್’ಪಿ ತಂದುಕೊಡುತ್ತಿವೆ, ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳ ರೀತಿಯಲ್ಲಿಯೇ ಮತ್ತು ಮಾಧ್ಯಮ ರಂಗವೂ ಸಹ 4 ನೇ ಅಂಗವಾಗಿದೆ. ಇದರ ಪ್ರಾಮುಖ್ಯತೆಯನ್ನು ಪತ್ರಕರ್ತರು ಅರಿಯಬೇಕು, ಪತ್ರಕರ್ತರು ಸಮಾಜದ ಸರಿತಪ್ಪುಗಳನ್ನು ವರದಿ ಮಾಡುವುದರ ಮುಖಾಂತರ ಈ ಸಮಾಜದ ಆಗುಹೋಗುಗಳನ್ನು ಜನತೆಯ ಮುಂದೆ ಇಡುವ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಖ್ಯಾತ ಹಿರಿಯ ಪತ್ರಕರ್ತ ಡಾ.ಬಾಬು ಕೃಷ್ಣಮೂರ್ತಿ ಮತ್ತು ಜನಪ್ರಿಯ ಜಾನಪದ ಗಾಯಕ ಹಾಗೂ ನಟರಾದ ಗುರುರಾಜ ಹೊಸಕೋಟೆ ಅವರನ್ನು ಗೌರವಿಸಲಾಯಿತು.

ಪ್ರಶಸ್ತಿ ಪುರಸ್ಕಾರಗಳ ಪಟ್ಟಿ ಈ ಕೆಳಕಂಡಂತಿದೆ.
ಬೆಸ್ಟ್ ನ್ಯೂಸ್ ಚಾನೆಲ್ – ಬಿ.ಟಿವಿ.
ಅತ್ಯುತ್ತಮ ಸಾಮಾಜಿಕ ಮಾಹಿತಿ ಸುದ್ದಿ –
ಸುವರ್ಣ ನ್ಯೂಸ್ 24×7 ಚಾನೆಲ್.
ಅತ್ಯುತ್ತಮ ಚಲನಚಿತ್ರ ಮಾಹಿತಿ ಸುದ್ದಿ – ಪಬ್ಲಿಕ್ ಟಿವಿ.
ಅತ್ಯುತ್ತಮ ಅಪರಾಧ ಮಾಹಿತಿ ಸುದ್ದಿ – NEWS18 ಕನ್ನಡ ಚಾನೆಲ್.
ಅತ್ಯುತ್ತಮ ರಾಜಕೀಯ ಸುದ್ದಿ – ಟಿವಿ 5 ಕನ್ನಡ ಚಾನೆಲ್.
ಅತ್ಯುತ್ತಮ ಕ್ರೀಡಾ ಮತ್ತು ಮಾಹಿತಿ ಸುದ್ದಿ – ಪ್ರಜಾ ಟಿವಿ ಕನ್ನಡ ಚಾನೆಲ್.
ಅತ್ಯುತ್ತಮ ಕನ್ನಡ ಸುದ್ದಿಪತ್ರಿಕೆ – ಸಂಯುಕ್ತ ಕರ್ನಾಟಕ.
ಅತ್ಯುತ್ತಮ ರಾಜಕೀಯ ವಿಶ್ಲೇಷಣೆಕಾರರು – ಶ್ರೀ ರಾಕೇಶ್, ಬೆಂಗಳೂರು ಮೆಟ್ರೋ ಬ್ಯೂರೋ. ಟೈಮ್ಸ್ ಆಫ್ ಇಂಡಿಯಾ
ಅತ್ಯುತ್ತಮ ಹಿಂದಿ ಸುದ್ದಿಪತ್ರಿಕೆ – ರಾಜಸ್ಥಾನ್ ಪತ್ರಿಕಾ.

ಸಿಎಂಎಸ್’ಬಿ ನ್ಯಾಷನಲ್ ಪ್ರಶಸ್ತಿ ಟ್ರೋಫಿ ಮತ್ತು ಪ್ರಮಾಣಪತ್ರಗಳನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.

ರಾಜ್ಯ ಸಿಎಂಎಸ್’ಬಿ ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಜಗಳೂರು ಲಕ್ಷ್ಮಣಾರಾವ್, ರಾಜ್ಯಾಧ್ಯಕ್ಷ ಬಿ.ಕೆ.ಮುರಳಿ ಕೃಷ್ಣ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಟಿ.ಎ. ಉಪಾಧ್ಯಕ್ಷ ರಾಮಕೃಷ್ಣ.ಎಂ.ಬಿ ಲಿಂಗರಾಜು, ಸಂಘಟನಾಧಿಕಾರಿ ನಿಖಿಲ್ ಡಿ ಜೈನ್, ಜಂಟಿ ಕಾರ್ಯದರ್ಶಿಗಳು ಉಮೇಶ್ ತುಳಸಿಯನ್, ವಿ.ಭೈರೇಶ್, ಸುಬೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ದರ್ಶನ್. ಬಿ.ಎಸ್ ಈ ರಾಷ್ಟ್ರೀಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

City Today News

(Tj vision media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s