41 ದಶಲಕ್ಷ ಡಾಲರ್ ಹೂಡಿಕೆ ನಿಧಿ ಕ್ರೋಡೀಕರಿಸಿದ ಡಿ.ಲೈಟ್ ಕಂಪನಿ

ಆಫ್ರಿಕಾದ ಕೋಟ್ಯಂತರ ಜನರಿಗೆ ಸೌರವಿದ್ಯುತ್ ಒದಗಿಸುವ ಕೆಲಸವು ಮತ್ತಷ್ಟು ಚುರುಕಾಗಿ ನಡೆಯಲು ಇದರಿಂದ ನೆರವಾಗಲಿದೆ.

ಬೆಂಗಳೂರು, ಡಿ.17, 2018– ಸೌರ ವಿದ್ಯುತ್ ಮತ್ತು ಸೌರಶಕ್ತಿ ಚಾಲಿತ ಗೃಹೋಪಯೋಗಿ ಸಾಧನಗಳ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಡಿ.ಲೈಟ್ ಕಂಪನಿಯು 41 ದಶಲಕ್ಷ ಡಾಲರುಗಳಷ್ಟು ಮೊತ್ತವನ್ನು ಹೂಡಿಕೆ ನಿಧಿಯಾಗಿ ಕ್ರೋಡೀಕರಿಸಿದೆ.
ಆಫ್ರಿಕಾ ಖಂಡದ ಮೇಲೆ ತನ್ನ ವಹಿವಾಟನ್ನು ಕೇಂದ್ರೀಕರಿಸಿರುವ ಬಂಡವಾಳ ಹೂಡಿಕೆ ಸಲಹಾ ಕಂಪನಿಯಾದ `ಇನ್ಸ್ಪೈರ್ಡ್ ಎವಲ್ಯೂಷನ್’ ನೇತೃತ್ವ ವಹಿಸಿರುವ ಈ ಹೂಡಿಕೆ ನಿಧಿ ಕೂಟದಲ್ಲಿ ನೆದರ್ಲೆಂಡ್ಸ್ ದೇಶದ ಎಫ್ಎಂಒ ಬ್ಯಾಂಕ್ ಮತ್ತು ಸರಕಾರಿ ಪ್ರಾಯೋಜಿತ ಹೂಡಿಕೆ ನಿಧಿಗಳಾದ ಸ್ವೆಡ್ ಫಂಡ್ ಹಾಗೂ ನೋರ್-ಫಂಡ್ ಸೇರಿದಂತೆ ಹಲವು ಸಂಸ್ಥೆಗಳಿವೆ.
ಈ ಬಗ್ಗೆ ಮಾತನಾಡಿರುವ ಡಿ.ಲೈಟ್ ಕಂಪನಿಯ ಸಹ-ಸಂಸ್ಥಾಪಕ ಮತ್ತು ಸಿಇಒ ನೆಡ್ ಟೋಝನ್, “2020ರ ಹೊತ್ತಿಗೆ ಆಫ್ರಿಕಾ ಖಂಡದ 100 ದಶಲಕ್ಷ ಜನರಿಗೆ ಸೌರವಿದ್ಯುತ್ತನ್ನು ಒದಗಿಸಬೇಕೆಂಬುದು ನಮ್ಮ ಗುರಿಯಾಗಿದೆ. 2007ರಲ್ಲಿ ಅಸ್ತಿತ್ವಕ್ಕೆ ಬಂದ ನಮ್ಮ ಕಂಪನಿಯು ಈಗಾಗಲೇ 62 ದೇಶಗಳ 88 ದಶಲಕ್ಷ ಜನರಿಗೆ ಈ ಸೌಲಭ್ಯ ನೀಡಿದೆ,’’ ಎಂದು ಹೇಳಿದ್ದಾರೆ.
ಡಿ.ಲೈಟ್ ಕಂಪನಿಯು ವಿದ್ಯುತ್ತಿನಿಂದ ವಂಚಿತರಾಗಿರುವ ಕೋಟ್ಯಂತರ ಜನರಿಗೆ ಒಂದೆಡೆಯಿಂದ ಇನ್ನೊಂದೆಡೆಗೆ ಕೊಂಡೊಯ್ಯಬಲ್ಲಂತಹ ಸೌರದೀಪ, ಹಲವು ದೀಪಗಳು ಹಾಗೂ ಮೊಬೈಲ್ ಫೋನು ಮತ್ತು ಟಿ.ವಿ.ಗೆ ವಿದ್ಯುತ್ ಒದಗಿಸಬಲ್ಲಂತಹ ಸೋಲಾರ್ ಹೋಮ್ ಸಿಸ್ಟಮ್ಸ್ ಮುಂತಾದ ಸಾಧನಗಳನ್ನು ಒದಗಿಸುತ್ತಿದೆ. ಜಗತ್ತಿನಾದ್ಯಂತ 30 ಸಾವಿರಕ್ಕೂ ಹೆಚ್ಚು ಮಳಿಗೆಗಳ ಮೂಲಕ ಡಿ.ಲೈಟ್ ಕಂಪನಿಯ ಉತ್ಪನ್ನಗಳು ಗ್ರಾಹಕರಿಗೆ ಸಿಕ್ಕುತ್ತಿವೆ ಎಂದು ಟೋಝನ್ ತಿಳಿಸಿದ್ದಾರೆ.
ಈ ಬೆಳವಣಿಗೆಯ ಬಗ್ಗೆ ಮಾತನಾಡಿರುವ ಇನ್ಸ್ಪೈರ್ಡ್ ಎವಲ್ಯೂಷನ್ ಕಂಪನಿಯ ವ್ಯವಸ್ಥಾಪಕ ಪಾಲುದಾರ ವೇನ್ ಕೀಸ್ಟ್ “ಡಿ.ಲೈಟ್ ಕಂಪನಿಯ ಜತೆ ಸಹಭಾಗಿತ್ವ ಹೊಂದಲು ಸಂತಸವಾಗುತ್ತಿದೆ. ಈ ಕಂಪನಿಯ ನಡೆಯಿಂದಾಗಿ ಈಗ ವಿದ್ಯುತ್ತಿನಿಂದ ವಂಚಿತರಾಗಿರುವ 600 ದಶಲಕ್ಷ ಜನರಿಗೆ ಮುಂಬರುವ ದಿನಗಳಲ್ಲಿ ಸಹಾಯವಾಗಲಿದೆ,’’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

City Today News

(Tj vision media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s