ಕಾರಾಗೃಹದ ಕೆಲವು ಸಿಬ್ಬಂದಿಯವರ ಸಹಕಾರದಿಂದ ಅಕ್ರಮವಾಗಿ ಮಾದಕವಸ್ತು ಗಾಂಜಾ ಪೂರೈಸಿರುವ ಬಗ್ಗೆ ಶಂಕೆ ಇದ್ದು , ಈ ಬಗ್ಗೆ ಹೆಚ್ಚಿನ ತನಿಖೆಗೆ ಆರೋಪಿಯನ್ನು ಪೊಲೀಸ್ ಬಂಧನಕ್ಕೆ ಪಡೆದು , ತನಿಖೆ ಕೈಗೊಂಡಿರುತ್ತೆ .

ಪರಪ್ಪನ ಅಗ್ರಹಾರ ಪೊಲೀಸ್ ಠಾಣೆ , ಆಗೇಯ ವಿಭಾಗ , ಬೆಂಗಳೂರು ನಗರ ಹಣದ ಆಮಿಷಕ್ಕಾಗಿ ಕೇಂದ್ರ ಕಾರಾಗೃಹದ ಸಜಾಬಂಧಿಗಳಿಗೆ ಅಕ್ರಮವಾಗಿ ಗಾಂಜಾ ಪೂರೈಸಿ , ತಲೆಮರೆಸಿಕೊಂಡಿದ್ದ ಕೇಂದ್ರ ಕಾರಾಗೃಹದ ಪ್ರಥಮ ದರ್ಜೆ ಬೋಧಕನ ಬಂಧನ ಮಾನ್ಯ ಉಪ ಪೊಲೀಸ್ ಕಮಿಷನರ್ ಡಾ / / ಎಂ . ಬಿ . ಬೋರಲಿಂಗಯ್ಯ ಐ . ಪಿ . ಎಸ್ ರವರ ಮಾರ್ಗದರ್ಶನದಲ್ಲಿ , ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಸಹಾಯಕ ಪೊಲೀಸ್ ಕಮೀಷನರ್ ಶ್ರೀ . ಕೆ . ಎನ್ . ರಮೇಶ್ ರವರ ನೇತೃತ್ವದಲ್ಲಿ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ . ಬಿ . ಕೆ . ಕಿಶೋರ್ ಕುಮಾರ್ , ಪಿ . ಎಸ್ . ಐ . ಶ್ರೀ . ಹೆಚ್ . ಎಂ . ಆನಂದ್ ಹಾಗೂ ಸಿಬ್ಬಂದಿಯವರಾದ ಹೆಚ್ . ಸಿ . 6486 ಶ್ರೀ . ವೆಂಕಟಸ್ವಾಮಿ , ಹೆಚ್ . ಸಿ . 8092 ಶ್ರೀ . ಶಿವರಾಜು ರವರುಗಳನ್ನೊಳಗೊಂಡ ತಂಡದವರು ದಿನಾಂಕ 20 / 12 / 2018 ರಂದು ಆರೋಪಿಯಾದ ಕುಮಾರಸ್ವಾಮಿ . ಬಿ ತಂದೆ ಬಸವರಾಜ್ , ವಯಸ್ಸು 32 ವರ್ಷ , ವಾಸನಂ . 53 , 5ನೇ ಬ್ಲಾಕ್ , ಕೇಂದ್ರ ಕಾರಾಗೃಹ ವಸತಿ ನಿಲಯ , ಪರಪ್ಪನ ಅಗ್ರಹಾರ , ಬೆಂಗಳೂರು – 100 , ಸ್ವಂತ ವಿಳಾಸ : ಗೋಕುಲ ನಗರ , ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಹತ್ತಿರ , ಹಾಲಮಾದೇನಹಳ್ಳಿ ಅಂಚೆ , ಜವಗುಂಡನಹಳ್ಳಿ ಹೋಬಳಿ , ಹಿರಿಯೂರು ತಾಲ್ಲೂಕು , ಚಿತ್ರದುರ್ಗ ಜಿಲ್ಲೆ ಎಂಬುವನನ್ನು ಆತನ ಸ್ವಂತ ಊರಿನ ಹೊರವಲಯದಲ್ಲಿ ಖಚಿತ ಮಾಹಿತಿ ಮೇರೆಗೆ ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ . ಮೇಲ್ಕಂಡ ಆರೋಪಿಯು ದಿನಾಂಕ 21 / 08 / 2018 ರಂದು ಬೆಳಿಗ್ಗೆ ಬೆಂಗಳೂರು ನಗರ ಕೇಂದ್ರ ಕಾರಾಗೃಹ ಸಿಬ್ಬಂದಿಯವರ ಕಣ್ಣಪ್ಪಿಸಿ , ತಪಾಸಣೆಗೆ ಒಳಗಾಗದೇ , ಕಾರಾಗೃಹಕ್ಕೆ ಕರ್ತವ್ಯಕ್ಕೆ ಹಾಜರಾಗಿದ್ದು , ಕಂಪ್ಯೂಟರ್ ಸರ್ವರ್ ರೂಮ್ ನಲ್ಲಿ ಸಜಾ ಬಂಧಿ ಮಂಜುನಾಥ ಎಂಬುವನಿಗೆ ಒಟ್ಟಾರೆ ಸುಮಾರು 100 ಗ್ರಾಂ ತೂಕದ 4 ಗಾಂಜಾ ಪಾಕೆಟ್ ಗಳನ್ನು ಅಕ್ರಮವಾಗಿ ನೀಡಿ , ಅಕ್ರಮವಾಗಿ ಹಣ ಪಡೆದಿದ್ದು , ಈ ಬಗ್ಗೆ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕರು ನೀಡಿದ್ದ ದೂರಿನ ಮೇರೆಗೆ ಮೊ . ಸಂ . 313 / 2018 ಕಲಂ . 42 ಆಫ್ ಪ್ರಿಸನ್ಸ್ ಆಕ್ಟ್ , ಕಲಂ . 424 , 120 ( ಬಿ ) ಐ . ಪಿ . ಸಿ ಮತ್ತು ಕಲಂ . 20 ( ಬಿ ) ಎನ್ . ಡಿ . ಪಿ . ಎಸ್ ಆಕ್ಸ್ ರೀತ್ಯಾ ಪ್ರಕರಣ ದಾಖಲಾಗಿತ್ತು . ಪ್ರಕರಣ ದಾಖಲಾದ ನಂತರದಲ್ಲಿ ಆರೋಪಿಯು ಪೊಲೀಸರಿಗೆ ಸಿಗದೇ ತಲೆಮರೆಸಿಕೊಂಡು , ಮಾನ್ಯ ಸೆಷನ್ಸ್ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದು , ಸದರಿ ಜಾಮೀನು ಅರ್ಜಿಯು ತಿರಸ್ಕತಗೊಂಡಿತ್ತು . ನಂತರ ಆರೋಪಿಯು ಮಾನ್ಯ ಉಚ್ಚ ನ್ಯಾಯಾಲಯಕ್ಕೆ ತಾನು ತಲೆಮರೆಸಿಕೊಂಡಿಲ್ಲವೆಂದು ತಪ್ಪು ಮಾಹಿತಿ ನೀಡಿ , ಜಾಮೀನು ಪಡೆಯಲು ಪ್ರಯತ್ನಿಸಿರುತ್ತಾನೆ . ಆರೋಪಿಯ ವಿಚಾರಣೆಯಿಂದ ಆರೋಪಿಯು ಸಜಾಬಂಧಿಗಳ ಹಣದ ಆಮಿಷಕ್ಕೆ ಒಳಗಾಗಿ , ಕಾರಾಗೃಹದ ಕೆಲವು ಸಿಬ್ಬಂದಿಯವರ ಸಹಕಾರದಿಂದ ಅಕ್ರಮವಾಗಿ ಮಾದಕವಸ್ತು ಗಾಂಜಾ ಪೂರೈಸಿರುವ ಬಗ್ಗೆ ಶಂಕೆ ಇದ್ದು , ಈ ಬಗ್ಗೆ ಹೆಚ್ಚಿನ ತನಿಖೆಗೆ ಆರೋಪಿಯನ್ನು ಪೊಲೀಸ್ ಬಂಧನಕ್ಕೆ ಪಡೆದು , ತನಿಖೆ ಕೈಗೊಂಡಿರುತ್ತೆ . – ಸದರಿ ಪತ್ತೆ ಕಾರ್ಯವನ್ನು ಮಾನ್ಯ ಪೊಲೀಸ್ ಕಮೀಷನರ್ , ಬೆಂಗಳೂರು ನಗರ ಹಾಗೂ ಮಾನ್ಯ ಅಪರ ಪೊಲೀಸ್ ಕಮೀಷನರ್ , ಪೂರ್ವ ವಲಯ , ಬೆಂಗಳೂರು ನಗರ ರವರು ಶ್ಲಾಘಿಸಿರುತ್ತಾರೆ .

City Today News

(Tj vision media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s