ವಾರ್ತಾಇಲಾಖೆ ವತಿಯಿಂದ ಗುರುಗಾಂವ್ ನಲ್ಲಿ “ಮಾಹಿತಿ ಉತ್ಸವ” ಪ್ರಾಣೇಶ್ ಕಚಕುಳಿ : ನಗೆಕಡಲಲ್ಲಿ ತೇಲಿದ ಜನರು

ನವದೆಹಲಿ (ಕರ್ನಾಟಕ ವಾರ್ತೆ): ಉತ್ತರ ಭಾರತದಲ್ಲಿಗ ಚಳಿಯ ಆರ್ಭಟ, ಚಳಿಗೆ ತತ್ತರಿಸಿರುವ ಜನತೆ ಮೈ-ಕೈ ಮುದರಿಕೊಂಡು ಕೂರುವುದು ಸಾಮಾನ್ಯ, ಇದಕ್ಕೆ ವ್ಯತಿರಿಕ್ತವಾಗಿ ಜನರು ಮೈ ಚಳಿಯನ್ನು ಲೆಕ್ಕಿಸದೆ ಹಾಸ್ಯದ ಹೊನಲಲ್ಲಿ ಮಿಂದಿದ್ದೇರು, ಹಾಸ್ಯದ ಆರ್ಭಟಕ್ಕೆ ಚಳಿಗೆ ಬದಲಾಗಿ, ನಕ್ಕು-ನಕ್ಕು ಜನರ ಕಣ್ಣಾಲಿ ತೇವಗೊಂಡವು. ಇಂತಹ ಸನ್ನಿವೇಶ ಕಂಡು ಬಂದಿದ್ದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನವದೆಹಲಿಯ ಕರ್ನಾಟಕ ವಾರ್ತಾ ಕೇಂದ್ರವು, ಗುರುಗಾಂವ್ ಕನ್ನಡ ಸಂಘದ ಸಹಯೋಗದಲ್ಲಿ ಗುರುಗಾಂವ್ ನಲ್ಲಿ ಹಮ್ಮಿಕೊಂಡಿದ್ದ “ಮಾಹಿತಿ ಉತ್ಸವ” ದ ಹಾಸ್ಯಸಂಜೆ ಕಾರ್ಯಕ್ರಮದಲ್ಲಿ.
ಹಾಸ್ಯ ಸಾಮ್ರಾಟ ಮತ್ತು ಗಂಗಾವತಿ ಬೀಚಿ ಎಂದೇ ಪ್ರಸಿದ್ಧರಾಗಿರುವ ಗಂಗಾವತಿ ಪ್ರಾಣೇಶ್, ಬಸವರಾಜ ಮಹಾಮನಿ, ನರಸಿಂಹ ಜೋಷಿ ಅವರ ಹಾಸ್ಯದ ಮಾತುಗಳಿಂದ ಜನರು ನಗೆಕಡಲಲ್ಲಿ ತೇಲಿದರು. ಉತ್ತರ ಕರ್ನಾಟಕದ ಆಡುಭಾಷೆ ಮತ್ತು ನವಿರಾದ ಸಾಹಿತ್ಯವನ್ನು ತಮ್ಮ ತಿಳಿಹಾಸ್ಯದ ಮೂಲಕ ಕರ್ನಾಟಕದ ಚಿತ್ರಣವನ್ನು ಈ ಪ್ರಸಿದ್ಧ ಹಾಸ್ಯ ಕಲಾವಿದರು ನೆರದಿದ್ದ ಜನರಿಗೆ ಕಟ್ಟಿಕೊಡುವಲ್ಲಿ ಯಶಸ್ವಿಯಾದರು.

ಇದಕ್ಕೂ ಮುನ್ನ ನಡೆದ ವೇದಿಕೆ ಸಮಾರಂಭದಲ್ಲಿ ಮಾತನಾಡಿದ ದೆಹಲಿ ಸರ್ಕಾರದ ಜಿ.ಎಸ.ಟಿ ಆಯುಕ್ತರಾದ ಶ್ರೀ ರಾಜೇಶ್ ಪ್ರಸಾದ್ ಅವರು, ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ತಮ್ಮ ಬಳಿ ಇಂದು ಕರ್ನಾಟಕ ಸರ್ಕಾರವೇ ಬಂದು ಕೈಗಾರಿಕೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿರುವುದು ಹಾಗೂ ರಾಜ್ಯದಲ್ಲಿ ಬಂಡವಾಳ ಹೂಡುವಂತೆ ತಮ್ಮನ್ನು ಪ್ರೋತ್ಸಾಹಿಸುತ್ತಿರುವುದು ನಿಜಕ್ಕೂ ಒಂದು ವಿಶಿಷ್ಟ ಕಾರ್ಯಕ್ರಮ. ಉತ್ತರ ಭಾರತದ ಜನರಂತೆ ಕರ್ನಾಟಕದ ಜನತೆಯೂ ಸಹ ಕೈಗಾರಿಕೆಗಳ ಸ್ಥಾಪನೆಗೆ ಮತ್ತು ಕೈಗಾರಿಕೋದ್ಯಮದ ಬಗ್ಗೆ ಆಸಕ್ತಿಯನ್ನು ಬೆಳೆಸಿಕೊಳ್ಳಬೇಕು. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಾಹಿತಿ ಉತ್ಸವದ ಹೆಸರಿನಲ್ಲಿ ಹೊರರಾಜ್ಯದ ಕನ್ನಡಿಗರಿಗೆ ಕರ್ನಾಟಕದ ಚಿತ್ರಣವನ್ನು ಕಟ್ಟಿಕೊಡುತ್ತಿದೆ ನಿಜಕ್ಕೂ ಸಂತೋಷದ ವಿಷಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಗಿರೀಶ್ ಹೊಸೂರು ಅವರು, ಮಾಹಿತಿ ಉತ್ಸವ ದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬ ಕುವೆಂಪು ಅವರ ಕವಿ ವಾಣಿಯಂತೆ ತಾವೆಲ್ಲ ಕರ್ನಾಟಕ ರಾಜ್ಯವನ್ನು ಬಿಟ್ಟು ಅನೇಕ ವರ್ಷಗಳು ಕಳೆದಿದ್ದರೂ ಇಂದಿಗೂ ಸಹ ಕನ್ನಡದ ಡಿಂಡಿಮವನ್ನು ಬಾರಿಸುತ್ತಿರುವುದು ಸಂತೋಷದ ವಿಚಾರ.

ಕರ್ನಾಟಕ ರಾಜ್ಯವು ಆರ್ಥಿಕವಾಗಿ ಸಾಂಸ್ಕೃತಿಕವಾಗಿ ನೈಸರ್ಗಿಕವಾಗಿ ಎಲ್ಲದರಲ್ಲೂ ಶ್ರೀಮಂತವಾಗಿದೆ. ಕೈಗಾರಿಕೆ ಸ್ಥಾಪನೆಗೆ ಕರ್ನಾಟಕದಲ್ಲಿರುವಷ್ಟು ಸೌಲಭ್ಯಗಳು ದೇಶದ ಯಾವುದೇ ರಾಜ್ಯಗಳಲ್ಲಿ ಇಲ್ಲ ಎಂಬುದು ನನ್ನ ಭಾವನೆ, ಆದರೆ ಕರ್ನಾಟಕದಲ್ಲಿ ಕೈಗಾರಿಕೆಗಳ ಪ್ರಗತಿಯಲ್ಲಿ ಕನ್ನಡಿಗರ ಪಾತ್ರ ಮಾತ್ರ ಅತ್ಯಲ್ಪ, ಇಂದು ತಾವೆಲ್ಲ ಕೈಗಾರಿಕೆ ಬಗ್ಗೆ ಪಡೆದಿರುವ ಮಾಹಿತಿಯಲ್ಲಿ ನಾಲ್ಕೈದು ಜನ ಕೈಗಾರಿಕೆಯನ್ನು ಸ್ಥಾಪಿಸಲು ಮುಂದಾದರು ಮಾಹಿತಿ ಉತ್ಸವದ ಉದ್ದೇಶ ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ವಾರ್ತಾಧಿಕಾರಿ, ಡಾ.ಮೈಸೂರು ಗಿರೀಶ್ ಮಾತನಾಡಿ, ಹೊರನಾಡ ಕನ್ನಡಿಗರ ಹಿತಾರಕ್ಷಣೆಗೆ ರಾಜ್ಯಸರ್ಕಾರ ಬದ್ದವಾಗಿದೆ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹೊರರಾಜ್ಯದ ಹಲವು ನಗರಗಳಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಹೊರನಾಡ ಕನ್ನಡಿಗರಿಗೆ ಕನ್ನಡದ ವಾತಾವರಣ ಕಲ್ಪಿಸುವುದರ ಜೊತೆಗೆ ರಾಜ್ಯದ ಅಭಿವೃದ್ಧಿಯ ಚಿತ್ರಣ ಕಲ್ಪಿಸುವ ಕೆಲಸ ಮಾಡುತ್ತಿದೆ. ಹೊರನಾಡ ಕನ್ನಡಿಗರು ಇದರ ಪ್ರಯೋಜನಪಡೆದುಕೊಳ್ಳಬೇಕೆಂದು ತಿಳಿಸಿದರು.
ಗುರುಗಾಂವ್ ಕನ್ನಡ ಸಂಘದ ಮಾಜಿ ಅಧ್ಯಕ್ಷ ಶ್ರೀನಿವಾಸ್ ಮೂರ್ತಿ ಅವರು, ಗುರುಗಾಂವ್ ಕನ್ನಡ ಸಂಗ ಬೆಳೆದು ಬಂದ ಹಾದಿಯನ್ನು ವಿವರಿಸಿ, ಮನರಂಜನ ಕಾರ್ಯಕ್ರಮಕಷ್ಟೇ ನಮ್ಮ ಸಂಘ ಸೀಮಿತವಾಗಿಲ್ಲ, ಹಲವು ಸಮಾಜಿಕ ಕೆಲಸ ಕಾರ್ಯದಲ್ಲೂ ಸಂಘ ಸಕ್ರೀಯವಾಗಿ ನಿರ್ವಹಿಸುತ್ತಿದೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಹಾಸನ ಗುಂಡುರಾಜ್ ಅವರ ತಂಡದಿಂದ ತೊಗಲುಗೊಂಬೆ ಆಟ ಮತ್ತು ಗುರುಗಾಂವ್ ಕನ್ನಡಿಗರು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
“ಮಾಹಿತಿ ಉತ್ಸವ” ದಲ್ಲಿ ಕರ್ನಾಟಕದ ಅಭಿವೃದ್ಧಿಯ ಚಿತ್ರಣವನ್ನು ಬಿಂಬಿಸುವ ವಸ್ತು ಪ್ರದರ್ಶನ ಹಾಗೂ ಕನ್ನಡ ಚಲನಚಿತ್ರ ಅಕಾಡೆಮಿಯಿಂದ ಹೊರತಂದಿರುವ ಪುಸ್ತಕಗಳ ಮಾರಾಟ, ಕರ್ನಾಟಕದಲ್ಲಿ ಕೃಷಿಗೆ ಇರುವ ಸೌಲಭ್ಯಗಳು ಮತ್ತು ಯೋಜನೆಗಳು ಅದಕ್ಕೆ ಸಂಬಂಧಪಟ್ಟಂತಹ ಕೈಪಿಡಿಗಳು ಲಭ್ಯವಿದ್ದವು.

ಕರ್ನಾಟಕದಲ್ಲಿ ಕೈಗಾರಿಕಾ ಸ್ಥಾಪನೆಗೆ ಕರೆ
ಮಾಹಿತಿ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ” ಕರ್ನಾಟಕದಲ್ಲಿ ಕೈಗಾರಿಕಾ ಸ್ಥಾಪನೆಗಿರುವ ಅವಕಾಶಗಳು ಮತ್ತು ಸರ್ಕಾರದ ಸೌಲಭ್ಯಗಳು” ಎಂಬ ಸಂವಾದದಲ್ಲಿ ಕರ್ನಾಟಕ ಉದ್ಯೋಗ ಮಿತ್ರದ ನಿವಾಸಿ ನಿರ್ದೇಶಕ ಶ್ರೀ.ಜಯರಾಜ್ ಅವರು ಕರ್ನಾಟಕದ ಪ್ರಸ್ತುತ ಕೈಗಾರಿಕ ಚಿತ್ರಣವನ್ನು ವಿವರಿಸಿ, ನೆರದಿದ್ದ ಕೈಗಾರಿಕ ಸ್ಥಾಪನೆಗೆ ಆಸಕ್ತಿ ಹೊಂದಿದ ಜನರೊಂದಿಗೆ ಸಂವಾದ ನಡೆಸಿ, ಕರ್ನಾಟಕದಲ್ಲಿ ಕೈಗಾರಿಕೆ ಸ್ಥಾಪನೆಗೆ ಮಾರ್ಗದರ್ಶನ ನೀಡಿದರು.
ಕರ್ನಾಟಕದಲ್ಲಿ ಕೈಗಾರಿಕೆಗಳ ಚಿತ್ರಣ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪಥದಲ್ಲಿ ಶರವೇಗದಲ್ಲಿ ಬದಲಾಗುತ್ತಿದೆ. ಪ್ರಸ್ತುತ್ತ ಕರ್ನಾಟಕ “ಸ್ಟಾರ್ಟಆಫ್” ಕೈಗಾರಿಕೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಯಾರಾದರೂ ಕೈಗಾರಿಕ ಸ್ಥಾಪನೆಗೆ ಒಲವುತೋರಿ, ಕಾನೂನುರೀತ್ಯ ಅನ್‍ಲೈನ್‍ಲ್ಲಿ ಅರ್ಜಿ ಸಲ್ಲಿಸಿದರೆ, ಇಲಾಖೆಯ ವತಿಯಿಂದ ಒಂದು ವಾರದೊಳಗೆ ಅರ್ಜಿದಾರರನ್ನು ಸಂಪರ್ಕಿಸಿ ಕೈಗಾರಿಕ ಸ್ಥಾಪನೆಗೆ ಅಗತ್ಯ ಸಹಕಾರ ನೀಡಲಾಗುತ್ತಿದೆ. ಕೈಗಾರಿಗಳ ಸ್ಥಾಪನೆಗೆ ಕೈಯಲ್ಲಿ ಬಂಡವಾಳ ಇರುವುದಕ್ಕಿಂತ ಮಿಗಿಲಾಗಿ ಕೈಗಾರಿಕ ಸ್ಥಾಪನೆ ಮಾಡಲೇಬೇಕೆಂಬ ಮನಸ್ಸು ಮುಖ್ಯ ಎಂದು ವಿವರಿಸಿದರು. ಬಳಿಕ ಕೈಗಾರಿಕ ಆಸಕ್ತರು ಕೈಗಾರಿಕ ಸ್ಥಾಪನೆಗೆ ತಮಗಿರುವ ಸಂದೇಹಗಳು ಮತ್ತು ಮಾಹಿತಿಗಳನ್ನು ಸಂವಾದದ ಮೂಲಕ ಪಡೆದುಕೊಂಡರು.

City Today News

(Tj vision media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s