‘ದಲಿತರ ನಡಿಗೆ ಸಂವಿಧಾನದ ರಕ್ಷಣೆ ಕಡೆಗೆ’ ವಿಚಾರಗೋಷ್ಠಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಮಾರ್ಗದರ್ಶಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ

ಬೆಂಗಳೂರು-01/01/2019:-

ಕರ್ನಾಟಕ ರಾಜ್ಯಾದ್ಯಂತ ಹಲವು ಕಾರ್ಯಕ್ರಮಗಳನ್ನು ನಿಯೋಜಿಸಿಕೊಂಡು ಬಂದಿರುವ ದಲಿತ ಸಂಘರ್ಷ ಸಮಿತಿಯು ದಿನಾಂಕ : 31-12-2-2018ರ ಸೋಮವಾರದಂದು ಬೆಂಗಳೂರು ಜೆ.ಸಿ. ರಸ್ತೆಯ ರವೀಂದ್ರ ಕಲಾ ಕ್ಷೇತ್ರದಲ್ಲಿ ‘ದಲಿತರ ನಡಿಗೆ ಸಂವಿಧಾನದ ರಕ್ಷಣೆ ಕಡೆಗೆ’ ವಿಚಾರವಾಗಿ ವಿಚಾರಗೋಷ್ಠಿಯನ್ನು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ನೆನಪು ಸ್ಮರಣ ಸಂಚಿಕೆ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಂಡಿತ್ತು. ಹೆರಿಟೇಜ್ ಕ್ಯಾಂಪಸ್ ಗುರುಸ್ಥಾನದ (ಚನ್ನಪಟ್ಟಣ) ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಶ್ರೀ ಶ್ರೀ ಗುರುಯೋಗಿ ಮೋಹನ್ ಗುರೂಜೀ, ಹಾಗೂ ಇಂಟರ್‍ನ್ಯಾಷನಲ್ ಶಿರಡಿ ಸಾಯಿ ಫೌಂಡೇಶನ್ ಸಂಸ್ಥಾಪಕರಾದ ಶ್ರೀ ಶ್ರೀ ಶ್ರೀ ಗುರೂಜೀ ಸಾಯಿ ರಾಮಪ್ರಸಾದ್‍ರವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಕಿರು ಪ್ರತಿಭೆಗಳನ್ನೊಳಗೊಂಡಂತೆ ಹಲವು ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ಇಕದಂಬ ಅಂಗವಿಕಲರ ಸಾಂಸ್ಕøತಿಕ ಸಂಸ್ಥೆಯ ಶ್ರೀನಿವಾಸ್ ಮತ್ತು ತಂಡದವರಿಂದ ವಾದ್ಯಗೋಷ್ಠಿ ಏರ್ಪಡಿಸಿದುದು, ಅಂಗವಿಕಲರಹಾಡುಗಾರಿಕೆ ಅದ್ಭುತಗೊಂಡಿತ್ತು. ಎಲ್ಲರ ಮನ ಸೆಳೆದವು.
ಇದೇ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ಪತ್ರಕರ್ತರು, ಬರಹಗಾರರು, ವೈದ್ಯಕೀಯ ಕ್ಷೇತ್ರ, ದಲಿತ ಸೇವೆ, ಸಾಮಾಜಿಕ ಸೇವೆ, ರಾಜಕೀಯ ಮೊದಲಾದ ಕ್ಷೇತ್ರಗಳಲ್ಲಿ ಸಲ್ಲಿಸಿದ ಹಿರಿಯರನ್ನು ಡಾ|| ಬಿ.ಆರ್. ಅಂಬೇಡ್ಕರ್ ಮಾರ್ಗದರ್ಶಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.

ದಲಿತ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷರಾದ ಡಿ. ಮುನಿರಾಜು ಅವರು ಅಂಬೇಡ್ಕರ್‍ರವರನ್ನು ನೆನೆದು ಅವರ ಮಾರ್ಗದರ್ಶನ ನಮಗೆ ಅವಶ್ಯಕವಾಗಿದೆ. ಅವರ ತತ್ವಗಳನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದರು.

City Today News

(Tj vision media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s