ಮಹಿಳಾ ಮೀಸಲಾತಿ , ಸಮಾನತೆ , ಮಹಿಳಾ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಮಹಿಳಾ ಪಕ್ಷ ಅಸ್ಥಿತ್ವಕ್ಕೆ : ರಾಜ್ಯದಲ್ಲೂ ಪಕ್ಷ ಸಂಘಟನೆಗೆ ಆದ್ಯತೆ : ಡಾ . ಶ್ವೇತಾ ಶೆಟ್ಟಿ

ಬೆಂಗಳೂರು , ಮಹಿಳೆಯರಿಗೆ ಶಾಸಕ ಸಭೆಗಳಲ್ಲಿ ಶೇ 50 ರಷ್ಟು ಮೀಸಲಾತಿ ಕಳಿಸುವುದು , ಮಹಿಳಾ ಸಮಾನತೆ ಮತ್ತು ಮಹಿಳಾ ಹಕ್ಕುಗಳ ಸಂರಕ್ಷಣೆಯನ್ನೇ ಪ್ರಧಾನಗಿರಿಸಿಕೊಂಡು ಅಸ್ಥಿತ್ವಕ್ಕೆ ಬಂದಿರುವ ನ್ಯಾಷನಲ್ ವಿಮೆನ್ಸ್ ಪಾರ್ಟಿ [ ರಾಷ್ಟ್ರೀಯ ಮಹಿಳಾ ಪಕ್ಷ ] ಇದೀಗ ಕರ್ನಾಟಕದಲ್ಲೂ ತನ್ನ ಜಾಲವನ್ನು ವಿಸ್ತರಣೆ ಮಾಡುವ ಗುರಿ ಹೊಂದಿದೆ . ಕರ್ನಾಟಕ ಮೂಲದ , ವೃತ್ತಿಯಲ್ಲಿ ವೈದ್ಯರಾಗಿರುವ 36 ವರ್ಷದ ಡಾ . ಶ್ವೇತಾ ಶೆಟ್ಟಿ ಅವರ ನೇತೃತ್ವದಲ್ಲಿ ರಾಜಧಾನಿ ದೆಹಲಿಯಲ್ಲಿ ಪಕ ಕಳೆದ ತಿಂಗಳು ಅಸ್ಥಿತ್ವಕ್ಕೆ ಬಂದಿದ್ದು , ಇದೀಗ ತನ್ನ ಸಂಘಟನೆ ಜಾಲವನ್ನು ರಾಜ್ಯದಾದ್ಯಂತ ವಿಸ್ತರಿಸಲು ನಿರ್ಧಿಸಲಾಗಿದೆ . ಈ ಪಕ್ಷದಲ್ಲಿ ಮಹಿಳೆಯರಿಗೆ ಮಾತ್ರ ಸದಸ್ಯ , ಸ್ಪರ್ಧಿಸಲು ಟಿಕೆಟ್ ನೀಡಲಾಗುತ್ತದೆ . ಪಕ್ಷದ ತತ್ವ ಸಿದ್ದಾಂತವನ್ನು ಬೆಂಬಲಿಸುವ ಪುರುಷರನ್ನೂ ಸಹ ಪಕ್ಷಕ್ಕೆ ಸ್ವಾಗತಿಸಲು ತೀರ್ಮಾನಿಸಿದೆ .

ನಗರದಲ್ಲಿಂದು ಪಕ್ಷವನ್ನು ವಿದ್ಯುಕ್ತವಾಗಿ ಶುಭಾರಂಭ ಮಾಡಿ ಮಾತನಾಡಿದ ಡಾ . ಶ್ವೇತಾ ಶೆಟ್ಟಿ , ಹಾಲಿ ರಾಜಕೀಯ ಪಕಗಳು ಮಹಿಳೆಯರ ಹಕ್ಕುಗಳು ಮತ್ತು ಸಮಾನತೆ ವಿಚಾರಗಳನ್ನು ನಿರ್ಲಕ್ಷಿಸಿವೆ . 545 ಸದಸ್ಯಬಲದ ಲೋಕಸಭೆಯಲ್ಲಿ ಕೇವಲ ಶೇ 11 ರಷು ‘ ಮಾತ್ರ ಮಹಿಳೆಯರಿದ್ದಾರೆ . ಮಹಿಳೆಯರಿಗೆ ಶಾಸನ ಸಭೆಗಳಲ್ಲಿ ಶೇ 33 ರಷ್ಟು ಮಹಿಳಾ ಮೀಸಲಾತಿ ಕಲ್ಪಸಲು ರಾಜಕೀಯ ಪಕಗಳ ಒಮ್ಮತ ಮೂಡಿಲ್ಲ . ಇದೇ ಉದ್ದೇಶದಿಂದ ಪಕ್ಷ ಸ್ಥಾಪಿಸಲಾಗಿದ್ದು , ಈ ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವುದು ನಮ್ಮ ಪ್ರಮುಖ ಗುರಿಯಾಗಿದೆ ಎಂದರು . ಸೇನೆ ಸೇರಿದಂತೆ ಎಲ್ಲಾ ವಲಯಗಳಲ್ಲೂ ಮಹಿಳೆಯರಿರಬೇಕು ಎನ್ನುವುದನ್ನು ನಮ್ಮ ಪಕ್ಷ ಬೆಂಬಲಿಸಲಿದ್ದು , ಸಾಮಾಜಿಕ , ರಾಜಕೀಯ ಮತ್ತು ಆರ್ಥಿಕವಾಗಿ ಹೆಚ್ಚಿನ ಅಧಿಕಾರ ದೊರಕಿಸಿಕೊಡುವ ಉದ್ದೇಶ ಪಕ್ಷದ ಗುರಿಯಾಗಿದೆ . ಇಡೀ ದೇಶದಲ್ಲಿ ಪಕ್ಷದ ತನ್ನ ಜಾಲ ವಿಸ್ತರಿಸಿಕೊಳ್ಳಲು ನಿರ್ಧರಿಸಲಾಗಿದೆ .

ಬೆಂಗಳೂರು ನಗರದ ಎರಡು ಕ್ಷೇತ್ರಗಳು ಒಳಗೊಂಡಂತೆ ರಾಜ್ಯದ 12 ಕ್ಕೂ ಹೆಚ್ಚು ಲೋಕಸಭಾ ಕೇತಗಳ ಪರ್ಧಿಸಲು ಉದ್ದೇಶಿಸಲಾಗಿದೆ ಎಂದು ಹೇಳಿದರು . ಮಹಿಳೆಯರಿಂದ ಮಹಿಳೆಯರಿಗಾಗಿ ಮಹಿಳೆಯರಿಗೋಸರವೇ ಇರುವ ದೇಶದ ಏಕೈಕ ಪಕವ ಇದಾಗಿದ್ದು , ಈವರೆಗೆ 1 . 75 ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿದೆ . ಮಹಿಳಾ ವಕೀಲರು , ಮಹಿಳಾ ಪತ್ರಕರ್ತರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುವುದು . ಪಕ್ಷದ ಸಂಘಟನೆಯಲ್ಲಿ ಈ ಜನ ಸಮುದಾಯವನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು . ರಾಜದಲ ಪಕ್ಷ ಸಂಘಟನೆ ಉದ್ದೇಶದಿಂದ ರೂಪರಾಣಿ ಅವರ ಅಧ್ಯಕ್ಷತೆಯ ಹಂಗಾಮಿ ಸಮಿತಿ ರಚಿಸಿದ್ದು , ಪಕ್ಷದ ಪದಾಧಿಕಾರಿಗಳ ಆಯ್ಕೆ ನಂತರ ಶಾಶ್ವತ ಸಮಿತಿ ರಚಿಸಲಾಗುವುದು , ಮಹಿಳೆಯರ ಸಬಲೀಕರಣವೇ ಪಕ್ಷದ ಪ್ರಮುಖ ಗುರಿಯಾಗಿದ್ದು , ರಾಜಕೀಯ ಅಧಿಕಾರದ ಬಗ್ಗೆ ಮಹಿಳೆಯರಲ್ಲಿ ಅರಿವು ಮೂಡಿವ ಗುರಿ ಹೊಂದಲಾಗಿದೆ . ನಂತರ ಉಳಿದ ರಾಜ್ಯಗಳಲೂ ತನ್ನ ವ್ಯಾಪಿಯನು . ವಿಸ್ತರಣೆ ಮಾಡಲಾಗುವುದು ಎಂದು ಡಾ . ಶ್ವೇತಾ ಶೆಟ್ಟ ಮಾಹಿತಿ ನೀಡಿದರು .

ತೆಲಂಗಾಣದಲ್ಲಿ ಸರ್ಕಾರೇತರ ಸಂಸ್ಥೆಯಲ್ಲಿ ಕೆಲಸ ಮಾಡುವಾಗ ವ್ಯವಸ್ಥೆಯಲ್ಲಿ ಸುಧಾರಣೆ ತರಬೇಕು ಎನ್ನುವುದು ಮನಗಂಡ ನಂತರ ಮಹಿಳಾ ಸಬಲೀಕರಣಕ್ಕಾಗಿ ರಾಷ್ಟ್ರೀಯ ಅಭಿಯಾನ ಆರಂಭಿಸಲಾಯಿತು . ನಂತರ ಪಕ್ಷ ಅಸ್ಥಿತ್ವಕ್ಕೆ ಬಂತು , ತೆಲಂಗಾಣದಲ್ಲಿ 1 . 45 ಲಕ್ಷ ಮಹಿಳಾ ಸದಸ್ಯರಿದ್ದಾರೆ . 2012ರಲ್ಲೇ ರಾಷ್ಟ್ರೀಯ ಮಹಿಳಾ ಪಕ್ಷ ಸ್ಥಾಪನೆಗೆ ರೂಪರೇಷೆ ಸಿದ್ಧಪಡಿಸಲಾಗಿತ್ತು . ನಂತರ ಪಕ್ಷ ಕಳೆದ ತಿಂಗಳ 18 ರಂದು ನವದೆಹಲಿಯಲ್ಲಿ ವಿದ್ಯುಕ್ತವಾಗಿ ಪಕ್ಷ ಅಸ್ಥಿತ್ವಕ್ಕೆ ಬಂದಿದೆ . ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಸಲು ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ಡಾ . ಶ್ವೇತಾ ಶೆಟ್ಟಿ ತಿಳಿಸಿದರು

City Today News

(Tj vision media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s