ದಿನಾಂಕ : 05 / 01 / 2019 ಕೊಪ್ಪಳ ತಾಲೂಕು ಇಂಡರಗಿ ಗ್ರಾಮದ ನಿವಾಸಿಯವರ ಜಮೀನಿನಲ್ಲಿ ಟ್ರಾನ್ಸ್ಫಾರ್ಮರ್ ಸುಟ್ಟು ಹೋಗಿದ್ದರಿಂದ ಹೊಸ ಟ್ರಾನ್ಸ್ಫಾರ್ಮರ್ನ್ನು ಅಳವಡಿಸಲು ಕೋರಿ ಅರ್ಜಿ ಸಲ್ಲಿಸಿರುತ್ತಾರೆ . ಶ್ರೀ . ಜಗದೀಶ , ಜೆಇ , ಎಇಇ ಜೆಸ್ಕಾಂ ಕಛೇರಿ , ಮುನಿರಾಬಾದ್ ರವರು ಹೊಸ ಟ್ರಾನ್ಸ್ಫಾರ್ಮರ್ ಅನ್ನು ಅಳವಡಿಸಲು ರೂ . 5 , 000 / – ಗಳ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ಶ್ರೀ . ಸಾಧಿಕ್ , ಮೆಕಾನಿಕ್ ಗ್ರೇಡ್ – 2 , ಬೆಸ್ಕಾಂ ಮುನಿರಾಬಾದ್ ಸಬ್ ಡಿವಿಷನ್ ಕಛೇರಿ ರವರು ಫಿರ್ಯಾದುದಾರರಿಂದ ಲಂಚದ ಹಣ ರೂ . 2 , 000 / – ಗಳನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಕೊಪ್ಪಳ ಭ್ರಷ್ಟಾಚಾರ ನಿಗ್ರಹ ದಳ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿರುತ್ತಾರೆ . ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ . ಶ್ರೀ . ಜಗದೀಶ . . ಜೆಇ ಹಾಗೂ ಶ್ರೀ . ಸಾಧಿಕ್ , ಮೆಕಾನಿಕ್ ಗ್ರೇಡ್ – 2 ಇವರುಗಳನ್ನು ದಸ್ತಗಿರಿ ಮಾಡಲಾಗಿದೆ . ತನಿಖೆ ಮುಂದುವರೆದಿದೆ .
City Tiday News
(Tj vision media)
9341997936