ತಮಿಳುನಾಡು ಸರ್ಕಾರದ ನೀತಿಯನ್ನು ವಿರೋಧಿಸಿ ಇದೇ 12ನೇ ತಾರೀಖು ಬೆಳಿಗ್ಗೆ 11 – 30 ಗಂಟೆಗೆ ತಮಿಳುನಾಡಿನ ಗಡಿಭಾಗವಾದ ಅತ್ತಿಬೆಲೆ ಬಂದ್ ಮಾಡಲಾಗುವುದೆಂದು ವಾಟಾಳ್ ನಾಗರಾಜ್ ತಿಳಿಸಿದರು

ಬೆಂಗಳೂರು, 10ನೇ,ಜನವರಿ,2019:

ಮೇಕೆದಾಟು ಯೋಜನೆಗೆ ವಿರೋಧಿಸುತ್ತಿರುವ ತಮಿಳುನಾಡು ಸರ್ಕಾರದ ವಿರುದ್ದ ಇದೇ 12ನೇ ಶನಿವಾರ ಬೆಳಿಗ್ಗೆ 11 – 30 ಗಂಟೆಗೆ ತಮಿಳುನಾಡಿನ ಗಡಿಭಾಗವಾದ ಅತ್ತಿಬೆಲೆ ಬಂದ್ ಮಾಡಲಾಗುವುದು . ಸುಮಾರು ಸಾವಿರಾರು ವಾಹನಗಳನ್ನು ತಡೆಯುವ ಮೂಲಕ ಬಂದ್ ಮಾಡಲಾಗುವುದೆಂದು ವಾಟಾಳ್ ನಾಗರಾಜ್ ತಿಳಿಸಿದರು . ತಮಿಳು ನಾಡಿನ ಮುಖಂಡರುಗಳು ಇತ್ತೀಚೆಗೆ ಮೇಕೆದಾಟಿಗೆ ನುಗ್ಗಬೇಕೆಂದು ಪಾದಯಾತ್ರೆ ಮಾಡಿರುವುದನ್ನು ಖಂಡಿಸಿ ತಮಿಳುನಾಡು ಕರ್ನಾಟಕ ಗಡಿ ಬಂದ್ , ಮೇಕೆದಾಟು ಯೋಜನೆಗೆ ತಮಿಳುನಾಡಿನವರು ಅಡ್ಡಿಪಡಿಸುತ್ತಿರುವುದು ಅರ್ಥವಿಲ್ಲ . ಮೇಕೆದಾಟು ಬಗ್ಗೆ ತಮಿಳುನಾಡಿನವರಿಗೆ ಯಾವುದೇ ಅಧಿಕಾರವಿಲ್ಲ . ಮೇಕೆದಾಟು ಯೋಜನೆಯನ್ನು ಕೂಡಲೇ ಆರಂಭಿಸಬೇಕು . ಕರ್ನಾಟಕ ಸರ್ಕಾರ ಮಂದಗತಿಯ ಧೋರಣೆಯನ್ನು ಅನುಸರಿಸುತ್ತಿದ್ದಾರೆ . ಮೇಕೆದಾಟು ಜಲಾಶಯ ವಿದ್ಯುಚ್ಛಕ್ತಿ ತಯಾರಿಕೆ , ಕುಡಿಯುವ ನೀರಿಗೆ ಇದರಿಂದ ತಮಿಳುನಾಡಿಗೆ ಯಾವುದೇ ಆತಂಕ ಇಲ್ಲ , ಸಮುದ್ರಕ್ಕೆ ನೂರಾರು ಟಿ . ಎಂ . ಸಿ . ನೀರು ಹರಿದು ಹೋಗುವ ಮೂಲಕ ಪೋಲಾಗುತ್ತಿದೆ . ಕರ್ನಾಟಕ ಸರ್ಕಾರ ಸಮುದ್ರಕ್ಕೆ ಹೋಗುವ ಹೆಚ್ಚುವರಿ ನೀರನ್ನು ತಡೆದು ಮೇಕೆದಾಟು ಯೋಜನೆಯನ್ನು ಆರಂಭಿಸುತ್ತಾರೆ . ಮೇಕೆದಾಟು ಆರಂಭದಿಂದ ಯಾವುದೇ ತೊಂದರೆಯಾಗಲ್ಲ . ಮೇಕೆದಾಟು ಆರಂಭಕ್ಕೆ ಯಾರು ತಡೆ ಹೊಡಿಲ್ಲ . ಕರ್ನಾಟಕ ಸರ್ಕಾರ ಕೂಡಲೇ ಮೇಕೆದಾಟು ಯೋಜನೆ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು . ನೀಲಿನಕ್ಷೆ ತಯಾರಿಸಬೇಕು ಎಷ್ಟು ಹಣ ಖರ್ಚಗುತ್ತದೆ ನಿಗಧಿಪಡಿಸಬೇಕು ಎಷ್ಟು ವರ್ಷದಲ್ಲಿ ಈ ಯೋಜನೆಯ ಮುಗಿಯುತ್ತದೆ ಎನ್ನುವ ನಿರ್ಧಾರವನ್ನು ಪ್ರಕಟಿಸಬೇಕು ಇದಕ್ಕಾಗಿ ವಿಶೇಷ ಕಾರ್ಯತಂತ್ರ ರೂಪಿಸಬೇಕೆಂದು ಹಾಗೂ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರವಾಗಲೀ , ತಮಿಳುನಾಡಿನ ಮುಖಂಡರುಗಳಾಗಲಿ ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದೆಂದು ವಾಟಾಳ್ ತಿಳಿಸಿದರು . ತಮಿಳುನಾಡು ಸರ್ಕಾರದ ನೀತಿಯನ್ನು ವಿರೋಧಿಸಿ ಇದೇ 12ನೇ ತಾರೀಖು ಬೆಳಿಗ್ಗೆ 11 – 30 ಗಂಟೆಗೆ ತಮಿಳುನಾಡಿನ ಗಡಿಭಾಗವಾದ ಅತ್ತಿಬೆಲೆ ಬಂದ್ ಮಾಡಲಾಗುವುದೆಂದು ವಾಟಾಳ್ ನಾಗರಾಜ್ ತಿಳಿಸಿದರು . ಈ ಪತ್ರಿಕಾ ಗೋಷ್ಠಿಯಲ್ಲಿ ಕನ್ನಡ ಒಕ್ಕೂಟದ ಮುಖಂಡರುಗಳಾದ ಸಾ . ರಾ . ಗೋವಿಂದು , ಕೆ . ಆರ್ . ಕುಮಾರ್ , ಮಂಜುನಾಥ್ ದೇವ್ , ಗಿರೀಶ್ ಗೌಡ ಸೇರಿದಂತೆ ಇನ್ನು ಹಲವು ಮುಖಂಡರುಗಳು ಭಾಗವಹಿಸಿದ್ದರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s