ದಿನಾಂಕ 11 / 01 / 2019 , ಗದಗ ನಗರದ ನಂದೀಶ್ವರ ನಗರ ನಿವಾಸಿಯೊಬ್ಬರು ನಡೆಸುತ್ತಿರುವ ಸಂಸ್ಥೆಗೆ ಕೆ . ಎಸ್ . ಎಫ್ . ಸಿ . ಯಿಂದ 1 , 90 , 00 , 000 / – ಸಾಲ ಪಡೆದಿದ್ದು , ಅವರಿಗೆ ಸರಕಾರದಿಂದ ಸಿಗಬೇಕಾದ ಸಬ್ಸಿಡಿ ಹಣ ರೂ . 20 , 00 , 000 / ಗಳ ಸಲುವಾಗಿ ಗದಗ ಜಿಲ್ಲಾ ಕೈಗಾರಿಕೆ ಕೇಂದ್ರದಲ್ಲಿ ಅರ್ಜಿಯನ್ನು ಸಲ್ಲಿಸಿರುತ್ತಾರೆ . ಶ್ರೀ . ದತ್ತಾತ್ರೇಯ ಸತ್ಯಪ್ಪ ಶಿರೋಳ , ಸಹಾಯಕ ನಿರ್ದೇಶಕರು , ಜಿಲ್ಲಾ ಕೈಗಾರಿಕಾ ಕೇಂದ್ರ , ಗದಗ ರವರು ಅರ್ಜಿದಾರರ ಸಬ್ಸಿಡಿ ಹಣ ರೂ . 20 , 00 , 000 / – ಗಳ ಮಂಜೂರಾತಿಗಾಗಿ ರೂ . 1 , 20 , 000 / – ಗಳ ಲಂಚದ ಬೇಡಿಕೆಯನ್ನು ಇಟ್ಟಿರುತ್ತಾರೆ . ದಿನಾಂಕ : 11 . 01 . 2018 ರಂದು ಶ್ರೀ . ದತ್ತಾತ್ರೇಯ ಸತ್ಯಪ್ಪ ಶಿರೋಳ ರವರು ಅರ್ಜಿದಾರರಿಂದ ರೂ . 1 , 20 , 000 / – ಲಂಚದ ಹಣವನ್ನು ಪಡೆಯುವ ಸಂದರ್ಭದಲ್ಲಿ ಗದಗ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳ ಬಲೆಗೆ ಸಿಕ್ಕಿಬಿದ್ದಿರುತ್ತಾರೆ . ಲಂಚದ ಹಣವನ್ನು ವಶಪಡಿಸಿಕೊಂಡು ಇವರನ್ನು ದಸ್ತಗಿರಿ ಮಾಡಲಾಗಿದೆ . ತನಿಖೆ ಮುಂದುವರೆದಿದೆ .
City Today News
(citytoday.media)
9341997936