ದಿನಾಂಕ : 11 / 01 / 2019 ರಂದು ಶ್ರೀ ಪ್ರಸನ್ನ ರವರು ದೂರುದಾರರಿಂದ ರೂ . 1 , 500 / – ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಹಾಸನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುತ್ತಾರೆ .

ದಿನಾಂಕ : 11 / 01 / 2019 , ಹಾಸನ ಜಿಲ್ಲೆ ಮಾದಳು ಗ್ರಾಮದ ನಿವಾಸಿಯು ಆಶ್ರಯ ಮನೆ ಮಾಡಿಕೊಳ್ಳುವ ಸಂಬಂಧ ಸರ್ಕಾರದಿಂದ ಬಸವ ವಸತಿ ಯೋಜನೆಯಡಿ ಮಂಜೂರಾಗಿದ್ದ ರೂ . 1 , 31 , 800 / – ಗಳು ಮತ್ತು ಎಂನರೇಗಾ ಯೋಜನೆಯಡಿ ಮಂಜೂರಾಗಿದ್ದ ರೂ . 20 , 000 / – ರೂಗಳ ಅನುದಾನ ಹಣವನ್ನು ಬಿಡುಗಡೆ ಮಾಡಲು ಅರ್ಜಿ ಸಲ್ಲಿಸಿರುತ್ತಾರೆ . ಶ್ರೀ . ಪ್ರಸನ್ನ , ಗ್ರಾಮ ಪಂಚಾಯ್ತಿ ಸೆಕ್ರೆಟರಿ ಗ್ರೇಡ್ – 02 ಮಾದಾಳು ಗ್ರಾಮ ಪಂಚಾಯ್ತಿ . ಅರಸೀಕೆರೆ ತಾಲ್ಲೂಕು , ಹಾಸನ ಜಿಲ್ಲೆ ಇವರು ಅರ್ಜಿದಾರರ ಅನುದಾನ ಮೊತ್ತ ಬಿಡುಗಡೆ ಮಾಡಲು ರೂ . 2 , 000 / – ಲಂಚದ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 11 / 01 / 2019 ರಂದು ಶ್ರೀ ಪ್ರಸನ್ನ ರವರು ದೂರುದಾರರಿಂದ ರೂ . 1 , 500 / – ಲಂಚದ ಹಣ ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಹಾಸನ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿಬಿದ್ದಿರುತ್ತಾರೆ . ಇವರನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ , ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s