ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ ( ಸಿ . ಪಿ . ಆರ್ . ಐ . ) ಸಂಸ್ಥೆಯು ತನ್ನ 59ನೇ ಸ್ಥಾಪನಾ ದಿನಾಚರಣೆಯನ್ನು ಜನವರಿ 16 , 2019 ರಂದು ಬೆಂಗಳೂರಿನ ಕಛೇರಿಯಲ್ಲಿ ಆಚರಿಸಲಾಯಿತು

ಬೆಂಗಳೂರು, 16ನೇ ಜನವರಿ, 2019:

ಕೇಂದ್ರೀಯ ವಿದ್ಯುತ್ ಸಂಶೋಧನಾ ಸಂಸ್ಥೆ ( ಸಿ . ಪಿ . ಆರ್ . ಐ . ) ಭಾರತದ ವಿದ್ಯುತ್ ಉದ್ಯಮದ ಅತಿ ಶ್ರೇಷ್ಠ ಅಂಗವಾಗಿದ್ದು , ಅದರ ಮುಖ್ಯ ಕಛೇರಿ ಬೆಂಗಳೂರಿನಲ್ಲಿರುತ್ತದೆ . ಈ ಸಂಸ್ಥೆಯು ತನ್ನ 59ನೇ ಸ್ಥಾಪನಾ ದಿನಾಚರಣೆಯನ್ನು ಜನವರಿ 16 , 2019 ರಂದು ಬೆಂಗಳೂರಿನ ಕಛೇರಿಯಲ್ಲಿ ಆಚರಿಸಲಾಯಿತು .

ಆಚರಣೆಯ ಅಂಗವಾಗಿ ಜವಹರ್‌ಲಾಲ್ ನೆಹರೂ ಸ್ಮಾರಕ ಉಪನ್ಯಾಸವನ್ನು ಪ್ರೊ . ಎಂ . ಆರ್‌ . ಎಸ್‌ . ರಾವ್ ಪದ್ಮಶ್ರೀ ಪುರಸ್ಕೃತರು, ಜವಹರ್‌ಲಾಲ್ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರ , ಬೆಂಗಳೂರು , ಅವರು ” ಮಾನವನ ಜೀನೋಮ್ ಮಾನವ ಕುಲದ ಭವಿಷ್ಯವನ್ನು ರೂಪಿಸುತ್ತದೆ ” ಎಂಬ ವಿಷಯದ ಮೇಲೆ ಉಪನ್ಯಾಸವನ್ನು ಮಂಡಿಸಿದರು .

ಉಪನ್ಯಾಸವು ವೈಜ್ಞಾನಿಕ ಸಮುದಾಯದಿಂದ ಉತ್ತಮವಾಗಿ ಸ್ವೀಕರಿಲಸ್ಪಟ್ಟಿತ್ತು. ಮತ್ತು ಮೆಚ್ಚುಗೆಯನ್ನು ಹೊಂದಿತ್ತು . ದೇಶದಲ್ಲಿ ಬೆಳೆಯುತ್ತಿರುವ ವಿದ್ಯುತ್ ಕ್ಷೇತ್ರದ ಅಗತ್ಯ ವಸ್ತುಗಳನ್ನು ಮತ್ತು ಅವುಗಳನ್ನು ಪೂರೈಸುವಲ್ಲಿ ಸಿ . ಪಿ . ಆರ್ . ಐ . ನ ಪಾತ್ರವನ್ನು ಮಹಾನಿರ್ದೇಶಕರಾದ ಶ್ರೀ . ವಿ . ಎಸ್ . ನಂದಕುಮಾರ್ ರವರು ಪ್ರಸ್ತುತ ಪಡಿಸಿದರು .

ಸಿ . ಪಿ . ಆರ್ . ಐ . ದೇಶದ ವಿದ್ಯುತ್ ಉದ್ಯಮಕ್ಕೆ ಉತ್ಪನ್ನ ಅಭಿವೃದ್ಧಿ ಮತ್ತು ಗುಣಮಟ್ಟ ಸುಧಾರಣೆ ಒಂದೇ ನಿಟ್ಟಿನಲ್ಲಿ ಶ್ರಮಿಸುತ್ತಿದ್ದು , ವಿದ್ಯುತ್ ಉಪಕರಣಗಳ ಪರೀಕ್ಷೆ ಮತ್ತು ಪ್ರಮಾಣೀಕರಣಕ್ಕಾಗಿ ಸ್ವತಂತ್ರ ಪ್ರಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದು ಗಮನಾರ್ಹ ಸಂಗತಿ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s