ಪಾರ್ಕಿನ್ಸನ್ ಕಾಯಿಲೆ ನಿರ್ವಹಣೆ ಬಗ್ಗೆ ಜಾಗೃತಿ ಮೂಡಿಸಲು ಬೆಂಗಳೂರಿನಿಂದಕಾಠ್ಮಂಡುವಿಗೆ ಒಂದು ಪ್ರಯಾಣ

ಬೆಂಗಳೂರು, 17ನೇ ಜನವರಿ 2019: ಚಲನೆಯಮೇಲೆ ಪ್ರಭಾವ ಬೀರುವ ನರವ್ಯೂಹದಲ್ಲಿಉಲ್ಬಣಗೊಳ್ಳುವ ಅಸ್ವಸ್ಥತೆಯಾದ ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವ ಹರಿಪ್ರಸಾದ್ ತನ್ನಹೆಂಡತಿಯೊಂದಿಗೆ 40 ದಿನಗಳ ರಸ್ತೆಪ್ರಯಾಣವನ್ನು ಕೈಗೊಳ್ಳಲಿದ್ದಾರೆ. ಪಾರ್ಕಿನ್ಸನ್ ಕಾಯಿಲೆಯನ್ನು ಸರಿಯಾಗಿ ನಿರ್ವಹಿಸಿ ಉತ್ತಮಜೀವನ ಜೀವನ ನಡೆಸುವ ಕುರಿತು ಜಾಗೃತಿಮೂಡಿಸಲು ಬೆಂಗಳೂರಿನಿಂದ ಕಾಠ್ಮಂಡುವಿಗೆ2,600 ಕಿಮೀ ದೂರ ಕ್ರಮಿಸಲಿದ್ದಾರೆ.

ಸುಮಾರು 10 ವರ್ಷಗಳ ಹಿಂದೆ, 2009ರಲ್ಲಿ, ಹರಿಪ್ರಸಾದ್ ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗಿರುವಸಂಗತಿ ತಿಳಿಯಿತು. ಮೊದಲಿಗೆ ಅವರಿಗೆಎಡಗೈಯಲ್ಲಿ ನಡುಕದ ಜೊತೆಗೆ ದೇಹದಎಡಭಾಗದ ಚಲನೆಯಲ್ಲಿ ನಿಧಾನಗತಿಕಂಡುಬಂದಿತು. ಆಗಲೇ ಅವರು ಯಶವಂತಪುರದಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆಗೆ ಭೇಟಿನೀಡಿದರು. ಅವರ ಕುಟುಂಬದಲ್ಲಿ ನಡುಕದಹಿನ್ನೆಲೆಯಿದ್ದುದರಿಂದ, ಹೊಸ ನಡುಕ ಅವರದೈನಂದಿನ ಚಟುವಟಿಕೆಗಳಿಗೆ ಹೆಚ್ಚಾಗಿ ಪರಿಣಾಮಬೀರಲಿಲ್ಲವಾದ್ದರಿಂದ, ಮುಂದಿನ ಕೆಲವುತಿಂಗಳುಗಳ ಕಾಲ ಅವರನ್ನುಅವಲೋಕಿಸುವುದೆಂದು ತೀರ್ಮಾನಿಸಲಾಯಿತು. ಮುಂದಿನ ಒಂದು ವರ್ಷ, ಹರಿಯವರಎಡಗೈಯಲ್ಲಿದ್ದ ನಡುಕವು ತಮ್ಮ ನಡಿಗೆ ಮತ್ತುಎಡಗೈಯಲ್ಲಿನ ಚಲನೆಯ ನಿಧಾನಗತಿಯೊಂದಿಗೆಮತ್ತಷ್ಟು ಹೆಚ್ಚಿತು. ಹರಿಯವರು ಪಾರ್ಕಿನ್ಸನ್ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರುತಿಳಿಸಿದರು ಮತ್ತು ಔಷಧಿಗಳನ್ನು ನೀಡಲುಆರಂಭಿಸಿದರು.

ಒಂದು ವರ್ಷದೊಳಗೆ, ಹರಿಯವರ ಪರಿಸ್ಥಿತಿ ಬಹಳಕೆಟ್ಟದಾಯಿತು, ಅವರ ದೇಹದ ಚಲನೆ ಮತ್ತಷ್ಟುಹದಗೆಡುವುದರೊಂದಿಗೆ, ನಡುಕ ಬಲಭಾಗದಅಂಗಗಳಿಗೂ ಹಬ್ಬಿತು. ಅವರಿಗೆ ಸರಿಯಾಗಿ ಕೆಲಸಮಾಡಲು ಅಥವಾ ತುಂಬಾ ಹೊತ್ತು ಸಭೆಗಳಲ್ಲಿಕುಳಿತುಕೊಳ್ಳಲು ಸಾಧ್ಯವಾಗಲಿಲ್ಲ. ಅವರಿಗೆವಾಹನ ಚಲಾಯಿಸುವುದೂ ಕಷ್ಟವಾಗಿತ್ತು ಮತ್ತುಕ್ಷೌರ ಅಥವಾ ಉಡುಪು ಧರಿಸುವಿಕೆಯಂತಹದೈನಂದಿನ ಚಟುವಟಿಕೆಗಳಿಗೂ ಸಹ ಇತರರಸಹಾಯ ಬೇಕಿತ್ತು. ಕಾಯಿಲೆಯು ಹೆಚ್ಚುತ್ತಿದ್ದಂತೆ, ಹರಿಯವರ ಔಷಧಿಗಳನ್ನು ಹೊಂದುವಂತೆಬದಲಿಸಲಾಯಿತು. ಇದರೊಂದಿಗೆ, ಹರಿಯವರಿಗೆಆಯಾಸ, ಗೀಳಿನ ಲಕ್ಷಣಗಳು ಮತ್ತು ಭ್ರಮೆಯಅನುಭವ ಉಂಟಾಗಲು ಆರಂಭವಾಯಿತು. ಎಡಗೈನಡುಕ ಮತ್ತು ಬಿಗಿತ ಅವರ ಪರಿಸ್ಥಿತಿಯನ್ನುಹದಗೆಡಿಸಿತು.

2014 ಹೊತ್ತಿಗೆ, ಅವರು ಯಾಂತ್ರಿಕಏರಿಳಿತಗಳನ್ನು ಅನುಭವಿಸಲು ಪ್ರಾರಂಭಿಸಿದರುಮತ್ತು ಕಾಯಿಲೆಯನ್ನು ನಿಭಾಯಿಸಲುಕಷ್ಟಕರವಾದ ಅವರ ಪರಿಸ್ಥಿತಿಯಿಂದಾಗಿ, ಅವರು ಕೆಲಸದಿಂದ ವಿರಾಮತೆಗೆದುಕೊಳ್ಳಲೇಬೇಕಾಯಿತು. ಜನವರಿ 2015ರಲ್ಲಿ, ಹರಿಯವರಿಗೆ ನಿದ್ದೆ ಸಮಸ್ಯೆಗಳು ಮತ್ತುಏಕಾಗ್ರತೆಯ ಕೊರತೆಯೂ ಎದುರಾಯಿತು. ಆಗಯಶವಂತಪುರದ ಕೊಲಂಬಿಯಾ ಏಷಿಯಾರೆಫರಲ್ ಆಸ್ಪತ್ರೆಯ ವೈದ್ಯರು ಡೀಪ್ ಬ್ರೈನ್ಸ್ಟಿಮ್ಯುಲೇಶನ್ (ಡಿಬಿಎಸ್) ಶಸ್ತ್ರೆಚಿಕಿತ್ಸೆಗೆ ಸಲಹೆನೀಡಿದರು ಮತ್ತು ಅದರಿಂದ ಅವರ ಪರಿಸ್ಥಿತಿಗೆಆಗಬಹುದಾದ ಪ್ರಯೋಜನಗಳ ಬಗ್ಗೆವಿವರಿಸಿದರು. ಅವರು ಮಾರ್ಚ್ 2015ರಲ್ಲಿ, ದ್ವಿಪಕ್ಷೀಯ ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಗೆಒಳಗಾದರು. ಡಿಬಿಎಸ್, ಪಾರ್ಕಿನ್ಸನ್ ಕಾಯಿಲೆ, ಅಗತ್ಯವಾದ ನಡುಕ, ಬಹು ಸ್ಕ್ಲೆರೋಸಿಸ್, ಮತ್ತುಕೆಲವು ಇತರೆ ನರ ಸಂಬಂಧಿತ ಪರಿಸ್ಥಿತಿಗೆ ಚಿಕಿತ್ಸೆನೀಡಲು ವಿದ್ಯುತ್ ಪ್ರಚೋದನೆಯನ್ನು ಬಳಸುವಒಂದು ವಿಧದ ಚಿಕಿತ್ಸೆಯಾಗಿದೆ. ನಡುಕ, ಬಿಗಿತ, ನಡೆಯಲು ಕಷ್ಟವಾಗುವಿಕೆ ಮತ್ತು ನಿಧಾನಗತಿಯಚಲನೆಯಂತಹ ಚಲನಾ ಸಮಸ್ಯೆಗಳಿಗೆ ಚಿಕಿತ್ಸೆನೀಡಲು ಡಿಬಿಎಸ್ ಪರಿಣಾಮಕಾರಿಯಾಗಿದೆ.

ಯಶವಂತಪುರದ ಕೊಲಂಬಿಯಾ ಏಷಿಯಾರೆಫರಲ್ ಆಸ್ಪತ್ರೆಯ ನರಶಸ್ತ್ರಚಿಕಿತ್ಸೆಯ ಹಿರಿಯಸಲಹೆಗಾರರಾದ ಡಾ ರಘುರಾಮ್ ಜಿಹೇಳುವಂತೆ, “ಹರಿಪ್ರಸಾದ್ರವರು ಶಸ್ತ್ರಚಿಕಿತ್ಸೆಗೆಉತ್ತಮವಾಗಿ ಪ್ರತಿಕ್ರಿಯಿಸಿದ ಒಂದು ವಾರದಬಳಿಕ, ಡಿಬಿಎಸ್ ನಂತರದ ಪ್ರಕ್ರಿಯೆಗಳನ್ನುಆರಂಭಿಸಲಾಯಿತು. ನಡುಕ, ನಿಧಾನಗತಿ ಮತ್ತುಬಿಗಿತವನ್ನು ಒಳಗೊಂಡಂತೆ ಅವರ ಪಾರ್ಕಿನ್ಸನ್ರೋಗಲಕ್ಷಣಗಳು ನಿಂತವು ಮತ್ತು ಅವರ ನಡಿಗೆಗಮನಾರ್ಹವಾಗಿ ಸುಧಾರಿಸಿತು.”

ಡೀಪ್ ಬ್ರೈನ್ ಸ್ಟಿಮ್ಯುಲೇಶನ್ ಶಸ್ತ್ರಚಿಕಿತ್ಸೆಯುಹರಿಯವರ ಜೀವನ ಗುಣಮಟ್ಟವನ್ನೂಪ್ರಭಾವಿಸಿದೆ. ಶಸ್ತ್ರಚಿಕಿತ್ಸೆಯ ನಂತರ, ಅವರುಒಬ್ಬಂಟಿಯಾಗಿ ದೇಶ ಮತ್ತು ವಿದೇಶಕ್ಕೂಪ್ರಯಾಣಿಸಲು ಸಾಧ್ಯವಾಯಿತು. ಪಾರ್ಕಿನ್ಸನ್ಕಾಯಿಲೆಯ ನಿರ್ವಹಣೆ ಮತ್ತು ಜಾಗೃತಿಮೂಡಿಸಲು ನಾವು ಅವರಿಗೆ ವೇದಿಕೆಒದಗಿಸಿದ್ದೇವೆ,” ಎಂದು ಯಶವಂತಪುರದಕೊಲಂಬಿಯಾ ಏಷಿಯಾ ರೆಫರಲ್ ಆಸ್ಪತ್ರೆಯನರಶಾಸ್ತ್ರದ ಹಿರಿಯ ಸಲಹೆಗಾರ ಡಾಗುರುಪ್ರಸಾದ್ ಹೊಸೂರ್ಕರ್ ಹೇಳಿದರು

ಅವರು ಜನವರಿ 18 ರಂದು ತಮ್ಮ ಪ್ರಯಾಣವನ್ನುಆರಂಭಿಸುತ್ತಿದ್ದಾರೆ. ಬೆಳಗಾವಿ, ಕೋಲಾಡ್, ನಾಸಿಕ್, ಸರ್ದಾರ್ ಸರೋವರ್, ಇಂದೋರ್, ಭೋಪಾಲ್, ಸಾಂಚಿ, ಝಾನ್ಸಿ, ಆಗ್ರಾ, ಲಕ್ನೌ, ಗೋರಖ್ ಪುರ, ಲುಂಬಿನಿ, ಪೋಖಾರಾ, ಕಾಠ್ಮಂಡುಸೇರಿದಂತೆ 11 ನಗರಗಳ ಮೂಲಕ ಸವಾರಿ ಮಾಡಿಫೆಬ್ರವರಿ 6ರಂದು ಕಾಠ್ಮಂಡುವಿಗೆ ತಲುಪುವಯೋಜನೆ ಇದಾಗಿದೆ. ಅವರು 2,600 ಕಿ.ಮೀ ದೂರಕ್ರಮಿಸಲಿದ್ದಾರೆ.

ಹರಿಪ್ರಸಾದ್ ಅವರು ಕಾಠ್ಮಂಡುವಿಗೆ ಹೋಗುವಹಾದಿಯಲ್ಲಿ ನಾಸಿಕ್, ಇಂದೋರ್, ಲಕ್ನೌ, ಆಗ್ರಾಮತ್ತು ಪೋಖಾರಾ ಸ್ಥಳಗಳಲ್ಲಿ ವಿಚಾರಸಂಕಿರಣಗಳನ್ನು ನಡೆಸಲಿದ್ದಾರೆ.

2016- 2017 ರಲ್ಲಿನ ಅವರ ಶಸ್ತ್ರಚಿಕಿತ್ಸೆಯ ನಂತರಹರಿಪ್ರಸಾದ್ ಅವರು ಎರಡು ರಸ್ತೆಪ್ರಯಾಣಗಳನ್ನು ಕೈಗೊಂಡಿದ್ದಾರೆ. ಮೊದಲನೆಯದು ಬೆಂಗಳೂರಿನಿಂದ ಭೂತಾನ್ಗೆಮತ್ತು ಎರಡನೆಯದು ಬೆಂಗಳೂರಿನಿಂದಗುಜರಾತಿಗೆ ಹೋಗಿ ಬರುವುದಾಗಿತ್ತು.

ರೋಗಲಕ್ಷಣಗಳು, ಚಿಕಿತ್ಸೆಗಳು ಮತ್ತು ರೋಗದಬೆಳವಣಿಗೆಯ ಬಗ್ಗೆ ತಿಳಿದುಕೊಳ್ಳುವುದುಪ್ರತಿಯೊಬ್ಬರಿಗೂ ಬಹಳ ಮುಖ್ಯವಾಗಿದೆ. ಒಬ್ಬರು ರೋಗದಿಂದ ಬಳಲುತ್ತಿದ್ದರೆ, ಅಂಥವರಿಗೆಪಾರ್ಕಿನ್ಸನ್ನ್ನು ನಿಯಂತ್ರಿಸುವಲ್ಲಿ ವೈದ್ಯರ ಭೇಟಿಮತ್ತು ನಿಯಮಿತವಾದ ವ್ಯಾಯಾಮ ಪ್ರಮುಖಪಾತ್ರ ವಹಿಸುತ್ತದೆ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s