‘ ಯೋಧನಮನ ‘ ಹದಿಮೂರು ಸಾಧಕರಿಗೆ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರಧಾನ-ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ( ರಿ ) ಬೆಂಗಳೂರು ಹಾಗೂ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದೊಂದಿಗೆ

ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ( ರಿ ) ಬೆಂಗಳೂರು ಹಾಗೂ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇವರ ಸಹಯೋಗದೊಂದಿಗೆ ದಿನಾಂಕ 19 – 01 2019ರಂದು ಹೆಚ್ . ಎನ್ ಕಲಾಕ್ಷೇತ್ರ , ನ್ಯಾಷನಲ್ ಕಾಲೇಜು , ಜಯನಗರ , ಬೆಂಗಳೂರು ಇಲ್ಲಿ ‘ ಯೋಧನಮನ ‘ ಕಾರ್ಯಕ್ರಮ ಹಮ್ಮಿಕೊಂಡಿದೆ . ದೇಶಕ್ಕಾಗಿ ದುಡಿದ , ಮಡಿದ ಯೋಧರಿಗೆ ಗಾನ ನಮನ ಸಲ್ಲಿಸುವ ಪ್ರಯತ್ನ ಇದಾಗಿದೆ . ಯೋಧರ ನೋವು ನಲಿವುಗಳ ಭಾವ ಸಿಂಚನದೊಂದಿಗೆ ದೇಶಪ್ರೇಮಿಗಳ ಹೃದಯ ಅರಳಿಸಿ , ವೀರ ಯೋಧರ ತ್ಯಾಗಕ್ಕೆ ತಲೆಬಾಗಿ ವಂದಿಸಿ , ಅವರ ಕುಟುಂಬದ ಸದಸ್ಯರಿಗೆ ಆತ್ಮಸ್ಥೆರ್ಯ ತುಂಬುವ ಹಂಬಲ ಈ ಧ್ವನಿಸಾಂದ್ರಿಕೆ ಯೋಜನೆಗೆ ಪ್ರೇರಣೆ ನೀಡಿದೆ . – ಕನ್ನಡ ಸಾಹಿತಿಗಳು ಹಾಗೂ ಪ್ರತಿಷ್ಠಾನದ ಗೌರವಾಧ್ಯಕ್ಷರಾಗಿರುವ ಡಾ . ಸಿದ್ದಲಿಂಗಯ್ಯನವರು ಅಧ್ಯಕ್ಷತೆ ವಹಿಸಲಿರುವ ಈ ಕಾರ್ಯಕ್ರಮವನ್ನು ಕರ್ನಲ್ ಶಂಕರ್ ಎ . ಎಸ್ . ಉದ್ಘಾಟಿಸಲಿದ್ದಾರೆ . ಪ್ರತಿಷ್ಠಾನದ ಅಧ್ಯಕ್ಷರಾದ ವತ್ಸಲ ಸುರೇಶ್ ಅವರು ಪ್ರಾಸ್ತಾವಿಕ ನುಡಿಗಳನ್ನು ತಿಳಿಸಲಿದ್ದಾರೆ . ಫೈಟ್ ಲೆಫ್ಟಿನೆಂಟ್ ಕೆ . ಪಿ ನಾಗೇಶ್ , ನಾಡೋಜ ಮಹೇಶ್ ಜೋಷಿ ಅವರು , ಭಾಸ್ಕರ್‌ರಾವ್ ಎಡಿಜಿಪಿ , ತಿಮ್ಮಯ್ಯ , ಗೌರವಾಧ್ಯಕ್ಷರು , ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಬೆಂಗಳೂರು , ಮಾಯಣ್ಣ ಅವರು ಅಧ್ಯಕ್ಷರು , ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು . ಬೆಂಗಳೂರು ಇವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ . ಪ್ರತಿಷ್ಠಾನದ ಖಜಾಂಚಿಗಳಾದ ಮಂಜುನಾಥ ಡಿ . ಎಸ್ . ಇವರು ವೇದಿಕೆಯಲ್ಲಿ ಉಪಸ್ಥಿತರಿರುತ್ತಾರೆ . – ದೇಶಕ್ಕಾಗಿ ಹೋರಾಡಿ ಹುತಾತ್ಮರಾದ ಐದು ಯೋಧ ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ ಐವತ್ತು ಸಾವಿರ ( 50 . 000 ) ರೂಗಳನ್ನು ಹಲವು ಜನರ ಸಹಕಾರದಿಂದ ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನವು ಗೌರವಾರ್ಪಣೆಯ ಮೂಲಕ ಅರ್ಪಿಸುತ್ತಿದೆ . ಹಾಗೂ ಯೋಧರ ಕುರಿತು ಹಾಡುಗಳನ್ನು ರಚಿಸಿ ಧ್ವನಿಸಾಂದ್ರಿಕೆ ಬಿಡುಗಡೆ ಮಾಡುವ ಮೂಲಕ ಭಾವ ನಮನ ಸಲ್ಲಿಸುತ್ತಿದೆ .

ಯೋಧನಮನ ಗೌರವಾರ್ಪಣೆ : ಯೋಧರ ಕುಟುಂಬಸ್ಥರು

1 , ಶಿವಾನಂದ ಬಸಪ್ಪ ಮಾತೋಡಿ – ಅನುಸೂಯ , ಗೋವನಕೊಪ್ಪ , ಬೈಲಹೊಂಗಲ

2 . ಸಿದ್ದಪ್ಪ ಕುಂಬಾರ – ಶಾಂತ , ಮುದೋಳು , ಬಾಗಲಕೋಟೆ

3. ಸಂದೀಪ್ ಶೆಟ್ಟಿ – ಗಂಗಾವತಿ , ದೇವಿಹಳ್ಳಿ , ಹಾಸನ ಜಿಲ್ಲೆ

4 , ವೇದರಾಜ್ – ನೀಲಮ್ಮ , ಕಂಚನ ಗುಡ್ಡ , ಬಳ್ಳಾರಿ

5 . ಉಮೇಶ್ ಹೆಳವರ್ – ರಮೇಶ್ , ಗೋಕಾಕ್ ತಾಲ್ಲೂಕು , ಬೆಳಗಾವಿ ಜಿಲ್ಲೆ

ರಾಮ್ ಪ್ರಸಾದ್ ಅವರ ಸಂಗೀತ ನಿರ್ದೇಶನ ಮತ್ತು ಪ್ರವೀಣ್ ಡಿ . ರಾವ್ ಅವರ ವಾದ ಸಂಯೋಜನೆಯಲ್ಲಿ ಒಂಬತ್ತು ಗೀತೆಗಳಿರುವ ‘ ಯೋಧನಮನ ‘ ಧ್ವನಿಸಾಂದ್ರಿಕೆ ಸಿದ್ಧಗೊಂಡಿದೆ . ಅಮೇರಿಕದ ರಾಮ್ ಪ್ರಸಾದ್ , ಗುರುರಾಜ್ ಹೋಸಕೋಟೆ , ರತ್ನಮಾಲ ಪ್ರಕಾಶ್ , ಸುಪ್ರಿಯಾ ಆಚಾರ್ಯ , ಸುಮೇಧ ಸೋಮಶೇಖರ್ , ಸುನೀತ , ಪ್ರಜ್ಞಾ ಮರಾಠ ಈ ಗಾಯಕರು ಧ್ವನಿ ನೀಡಿದ್ದಾರೆ . ವತ್ಸಲ ಸುರೇಶ್ , ಆಸ್ಟ್ರೇಲಿಯಾದ ಕೃಷ್ಣ ಪ್ರಸಾದ್ , ಡಾ | | ಶಿವಕುಮಾರ್ ಮಾಲಿಪಾಟೀಲ್ , ದೆಹಲಿಯ ಪ್ರಸಾದ್ ನಾಯಕ್ , ಶಿವಾನಂದ್ ಬಡಿಗೇರ್ , ಪಾಲಾಕ್ಷ ಹಾಗಲವಾಡಿ ಈ ಕವಿಗಳು ಗೀತೆ ರಚನೆ ಮಾಡಿದ್ದಾರೆ . ಮಾನಸ ರಾವ್ ಅವರು ಭರತನಾಟ್ಯದ ಮೂಲಕ ಈ ಗೀತೆಗಳಿಗೆ ಜೀವ ತುಂಬಲಿದ್ದಾರೆ . ಪ್ರಜ್ಞಾ ಮರಾಠ ಅವರ ಇಂಪಾದ ಧ್ವನಿಯಲ್ಲಿ ಈ ಗೀತೆಗಳು ಮೂಡಿಬರಲಿದೆ .

ಇಡೀ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅಧ್ಯಕ್ಷರಾದ ಮಾಯಣ್ಣ ಅವರು ಹದಿಮೂರು ಸಾಧಕರಿಗೆ ಕನ್ನಡ ಸೇವಾರತ್ನ ಪ್ರಶಸ್ತಿ ಪ್ರಧಾನ ಮಾಡುತ್ತಿದ್ದಾರೆ . ಪ್ರಶಸ್ತಿಗೆ ಭಾಜನರಾದ ವಿದ್ವಾನ್ ಡಾ . ಗೋಪಾಲ ಕೃಷ್ಣ ಗುರೂಜಿ ( ಜ್ಯೋತಿಷಿ ) , ಕೋಟೇಶ್ವರ ಸೂರ್ಯ ನಾರಾಯಣ ರಾವ್ ( ಸಾಹಿತಿ , ಉದ್ಯಮಿ ) ಡಾ . ಕೆ ಸಿ . ಬಲ್ಲಾಳ್ ( ಆಯುರ್ವೇದ ವೈದ್ಯರು ) , ಪ್ರೊ . ಸಿ . ಎಚ್ ಸಿದ್ದರಾಜು ( ಜೆ . ಡಿ . ಎಸ್ ಮುಖಂಡರು ) , ವಿ . ಸುಬ್ರಮಣಿ ಕರಿಸುಬ್ಬು ( ರಂಗಭೂಮಿ , ಕಿರುತೆರೆ ನಟರು ) , ಎಸ್ . ಎಲ್ . ಎನ್ ಸ್ವಾಮಿ ( ರಂಗಕರ್ಮಿ ) , ಶಶಿಧರ ಕೋಟೆ ( ಗಾಯಕ , ಸಂಗೀತ ನಿರ್ದೇಶಕ , ನಟ ) , ಸಾಯಿ ದತ್ತ ( ಸಾಮಾಜಿಕ ಕಾರ್ಯಕರ್ತ ) , ಮೈಸೂರು ಮಂಜುಳ ( ರಂಗಕರ್ಮಿ ) , ಸಿ . ಎಸ್ . ಬೋಪಯ್ಯ ( ವಾರ್ತಾವಾಚಕರು – ಉದಯ ಟಿವಿ ) , ಉಪಾಸನ ಮೋಹನ್ ( ಸುಗಮ ಸಂಗೀತ ಗಾಯಕ ) , ಬಿ . ಸುರೇಶ್ ( ಚಲನಚಿತ್ರ ನಿರ್ದೇಶಕ ) , ಶ್ರೀನಿವಾಸ ಗೌಡ ( ಸಿಲ್ಲಿ – ಲಲ್ಲಿ ಖ್ಯಾತಿಯ ನಟರು ) ಈ ಗಣ್ಯಾತಿಗಣ್ಯರನ್ನು ಗೌರವಿಸಲಾಗುವುದು . ಈ ಉದಾತ್ತ ಧೈಯದ ಕಾರ್ಯಕ್ರಮಕ್ಕೆ ಸಮಸ್ತ ಕನ್ನಡಿಗರು ಆಗಮಿಸಿ ವೀರಯೋಧರಿಗೆ ನಮನ ಸಲ್ಲಿಸಬೇಕೆಂದು ಸಾಧನಕೇರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ( ರಿ ) ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s