ದಿನಾಂಕ : 23 / 01 / 2019 ರಂದು ಶ್ರೀ . ಹರ್ಷ , ಖಾಸಗಿ ವ್ಯಕ್ತಿ ರವರು ಶ್ರೀ . ಟಿ . ವೆಂಕಟೇಶ್ ರವರ ನಿರ್ದೇಶನದ ಮೇರೆಗೆ ದೂರುದಾರರಿಂದ ರೂ . 4 , 500 / – ಲಂಚದ ಹಣವನ್ನು ಪಡೆಯುತ್ತಿದ್ದಾಗ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ .

ದಿನಾಂಕ 23 / 01 / 2019 , ತುಮಕೂರು ತಾಲ್ಲೂಕು ಗೌಡಿಹಳ್ಳಿ ಗೊಲ್ಲರಹಟ್ಟಿ ಗ್ರಾಮದ ನಿವಾಸಿಯೊಬ್ಬರು ತಮ್ಮ ಜಮೀನಿನಲ್ಲಿ ಹೊಸದಾಗಿ ಬೋರ್‌ವೆಲ್ ಕೊರೆಯಿಸಲು ಪಾಯಿಂಟ್ ಮಾಡಿಕೊಡಲು ಹಾಗೂ ಈಗಾಗಲೇ ಕೊರೆಯಿಸಿರುವ ಬೋರ್‌ವೆಲ್ ಅನ್ನು ನೋಂದಣಿ ಮಾಡಿಕೊಡಲು ಕೋರಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಂತರ್ಜಲ ವಿಭಾಗದಲ್ಲಿ ಅರ್ಜಿಯನ್ನು ಸಲ್ಲಿಸಿಕೊಂಡಿರುತ್ತಾರೆ . ಶ್ರೀ . ಟಿ . ವೆಂಕಟೇಶ್ , ಹಿರಿಯ ಭೂವಿಜ್ಞಾನಿ , ಪ್ರಭಾರ ನಿರ್ದೇಶಕರು , ಜಿಲ್ಲಾ ಅಂತರ್ಜಲ ನಿರ್ದೇಶನಾಲಯ , ತುಮಕೂರು ರವರು ಅರ್ಜಿದಾರರ ಹೊಸ ಬೋರ್‌ವೆಲ್ ಪಾಯಿಂಟ್ ಮಾಡಿಕೊಡಲು ಹಾಗೂ ಈಗಾಗಲೇ ಕೊರೆಯಿಸಿರುವ ಬೋರ್‌ವೆಲ್ ಅನ್ನು ನೋಂದಣಿ ಮಾಡಿಕೊಡಲು ರೂ . 4 , 500 / – ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 23 / 01 / 2019 ರಂದು ಶ್ರೀ . ಹರ್ಷ , ಖಾಸಗಿ ವ್ಯಕ್ತಿ ರವರು ಶ್ರೀ . ಟಿ . ವೆಂಕಟೇಶ್ ರವರ ನಿರ್ದೇಶನದ ಮೇರೆಗೆ ದೂರುದಾರರಿಂದ ರೂ . 4 , 500 / – ಲಂಚದ ಹಣವನ್ನು ಪಡೆಯುತ್ತಿದ್ದಾಗ ತುಮಕೂರು ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿರುತ್ತಾರೆ . ಇಬ್ಬರೂ ಆರೋಪಿತರನ್ನು ದಸ್ತಗಿರಿ ಮಾಡಿ , ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ , ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s