ಡಿಪ್ಲೊಮಾ ಪಶುಸಂಗೋಪನಾ ಅಭ್ಯರ್ಥಿಗಳಿಗೆ ಪಶುವೈದ್ಯಕೀಯ ಇಲಾಖೆಯಲ್ಲಿ ಆದ್ಯತೆ ಮೇರೆಗೆ ನೇಮಕಾತಿ ಮಾಡಿ ಅಥವಾ ಈ ಪಶುಸಂಗೋಪನಾ ಕಾಲೇಜುಗಳನ್ನು ಮುಚ್ಚಿ ,

Bengaluru, 25th Jan, 2019:

ಡಿಪ್ಲೊಮಾ ಪಶುಸಂಗೋಪನಾ ಅಭ್ಯರ್ಥಿಗಳಿಗೆ ಪಶುವೈದ್ಯಕೀಯ ಇಲಾಖೆಯಲ್ಲಿ ಆದ್ಯತೆ ಮೇರೆಗೆ ನೇಮಕಾತಿ ಮಾಡಿ ಅಥವಾ ಈ ಪಶುಸಂಗೋಪನಾ ಕಾಲೇಜುಗಳನ್ನು ಮುಚ್ಚಿ , ಮೇಲ್ಕಾಣಿಸಿದ ವಿಷಯದನ್ನಯ ಸರ್ಕಾರಿ ಆದೇಶ ಸಂಖ್ಯೆ , ಪಸಂ 116 ಪಸಸೇ 2011 ಕರ್ನಾಟಕ ಸರ್ಕಾರವು 24 . 02 . 2011ರಂದು ಮಂಡಿಸಿದೆ ಕೃಷಿ ಆಯುವ್ಯದಲ್ಲಿ ಪ್ರಸ್ತಾಪಿಸಿದಂತೆ ಜಾನುವಾರು ಸಂಶೋಧನಾ ಕೇಂದ್ರ , ಕೊನೆಹಳ್ಳಿ ತುಮಕೂರು ಜಿಲ್ಲೆ ಮತ್ತು ಶಿಗ್ಗಾವಿ ಹಾವೇರಿ ಜಿಲ್ಲೆಯಲ್ಲಿ ಪಶುಸಂಗೋಪನಾ ಡಿಪ್ಲೊಮಾ ಕಾಲೇಜುಗಳನ್ನು ಹಾಗೂ ಇತ್ತೀಚೆಗೆ 2017 ರಲ್ಲಿ ಹಾಸನ , ಚಾಮರಾಜನಗರ , ಯಾದಗಿರಿ ಜಿಲ್ಲೆಗಳಲ್ಲಿ ರಾಜ್ಯದಂತ ಈಗ ಒಟ್ಟು 5 ಕಾಲೇಜುಗಳನ್ನು ಕರ್ನಾಟಕ ಪಶುವೈದ್ಯಕೀಯ , ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಬೀದರ ಅಡಿಯಲ್ಲಿ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ ಅರೆ ತಾಂತ್ರಿಕ ಸಿಬ್ಬಂದಿಯ ಕಾರ್ಯ ವ್ಯಾಪ್ತಿಯ ಅಪ್ರಧಾನ ಪಶುವೈದ್ಯಕೀಯ ಸೇವೆಗಳನ್ನು ( Minor Veterinary Services ) ಇವುಗಳನ್ನು ಆಧಾರವಾಗಿಸಿ ಈ ಕೋರ್ಸ್ ಸ್ಥಾಪಿಸಿಲಾಗಿದೆ . ಈ ಕಾಲೇಜುಗಳಿಂದ ವರ್ಷಕ್ಕೆ 250 ವಿದ್ಯಾರ್ಥಿಗಳು ತೇರ್ಗಡೆ ಆಗುತ್ತಾರೆ . ಸದರಿ 2011 – 12 ಶೈಕ್ಷಣಿಕ ಸಾಲಿನಿಂದ ಪಶುಸಂಗೋಪನಾ ಡಿಪ್ಲೊಮಾ ಕೋರ್ಸಗೆ SSLC ನಂತರ ಗ್ರಾಮೀಣ , ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಮೆರಿಟ್ ಆಧಾರದ ಮೇಲೆ ಪ್ರವೇಶ ನೀಡಲಾಗಿದ್ದು , ಈಗ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದಾಗಿ ಜಾನುವಾರುಗಳಿಗೆ ವ್ಯವಸ್ಥಿತ ರೀತಿಯಲ್ಲಿ ಮತ್ತು ಸಮಯಕ್ಕೆ ಸರಿಯಾಗಿ ಪಶುವೈದ್ಯಕೀಯ ಸೇವೆಗಳು ಸಿಗದೇ ಜಾನುವಾರುಗಳಿಗೆ ಹಾಗೂ ರೈತರಿಗೆ ತೊಂದರೆ ಆಗುತ್ತಿದೆ . ಆದ್ದರಿಂದ ಈ ಸಮಸ್ಯೆಗೆ ಪರಿಹಾರವಾಗಿ ಡಿಪ್ಲೊಮಾ ಪಶುಸಂಗೋಪನಾ ಅಭ್ಯರ್ಥಿಗಳನ್ನು ಇಲಾಖೆಯ ಪಶುವೈದ್ಯಕೀಯ ಸಹಾಯಕ ಹುದ್ದೆಗೆ ಪರಿಗಣಿಸಿ ಬೇಕಾಗಿದೆ . ಈಗಾಗಲೇ ಸುಮಾರು 550 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ . ಸುಮಾರು 8 ವರ್ಷ ಕಳೆದರೂ ಇಲಾಖೆಯಲ್ಲಿ ಪಶು ವೈದ್ಯಕೀಯ ಸಹಾಯಕರ ಸಾಕಷ್ಟು ಹುದ್ದೆಗಳು ಖಾಲಿ ಇದ್ದು ಯಾವುದೇ ಉದ್ಯೋಗ ಅವಕಾಶ ದೊರೆತಿಲ್ಲ , ನಾವು ಈಗಾಗಲೇ ತಾಂತ್ರಿಕ ಪರಿಣಿತ ಹೊಂದಿದ್ದೇವೆ . ಇದರಿಂದ ನಮಗೆ ನೇಮಕ ಮಾಡಿದರೆ ಸರ್ಕಾರಕ್ಕೆ ತರಬೇತಿ ವೆಚ್ಚದ ಹೊರೆ ಉಳಿತಾಯ ಆಗುತ್ತದೆ , “ ನಮ್ಮ ಡಿಪ್ಲೊಮಾ ಪಶುಸಂಗೋಪನಾ ಅಭ್ಯರ್ಥಿಗಳಿಗೆ ಪಶುವೈದ್ಯಕೀಯ ಸಹಾಯಕ ಹುದ್ದೆಗೆ ನೇಮಕ * ಮಾಡಿ ಇಲ್ಲವಾದಲ್ಲಿ ಈ ಕೋರ್ಸ್ ಮುಚ್ಚಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಭವಿಷ್ಯ ಉಳಿಸಲುಇಲ್ಲವಾದ್ದಲ್ಲಿ ತೀವ್ರ ಪ್ರತಿಭಟನೆ ಮಾಡಲಾಗುವುದು ಎಂದು ತಮ್ಮ ಮುಖೇನ ಆಗ್ರಹ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s