ಐಎಪಿಕಾನ್ ಬೆಂಗಳೂರು 2019 : ಭಾರತೀಯ ಫಿಜಿಯೋಥೆರಪಿ ತಜ್ಞರ ಸಂಘದ 57ನೇ ವಾರ್ಷಿಕ ಸಮ್ಮೇಳನ ಬೆಂಗಳೂರಿನಲ್ಲಿ

* ಸಮ್ಮೇಳನ ಫೆಬ್ರುವರಿ 1 & 2ರಂದು ಅರಮನೆ ಮೈದಾನದಲ್ಲಿ ನಡೆಯಲಿದೆ

* ವಿಶ್ವದ ವಿವಿಧೆಡೆಗಳಿಂದ ಆಗಮಿಸುವ 4500ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಆಕರ್ಷಿಸಲಿದೆ

ಬೆಂಗಳೂರು 30ನೇ ಜನವರಿ , 2019 : ಭಾರತೀಯ ಫಿಜಿಯೋಥೆರಪಿ ತಜರ ಸಂಘದ ವತಿಯಿಂದ ನಮ್ಮ ಬೆಂಗಳೂರಿನಲ್ಲಿ 2019ರ ಫೆಬ್ರುವರಿ 1 ಮತ್ತು 2ರಂದು 57ನೇ ವಾರ್ಷಿಕ ಸಮ್ಮೇಳನ ‘ ಐಎಪಿಕಾನ್‌ಬೆಂಗಳೂರು 2019 ” ಹಮ್ಮಿಕೊಳ್ಳಲಾಗಿದೆ . ಅರಮನೆ ಮೈದಾನದ ಪ್ರವೇಶದ್ವಾರ ಸಂಖ್ಯೆ 8ರಲ್ಲಿ ಸಮ್ಮೇಳನ ಆಯೋಜಿಸಲಾಗಿದ್ದು , ಈ ಅಭೂತಪೂರ್ವ ಸಮ್ಮೇಳನ ವಿಶ್ವದ ವಿವಿಧೆಡೆಗಳಿಂದ 4500ಕ್ಕೂ ಹೆಚ್ಚು ಪ್ರತಿನಿಧಿಗಳನ್ನು ಆಕರ್ಷಿಸಲಿದೆ . ಇದು ಫಿಜಿಯೋಥೆರಪಿ ಹೇಗೆ ಇಂದು ಪುನಶ್ವೇತನ ಸೇವೆಗಳ ಅವಿಭಾಜ್ಯ ಅಂಗವಾಗಿ ಬೆಳೆದಿದೆ ಎನ್ನುವುದನ್ನು ಇದು ಬಿಂಬಿಸಲಿದೆ . ಐಎಪಿಕಾನ್‌ಬೆಂಗಳೂರು 2019ರ ಧೈಯವಾಕ್ಯ , ” ಲೆಟ್ ಅಸ್ ಮೂವ್ ದ ಫಿಜಿಯೊ ವೇ ” ಎಂದಾಗಿದೆ . ಇದು ದೈಹಿಕ ಸಕ್ರಿಯತೆಯ ಅಗತ್ಯತೆಯನ್ನು ಒತ್ತಿ ಹೇಳುತ್ತದೆ . ದೈಹಿಕ ಚಟುವಟಿಕೆಗಳು ಉತ್ತಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ನೇರ ಸೂಚಕ ಎನ್ನುವುದು ಇದೀಗ ಹೆಚ್ಚು ಹೆಚ್ಚು ಮನವರಿಕೆಯಾಗುತ್ತಿದೆ . ‘ ಐಎಪಿಕಾನ್‌ಬೆಂಗಳೂರು 2019ರ ಮುಖ್ಯಾಂಶವೆಂದರೆ ವೈಜ್ಞಾನಿಕ ಅಧಿವೇಶನಗಳು ; ಪ್ರಸ್ತುತ ಸಂಶೋಧನೆಗಳ ಬಗೆಗೆ ಪ್ರಬಂಧ ಮಂಡನೆ ; ಭಿತ್ತಿಚಿತ್ರ ಅಭಿವ್ಯಕ್ತಿ ಮತ್ತು ಇ – ಮೋಸ್ತರ್ ಪ್ರಸ್ತುತಿ . ಇದರ ಜತೆಗೆ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರಮಟ್ಟದ ತಜ್ಞರು ಚೇತೋಹಾರಿ ಉಪನ್ಯಾಸಗಳನ್ನು ನೀಡುವರು ಹಾಗೂ ಗುಂಪು ಚರ್ಚೆ ಮತ್ತು ಕಾರ್ಯಾಗಾರಗಳನ್ನು ನಡೆಸಿಕೊಡುವರು . ಹಲವಾರು ಮಂದಿ ಅಂತರರಾಷ್ಟ್ರೀಯ ತಜ್ಞರ ಉಪಸ್ಥಿತಿಯು ಸಮ್ಮೇಳನಕ್ಕೆ ವಿಶೇಷ ಮೆರುಗು ತಂದುಕೊಡಲಿದ್ದು , ಇವರು ತಮ್ಮ ವಿಸೃತ ಜ್ಞಾನವನ್ನು ಹಂಚಿಕೊಳ್ಳುವ ಜತೆಗೆ , ಜಾಗತಿಕವಾಗಿ ರೂಢಿಯಲ್ಲಿರುವ ಅತ್ಯುತ್ತಮ ಅಭ್ಯಾಸಗಳ ಬಗ್ಗೆ ಮಾಹಿತಿ ನೀಡುವರು . ಈ ಮೂಲಕ ತಮ್ಮ ಭಾರತೀಯ ಸಹೋದ್ಯೋಗಿಗಳು ಕೌಶಲ ಮಟ್ಟವನ್ನು ಮೇಲ್ದರ್ಜೆಗೇರಿಸಿಕೊಳ್ಳಲು ನೆರವಾಗುವರು . ಇದರ ಜತೆಗೆ ಅತ್ಯಾಧುನಿಕ ತಂತ್ರಗಳು ಹಾಗೂ ವಿಧಿವಿಧಾನಗಳು ರೋಗಿಗಳಿಗೂ ಉತ್ತಮ ಫಲಿತಾಂಶಕ್ಕೆ ಕಾರಣವಾಗಲಿವೆ . ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ . ಯು . ಟಿ . ಇಫಿಕರ್ ಅಲಿ ಮತ್ತು ಸಂಘಟನಾ ಕಾರ್ಯದರ್ಶಿ ಡಾ . ಎ . ಸುರೇಶ್‌ಬಾಬು ರೆಡ್ಡಿ ಅವರು ಸಮ್ಮೇಳನದ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ವಿವರಗಳನ್ನು ನೀಡಿ , ” ಐಎಪಿಕಾನ್‌ಬೆಂಗಳೂರು 2019 ” ಸಮ್ಮೇಳನವು ಫಿಜಿಯೊಥೆರಪಿ ಕ್ಷೇತ್ರದ ಶ್ರೇಷ್ಠ ಪ್ರತಿಭೆಗಳ ಸಂಗಮವಾಗಿರುತ್ತದೆ . ” ಎಂದು ಹೇಳಿದರು .

ಉಪಮುಖ್ಯಮಂತ್ರಿ ಡಾ . ಜಿ . ಪರಮೇಶ್ವರ್ ಅವರು ಫೆಬ್ರುವರಿ 1ರಂದು ಮಧ್ಯಾಹ್ನ 12 . 05ಕ್ಕೆ ಸಮ್ಮೇಳನ ರು , ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕಣ ಖಾತೆ ಸಚಿವ ಇ . ತುಕಾರಾಂ ಮುಖ್ಯ ಅತಿಥಿಗಳಾಗಿರುವರು . ಕರ್ನಾಟಕ ಸರ್ಕಾರದ ನಗರಾಭಿವದಿ ಖಾತೆ ಸಚಿವ ಯು . ಟಿ . ಖಾದರ್ ಸಮಾರಂಭದ ಅಧ್ಯಕ್ಷತೆ ವಹಿಸುವರು . ಉದ್ಘಾಟನಾ ಸಮಾರಂಭದಲ್ಲಿ ಯುಎಇ ತುಂಬೆ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ . ತುಂಬೆ ಮೊಯಿದೀನ್ ಅವರು ಪ್ರಧಾನ ದಿಕ್ಕೂಚಿ ಭಾಷಣ ಮಾಡುವರು . ಚಿಕ್ಕಬಳ್ಳಾಪುರ ಶಾಸಕರಾದ ಡಾ . ಕೆ . ಸುಧಾಕರ್ ಹಾಗೂ ಮಲ್ಲೇಶ್ವರಂ ಶಾಸಕ ಡಾ . ಅಶ್ವತ್ಥ ನಾರಾಯಣ್ , ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಕುಲಪತಿ ಡಾ . ಸಚ್ಚಿದಾನಂದ ಅವರು ಗೌರವ ಅತಿಥಿಗಳಾಗಿರುತ್ತಾರೆ . ಈ ಸಮ್ಮೇಳನದಲ್ಲಿ ವ್ಯಾಪಾರ ವಸ್ತುಪ್ರದರ್ಶನವಿದ್ದು , ಪ್ರಖ್ಯಾತ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಫಿಜಿಯೊಥೆರಪಿ ಸಾಧನಗಳ ಉತ್ಪಾದಕರು ತಮ್ಮ ಇತ್ತೀಚಿನ ಸಾಧನಗಳನ್ನು ಪ್ರದರ್ಶಿಸುವರು . ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ : http : / / www . 57thiaConbangalore . com

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s