“ಪ್ರಪಂಚದ ಯಾವುದೇ ಪ್ರಶಸ್ತಿ ನಮ್ಮ ಸ್ವಾಮೀಜಿಗಳ ಕಾಲಿನ ಧೂಳಿಗೆ ಸಮ” BJP ಕಾರ್ಯಕರ್ತರೇ congress ಅನುಯಾಯಿಗಳೇ JDS ಅಭಿಮಾನಿಗಳೇ , ನಿಮಗಿದೊಂದು ಕಿರು ಪತ್ರ ನನ್ನಿಂದ . ಸಾಧ್ಯವಾದರೆ ತಾಳ್ಮೆಯಿಂದ ಓದಿ

ನನ್ನ ಪ್ರೀತಿಯ ಸ್ನೇಹಿತರೇ, ನಮೋ ಭಕ್ತರೇ ,
BJP ಕಾರ್ಯಕರ್ತರೇ congress ಅನುಯಾಯಿಗಳೇ JDS ಅಭಿಮಾನಿಗಳೇ ,
ನಿಮಗಿದೊಂದು ಕಿರು ಪತ್ರ ನನ್ನಿಂದ .
ಸಾಧ್ಯವಾದರೆ ತಾಳ್ಮೆಯಿಂದ ಓದಿ , ತಪ್ಪಿದ್ದರೆ ತಿಳಿಸಿ .

ನಿನ್ನೆಯಿಂದ ಮುಖಪುಸ್ತಕದಲ್ಲಿ , ರಾಜ್ಯರಾಜಕೀಯದಲ್ಲಿ
ಟಿ ವಿ ಮಾಧ್ಯಮಗಳಲ್ಲಿ, ಹರಿದಾಡುತ್ತಿರುವ ಒಂದೇ ವಿಷಯದ ಅದು
ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳಿಗೆ ಭಾರತರತ್ನ ಪ್ರಶಸ್ತಿ ಕೊಡಲಿಲ್ಲ ಅಂತ .
ಯಾಕೆ ಕೊಡಲಿಲ್ಲ ಅನ್ನುವುದಕ್ಕಿಂತ , ಯಾಕೆ ನಾವೇ ಕೇಳಿ ಪಡೆಯಬೇಕು ಅನ್ನೋ ಸಣ್ಣ ವಿಷಯ ನಮಗೇಕೆ ಅರ್ಥವಾಗುತ್ತಿಲ್ಲ ?
ಏಕೆ ಪ್ರದಾನಮಂತ್ರಿಗಳಿಗೆ ನಮ್ಮ ಶ್ರೀ ಗಳ ಬಗ್ಗೆ ತಿಳಿದಿಲ್ಲವೇನು ?
ತಿಳಿಯದೇ ಅವರು ಮಠಕ್ಕೆ ಭೇಟಿ ಕೊಟ್ಟು ಇದೇ ” ಭಾರತ ರತ್ನ ” ಪ್ರಶಸ್ತಿ ನೀಡುವ ಕುರಿತು ಮೋದಿಯವರು ಪ್ರಸ್ತಾವನೆ ಇಟ್ಟಾಗ ಅವರು ನಿರಾಕರಿಸಿದ್ದು ಮರೆತುಹೋದಿರೇನು ?
ಸ್ವಾಮೀಜಿಗಳು ಗದ್ದೆಗೆ ಏರಿ 70 ವರ್ಷಗಳ ಕಾಲ ಮಠವನ್ನು ಮುನ್ನಡಿಸಿದರಲ್ಲಾ , ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದು ಹೋಗಿದೆ ಆಗೆಲ್ಲಾ ಅವರಿಗೆ
ಪದ್ಮಶ್ರೀ ,
ಪದ್ಮ ಭೂಷಣ ,
ಪದ್ಮವಿಭೂಷಣ
ಭಾರತರತ್ನ ಪ್ರಶಸ್ತಿಗಳು ಕೊಡಿಸುವುದಕ್ಕೆ ಏಕೆ ಯಾವ ಪಕ್ಷಗಳಾಗಲೀ , ಯಾವೊಬ್ಬ ರಾಜಕಾರಣಿಯಾಗಲೀ ಮುಂದೆ ಬರಲಿಲ್ಲ?
80 ರ ದಶಕದಲ್ಲಿ ಜಾತಿ ಆಧಾರದ ಮೇಲೆ ಸರ್ಕಾರದ ಅನುದಾನವನ್ನು ನಿಲ್ಲಿಸಿದ “ದೇವರಾಜ ಅರಸು” ರವರನ್ನು ಏಕೆ ಪ್ರಶ್ನಿಸಲಿಲ್ಲ ? ಬಹುಶಃ 2014 ರಲ್ಲಿ ಮೋದಿಯವರು ಪ್ರಧಾನಮಂತ್ರಿ ಆಗ್ತಾರೆ , ಆಗ ಅವರೆ ಶ್ರೀಗಳನ್ನು ಗುರುತಿಸಿ ಪದ್ಮಭೂಷಣ ಪ್ರಶಸ್ತಿ ಕೊಡ್ತಾರೆ ಅಂತ ಮೊದಲೇ ತಿಳಿದಿತ್ತೇನು ?
ಅಥವಾ ಕನಸು ಕಂಡಿದ್ದರೇ ?
ಕೇಂದ್ರ ಸರ್ಕಾರ ಒಂದು ಪ್ರಶಸ್ತಿ ಕೊಟ್ಟರೆ , ಮತ್ತೊಂದು ಪ್ರಶಸ್ತಿ ಅದೇ ವ್ಯಕ್ತಿಗೆ ಕೊಡಬೇಕಾದರೆ ಕನಿಷ್ಠ 5 ವರ್ಷಗಳ ಅಂತರ ಇರಬೇಕು ಅನ್ನೋ ಸಣ್ಣ ಜ್ಞಾನವೂ ಮರೆತುಹೋದೆವಾ ನಾವು ?
ಓಹೋ ಹಿಂದಿನ ಸರ್ಕಾರಗಳು ಕಾನೂನು , ಕಟ್ಟಳೆಗಳನ್ನು ಗಾಳಿಗೆ ತೂರಿ , ಪ್ರಶಸ್ತಿಗಳನ್ನು ತಮಗಿಷ್ಟ ಬಂದವರಿಗೆ ಕೊಡುತ್ತಾ ,ತಮಗೆ ತಾವೇ ಕೊಟ್ಟುಕೊಂಡಿದ್ದು ಮಾತ್ರ ನಮಗೆ ಗೊತ್ತಿರುವ ವಿಷಯ ಅಲ್ಲವೇ?
ಈಗಿರುವುದು ಮೋದೀಜಿ ಸರ್ಕಾರ ಕಾನೂನು ಮುರಿಯುವ ಮುನ್ನ ಸಾವಿರ ಬಾರಿ ಯೋಚನೆ ಮಾಡುತ್ತೆ

ನಿಮಗೊಂದು ವಿಷಯ ನೆನಪಿರಲಿ , ನೇತಾಜಿ ಸುಭಾಷ್ ಚಂದ್ರ ಬೋಸ್ ರವರಿಗೆ ನೀಡಿದ್ದ ಪ್ರಶಸ್ತಿಯನ್ನು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದ್ದಕ್ಕೆ ಸರ್ಕಾರ ವಾಪಸ್ ತೆಗೆದುಕೊಂಡು ಅವಮಾನ ಮಾಡಿದ್ದು ಇತಿಹಾಸದ ಪುಟಗಳಲ್ಲಿ ಸೇರಿಹೋಗಿದೆ.
ನಾಳೆಯ ದಿನ ಈ ಪರಿಸ್ಥಿತಿ ನಮ್ಮ ಶ್ರೀಗಳಿಗೆ ಎದುರಾಗುವುದಿಲ್ಲ ಅಂತ ಖಾತ್ರಿಯೇನು ?
ಅಯ್ಯಪ್ಪ ಸ್ವಾಮಿಯನ್ನು ಬಿಡದವರ, ಶನಿದೇವರಲ್ಲಿ ಭಯ ಇರದವರು ಆ ಕೆಲಸ ಮಾಡುವುದಿಲ್ಲವೆಂದು ಹೇಗೆ ನಂಬುವುದು ?
ಅಸಲಿ ವಿಷಯಕ್ಕೆ ಬರೋಣ ,
ಪ್ರಶಸ್ತಿ ಕೊಡದೇ ಮೋಸ ಮಾಡಿತು
ಮೋದಿ ಸರ್ಕಾರ ಅಂತ ಅಬ್ಬರಿಸಿ ಬೊಬ್ಬಿಡುವ ಕಾಂಗ್ರೆಸ್ ನಾಯಕರಿಗೆ ನನ್ನದೊಂದು ಪ್ರಶ್ನೆ
2004 ರಿಂದ 2014 ರವರೆಗೆ ನಿಮ್ಮದೇ ಪಕ್ಷ ಅಧಿಕಾರದಲ್ಲಿತ್ತಲ್ಲವೇ , ಆಗ ವರ್ಷಕ್ಕೆ 3 ಅಂದರೆ ಬರೋಬ್ಬರಿ 30 ಪ್ರಶಸ್ತಿಗಳನ್ನು ಕೊಟ್ಟಿರ್ತೀರಿ ಅಂದ್ರೆ ಆಗ ಸಿಧ್ಧಗಂಗಾ ಶ್ರೀಗಳು ಯಾರ ಕಣ್ಣಿಗೂ ಬೀಳದಂತೆ ಮಾಯವಾಗಿದ್ದರೇ ?
ನೆನಪಿರಲಿ ಅದೇ ಅವಧಿಯಲ್ಲಿ ಹಿಂದೂ ಧರ್ಮದ ಮನುಷ್ಯರನ್ನು ಕಾಪಾಡುವ ನೆಪದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಮಾಡುತ್ತಿದ್ದ ಆರೋಪ ಬಂದಿತ್ತಲ್ಲಾ
ಶ್ರೀ ಮದರ್ ತೆರೆಸಾ ರವರಿಗೆ ಕೊಟ್ಟಿದ್ದರು .
ಆಗ ನಮ್ಮ ಶ್ರೀ ಗಳು ಯಾರ ಕಣ್ಣಿಗೂ ಕಾಣಲಿಲ್ಲ .

ಇನ್ನು ನಮ್ಮ ಮಾನ್ಯ ಮುಖ್ಯಮಂತ್ರಿಗಳಿಗೆ ,ನಾವೆಲ್ಲರೂ ಹೆಮ್ಮೆ ಪಡುವ ಕರ್ನಾಟಕ ರಾಜ್ಯದಿಂದ ಪ್ರಧಾನಮಂತ್ರಿ ಆಗಿದ್ದ ಶೀಮಾನ್ ದೇವೇಗೌಡರು 11 ತಿಂಗಳು ಅಧಿಕಾರದಲ್ಲಿದ್ದಾಗ ಶ್ರೀ ಗಳು ಕಣ್ಣಿಗೆ ಕಾಣದೇ ಹೋದರೇ ?

ಕಡೆಯದಾಗಿ ಒಂದು ಮಾತು ಪ್ರಪಂಚದ ಯಾವುದೇ ಪ್ರಶಸ್ತಿ ನಮ್ಮ ಸ್ವಾಮೀಜಿಗಳ ಕಾಲಿನ ಧೂಳಿಗೆ ಸಮ ಅಂದರೂ ತಪ್ಪಿಲ್ಲ ಅಂತ ನನ್ನ ಭಾವನೆ .
ಪ್ರಶಸ್ತಿಗಳು ಹುಡುಕಿಕೊಂಡು ಬರಬೇಕೇ ಹೊರತು ,
ಅರಸಿ ಹೋಗುವುದಲ್ಲ
ಅದು ನನ್ನ ನಡೆದಾಡುವ ದೇವರಿಗೆ ಚೆನ್ನಾಗಿ ಗೊತ್ತಿತ್ತು

ಇಂತಿ,

“ಭಕ್ತಿಪೂರ್ವಕವಾಗಿ ಶ್ರೀಗಳ ಭಕ್ತ”

ಜಿ. ಎಸ್. ಗೋಪಾಲ್ ರಾಜ್

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s