2019 ರ ರಾಜ್ಯ ಬಜೆಟ್ ಗೆ ಲೇಬರ್ ನೆಟ್ ನ ಸಹ ಸಂಸ್ಥಾಪಕಿ ಶ್ರೀಮತಿ ಗಾಯತ್ರಿ ವಾಸುದೇವನ್ ಸಲಹೆ ಮತ್ತು ಅಭಿಪ್ರಾಯಗಳು

ಕರ್ನಾಟಕ ಮೂಲದ ಲೇಬರ್ ನೆಟ್ ಎಂಬ ಸಾಮಾಜಿಕ ಸಂಸ್ಥೆ ಇಂದು ಲಕ್ಷಾಂತರ ಅಸಂಘಟಿತ ಕಾರ್ಮಿಕರಿಗೆ ಜೀವನೋಪಾಯಕ್ಕಾಗಿ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲ ತರಬೇತಿಯನ್ನು ಭಾರತದಾದ್ಯಂತ ನೀಡುತ್ತಾ ಬಂದಿದೆ. ಹಾಗೂ ಖ್ಯಾತ ಕಾರ್ಪೋರೆಟ್ ಸಂಸ್ಥೆಗಳೊಂದಿಗೆ ತರಬೇತಿಕಾರ್ಯಕ್ರಮಗಳಿಗಾಗಿ ಕೈ ಜೋಡಿಸಿ ವೃತ್ತಿತರಬೇತಿಗಳನ್ನು ಶಿಕ್ಷಣದೊಂದಿಗೆ ಸೇರ್ಪಡೆಗೊಳಿಸಿ ಔಧ್ಯೋಗಿಕ ಮಾರುಕಟ್ಟೆ ಮತ್ತು ಕಾರ್ಮಿಕರ ಬೇಡಿಕೆಯ ಅಂತರವನ್ನು ಕಡಿಮೆ ಮಾಡುತ್ತಾ ಬಂದಿರುವ ಎಕೈಕ ಸಂಸ್ಥೆ ಲೇಬರ್ ನೆಟ್.

*ಪ್ರಸ್ತುತ ಕರ್ನಾಟಕ ರಾಜ್ಯದಲ್ಲಿ ಅನೌಪಚಾರಿಕ ಉದ್ಯೋಗಳಿಗೆ ಇರುವ ಬೇಡಿಕೆ ಅರ್ಹರಿಗೆ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಅಥವಾ ಅರ್ಹ ಅಭ್ಯರ್ಥಿಗಳು ಈ ಬಗ್ಗೆ ಉದ್ಯೋಗಗಳಿಗೆ ಬೇಕಿರುವ ಕೌಶಲ್ಯ ಹೊಂದಿಲ್ಲ. ಈ ಬಗ್ಗೆ ಸರ್ಕಾರ ಸಂಬಂದಿತ ಇಲಾಖೆಗಳಿಂದ ರಾಜ್ಯದಲ್ಲಿರುವ ಸಾಮಾಜಿಕ ಉದ್ಯಮ ಸಂಸ್ಥೆ, ಕಾರ್ಮಿಕ ಸಂಸ್ಥೆಗಳು ಔದ್ಯೋಗಿಕ ತರಬೇತಿ ಸಂಸ್ಥೆಗಳು ಈ ಅಸಮತೋಲನ ತಗ್ಗಿಸಲು, ಸರ್ಕಾರದಿಂದ ಆರ್ಥಿಕ ನಿಧಿ ಸ್ಥಾಪಿಸುವುದು ಅತ್ಯಗತ್ಯವಾಗಿದೆ.

*ಪ್ರಸ್ತುತ ಉತ್ತರ ಕರ್ನಾಟಕದಲ್ಲಿ ತೀವ್ರ ಬರಗಾಲ ಎದುರಿಸುತ್ತಿದ್ದು, ಅಲ್ಲಿನ ಯುವಜನತೆ ಬೇರೆ ರಾಜ್ಯಗಳಿಗೆ ಉದ್ಯೋಗಕ್ಕಾಗಿ ಮತ್ತು ಜೀವನ ನಿರ್ವಹಣೆಗಾಗಿ ವಲಸೆ ಹೋಗುತ್ತಿದ್ದಾರೆ. ರಾಜ್ಯದ ಮಾನವ ಸಂಪನ್ಮೂಲವನ್ನು ಸೂಕ್ತವಾಗಿ ನಮ್ಮಲ್ಲೇ ವಿನಿಯೋಗಿಸಿಕೊಳ್ಳಲು ನಮ್ಮ ರಾಜ್ಯಗಳಲ್ಲೇ ಅಥವಾ ಸ್ಥಳೀಯವಾಗಿ ಅಲ್ಲಿನ ಯುವಜನತೆ ಹಾಗೂ ಕಾರ್ಮಿಕರಿಗೆ ಗ್ರಾಮೀಣ ಉಧ್ಯೋಗಾಭಿವೃದ್ಧಿ ಅಡಿಯಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಗಾಗಿ ಸರ್ಕಾರ ಈ ಬಜೆಟ್ ನಲ್ಲಿ ಪ್ರಸ್ತಾಪಿಸಬೇಕು.ಇದರಿಂದಾಗಿ ಆ ಗ್ರಾಮಗಳಲ್ಲಿನ ಜನತೆ ಸ್ವಾವಲಂಭಿ ಜೀವನ ನಡೆಸಿ ಇತರರ ಮೇಲೆ ಅವಲಂಭಿತರಾಗದಂತೆ ಕಾರ್ಯ ರೂಪಿಸಬೇಕು.

*ಬೆಂಗಳೂರು ಮತ್ತು ಧಾರವಾಡದಲ್ಲಿರುವ ಕೃಷಿ ವಿಶ್ವ ವಿದ್ಯಾಲಯಗಳಲ್ಲಿ ಸಾಂಪ್ರದಾಯಿಕ ಕೃಷಿ ಶಿಕ್ಷಣ ಇದ್ದು, ಕೃಷಿ ಭೂಮಿ ಇದ್ದವರು/ಇಲ್ಲದವರು ನಿರುಧ್ಯೋಗಿ ಅಸಂಘಟಿತ ಮಹಿಳಾ/ಯುವ ಜನತೆಗೆ ಹೈನುಗಾರಿಕೆ/ಸಾವಯವ ಕೃಷಿ/ ಮತ್ತು ಕೌಶಲ್ಯಾಭಿವೃದ್ಧಿ ಬಗ್ಗೆ ಮಾರ್ಗದರ್ಶನ ನೀಡಲು ಸೂಚನೆ ನೀಡಬೇಕು ಹಾಗೂ ಅದಕ್ಕೆ ಬೇಕಿರುವ ನೆರವು ಒದಗಿಸಬೇಕು.

*ಕರ್ನಾಟಕದ ಹೆಮ್ಮೆ ಎಂದರೆ ಸಂಕೀರ್ಣವಾದ ಭೂ ಪ್ರದೇಶ ಹೊಂದಿದ್ದು, ಮಲೆನಾಡು, ಕರಾವಳಿ ಮತ್ತು ಬಯಲು ಸೀಮೆಗಳಲ್ಲಿ ಪ್ರಖ್ಯಾತ ದೇವಸ್ಥಾನಗಳು, ಆಕರ್ಷಕ ಪರಂಪರಾ ಪ್ರವಾಸಿ ತಾಣಗಳಿದ್ದು, ಪ್ರವಾಸೋದ್ಯಮದಲ್ಲಿ ಹೆಚ್ಚು ಹೂಡಿಕೆ ಮಾಡಬೇಕು. ಇದರಿಂದಾಗಿ ಈ ಕ್ಷೇತ್ರದಲ್ಲಿ ಉದ್ಯೋಗವಕಾಶ ಹೆಚ್ಚುತ್ತದೆ. ಪ್ರವಾಸಿಗರಿಗೆ ಮಾಹಿತಿ ನೀಡುವ ಮಾರ್ಗಸೂಚಕರು/ಗೈಡ್ ಗಳು ಹಾಗೂ ಇನ್ನಿತರ ಎಷ್ಟೋ ಈ ಸಂಬಂಧ ಉದ್ಯೋಗಗಳೂ ರೂಪಗೊಳ್ಳುತ್ತವೆ. ಈ ಬಗ್ಗೆ ನಮ್ಮ ರಾಜ್ಯದ ಯುವಕರನ್ನು ಈ ಉದ್ಯೋಗಗಳೀಗೆ ಸೇರುವಂತಹ ಕೋರ್ಸ್ ಗಳನ್ನು ರಾಜ್ಯ ಸರ್ಕಾರ ಪ್ರಾರಂಭಿಸಬೇಕು, ಅಥವಾ ಈ ಬಗ್ಗೆ ತರಬೇತಿ ಕೊಡುವ ಸಂಸ್ಥೆಗಳೊಂದಿಗೆ ರಾಜ್ಯ ಸರ್ಕಾರ ಕೈ ಜೋಡಿಸಬೇಕು. ಈ ಬಗ್ಗೆ ಸರ್ಕಾರ ಬಜೆಟ್ ನಲ್ಲಿ ಪ್ರಸ್ತಾಪಿಸಬೇಕು.

*ಪ್ರಸ್ತುತ ಬಹು ದೊಡ್ಡ ಸಮಸ್ಯೆ ಎಂದರೆ ಶಿಕ್ಷಿತ ಕೃಷಿ ಕಡೆಗೆ ಸ್ಪಂದಿಸುತ್ತಿಲ್ಲ. ಇದಕ್ಕೆ ಕಾರಣ, ಅತೀ ಕಡಿಮೆ ಆದಾಯ ಎಂಬದು, ಈ ರೀತಿಯ ಅಂತರವನ್ನು ಕಡಿಮೆ ಮಾಡಲು ಹಾಗೂ ಶಿಕ್ಷಿತರು ಕೂಡ ವ್ಯವಸಾಯದಲ್ಲಿ ತೊಡಗಿಸಿಕೊಳ್ಳಲು ಸರ್ಕಾರ ಕೃಷಿ ಉದ್ಯಮದಲ್ಲಿ ಆರ್ಥಿಕ ಸ್ಥಿತರೆ ತರುವಂತಹ ಯೋಜನೆಗಳನ್ನು ಪರಿಚಯಿಸಬೇಕು. ಸರ್ಕಾರದ ಭೂಮಿ/ ಕೃಷಿ ಮಾಡದೇ ಇರುವ ಭೂಮಿ ಬಗ್ಗೆ ಕೃಷಿ ಚಟುವಟಿಕೆ ನಡೆಸಲು ಖಾಲಿ ಇರುವ ಭೂಮಿಯ ಮಾಹಿತಿ ಕೇಂದ್ರಗಳೂ ಮತ್ತೂ ಇಂತಹ ಜಾಗಗಲಲ್ಲಿ ಹೈನುಗಾರಿಕೆ, ಕುರಿಸಾಕಣೆ, ಸಾವಯವ ಕೃಷಿ ಇನ್ನಿತರ ಅತ್ಯಾಧುನಿಕ ಕೋರ್ಸ್ ಗಳ ತರಬೇತಿ ಸರ್ಕಾರದಿಂದ ಸ್ಥಾಪಿತವಾಗಬೇಕು. ಮತ್ತು ಸ್ಥಳಿಯ ಗ್ರಾಮೀಣ ಯುವ ಜನತೆಗೆ ಮುಖ್ಯವಾಗಿ ಹೆಣ್ಣೂ ಮಕ್ಕಳಿಗೆ ಹೈನುಗಾರಿಕೆ ಮುಂತಾದ ಸಾಂಪ್ರದಾಯಿಕ ಕೃಷಿಗೆ ಸೂಕ್ತವಾದ ಕೃಷಿ ಕೌಶಲ್ಯಾಭಿವೄದ್ಧಿ/ ವೃತ್ತಿ ತರಬೇತಿ ನೀಡುವಂತಹ ತರಬೇತಿ ಕೇಂದ್ರಗಳನ್ನು ಸರ್ಕಾರ ಸ್ಥಾಪಿಸಬೇಕು ಅಥವಾ ಈ ರೀತಿಯ ತರಬೇತಿ ನೀಡುವ ಸಂಸ್ಥೆಗಳೊಂದಿಗೆ ಕೈ ಜೋರಿಸುವ ಬಗ್ಗೆ ಈ ವರ್ಷ ಬಜೆಟ್ ನಲ್ಲಿ ಪ್ರಸ್ಥಾಪಿಸ ಬೇಕು.

*ಪ್ರಸ್ತುತ ಇರುವ ಪ್ರೌಢಶಾಲೆ ಮತ್ತು ಪಿಯು ಕಾಲೇಜ್ ಗಳಲ್ಲಿ ಈ ಎಲ್ಲಾ ಮೇಲ್ಕಂಡ ( ಬಿ-ವೋಕ್) ಔದ್ಯೋಗಿಕ ತರಬೇತಿಗಳ ಕೌಶಲ್ಯಾಭಿವೃದ್ಧಿ ಕೋರ್ಸ್ ಗಳನ್ನು ಪರಿಚಯಿಸುವಂತಹ ದಿಟ್ಟ ಹೆಜ್ಜೆ ಸರ್ಕಾರ ಇಡಬೇಕಾಗಿದೆ. ನಪಾಸಾದ ಅಥವಾ ಮುಂದು ಶಿಕ್ಷಣ ಮುಂದುವರೆಸ್ಲು ಆರ್ಥಿಕ ಸಮಸ್ಯೆ ಇರುವ ವಿದ್ಯಾರ್ಥಿಗಳೀಗೆ ತಮ್ಮ ಸ್ವಾವಲಂಭಿ ಜೀವನೋಪಾಯಕ್ಕೆ ಅನುಕೂಲವಾಗುತ್ತದೆ ಮತ್ತು ವಿದೇಶದಲ್ಲೂ ನಮ್ಮ ಕುಶಲ ಕರ್ಮಿ ಕಾರ್ಮಿಕರಿಗೆ ಬಹು ಬೇಡಿಕೆ ಇದ್ದು, ಆದರೆ ಸಮೀಕ್ಷೆಯೊಂದರ ಪ್ರಕಾರ ೨೦೨೦ ರೊಳಗೆ ಭಾರತದಲ್ಲಿ ೫೬ ಮಿಲಿಯನ್ ಉದ್ಯೋಗಿಗಳು ಹೊರಬರಲಿದ್ದಾರೆ. ಅದರೆ ಅದೇ ಸಮಯದಲ್ಲಿ ಜಗತ್ತಿನಾದ್ಯಂತ ೪೭ ಮಿಲಿಯನ್ ಉದ್ಯೋಗಿಗಳ ಬೇಡಿಕೆ ಇರುತ್ತದೆ. ನಮ್ಮ ಈ ಮಾನವ ಸಂಪನ್ಮೂಲವನ್ನು ಈ ಅವಕಾಶಗಳ ಬೇಡಿಕೆ ಪೂರೈಸಲು ಶಾಲಾ-ಕಾಲೇಜುಗಳಲ್ಲೇ ಪೂರ್ವಸಿಧ್ಹತಾ ಕೌಶಲ್ಯಾಭಿವೃದ್ಧಿ ಶಿಕ್ಷಣವನ್ನು ನೀಡುವಂತಾಗಬೇಕು. ನಮ್ಮ ದೇಶದ ಯುವಜನತೆ ಶಿಕ್ಷಣ ಪಡೆದು ಹೊರ ಬರುತ್ತಿದ್ದಂತೆಯೇ ಔದ್ಯೋಗಿಕ ಮಾರುಕಟ್ಟೆಯಲ್ಲಿ ಬಹು ಬೇಡಿಕೆಯ ಸಂಪನ್ಮೂಲರಾಗಬೇಕು. ಈ ಬಗ್ಗಯೂ ಸರ್ಕಾರ ಈ ಬಜೆಟ್ ನಲ್ಲಿ ಪ್ರಸ್ತಾಪಿಸಬೇಕು.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s