ಡಾ. ಗಾಯತ್ರಿ ವಾಸುದೇವನ್, ಸಿಇಒ & ಸಹ-ಸಂಸ್ಥಾಪಕರು, ಲೇಬರ್ ನೆಟ್ ಸರ್ವೀಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್, ಬೆಂಗಳೂರು. ಇವರು ಕೇಂದ್ರದ ೨೦೧೯ ರ ಬಜೆಟ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.

100 ದಶಲಕ್ಷಕ್ಕೂ ಹೆಚ್ಚಿನ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಹೆಚ್ಚಿಸಲು ಬಜೆಟ್ ಗಮನಾರ್ಹ ಕ್ರಮವನ್ನು ಪ್ರಕಟಿಸಿದೆ; ಉದ್ಯೋಗ ಸೃಷ್ಟಿ ಯೋಜನೆಗಳ ಬಗ್ಗೆ ಗಮನ ಹರಿಸಿಲ್ಲ.
ವೇತನ ಪಡೆಯುವ ಮತ್ತು ಅಸಂಘಟಿತ ವಲಯದ ಸಾಮಾಜಿಕ ಭದ್ರತೆಯನ್ನು ಉದ್ದೇಶಿಸಿದ ಬಜೆಟ್ ಗೆ 10 ರಲ್ಲಿ 8.5 ಅಂಕಗಳು ನೀಡಬಹುದು. ನೇ ಸ್ಥಾನದಲ್ಲಿದೆ. 500 ಕೋಟಿ ಮೆಗಾ ಪಿಂಚಣಿ ಯೋಜನೆಯಲ್ಲಿ -ಪ್ರಧಾನ್ ಮಂತ್ರಿ ಶ್ರಮ್ ಯೋಗಿ ಮನ್ ಧನ್ ವಿಶ್ವದ ಅತಿ ದೊಡ್ಡ ಪಿಂಚಣಿ ಯೋಜನೆಯ ಪೈಕಿ ಒಂದಗಿದ್ದು ಇದು ಸ್ವಾಗತಾರ್ಹವಾಗಿದೆ. ಈ ಬಹುದೊಡ್ಡ ಯೋಜನೆಯಿಂದಾಗಿ ಮತ್ತು ಪ್ರಸ್ತುತ ಯೋಜನೆಗಳಿಗೆ ಹೋಲಿಸಿದರೆ, 100 ಮಿಲಿಯನ್ ಗೂ ಹೆಚ್ಚು ಜನರು ಈ ಪ್ರಯೋಜನವನ್ನು ಪಡೆಯುತ್ತಾರೆ. ಇದನ್ನು ಹೇಗೆ ನಿರ್ವಹಿಸಲಾಗುತ್ತದೆ, ಹಾಗೂ ಕಾರ್ಯಗತಗೊಳಿಸಲಾಗುವುದು ಎಂಬುದರ ವಿವರಗಳಿಗಾಗಿ ನಾವು ಕಾಯಬೇಕು ಮತ್ತು ಗಮನಿಸಬೇಕಾಗಿದೆ.

ಪ್ರಧಾನಿ ಕಿಸಾನ್ ಯೋಜನೆಯೂ ಸಹ ದೊಡ್ಡಯೋಜನೆಯಾಗಿದ್ದು, ಇದು ಗ್ರಾಮೀಣ ಸಮಸ್ಯೆಗಳನ್ನು ಉದ್ದೇಶಿಸಿರುವ ಯೋಜನೆಯಾಗಿದೆ. ಕೃಷಿಕರಿಗೆ ಇದು ಸಕಾರಾತ್ಮಕ ಪರಿಣಾಮಬೀರಲಿದೆ. ಇದರಿಂದಾಗಿ ಗ್ರಾಮೀಣ ಆದಾಯ ಗಮನಾರ್ಹವಾಗಿ 6-8% ಹೆಚ್ಚಿಸುತ್ತದೆ. ಇದು ರೈತರಿಗೆ ಖರ್ಚು ಮಾಡುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಮತ್ತು ಇದರಿಂದ ಸಮಯಾಧಾರಿತವಾಗಿ ಇತರ ವಲಯಗಳಿಗೆ ಲಾಭ ನೀಡುತ್ತದೆ.
ಬಜೆಟ್ ಅತೃಪ್ತಿ ತಂದಿರುವುದು ಉದ್ಯೋಗ ಸೃಷ್ಟಿಸುವ ಯೋಜನೆಯಲ್ಲಿ ಹಾಗೂ ಸ್ಥಿರ ಸತತ ಆರ್ಥಿಕ ಬೆಳವಣಿಗೆಯಲ್ಲಿ.
ನಮಗೆ ನಿಜವಾಗಿಯೂ ವ್ಯವಸ್ಥಿತ ಪರಿಹಾರ ಮತ್ತು ಉದ್ಯೋಗ ಸೃಷ್ಟಿಗೆ ರಚನಾತ್ಮಕ ಸುಧಾರಣೆಗಳ ಅಗತ್ಯವಿದೆ. ಆದಾಗ್ಯೂ, GST ವಿನಾಯಿತಿ, MSMEಗಳಿಗೆ ಸಾಲದ ಮೇಲೆ ನೀಡುತ್ತಿರುವ 2% ಬಡ್ಡಿಯ ರಿಯಾಯಿತಿ,ಇವೆಲ್ಲವೂ ಉತ್ಪಾದಕರುಗಳಿಗೆ, MSMEಗಳಿಗೆ ಮತ್ತು ಸಣ್ಣವ್ಯಾಪಾರಿಗಳಿಗೆ ಕಾರ್ಯಾನುಕೂಲವಾಗಿದ್ದು, ಈ ಉದ್ಯಮಿಗಳಿಗೆ ಮುನ್ನೆಡೆಯಲು ಈ ಯೋಜನೆ ಬೆಂಬಲವಾಗಿದೆ.. ಇದರಿಂದ ಸರಿಸುಮಾರು 35 ಲಕ್ಷಕ್ಕೂ ಹೆಚ್ಚು ಸಣ್ಣ ವ್ಯಾಪಾರಿಗಳಿಗೆ, ಮತ್ತು MSME ಗಳಿಗೆ ಲಾಭದಾಯಕವಾಗಲಿದೆ.

ನ್ಯಾಷನಲ್ ಸ್ಯಾಂಪಲ್ ಸರ್ವೆ ಆಫೀಸ್ ನ ಆವರ್ತಕ ಕಾರ್ಮಿಕ ಶಕ್ತಿ ಸಮೀಕ್ಷೆಯ ವರದಿ ನಿನ್ನೆ ಬಿಡುಗಡೆ ಆಗಿದ್ದು, ಅದರ ಪ್ರಕಾರ ಭಾರತದ ನಿರುದ್ಯೋಗ ದರವು 2017-18ರಲ್ಲಿ 45 ವರ್ಷಗಳಲ್ಲಿ ಅಧಿಕವಾಗಿ 6.1% ನಷ್ಟು ಏರಿದೆ ಎಂದು ತಿಳಿದುಬಂದಿದೆ. ಯುವಜನರಲ್ಲಿ ನಿರುದ್ಯೋಗ ದರವು ಹಿಂದಿನ ವರ್ಷಕ್ಕಿಂತ ಹೋಲಿಸಿದರೆ 2017-18ರಲ್ಲಿ ದಾಖಲೆಯ ಮಟ್ಟ ತಲುಪಿದೆ. ಈ ಸನ್ನಿವೇಶದಲ್ಲಿ, ಉದ್ಯೋಗ ದರಗಳ ಬಗ್ಗೆ ಈ ಬಜೆಟ್ ನಲ್ಲಿ ಗಮನ ಹರಿಸಿದ್ದಿದ್ದರೆ ಒಳ್ಳೆಯದ್ದಿತು.

ಹೆಚ್ಚುವರಿ ಟಿಪ್ಪಣಿಗಳು:
ಪ್ರಧಾನ್ ಮಂತ್ರಿ ಶ್ರಮ್ ಯೋಗಿ ಮಂಡನ್ 500 ಕೋಟಿ ಮೆಗಾ ಪಿಂಚಣಿ ಯೋಜನೆಯಲ್ಲಿ ರೂ. 15,000 ರವರೆಗೆ ಮಾಸಿಕ ಆದಾಯ ಹೊಂದಿರುವ ಜನರಿಗೆ. ಅವರು 60 ನೇ ವಯಸ್ಸನ್ನು ತಲುಪಿದ ನಂತರ 3000 ರೂಪಾಯಿಗಳ ಮಾಸಿಕ ಪಿಂಚಣಿ ಪಾವತಿಸಬೇಕಾಗುತ್ತದೆ. ಈ ಯೋಜನೆಗಾಗಿ 18 ವರ್ಷ ವಯಸ್ಸಿನಿಂದ ಕನಿಷ್ಠ 55 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಈ ಬಜೆಟ್ ನಲ್ಲಿ ಸರ್ಕಾರ ತನ್ನ ಕೊಡುಗೆಯಾಗಿ 10% ರಿಂದ 14% ವರೆಗೆ ಹೆಚ್ಚಿಸಿದೆ. ಈ ಪಿಂಚಣಿ ಯೋಜನೆಯು ಅಸ್ತಿತ್ವದಲ್ಲಿರುವ ಅಟಲ್ ಪಿಂಚಣಿ ಯೋಜನೆಗೆ ಹೆಚ್ಚುವರಿಯಾಗಿದೆ.
ಮನೆಯ ಸಹಾಯ, ಚಾಲಕರು, ಪ್ಲಂಬರ್ ಗಳು, ಎಲೆಕ್ಟ್ರಿಶಿಯನ್ನರು, ಕ್ಷೌರಿಕರು ಮತ್ತು ಇತರ ನೌಕರರು ಯೋಜನೆಯಡಿಯಲ್ಲಿ. 15,000 ಕ್ಕಿಂತಲೂ ಕಡಿಮೆ ಮಾಸಿಕ ಆದಾಯ ಹೊಂದಿರುವರು ಕನಿಷ್ಠ ಗ್ಯಾರಂಟಿ ಪಿಂಚಣಿ ಪಡೆಯುತ್ತಾರೆ ಇದರಿಂದ 100 ದಶಲಕ್ಷ ಜನರಿಗೆ ಲಾಭವಾಗುತ್ತದೆ.
ಒಟ್ಟು 500 ದಶಲಕ್ಷ ಉದ್ಯೋಗಿಗಳಲ್ಲಿ 90% ಕ್ಕಿಂತಲೂ ಹೆಚ್ಚಿನ ಜನರು ಕನಿಷ್ಠ ವೇತನವನ್ನು ಪಡೆಯುತ್ತಿಲ್ಲ. ಇವರುಗಳಿಗೆ ಯಾವುದೇ ರೀತಿಯ ಸಾಮಾಜಿಕ ಭದ್ರತೆ, ಇದು ಪಿಂಚಣಿ ಅಥವಾ ಆರೋಗ್ಯ ವಿಮೆ ಇಲ್ಲ.
PM ಕಿಸಾನ್ ಯೋಜನೆ, ಇದರಲ್ಲಿ ರೈತರು ವರ್ಷಕ್ಕೆ 6,000 ರೂ. ನೇರ ಬ್ಯಾಂಕ್ ವರ್ಗಾವಣೆ ಮೂಲಕ 3 ಕಂತುಗಳಲ್ಲಿ ಪಡೆಯುತ್ತಾರೆ. ಈ ಯೋಜನೆಯು ಬಡ್ಡಿ ದರವನ್ನು 75,000 ಕೋಟಿ ರೂಪಾಯಿಗಳಾಗಿವೆ. ಈ ಲಾಭವು ಸುಮಾರು 12 ಕೋಟಿ ರೈತರ ಕುಟುಂಬಗಳಿಗೆ ಪ್ರಯೋಜನವಾಗಲಿದೆ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s