“ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೆ ಫೆ . 3 ರಂದು ಪಿಂಜಾರ , ನದಾಫ್‌ಮನ್ಸೂರಿ , ದೂದೆಕುಲಾ ಸಮಾಜಗಳ ರಾಷ್ಟ್ರೀಯ ಜಾಗೃತಿ ಸಮಾವೇಶ”

ಬೆಂಗಳೂರು , ರಾಜ್ಯ ರಾಜಧಾನಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಇದೆ ಫೆ . 3 ರಂದು ಪಿಂಜಾರ , ನದಾಫ್‌ ಮನ್ಸೂರಿ , ದೂದೆಕುಲಾ ಸಮಾಜಗಳ ರಾಷ್ಟ್ರೀಯ ಜಾಗೃತಿ ಸಮಾವೇಶ ಜರುಗಲಿದೆ . ರಾಜ್ಯದಲ್ಲಿ ಅಲ್ಪಸಂಖ್ಯಾತ ಮುಸ್ಲಿಮರಲ್ಲಿಯೇ ಸುಮಾರು 36 ಲಕ್ಷಕ್ಕೂ ಮೀರಿ ನದಾಫ್ರಪಿಂಜಾರ , ಮನ್ಸೂರಿ , ದೂದೆಕುಲಾ ಸಮಾಜದ ಜನಾಂಗವಿದ್ದು ಈವರೆಗೂ ಸರಕಾರದಿಂದ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳುವಲ್ಲಿ , ರಾಜಕೀಯ ಪ್ರಾತಿನಿಧ್ಯವಿಲ್ಲದೆ , ಶೈಕ್ಷಣಿಕ , ಆರ್ಥಿಕ , ಸಮಾಜಿಕ ವಾಗಿ ಹಿಂದಿದ್ದೇವೆ , ಸಾಚಾರ್ , ಮಿಶ್ರಾ , ಸಿ . ಎಸ್ . ದ್ವಾರಕಾನಾಥ ವರದಿಯಂತೆ ಪ್ರಸ್ತುತ ದಿನಗಳಲ್ಲಿ ದಲಿತರಕ್ಕಿಂತಲೂ ಹಿಂದಿರುವ ಮುಸ್ಲಿಮ ಜನಾಂಗವಿದೆ . ಮುಸ್ಲಿಮ ಜನಾಂಗದಲ್ಲಿಯೇ ಒಳಪಂಗಡವಾಗಿರುವ ಅತೀ ಹಿಂದುಳಿದ ಜನಾಂಗವೆಂದರೆ ನದಾಫ , ಪಿಂಜಾರ ಮನ್ನೂರಿ ದೂದೆಕುಲಾ ಜನಾಂಗವಾಗಿದ್ದು , ಈ ವರೆಗೂ ನಮಗೆ ನ್ಯಾಯಸಮ್ಮತವಾದ ಸ್ಥಾನಮಾನ , ಅವಕಾಶಗಳು ದೊರಕದೆ ಇರುವದು ಜ್ವಲಂತ ಸಮಸ್ಯೆಯಾಗಿದೆ . ನಾವು ಭಾರತ ದೇಶದ ಪ್ರಜೆಗಳಾಗಿ ಕರ್ನಾಟಕ ರಾಜ್ಯದ ಒಳ್ಳೆಯ ಪ್ರಜೆಗಳಾಗಿ ಎಲ್ಲರಂತೆಯೂ ರಾಜಕೀಯ ಶೈಕ್ಷಣಿಕ , ಸಾಮಾಜಿಕವಾಗಿ ಆರ್ಥಿಕವಾಗಿ ಬೆಳೆಯಬೇಕಾಗಿದೆ ನಮಗೂ ಸ್ಥಾನ ಮಾನ ದೊರೆಯಬೇಕು . ನಮಗೆ ಎಲ್ಲ ರಂಗಗಳಲ್ಲಿ ಪ್ರಾತಿನಿತ್ಯ ಕೊಡಬೇಕು . ನಮಗೆ ನಮ್ಮ ಮೂಲಭೂತ ಸೌಲಭ್ಯಗಳನ್ನು ಪಡೆದುಕೊಳ್ಳಲು ನಾವು ಒಗ್ಗಟ್ಟಿನಿಂದ ರಾಷ್ಟ್ರೀಯ ಸಮಾವೇಶವನ್ನು ಆಯೋಜಿಸಿದ್ದೇವೆ . ರಾಜ್ಯದ ಕೇಂದ್ರ ಸ್ಥಾನ ಬೆಂಗಳೂರಿನಲ್ಲಿ ಸೇರಿದಂತೆ ಎಲ್ಲ ಜಿಲ್ಲಾ ಮತ್ತು ತಾಲೂಕ ಕೇಂದ್ರಗಳಲ್ಲಿ ಪಿಂಜಾರ , ನದಾಫ , ಮನ್ಸೂರಿ , ಭವನ ನಿರ್ಮಾಣಗೊಳಿಸಬೇಕು , ನಮ್ಮ ರಾಜ್ಯದಲ್ಲಿಯೇ 36 ಲಕ್ಷದಿಂದ 40 ಲಕ್ಷ ನಮ್ಮ ಜನಾಂಗವಿದ್ದು ನಾವು ಆರ್ಥಿಕವಾಗಿ ಮುಂದೊರೆಯಲು ನಮಗೂ ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಬೇಕು ಎಂಬುದು ನಮ್ಮ ಒಕ್ಕೂರಿಲಿನ ಜನಾಂಗದ ಕೂಗಾಗಿದೆ . ರಾಷ್ಟ್ರೀಯ ಜಾಗೃತಿ ಸಮಾವೇಶದಲ್ಲಿ ನಮ್ಮ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಹನೀಯರಿಗೆ ಗೌರವಿಸಿ ಪುರಸ್ಕರಿಸಲಾಗುವದು . ಸಭೆಯ ಅಧ್ಯಕ್ಷತೆಯನ್ನು ಉತ್ತರ ಪ್ರದೇಶದ ಮಾಜಿ ಮಂತ್ರಿಗಳು , ಆಲ್ ಇಂಡಿಯಾ ಜಮಿಯತುಲ್ ಮನ್ನೂರ ರಾಷ್ಟ್ರೀಯ ಅಧ್ಯಕ್ಷ ಸನ್ಮಾನ್ಯ ಶ್ರೀ ಜಾವೇದ ಇಕ್ಬಾಲ್ ಮನ್ಸೂರಿ ವಹಿಸಲಿರುವರು . ಸಮಾವೇಶ ಉದ್ಘಾಟನೆಯನ್ನು ಅಲ್ಲ ಸಖ್ಯಾತರ ಕಲ್ಯಾಣ ಇಲಾಖೆ , ವಕ್ಷ ಸಚಿವರಾದ ಸನ್ಮಾನ್ಯ ಶ್ರೀ ಝಡ್ . ಎಂ . ಜಮೀರ ಅಹ್ಮದಖಾನ್ ನೆರವೇರಿಸುವರು . ಘನ ಉಪಸ್ಥಿತಿ , ಕೆಪಿಸಿಸಿ ಅಧ್ಯಕ್ಷ ಸನ್ಮಾನ್ಯ ಶ್ರೀ ದಿನೇಶ ಗುಂಡೂರಾವ್ , ವಸತಿ ಸಚಿವ ಸನ್ಮಾನ್ಯ ಶ್ರೀ ಯು . ಟಿ . ಖಾದರ , ಸಮಾಜ ಕಲ್ಯಾಣ ಇಲಾಖೆ ಸಚಿವ ಸನ್ಮಾನ್ಯ ಶ್ರೀ ಪ್ರಿಯಾಂಕ ಖರ್ಗೆ , ಸಾರಿಗೆ ಸಚಿವ ಸನ್ಮಾನ್ಯ ಶ್ರೀ ಡಿ . ಸಿ . ತಮ್ಮಣ್ಣ ರವರು ಪಾಲ್ಗೊಳ್ಳುವರು . ಮುಖ್ಯ ಅತಿಥಿಗಳಾಗಿ ದೆಹಲಿಯ ಆಲ್ ಇಂಡಿಯಾ ಜಮಿಯತುಲ್ ಮನ್ನೂರ ಉಪಾಧ್ಯಕ್ಷ ಸನ್ಮಾನ್ಯ ಶ್ರೀ ಸೊಫಿ ಮತ್ತೂದ್ ಆಲಿ ಮನ್ಸೂರಿ , ವೆಸ್ಟ್ ಬೆಂಗಾಲ ನೆಲಹಾಟಿ ಶಾಸಕರಾದ ಸನ್ಮಾನ್ಯ ಶ್ರೀ ಮೂಹಿದ್ದೀನ ಶರವರು , ರಾಷ್ಟ್ರೀಯ ಉಪಾಧ್ಯಕ್ಷರುಗಳಾದ ಸನ್ಮಾನ್ಯ ಶ್ರೀ ಆರ್ . ಎ . ಉಸ್ಮಾನಿ ಮನ್ಸೂರಿ , ಸನ್ಮಾನ್ಯ ಶ್ರೀ ಮೆಹಂದಿ ಹಸನ್ ಮನ್ಸೂರಿ , ಹಾಜಿ ರವಿಬುಲ್ ಹಸನ್ ರವರು , ಮತ್ತು ರಾಜ್ಯ ಇತರೆ ಜನಪ್ರತಿನಿಧಿಗಳು ಆಗಮಿಸುವರು . ನೇತೃತ್ವವನ್ನು ಆಲ್ ಇಂಡಿಯಾ ಜಮಿಉತುಲ್ ಮನ್ಸೂರ್ ಕರ್ನಾಟಕ ಗೌರವಾಧ್ಯಕ್ಷ ಹಾಜಿ ಕಪ್ಪಗಲ್ ರಸೂಲಸಾಬ ಮನ್ಸೂರಿ , ರಾಜ್ಯಾಧ್ಯಕ್ಷ ಅಮನ್ ಕೊಡಗಲಿ , ರಾಜ್ಯ ಕಾರ್ಯಾಧ್ಯಕ್ಷ ಕೆ . ಎಂ . ಜಮೀರ , ರಾಜ್ಯ ಪ್ರಧಾನ ಕಾರ್ಯದರ್ಶಿ ಗೌಸ್ ಪಾಷಾ , ಯುವ ಸಮಾಜದ ಮುಖಂಡ ಸೈಫುಲ್ಲಾ , ಹೈದರಾಬಾದ ಕರ್ನಾಟಕ ಅಧ್ಯಕ್ಷ ಮಹ್ಮದ ಆಶ್ರಪ್ಪ , ಕಾರ್ಯದರ್ಶಿ ರಮಜಾನಸಾಬ್ ಪಿ , ಪಿ . ಎನ್ , ಎಂ . ಫೆಡರೇಷನ್ ಅಧ್ಯಕ್ಷ ಫಕ್ರುದ್ದೀನ ಗೊರವನಕೊಳ್ಳ ಇತರೆ ಎಲ್ಲ ಜಿಲ್ಲಾ ಅಧ್ಯಕ್ಷರುಗಳು ವಹಿಸುವರು . ರಾಜ್ಯದಿಂದ ಹೊರತು ಪಡಿಸಿ ಬೇರೆ ಬೇರೆ ರಾಜ್ಯದಿಂದ ಜನಾಂಗದವರು , ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ . ಕಾರಣ ಎಲ್ಲ ಪಿಂಜಾರ ನದಾಫ್ ಮನ್ಸೂರಿ ದೂದೆಕುಲಾ ಸಮಾಜದ ಜನತೆಯೂ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದ್ದಾರೆ . ಸುದ್ದಿಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಅಮನ್ ಕೊಡಗಲಿ , ರಾಜ್ಯ ಕಾರ್ಯಾಧ್ಯಕ್ಷ ಕೆ . ಎಂ . ಜಮೀರ್ , ರಾಜ್ಯ ಪ್ರಧಾನ ಕಾರ್ಯದರ್ಶಿ ಗೌಸ್ ಪಾಷಾ , ಯುವ ಮುಖಂಡ ಸೈಫುಲ್ಲಾ , ಬೆಂಗಳೂರು ಉತ್ತರ ವಲಯ ಅಧ್ಯಕ್ಷ ಮಹಮ್ಮದ ರಫೀಕ ನದಾಫ , ಇತರರು ಉಪಸ್ಥಿತರಿದ್ದರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s