ಜಯನಗರದ ಕಿತ್ತೂರು ರಾಣಿ ಚೆನ್ನಮ್ಮಒಳಾಂಗಣ ಕ್ರೀಡಾಂಗಣದಲ್ಲಿ ಆಧುನಿಕವ್ಯಾಯಾಮ ಶಾಲೆ ಉದ್ಘಾಟನೆ: ವಾಲಿಬಾಲ್ ಒಳಾಂಗಣ ಕ್ರೀಡಾಂಗಣ & ಗ್ರೀನ್ ರೂಂ, ಶೆಟಲ್ ಬ್ಯಾಡ್ಮಿಂಟನ್ಕೋರ್ಟ್ ಕಾಮಗಾರಿಗೆ ಶಂಕುಸ್ಥಾಪನೆ

ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಭೈರ ಸಂದ್ರ ವಾರ್ಡ್ ಕಿತ್ತೂರು ರಾಣಿ ಚೆನ್ನಮ್ಮಕ್ರೀಡಾಂಗಣದಲ್ಲಿ ಬೆಂಗಳೂರಿನಲ್ಲಿಯೇಶ್ರೇಷ್ಠ ಮತ್ತು ಅತ್ಯುತ್ತಮ ವಾಲಿಬಾಲ್ಒಳಾಂಗಣ ಕ್ರೀಡಾಂಗಣನಿರ್ಮಾಣವಾಗುತ್ತಿದೆ.

ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್,ಮಾಜಿ ಸಚಿವ ರಾಮಲಿಂಗಾರೆಡ್ಡಿ, ಶಾಸಕಿಸೌಮ್ಯಾ ರೆಡ್ಡಿ, ಪಾಲಿಕೆ ಸದಸ್ಯ ಎನ್ನಾಗರಾಜ್ ಆಟದ ಮೈದಾನದಲ್ಲಿಮೊದಲ ಹಂತದಲ್ಲಿ ಒಳಾಂಗಣದಅತ್ಯಾಧುನಿಕ ವ್ಯಾಯಾಮ ಶಾಲೆಉದ್ಘಾಟಿಸಿದರು. ವಾಲಿಬಾಲ್ಒಳಾಂಗಣ ಕ್ರೀಡಾಂಗಣ, ಗ್ರೀನ್ ರೂಂ,ಶೆಟಲ್ ಬ್ಯಾಡ್ಮಿಂಟನ್ ಕೋರ್ಟ್ನಿರ್ಮಾಣದ ಕಾಮಗಾರಿಗಳಿಗೆ ಇದೇಸಂದರ್ಭದಲ್ಲಿ ಚಾಲನೆ ನೀಡಿದರು.

ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ಮಾತನಾಡಿ, ಬೆಂಗಳೂರಿನ ದಕ್ಷಿಣಭಾಗದಲ್ಲಿ ಒಳಾಂಗಣ ಕ್ರೀಡಾಂಗಣಇರಲಿಲ್ಲ. ಕೊರೆತೆ ಈಗನಿವಾರಣೆಯಾಗಿದ್ದು, ರಾಜ್ಯ ಮತ್ತುರಾಷ್ಟ್ರಮಟ್ಟದಲ್ಲಿ ಕ್ರೀಡಾಕೂಟಗಳನ್ನುಆಯೋಜಿಸಲು ಸಹಕಾರಿಯಾಗಲಿದೆ.ವ್ಯಾಯಾಮ ಶಾಲೆ ಕ್ರೀಡಾಪಟುಗಳಸಾಮರ್ಥ್ಯ ವೃದ್ಧಿಗೆ ಪೂರಕವಾಗಲಿದೆಎಂದು ಹೇಳಿದರು.

ಶಾಸಕ ರಾಮಲಿಂಗಾ ರೆಡ್ಡಿ ಮಾತನಾಡಿ,ಬಿಬಿಎಂಪಿ ಮತ್ತು ಸರ್ಕಾರದಿಂದಆರೋಗ್ಯ ರಕ್ಷಣೆಗೆ ವಿಶೇಷಗಮನಹರಿಸಲಾಗಿದೆ. ಖಾಸಗಿ ವಲಯದವ್ಯಾಯಾಮ ಶಾಲೆಗಳು ಸಾಮಾನ್ಯಜನರಿಗೆ ದುಬಾರಿಯಾಗಿದೆ. ಸೌಲಭ್ಯಕಲ್ಪಿಸುತ್ತಿದ್ದು, ಇದನ್ನು ಜನತೆಸದುಪಯೋಗಪಡಿಸಿಕೊಳ್ಳಬೇಕುಎಂದು ಕರೆ ನೀಡಿದರು.

ಶಾಸಕಿ ಸೌಮ್ಯ ರೆಡ್ಡಿ ಮಾತನಾಡಿ,ಜಯನಗರ ವಿಧಾನಸಭಾ ಕ್ಷೇತ್ರದಲ್ಲಿಕ್ರೀಡೆ, ಸಂಸ್ಕೃತಿಕ ಚಟುವಟಿಕೆಗಳಿಗೆವಿಶೇಷ ಒತ್ತು ನೀಡಲಾಗುತ್ತಿದೆ. ಎಲ್ಲಾವಲಯಗಳಲ್ಲಿ ಕ್ಷೇತ್ರ ಪ್ರಗತಿಸಾಧಿಸುತ್ತಿದ್ದು, ಅಭಿವೃದ್ಧಿಯಲ್ಲಿ ಜನರಸಹಭಾಗಿತ್ವ ಹೆಚ್ಚಾಗಬೇಕು ಎಂದರು.

ಭೈರಸಂದ್ರ ವಾರ್ಡ್ ಎನ್ . ನಾಗರಾಜು ಮಾತನಾಡಿ, ಯುವ ಕ್ರೀಡಾಪಟುಗಳು ಸೌಲಭ್ಯ ಬಳಸಿಕೊಂಡುರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು. ಕ್ರೀಡಾಂಗಣದಲ್ಲಿಪ್ರತಿಯೊಂದು ಕ್ರೀಡಾ ಚಟುವಟಿಕೆಗಳಿಗೆಇಲ್ಲಿ ಅವಕಾಶವಿದೆ. ಒಂದು ಕೋಟಿ ರೂವೆಚ್ಚದಲ್ಲಿ ವ್ಯಾಯಾಮ ಶಾಲೆಆರಂಭವಾಗಿದ್ದು, ಸೂಕ್ತತರಬೇತುದಾರರ ಮಾರ್ಗದರ್ಶನದವ್ಯವಸ್ಥೆ ಮಾಡಲಾಗಿದೆ. ಮನರಂಜನೆಗಾಗಿ ಹೋಮ್ ಥೇಟರ್,ಓಪನ್ ಥಿಯಟರ್, ವಾಹನಗಳಿಗೆಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ಕಾಮಗಾರಿಸ್ವಲ್ಪ ದಿನಗಳಲ್ಲಿ ಪ್ರಾರಂಭವಾಗಲಿದಎಂದು ಹೇಳಿದರು.

ಕಾರ್ಯಕ್ರಮಕ್ಕೆ ಹಲವಾರು ಮಂದಿಕ್ರೀಡಾಪಟುಗಳು, ವಿವಿಧ ಸಂಘಟನೆಗಳಪ್ರತಿನಿಧಿಗಳು ಪಾಲ್ಗೊಂಡಿದ್ದರು.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s