ಬೆಂಗಳೂರು ನಗರದ ಸಿ . ಸಿ . ಬಿ ಘಟಕದ ಸೈಬರ್‌ಕ್ರಂ ಪೊಲೀಸರು ನಡೆಸಿದ ಕಾರ್ಯಚರಣೆ

ದಿನಾಂಕ : 05 . 02 . 2019

ದಿನಾಂಕ 04 . 02 . 2019 ರಂದು ಬೆಂಗಳೂರು ನಗರದ ಸಿ . ಸಿ . ಬಿ ಘಟಕದ ಸೈಬರ್‌ಕ್ರಂ ಪೊಲೀಸರು ನಡೆಸಿದ ಕಾರ್ಯಚರಣೆಯಲ್ಲಿ ಬೆಂಗಳೂರು ನಗರದ ದೇವಿನಗರದಲ್ಲಿ ವಾಸವಾಗಿರುವ ಹಿರಿಯ ನಾಗರಿಕರೊಬ್ಬರ ವಾಹನ ಚಾಲಕನಾಗಿದ್ದುಕೊಂಡು , ವಿಶ್ವಾಸಗಳಿಸಿ ಪಿರೈಾದಿಯ ಲಕ್ಷ್ಮೀ ವಿಲಾಸ ಬ್ಯಾಂಕಿನ ಎ . ಟಿ . ಎಂಕಾರ್ಡ್ನ್ನು ಪಡೆದು ಅವರ ಗಮನಕ್ಕೆ ಬಾರದಂತೆ , ಎ . ಟಿ . ಎಂ ಕಾರ್ಡ್ನ ಭಾವಚಿತ್ರವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದು ಸಂಗ್ರಹಿಸಿಟ್ಟುಕೊಂಡು , ಪಿರೈಾದಿಯ ಅನುಮತಿಯನ್ನು ಪಡೆಯದೇ ಅನಧಿಕೃತವಾಗಿ ತನ್ನ ಸ್ನೇಹಿತನಿಗೆ ವಾಟ್ಸ್ಆಫ್ ಮೂಲಕ ಕಳುಹಿಸಿದ್ದು , ತದನಂತರದಲ್ಲಿ ಪಿಲ್ಯಾಡಿಯ ಕಾರ್ಡ್ನ ಮಾಹಿತಿ ಬಳಸಿ ಪೇಟಿಯಂ ಮೂಲಕ ತನ್ನ ಖಾತೆಗೆ ಒಂಬತ್ತು ಬಾರಿ ಒಟ್ಟು 47 , 000 / – ರೂ ಹಣವನ್ನು ಹಂತ ಹಂತವಾಗಿ ಒಂದು ತಿಂಗಳ ಅವಧಿಯಲ್ಲಿ ವರ್ಗಾವಣೆ ಮಾಡಿಕೊಂಡು ನಂಚಿಕೆ ದ್ರೋಹ ಎಸಗಿ ವಂಚಿಸಿದ ಆರೋಪಿಗಳಿಬ್ಬರನ್ನು ಬೆಂಗಳೂರು ನಗರದ ದೇವಿನಗರದ ಎಸ್ . ಆರ್ . ಬ್ಲೂ – ಡೈಮಂಡ್ ಅಪಾರ್ಟ್‌ಮೆಂಟ್ ಬಳಿ ವಶಕ್ಕೆ ಪಡೆದು ವಿಚಾರಣೆ ಕೈಗೊಂಡು ದಸ್ತಗಿರಿ ಕ್ರಮ ಜರುಗಿಸಿ ಆರೋಪಿಗಳ ವಶದಿಂದ ಕೃತ್ಯಕ್ಕೆ ಬಳಸಿದ ಮಾಲುಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ . ದಸ್ತಗಿರಿಯಾದವರ ವಿವರ ಕೆಳಕಂಡಂತಿವೆ : ಎ1 ) ನಾಗರಾಜ ಸಿ , ಬಿನ್ ಲೇಟ್ ಚಂದ್ರಪ್ಪ ವಯಸ್ಸು – 30 , ವ್ಯಾಸಂಗ – ಎಸ್ . ಎಸ್ . ಎಲ್ . ಸಿ , ಉದ್ಯೋಗ – ಚಾಲಕ , ವಾಹ – ನಂ – 204 , 2ನೇ ಮುಖ್ಯರಸ್ತೆ , 2ನೇ ಕ್ರಾಸ್ , ದೇವಿ ನಗರ , ಕೊಡಿಗೆಹಳ್ಳಿ ಹತ್ತಿರ , ಬೆಂಗಳೂರು ನಗರ , ಸ್ವಂತ ವಿಳಾಸ : 1ನೇ ಮುಖ್ಯರಸ್ತೆ , ದಿಡಗೂರು ಗ್ರಾಮ , ಹೊನ್ನಳ್ಳಿ ತಾಲ್ಲೂಕು , ದಾವಣಗೆರೆ ಜಿಲ್ಲೆ . ಎ2 ) ಸಚಿನ್ ಹೆಚ್ . ಎಸ್ . ಏನ್ ಶಿವರಾಜ ಹೆಚ್ . ಎಸ್ . ವಯಸ್ಸು 23 , ವ್ಯಾಸಂಗ – ಡಿಪ್ಲೋಮೊ , ಉದ್ಯೋಗ – ಚಾಲಕ , ವಾಸ – ನಂ – 001 , ಮುಂದೆ ಎಸ್ . ಆರ್ . ಬ್ಲೂ ಡೈಮಂಡ್ ಅಪಾರ್ಟ್‌ಮೆಂಟ್ , ದೇವಿ ನಗರ ಮುಖ್ಯರಸ್ತೆ , ಲೊಟ್ಟೆಗೊಲ್ಲಹಳ್ಳಿ , ಬೆಂಗಳೂರು ನಗರ – 560094 . ಸ್ವಂತ ವಿಳಾಸ ನಂ87 , ಹೊನ್ನನಾಯಕನಹಳ್ಳಿ , ಚನ್ನಪಟ್ಟಣ , ರಾಮನಗರ ಜಿಲ್ಲೆ .

ಆರೋಪಿಗಳ ಪ್ರಾಥಮಿಕ ವಿಚಾರಣೆಯಿಂದ ಕೆಳಕಂಡ ಅಂಶಗಳು ತಿಳಿದು ಬಂದಿರುತ್ತದೆ .

1 ) ಆರೋಪಿಗಳಿಬ್ಬರು ಒಂದೇ ಏರಿಯಾದವರಾಗಿದ್ದು ಹಲವಾರು ವರ್ಷಗಳಿಂದ ಪರಿಚಿತರಿದ್ದು ಇಬ್ಬರೂ ಕೂಡಚಾಲಕರಾಗಿ ವೃತ್ತಿಜೀವನ ನಡೆಸುತ್ತಿದ್ದು ಇವರುಗಳ ಪೈಕಿ ಆರೋಪಿ ನಾಗರಾಜು ಪಿರೈಾದಿಯ ವಾಹನಕ್ಕೆ ಚಾಲಕನಾಗಿ ಕಳೆದ 10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಅಂಶ ತಿಳಿದುಬಂದಿರುತ್ತದೆ . 2 ) ಆರೋಪಿ ನಾಗರಾಜ ಪಿರಾದುದಾರರ ಮೊಬೈಲ್ ಮತ್ತು ಲಕ್ಷ್ಮೀ ವಿಲಾಸ ಬ್ಯಾಂಕಿನ ಎಟಿಎಂ ಕಾರ್ಡ್ ಅನ್ನು ತನ್ನ ವಶದಲ್ಲಿಟ್ಟು ಕೊಂಡು ದೈನಂದಿನ ಚಟುವಟಿಕೆಗೆ ನೆರವು ನೀಡಿ ವಿಶ್ವಾಸ ಗಳಿಸಿಕೊಂಡು ತನ್ನ ವಶದಲ್ಲಿದ್ದ ಸಮಯದಲ್ಲಿ ಎಟಿಎಂ ಕಾರ್ಡ್ನ ಎರಡು ಬದಿಯ ಛಾಯಾಚಿತ್ರಗಳನ್ನು ತನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದು ಸಂಗ್ರಹಿಸಿಟ್ಟುಕೊಂಡು ಮತ್ತೊಬ್ಬ ಆರೋಪಿಯಾದ ತನ್ನ ಸ್ನೇಹಿತ ಸಚಿನ್ ಗೆ ವಾಟ್ಸ್ ಆಫ್ ಮೂಲಕ ಕಾರ್ಡ್ನ ಛಾಯಾಚಿತ್ರವನ್ನು ಕಳುಹಿಸಿದ್ದು , ಸದರಿ ಮಾಹಿತಿ ಬಳಸಿಕೊಂಡ ಸಚಿನ್ ತನ್ನ ಫೇಡಿಯಂ ಖಾತೆಗೆ ವಿದ್ಯಾವಿಯ ಖಾತೆಯಿಂದ ಒಂದು ತಿಂಗಳ ಅವಧಿಯಲ್ಲಿ ಒಂಬತ್ತು ಬಾರಿ ಅನಧಿಕೃತವಾಗಿ ಒಟ್ಟು 47 , 000 / – ರೂಗಳನ್ನು ವರ್ಗಾಯಿಸಿಕೊಂಡು ಪಿರಾದುದಾರರಿಗೆ ವಂಚಿಸಿರುವುದು ಕಂಡುಬಂದಿರುತ್ತದೆ . ಸಾರ್ವಜನಿಕರು ಯಾವುದೇ ವ್ಯಕ್ತಿಗೆ ಯಾವುದೇ ಕಾರಣಕ್ಕೂ ತಮ್ಮ ಬ್ಯಾಂಕ್‌ನ ಖಾತೆಯ ವಿವರ , ಎಟಿಎಂ ಕಾರ್ಡ್ , ಆನ್‌ಲೈನ್ ಬ್ಯಾಂಕಿಗೆ ಅಧಿಕೃತವಾಗಿ ನೋಂದಣಿಯಾದ ಮೊಬೈಲ್ ಸಂಖ್ಯೆಯುಳ್ಳ ಮೊಬೈಲನ್ನು ನೀಡಿದ್ದಲ್ಲಿ ತಮ್ಮ ಗಮನಕ್ಕೆ ಬಾರದೇ ನಂಬಿಕೆ ದ್ರೋಹವೆಸಗಿ ತಮ್ಮ ಅನುಮತಿ ಇಲ್ಲದೇ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ವಂಚಿಸುವ ಅಪರಾಧಕ್ಕೆ ಬಲಿಯಾಗಬಾರದೆಂದು ಕೋರಿದೆ . ಈ ಪತ್ತೆ ಕಾರ್ಯವನ್ನು ಮಾನ್ಯ ಅಪರ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ ಅಲೋಕ್ ಕುಮಾರ್ , ಐ . ಪಿ . ಎಸ್ . ಉಪ ಮೊಅಸ್ ಆಯುಕ್ತರು , ಅಪರಾಧ ರವರಾದ ಶ್ರೀ ಗಿರೀಶ್ . ಎಸ್ , ಐ . ಪಿ . ಎಸ್ . ರವರ ಮಾರ್ಗದರ್ಶನದಂತೆ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪಿ . ಐ . ಶ್ರೀ . ಯಶವಂತ್‌ಕುಮಾರ್ ಕೆ . ಎನ್ , ಎ . ಎಸ್ . ಐ ಭೋಜರಾಜು ಹಾಗೂ ಸಹದ್ಯೋಗಿಗಳಾದ ವಿನೋದ್ ಕುಮಾರ್ ಮತ್ತು ನೂರುಲ್ಲಾರವರುಗಳು ಕೈಗೊಂಡಿರುತಾರೆ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s