ಸಿಸಿಬಿ ಕಾರ್ಯಾಚರಣೆ ವಾಹನ ಕಳವು ಆಸಾಮಿ ಬಂಧನ

ಸಿಸಿಬಿ ಕಾರ್ಯಾಚರಣೆ ವಾಹನ ಕಳವು ಆಸಾಮಿ ಬಂಧನ , 15 ಲಕ್ಷ ರೂ ಬೆಲೆಯ 1 ಎರ್ಟಿಗಾ ಹಾಗೂ 6 ದ್ವಿಚಕ್ರ ವಾಹನಗಳ ವಶ . ಬೆಂಗಳೂರು ನಗರದ ಬೆಳ್ಳಂದೂರು , ಸಂಪಂಗಿರಾಮ ನಗರ , ಬನಶಂಕರಿ , ಕುಮಾರಸ್ವಾಮಿ ಲೇಔಟ್ , ರಾಜಾಜಿ ನಗರ , ಆರ್ . ಟಿ ನಗರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಘೋರೂಂ ಹಾಗೂ ಸರ್ವಿಸ್ ಸ್ಟೇಷನ್‌ಗಳ ಹತ್ತಿರ ನಿಲ್ಲಿಸುತ್ತಿದ್ದ ವಾಹನಗಳನ್ನು ಕಳ್ಳತನ ಮಾಡುತ್ತಿದ್ದ ಅಸಾಮಿಯ ಮಾಹಿತಿಯು ಸಿಸಿಬಿಯ ಹಿರಿಯ ಅಧಿಕಾರಿಗಳಿಗೆ ಬಂದಿರುತ್ತದೆ . ಮಾಹಿತಿ ಆಧರಿಸಿ ಕಾರ್ಯಪ್ರವೃತ್ತರಾದ ಕೇಂದ್ರ ಅಪರಾಧ ವಿಭಾಗದ ( ಸಿ . ಸಿ . ಬಿ ) ವಿಶೇಷ ವಿಚಾರಣಾ ದಳದ ಪೊಲೀಸ್ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಆರೋಪಿಯಾದ , ಪಿಲಾಕಲ್ ನಜೀರ್ ಬಿನ್ ಪಿ , ಬಾಬು ವಯಸ್ಸು 55 ವರ್ಷ , ವಾಸ : ಪ್ರೀಜಾ ಮ್ಯಾನರ್ ಅರ್ಪಾಮೆಂಟ್ಸ್ , 2ನೇ ಮಹಡಿ ನಂ , 303 , ಬಿ . ಟಿ . ಎಂ 1ನೇ ಸ್ಟೇಜ್ , 9ನೇ ಮುಖ್ಯ ರಸ್ತೆ , 2ನೇ ಕ್ರಾಸ್ , ಜನಾರ್ಧನ ಶಾಲೆಯ ಹತ್ತಿರ ಬಿ . ಟಿ . ಎಂ . ಲೇಔಟ್ ಬೆಂಗಳೂರು ನಗರ . ಈತನನ್ನು ದಿನಾಂಕ : 24 – 01 – 2019 ರಂದು ಬಂಧಿಸಿ ಈತನ ವಶದಿಂದ 1 ಎರ್ಟಿಗಾ ಕಾರು ಹಾಗೂ 6 ದ್ವಿಚಕ್ರ ವಾಹನಗಳನ್ನು ಅಮಾನತುಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ .

ಈತನ ಬಂಧನದಿಂದ ಬೆಂಗಳೂರು ನಗರದ , ಬೆಳ್ಳಂದೂರು , ಸಂಪಂಗಿರಾಮನಗರ , ಬನಶಂಕರಿ , ಕುಮಾರಸ್ವಾಮಿ ಲೇಔಟ್ , ರಾಜಾಜಿ ನಗರ ಹಾಗೂ ಆರ್ . ಟಿ . ನಗರ ಪೊಲೀಸ್ ಠಾಣೆಗಳಲ್ಲಿ ವರದಿಯಾಗಿದ್ದ ಒಟ್ಟು 7 , ವಾಹನ ಕಳವು ಪ್ರಕರಣಗಳು ಬೆಳಕಿಗೆ ಬಂದಿರುತ್ತದೆ . ಈ ಕಾರ್ಯಚರಣೆಯನ್ನು ಬೆಂಗಳೂರು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ . ಆಲೋಕ್ ಕುಮಾರ್ , ಐ . ಪಿ . ಎಸ್ . ಮತ್ತು ಉಪ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ . ಎಸ್ . ಗಿರೀಶ್ , ಐ . ಪಿ . ಎಸ್ , ರವರ ಮಾರ್ಗದರ್ಶನದಲ್ಲಿ , ಸಿಸಿಬಿ , ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ . ಪಿ . ಟಿ ಸುಬ್ರಮಣ್ಯ ರವರ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಮಲ್ಲಿಕಾರ್ಜುನ್ ಮತ್ತು ಸಿಬ್ಬಂದಿಗಳಾದ ಶ್ರೀ ದಿನೇಶ್‌ಕುಮಾರ್ ಶೆಟ್ಟಿ , ಶ್ರೀ ಮಲ್ಲಿಕಾರ್ಜುನ , ಶ್ರೀ . ಎಸ್ . ಜಿ ಅಶೋಕ , ಶ್ರೀ ಹರಿಚಂದ್ರ , ರವರುಗಳು ಕೈಗೊಂಡಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s