ಸಿದ್ದರಾಮಯ್ಯರ ಸರ್ಕಾರ ನೇಕಾರರ ದುಸ್ಥಿತಿಗೆ ಸ್ಪಂದಿಸಿ ಕೈಗೊಂಡಿದ್ದ ‘ ಸಾಲಮನ್ನಾ ‘ ಕಾರ್ಯಕ್ರಮ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ . ಕೂಡಲೇ ಸಾಲಮನ್ನಾ ಆಗಬೇಕು ಎಂಬ ಬೇಡಿಕೆ ಸೇರಿದಂತೆ ಕೈಮಗ್ಗ ಕ್ಷೇತ್ರದ ಪುನಶ್ವೇತನದ ಬೇಡಿಕೆಯನ್ನು “ ವಾಕಥಾನ್ ” ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು

ದೇಶದ ಆರ್ಥಿಕ ಸಂಪನ್ಮೂಲ ಕ್ರೋಢೀಕರಣದಲ್ಲಿ ಜವಳಿ ಕ್ಷೇತ್ರಕ್ಕೆ ಎರಡನೇ ಸ್ಥಾನವೆಂದು ಘೋಷಿಸಿದ್ದರೂ ಇತ್ತೀಚಿನ ವರ್ಷಗಳಲ್ಲಿ ಬಹುರಾಷ್ಟ್ರೀಯ ಕಂಪೆನಿಗಳ ಪರವಾದ ನೀತಿಗಳಿಂದಾಗಿ ನೇಕಾರರು ಬೀದಿಗಿಳಿಯುವ ದುಸ್ಥಿತಿ ಎದುರಾಗಿದೆ . ಕರ್ನಾಟಕದ ನೇಕಾರರ ಸ್ಥಿತಿಗಳನ್ನು ಅವಲೋಕಿಸಿದರೆ ಇದರ ಸತ್ಯ ಅರಿವಾಗುತ್ತದೆ . 2008 ರಿಂದ 2018ರವರೆಗಿನ ಅವಧಿಯ ಕರ್ನಾಟಕ ಸರ್ಕಾರ 1 , 500 ಕೋಟಿ ರೂ . ಗಳ ವಿಶೇಷ ಪ್ಯಾಕೇಜ್ ‘ ಅವನ್ನು ಜವಳಿ ಕ್ಷೇತ್ರಕ್ಕೆ ತೊಡಗಿಸಿರುವ ಅಂಕಿ ಅಂಶಗಳು ಇವೆ . ಆದರೂ ನೇಕಾರರ ಅಭಿವೃದ್ಧಿ ಮಾತ್ರ ಆಗಿಲ್ಲ . ಜವಳಿ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಮತ್ತು ರಾಜಕಾರಣಿಗಳ ವಿಳಂಬ ನೀತಿಗಳಿಂದಾಗಿ ರಾಜ್ಯದಲ್ಲಿ ನೇಕಾರಿಕೆ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದು ಆತಂಕದ ಸಂಗತಿ . ರೇಷ್ಮೆ ಉದ್ಯಮಕ್ಕೆ ಕರ್ನಾಟಕ ಮೊದಲಿನಿಂದಲೂ ಹೆಸರುವಾಸಿ . ಕರ್ನಾಟಕ ರಾಜ್ಯದ ಕೈಮಗ್ಗ ನೇಕಾರರ ಕುಸರಿಯಿಂದ ಮೂಡಿಬರುವ ರೇಷ್ಮೆ ಸೀರೆಗಳು ಇಂದಿಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬೇಡಿಕೆಯನ್ನು ಉಳಿಸಿಕೊಂಡಿವೆ . ಇಷ್ಟಾದರೂ ಕರ್ನಾಟಕ ಸರ್ಕಾರ ಮಾತ್ರ ಕೈಮಗ್ಗ ಕ್ಷೇತ್ರವನ್ನು ನಿರ್ಲಕ್ಷಿಸುತ್ತಾ ಬಂದಿರುವುದ ವಿಷಾದನೀಯ ಸಂಗತಿ . ದೇಶಕ್ಕೆ ಅನ್ನ ನೀಡುವ ಕಾಯಕ ರೈತನದ್ದಾದರೆ , ಮಾನ ಮುಚ್ಚುವ ಮಹತ್ತರವಾದ ಕಾಯಕ ನೇಕಾರನದ್ದು . ಆದರೆ ಇಂದು ನೇಕಾರನೇ ಬೆತ್ತಲೆಯಾಗಿ ಬದುಕುವ ದುಸ್ಥಿತಿ ಎದುರಾಗಿರುವುದು ಆಡಳಿತ ವ್ಯವಸ್ಥೆಗೆ ಕನ್ನಡಿ ಹಿಡಿದಂತಿದೆ .

ಕೈಮಗ್ಗವನ್ನು ಉಳಿಸುವಂತೆ ಹಿರಿಯ ರಂಗಕರ್ಮಿ ಮತ್ತು ಹೋರಾಟಗಾರರಾದ ಶ್ರೀ ಪ್ರಸನ್ನ ಅವರು ನಿರಂತರವಾಗಿ ಸರ್ಕಾರದ ಗಮನಸೆಳೆಯುತ್ತಿದ್ದರೂ ಇವರೆಗೂ ಯಾವುದೇ ಕ್ರಮಗಳು ಜರುಗಿಲ್ಲ . ರಾಜ್ಯದಲ್ಲಿ ಸರಿಸುಮಾರು 1 . 5 ಲಕ್ಷ ಕುಟುಂಬಗಳು ಕೈಮಗ್ಗವನ್ನು ಅವಲಂಬಿಸಿವೆ . ರಾಜ್ಯದ ನೇಕಾರರು ಉತ್ಪಾದಿಸುವ ಉತ್ಪನ್ನಗಳನ್ನು ಸರ್ಕಾರ ಶಾಲಾ ವಿದ್ಯಾರ್ಥಿಗಳ , ಸಾರಿಗೆ ಸಿಬ್ಬಂದಿಗಳ ಸಮವಸ್ತ್ರಗಳು ಹಾಗೂ ಕಚೇರಿ ಬಳಕೆಯ ಉತ್ಪನ್ನಗಳಿಗೆ ಕಡ್ಡಾಯವಾಗಿ ಬಳಸುವಂತೆ ಆದೇಶಗಳು ಹೊರಟಿದ್ದರೂ ಈವರೆಗೂ ಯಾವುದೇ ಇಲಾಖೆಗಳು ಈ ನಿಟ್ಟಿನಲ್ಲಿ ಕ್ರಮಜರುಗಿಸಿಲ್ಲ . ಇದೀಗ ಮತ್ತೊಮ್ಮೆ ಕೈಮಗ್ಗಗಳ ಉತ್ಪನ್ನಗಳನ್ನು ಬಳಸಿ ಕೈಮಗ್ಗ ಉಳಿಸಿ ಎಂಬ ಘೋಷಣೆಯೊಂದಿಗೆ ಅಖಿಲ ಭಾರತ ಕುರುಹಿನ ಶೆಟ್ಟಿ ( ನೇಕಾರ ) ಮಹಿಳಾ ಸಮಾಜ ಮತ್ತು ಕುರುಹಿನ ಶೆಟ್ಟಿ ಕೇಂದ್ರ ಸಂಘದ ಸಂಯೋಜನೆಯೊಂದಿಗೆ “ ವಾಕಥಾನ್ ” ನಡೆಸುವ ಮೂಲಕ ಗಮನಸೆಳೆಯಲು ಮುಂದಾಗಿದೆ . ಫೆ . 24ರಂದು “ ವಾಕಥಾನ್ ” ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಈ ಕಾರ್ಯಕ್ರಮಕ್ಕೆ ರಂಗಕರ್ಮಿ ಪ್ರಸನ್ನ ಅವರನ್ನು ಆಹ್ವಾನಿಸಲಾಗುತ್ತಿದ್ದು , ಇವರೊಂದಿಗೆ ನೇಕಾರಿಕಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಅನೇಕರನ್ನು ಬರಮಾಡಿಕೊಳ್ಳಲಾಗುತ್ತಿದೆ . ಸಿದ್ದರಾಮಯ್ಯರ ಸರ್ಕಾರ ನೇಕಾರರ ದುಸ್ಥಿತಿಗೆ ಸ್ಪಂದಿಸಿ ಕೈಗೊಂಡಿದ್ದ ‘ ಸಾಲಮನ್ನಾ ‘ ಕಾರ್ಯಕ್ರಮ ಇನ್ನೂ ಅನುಷ್ಠಾನಕ್ಕೆ ಬಂದಿಲ್ಲ . ಕೂಡಲೇ ಸಾಲಮನ್ನಾ ಆಗಬೇಕು ಎಂಬ ಬೇಡಿಕೆ ಸೇರಿದಂತೆ ಕೈಮಗ್ಗ ಕ್ಷೇತ್ರದ ಪುನಶ್ವೇತನದ ಬೇಡಿಕೆಯನ್ನು “ ವಾಕಥಾನ್ ” ಮೂಲಕ ಸರ್ಕಾರದ ಗಮನ ಸೆಳೆಯಲಾಗುವುದು ಎಂದು ಅಖಿಲ ಭಾರತ ಕುರುಹಿನಶಶೆಟ್ಟಿ ಮಹಿಳಾ ಸಮಾಜ ವತಿಯಿಂದ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s