ಸ್ವತಂತ್ರ ದೇಶದಲ್ಲಿ ಸಂವಿಧಾನವನ್ನು ಬುಡಮೇಲುಗೊಳಿಸಿ ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ ಇಟ್ಟು ಅದರ ಸಮಾದಿಯ ಮೇಲೆ ಮನುಸ್ಕೃತಿ ನಿರ್ಮಿಸುವ ವ್ಯವಸ್ಥಿತ ಷಡ್ಯಂತ್ರಗಳು ನಿರಂತರವಾಗಿ ನಡೆಯುತ್ತಿದೆ

ವಿಶ್ವದ ಏಕೈಕ ಬೃಹತ್ ಲಿಖಿತ ಸಂವಿಧಾನವನ್ನು ರಚಿಸಿಕೊಟ್ಟಿದ್ದು ಮಹಾನ್ ಮಾನವತಾವಾದಿ ಬಾಬಾ ಸಾಹೇಬ್ ಡಾ | | ಬಿ . ಆರ್ . ಅಂಬೇಡ್ಕರ್ ಎಂಬ ಮಹಾನ್ ಶಕ್ತಿ . ಈ ಮಹಾನ್ ವ್ಯಕ್ತಿ ಈ ದೇಶದಲ್ಲಿ ಜನಿಸದಿದ್ದರೆ , ಈ ದೇಶದ ಮೂಲನಿವಾಸಿಗಳು ಸಾಮಾಜಿಕ ಕಟ್ಟುಪಾಡುಗಳ ಸಂಕೋಲೆಗಳ ಬಂಧನದಲ್ಲೇ ನರಳ ಬೇಕಾಗಿತ್ತು . ಬಾಬಾ ಸಾಹೇಬರ ತಮ್ಮ ನಿರಂತರ ಹೋರಾಟದ ಮೂಲಕ ಬಹುಜನರ ಬಾಳನ್ನು ಬೆಳಗಿಸಿ ಸಮಾನತೆಯ ಬೀಜವನ್ನು ಬಿತ್ತಿದ ಧೀಮಂತ ನಾಯಕ , ಸಂವಿಧಾನ ಜಾರಿಯಾಗಿ 69 ವರ್ಷ ಕಳೆದರೂ ಇಂದಿಗೂ ಶೇ . 86 % ರಷ್ಟು ದಲಿತರು ಭೂಹೀನರು , ಶೇ 49 % ಗ್ರಾಮೀಣ ಕೃಷಿಕಾರ್ಮಿಕರು , 6 ಕೋಟಿ ಬಾಲಕಾರ್ಮಿಕರಲ್ಲಿ ಶೇ / 40 % ರಷ್ಟು ದಲಿತ ಮಕ್ಕಳು ಶೇ . 6 . 7 % ರಷ್ಟು ದಲಿತರು ಶಾಲಾ ಶಿಕ್ಷಕರು , 2 . 6 ರಷ್ಟು ದಲಿತರು ಉಪನ್ಯಾಸಕರು ಆಗಿದ್ದಾರಷ್ಟೇ ಉನ್ನತ ಶಿಕ್ಷಣದಲ್ಲಿ ದಲಿತರ ಪ್ರವೇಶ ರಾಷ್ಟ್ರೀಯ ಸರಾಸರಿ ಶೇ . 8 % ರಷ್ಟು ಮಾತ್ರ . ಅಂದರೆ ಅಂದಿನಿಂದ ಉನ್ನತ ಶಿಕ್ಷಣದಲ್ಲಿ ವಂಚಿಸಿಕೊಂಡು ಅನಕ್ಷರಸ್ಥರನ್ನಾಗಿಸಿ ದಲಿತರನ್ನು ಕೇವಲ ಬೀದಿ , ಮಲ ಮೂತ್ರ , ಗ್ರಾಮ ಸ್ವಚ್ಚಕ್ಕೆ ಮಾತ್ರ ಸೀಮಿತಗೊಳಿಸಿಕೊಂಡು ವ್ಯವಸ್ಥಿತವಾಗಿ ಸಾಮಾಜಿಕ , ಆರ್ಥಿಕ , ಶೈಕ್ಷಣಿಕವಾಗಿ ಶೋಷಿಸುತ್ತಲೇ ಇದ್ದಾರೆ . ಸಂವಿಧಾನ ಜಾರಿಯಾದ ನಂತರ ಬಹುಜನರಾದ ನಾವೂ ನೀವು ಅಕ್ಷರಸ್ಥರಾಗಿದ್ದೇವೆ , ಎಂಬುದನ್ನು ಮರೆಯಬಾರದು . ಆದರೆ ಇದನ್ನು ಸಹಿಸದ ಸಂವಿಧಾನ ವಿರೋಧಿಗಳು ಅಂದಿನಿಂದ ಇಂದಿನವರೆಗೂ ಸಂವಿಧಾನದ ಮೇಲೆ ನಿರಂತರ ದಾಳಿಗಳನ್ನು ಮತ್ತು ಸಂವಿಧಾನ ಪರಾಮರ್ಶೆಯಾಗಬೇಕೆಂಬ ಹೇಳಿಕೆಗಳನ್ನು ನೀಡುತ್ತಿದ್ದಾರೆ , ಅದರಲ್ಲೂ ಕೇಂದ್ರದಲ್ಲಿ ಬಿ . ಜೆ . ಪಿ . ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಇಂಥಾ ವಿರೋಧಿ ಹೇಳಿಕೆಗಳು ಹೆಚ್ಚು ಚಾಲ್ತಿಗೆ ಬರುತ್ತಿದೆ . ಇದಕ್ಕೆ ಪೂರಕವೆಂಬಂತೆ ಕೇಂದ್ರದ ಸಚಿವ ಅನಂತಕುಮಾರ್ ಹೆಗಡೆ ಸಂವಿಧಾನ ಬದಲಾವಣೆ ಮಾಡಲೆಂದೇ ನಾವು ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿಕೆ ನೀಡಿದ್ದಾರೆ . ಸಂಘ ಪರಿವಾರದ ಹಿನ್ನಲೆಯವರು ಸಾರ್ವಜನಿಕವಾಗಿ ಸಂವಿಧಾನದ ವಿರೋಧಿ ಘೋಷಣೆ ಕೂಗುತ್ತಾ ಡಾ | | ಬಾಬಾ ಸಾಹೇಬ್ ಅಂಬೇಡ್ಕರ್ ರವರಿಗೆ ಧಿಕ್ಕಾರ ಕೂಗಿ ಪೋಲಿಸರ ಮಧ್ಯೆಯೇ ಸಂವಿಧಾನಕ್ಕೆ ಬೆಂಕಿ ಹಚ್ಚಿದ್ದಾರೆ . ಈ ಘಟನೆಗಳು ನಡೆಯುತ್ತಿರುವುದು ಬಿ . ಜೆ . ಪಿ ಆಡಳಿತವಿರುವ ಕೇಂದ್ರ ಸರ್ಕಾರದ ಮೂಗಿನಡಿ ಎಂಬುದು ನಾವು ಗಮನಿಸಬೇಕಾದಂತಹ ವಿಷಯ ಇಷ್ಟೆಲ್ಲಾ ಆದರೂ ಸಹ ಈ ದೇಶದ ಪ್ರಧಾನಿ ನರೇಂದ್ರ ಮೋದಿ ಜಾಣ ಮೌನದಿಂದಿದ್ದಾರೆ .

ಇಂತಹ ವಾತವರಣದಲ್ಲಿ ನಾವು ಜೀವಿಸುತಿದೇವೆ .ಸ್ವತಂತ್ರ ದೇಶದಲ್ಲಿ ಸಂವಿಧಾನವನ್ನು ಬುಡಮೇಲುಗೊಳಿಸಿ ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ ಇಟ್ಟು ಅದರ ಇಟ್ಟು ಅದರ ಸಮಾದಿಯ ಮೇಲೆ ಮನುಸ್ಕೃತಿ ನಿರ್ಮಿಸುವ ವ್ಯವಸ್ಥಿತ ಷಡ್ಯಂತ್ರಗಳು ನಿರಂತರವಾಗಿ ನಡೆಯುತ್ತಿದೆ .ಇತ್ತೀಚಿಗೆ ಕೇಂದ್ರ ಸರ್ಕಾರ ಆಗಲೇ ಸುಪ್ರೀಂ ತೀರ್ಪಿನಂತೆ ಶೇ 50 ಮೀರಬಾರದು ಎಂಬ ಆದೇಶವಿದ್ದರು ಸಹ ಸಂವರ್ಧರ ಕಾ .ಬಡವರಿಗೆ ಶೇ 10 % ಮೀಸಲಾತಿ ನೀಡಿರುವುದು ತಿದ್ದುಪಡಿ ತಂದು ಆರ್ಥಿಕ ಆದಾರರಲಿ ಸಂವಿಧಾನದ ಮೂಲ ಆಶಯಗಳಿಗೆ ಧಕ್ಕೆಯಾಗಿದೆ .ಇದರ ಹಿಂದೆ ಸಂವಿಧಾನವನ್ನು ಅಪಮೌಲ್ಯಗೊಳಿಸುವ ತಂತ್ರಗಾರಿಕೆ ಅಡಗಿದೆ ಎಂಬುದು ಸತ್ಯವಾಗಿದೆ .ಈ ಕಾರ್ಯಕ್ರಮದಲ್ಲಿ ಎಲ್ಲಾ ನಾಗರೀಕ ಭಾಗವಹಿಸಿ ಸಂವಿಧಾನದ ಪ್ರಾಮುಖ್ಯತೆಯನ್ನು ತಿಳಿದು ತಮ್ಮ ಗ್ರಾಮಗಳಲ್ಲಿ ಅರಿವು ಮತ್ತು ಜಾಗೃತಿ ಮೂಡಿಸಲು ದ .ಸಂ .ಸ ( ಅಂಬೇಡ್ಕರ್‌ ವಾದ ) ಬೆಂ .ವಿ .ಸಮಿತಿ ಮನವಿ ಮಾಡುತ್ತದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s