ಮಿಷನ್ ಪ್ರಗತಿ – ಮಕ್ಕಳ ಅಮಿತ ಆನಂದಕ್ಕಾಗಿ ಮಹತ್ವದ ಹೆಜ್ಜೆ “ಉಚಿತ ಮೂಳೆ ಶಸ್ತ್ರಚಿಕಿತ್ಸೆಯ ಕ್ಯಾಂಪ್”

Bengaluru, 7th Feb, 2018:

ಮಕ್ಕಳಲ್ಲಿ ಮೂಳೆ ಸಂಬಂಧಿ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ . ಇದಕ್ಕೆ ವಿಜ್ಞಾನಿಗಳು ಹೇಳುವುದೇನೆಂದರೆ 20ನೇ ಶತಮಾನಕ್ಕಿಂತ ಈಗ ಮಕ್ಕಳಲ್ಲಿ ಮೂಳೆಗಳು ಬಹು ಬೇಗ ಬಲಿತಗೊಳ್ಳುತ್ತಿವೆ . ಹೀಗಾಗಿ ಮೂಳೆ ಸಂಬಂಧಿ ಚಿಕಿತ್ಸೆಯ ಅಗತ್ಯ ಕಂಡುಬರುತ್ತಿದೆ . ಮತ್ತೊಂದು ಗಂಭೀರ ಸಮಸ್ಯೆಯೆಂದ್ರೆ ಬೆಂಗಳೂರಿನಂತಹ ನಗರಗಳಲ್ಲಿ ಮಕ್ಕಳಿಗೆ ಆಟದ ಮೈದಾನಗಳು ದೊರೆಯುವುದೆ ದುಸ್ತರವಾಗಿದೆ . ಈ ಕಾರಣಕ್ಕೆ ಬಹುತೇಕ ಮಕ್ಕಳು ಆಟ ಆಡಲು ರಸ್ತೆಗೆ ಇಳಿಯುತ್ತಿವೆ . ಇದರಿಂದಾಗಿ ಗಾಯಗಳು ಅಥವಾ ವಾಹನ ಅಪಘಾತಗಳಿಗೆ ತುತ್ತಾಗುತ್ತಿದ್ದಾರೆ . ದುರದೃಷ್ಟವಶಾತ್ ಹಲವು ಮಕ್ಕಳಿಗೆ ಮೂಳೆ ಸಂಬಂಧಿ ಚಿಕಿತ್ಸೆ ಪಡೆಯಲು ಸಾಧ್ಯವೇ ಆಗುವುದಿಲ್ಲ . ಸಧ್ಯ ಮೊದಲ ಬಾರಿಗೆ ರೈನ್ ಬೋ ಮಕ್ಕಳ ಆಸತ್ರೆಯು ಮಿಷನ್ ಪ್ರಗತಿ ಎಂಬ ಬೃಹತ್ ಉಚಿತ ಮೂಳೆ ಶಸ್ತ್ರಚಿಕಿತ್ಸೆ ಕ್ಯಾಂಪ್ ಆಯೋಜಿಸಿದೆ . 20ನೆಯ ಅಗತ್ಯ ಕಂಡುಬರುತ್ತಿರೆಯುವುದ ದುಸ್ತರವಾಗಿದ್ದ ವಾಹನ ಅಪಘಾತ ಆಗುವುದಿಲ್ಲ . ಸದ್ಯ ಅಂಗವೈಕಲ್ಯ , ಸಚಿವರ ಈ ಸಂತಸದ ಘಟ್ಟವನ್ನ ಆ ಸುಂದರ ಘಟ್ಟ ಮತ್ತೊಂದಿಲ್ಲ . ಆ ಮಕ್ಕಳೇ ದೇಶದ ಭವಿಷ್ಯದ ಪ್ರಜೆಗಳು , ಜೀವಿತಾವಧಿಯಲ್ಲಿ ಬಾಲ್ಯದಷ್ಟು ಸುಂದರ ಘಟ್ಟ ಮತ್ತೊಂದಿಲ್ಲ . ಆದ್ರೆ ಹಲವು ಕಾರಣಗಳಿಂದಾಗಿ ಮಕ್ಕಳಿಗೆ ಈ ಸಂತಸದ ಘಟ್ಟವನ್ನ ಅನುಭವಿಸಲು ಸಾಧ್ಯವಾಗುವುದಿಲ್ಲ . ದೈಹಿಕ ಅಸಮರ್ಥತೆ , ಅಂಗವೈಕಲ್ಯ , ಸೆಲೆಬ್ರಿಲ್ ಪಾಲಿಸಿ ಹಾಗೂ ಹುಟ್ಟಿನಿಂದ ಕಾಣಿಸಿಕೊಳ್ಳುವ ನ್ಯೂನ್ಯತೆಗಳು ಮಕ್ಕಳ ಸಂಭ್ರಮವನ್ನ ಕಿತ್ತುಕೊಳ್ಳುತ್ತೇವೆ . ಈ ಕಾರಣಕ್ಕಾಗಿಯೇ ಮಕ್ಕಳಲ್ಲಿನ ಈ ದೈಹಿಕ ತೊಂದರೆಗಳು ಸಾರ್ವಜನಿಕ ಆರೋಗ್ಯದ ಬಗ್ಗೆ ಆತಂಕ ಸೃಷ್ಟಿಸಿದ್ದು , ಮಕ್ಕಳು , ಕುಟುಂಬ ಹಾಗೂ ಸಮಾಜವನ್ನ ಕಾಡುತ್ತಿವೆ . ಆದರೆ ಮಕ್ಕಳ ಮೂಳೆಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆಗಳಲ್ಲಿನ ಆಧುನಿಕ ಸಂಶೋಧನೆಗಳು ಹಲವು ದೈಹಿಕ ಅಸಮರ್ಥತೆಯನ್ನ ಹೊಗಲಾಡಿಸುವಲ್ಲಿ ಯಶಸ್ವಿಯಾಗಿದ್ದು , ಮಕ್ಕಳಿಗೆ ಅವರ ಬಾಲ್ಯವನ್ನ ಖುಷಿಯಿಂದ ಕಳೆಯುವಂತೆ ಮಾಡುತ್ತಿವೆ . ಹಲವು ಪಾಲಕರಿಗೆ ತಮ್ಮ ಮಕ್ಕಳಲ್ಲಿನ ಮೂಳೆ ಸಮಸ್ಯೆ ಅಂಥವಾ ದೈಹಿಕ ಅಸಮರ್ಥತೆಯನ್ನ ಶಸ್ತ್ರಚಿಕಿತ್ಸೆ ಮೂಲಕ ಸರಿಪಡಿಸಬಹುದು ಹಾಗೂ ಗುಣಪಡಿಸಬಹುದು ಎಂಬುದರ ಬಗ್ಗೆ ಜಾಗೃತೆಯಿಲ್ಲ . ಸ್ಥಳೀಯ ಸೌಲಭ್ಯಗಳ ಕೊರತೆ ಹಾಗೂ ಆರ್ಥಿಕ ತೊಂದರೆಯಿಂದಾಗಿ ಪ್ರಾರಂಭಿಕ ಹಂತದಲ್ಲಿಯೇ ಪರಿಣಾಮಕಾರಿ ಚಿಕಿತ್ಸೆ ನೀಡದಿರುವುದಕ್ಕೆ ಮಕ್ಕಳು ಈ ತೊಂದರೆ ಅನುಭವಿಸುವಂತೆ ಆಗುತ್ತದೆ . ರೈನ್ ಬೋ ಮಕ್ಕಳ ಆಸ್ಪತ್ರೆಯು 200 ಹಾಸಿಗೆಗಳ ಸಕಲ ಸೌಲತ್ತುವುಳ್ಳ ಶ್ರೇಷ್ಠ ಗುಣಮಟ್ಟದ ಚಿಕಿತ್ಸೆ ನೀಡುವ ಮಕ್ಕಳ ಆಸತ್ರೆಯಾಗಿದ್ದು , ಎಲ್ಲಾ ರೀತಿಯ ಮೂಳೆ ಸಮಸ್ಯೆಗಳಿಗೆ ಮಕ್ಕಳಿಗೆ ಚಿಕಿತ್ಸೆ ನೀಡುತ್ತದೆ . 2018ರಲ್ಲಿ ಈ ಆಸತ್ರೆಯು ಪ್ರಗತಿಯೆಂಬ ಉಪಕ್ರಮ ಆರಂಭಿಸಿದ್ದು , ಮಕ್ಕಳಲ್ಲಿನ ಸೆಲೆಬ್ರಲ್ ಪಾಲಿಗೆ ಸಮಗ್ರ ಚಿಕಿತ್ಸೆ ನೀಡುತ್ತಿದ್ದು , ಬೆಂಗಳೂರಿನ ಮಾರತ್‌ಹಳ್ಳಿಯ ರೈನ್ ಬೋ ಆಸ್ಪತ್ರೆಯ ಈ ಹೆಜ್ಜೆಯು ಭಾರತದಲ್ಲಿಯೇ ಮೊಟ್ಟ ಮೊದಲ ಪ್ರಯತ್ನವಾಗಿದೆ . ರೈನ್ ಬೋ ಒಂದು ಸಂತಸದ ಸಂಗತಿಯನ್ನು ಹಂಚಿಕೊಂಡಿದ್ದು , ಮಿಶನ್ ಪ್ರಗತಿ ಎಂಬ ಹೆಸರಿನಡಿ “ ಮಕ್ಕಳಿಗೆ ಉಚಿತವಾಗಿ ಮೂಳೆ ಶಸ್ತ್ರ ಚಿಕಿತೆಯ ಕಾರ್ಯಕ್ರಮವನ್ನ ” ಆಯೋಜಿಸಿದೆ . ಈ ಯೋಜನೆಯ ಮೊದಲು ಪರೀಕ್ಷಿಸಿ ನಂತರ 100 ಮಕ್ಕಳಿಗೆ ಹುಟ್ಟಿನಿಂದಲೇ ಕಾಣಿಸಿಕೊಳ್ಳುವ ಮೂಳೆ ಸಮಸ್ಯೆಗಳಾದ ಕ್ಲಬ್ ಫೂಟ್ ಮತ್ತು ಹಿಪ್‌ನ ಡಿಸ್ಲೊಕೇಷನ್ , ಸೆಲೆಬೆಲ್ ಪಾಲಿ , ಲಿಂಬ್ ಡಿಫಾರ್ಮೆಟಿ ಹಾಗೂ ಇನ್ನಿತರ ದೈಹಿಕ ಅಸಮರ್ಥತೆಗಳಿಗೆ ಚಿಕಿತ್ಸೆ ನೀಡಲಿದೆ . ಒಳರೋಗಿ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನಂತರದ ಕಾಳಜಿ ಹಾಗೂ ಪುನರ್ವಸತಿ ಸೇರಿದಂತೆ ಈ ಎಲ್ಲಾ ಸೌಲಭ್ಯಗಳನ್ನ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ಉಚಿತವಾಗಿ ನೀಡಲಾಗುತ್ತದೆ . ಕೌಡ್ ಫಂಡಿಂಗ್ ಮೂಲಕ ಸಹಾಯಯಾಚನೆಯೊಂದಿಗೆ ರೈನ್ ಬೋ ಈ ಸಮಾಜಮುಖಿ ಕಾರ್ಯವನ್ನ ಮತ್ತಷ್ಟು ವ್ಯಾಪಕ ಮಟ್ಟಕ್ಕೆ ತೆಗೆದುಕೊಂಡು ಹೋಗಲು ಯೋಜಿಸುತ್ತಿದೆ .

ಹೀಗಾಗಿ ಈ ಮೇಲೆ ಸೂಚಿತ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳ ಪಾಲಕರು ಫೆಬ್ರವರಿ 12 , 13 ಮತ್ತು 14ರಂದು ಬೆಳಗ್ಗೆ 9 ರಿಂದ ಸಂಜೆ 5ರ ವರೆಗೆ ಆಯೋಜಿಸಿರುವ ಬೆಂಗಳೂರಿನ ಮಾರತ್‌ಹಳ್ಳಿಯಲ್ಲಿ ಆಯೋಜಿಸಿರುವ ಹೊರರೋಗಿ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡುವ ಮೂಲಕ ಇದರ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ . ಈ ಚಿಕಿತ್ಸೆಯ ನೇತೃತ್ವವನ್ನ ರೈನ್ ಬೋ ಮಕ್ಕಳ ಆಸ್ಪತ್ರೆಯ ಮಕ್ಕಳ ಮೂಳೆತಜ್ಞರಾದ ಡಾ ಜಯಂತ್ ಎಸ್ ಸಂಪತ್ ಹಾಗೂ ಡಾ . ಗಿರೀಶ್ ಕುಮಾರ ವಹಿಸಿಕೊಂಡಿರುತ್ತಾರೆ . ರೈನ್ ಬೋ ಮಕ್ಕಳ ಆಸ್ಪತ್ರೆಯ ಬೆಂಗಳೂರು ಕ್ಲಸ್ಟರ್‌ನ ಕಾರ್ಯಾಚರಣೆಯ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ನೀರಜ್ ಲಾಲ್ ಮಾತನಾಡಿ , ” ರೈನ್ ಬೋ ಈ ಸದುದ್ದೇಶಕ್ಕೆ ತುಂಬು ಹೃದಯದ ಬೆಂಬಲ ನೀಡುತ್ತಿದ್ದು , ಬಡ ಮತ್ತು ಆರ್ಥಿಕ ನೆರವು ಅಗತ್ಯವಿರುವರಿಗೆ ಶಸ್ತ್ರಚಿಕಿತ್ಸೆಯಲ್ಲಿ ಅತೀ ಹೆಚ್ಚಿನ ಸಬ್ಸಿಡಿ ನೀಡುವ ಮೂಲಕ ಮಕ್ಕಳ ಭವಿಷ್ಯಕ್ಕೆ ನೆರವಾಗುತ್ತಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s