ಬ್ಯಾಂಕ್ ಆಫ್ ಬರೋಡ ಜೊತೆ ವಿಜಯ ಬ್ಯಾಂಕ್ ಮತ್ತು ದೇನಾ ಬ್ಯಾಂಕ್ ವಿಲೀನಗೊಳಿಸುವ ಏಕಪಕ್ಷೀಯ ಹಾಗು ಅಕಾಲಿಕ ನಿರ್ಧಾರ

9೦% ಪ್ರತಿಶತಕ್ಕಿಂತ ಹೆಚ್ಚು ಸದಸ್ಯತ್ವ ಹೊಂದಿರುವ ಅತೀ ದೊಡ್ಡ ಅಧಿಕಾರಿ ಸಂಘಟನೆಯಾದ ನಾವು, ಅಖಿಲ ಭಾರತೀಯ ವಿಜಯ ಬ್ಯಾಂಕ್ ಅಧಿಕಾರಿಗಳ ಸಂಘ, ೩ ಲಕ್ಷಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಅಂಗ ಸಂಸ್ಥೆಯಾಗಿದೆ.
ನಮ್ಮ ವಿಜಯ ಬ್ಯಾಂಕನ್ನು ಬ್ಯಾಂಕ್ ಆಫ್ ಬರೋಡ ಹಾಗು ದೇನಾ ಬ್ಯಾಂಕ್ ಜೊತೆ ವಿಲೀನ ಮಾಡುವ ಕೇಂದ್ರ ಸರ್ಕಾರದ ನಿರ್ಧಾರ ಪೂರ್ವಗೃಹಪೀಡಿತ ಹಾಗು ದೂರದೃಷ್ಟಿಯಿಲ್ಲದ್ದಾಗಿದೆ. ಈ ನಿರ್ಧಾರವನ್ನು ನಾವು ಖಂಡಿಸುತ್ತೆವೆ ಹಾಗು ಈ ಏಕಪಕ್ಷೀಯ ಮತ್ತು ಅಕಾಲಿಕ ನಿರ್ಧಾರ ಕೈ ಬಿಡುವಂತೆ ಅಹ್ರಹಿಸುತ್ತೇವೆ.
ಈ ವಿಲೀನವೂ ಏಕಪಕ್ಷೀಯ ಹಾಗು ಅವೈಜ್ಞಾನಿಕ ಎನ್ನಲು ಹಲವಾರು ಕಾರಣಗಳಿವೆ. ಅವು ಯಾವುವೆಂದರೆ :
ಕಳೆದ ಬಹಳಷ್ಟು ವರ್ಷ ಗಳಿಂದ ವಿಜಯ ಬ್ಯಾಂಕ್ ನಿರಂತರವಾಗಿ ಲಾಭ ಗಳಿಸುತ್ತಿದೆ . ದಿನಾಂಕ 31.03.2016ಕ್ಕೆ ಬ್ಯಾಂಕಿನ ಲಾಭ 382 ಕೋಟಿ , 31.03.2017 ಕ್ಕೆ 751 ಕೋಟಿ ಹಾಗೂ ಕಳೆದ ವರ್ಷ ಅಂದರೆ 31.03.2018 ಬ್ಯಾಂಕಿನ ಲಾಭ 727 ಕೋಟಿಗಳಷ್ಟಿತ್ತು. ಆದರೆ ಅದೇ ಸಮಯದಲ್ಲಿ ಬ್ಯಾಂಕ್ ಆಫ್ ಬರೋಡ ವು ಕ್ರಮವಾಗಿ 5396 (loss), 1383, 2431 (loss) ರಷ್ಟು ನಷ್ಟ ಅನುಭವಿಸಿದೆ. ಸಾಮಾನ್ಯವಾಗಿ ನೋಡುವುದಾದರೆ ನಷ್ಟದಲ್ಲಿರುವ ಬ್ಯಾಂಕನ್ನು ಲಾಭದಲ್ಲಿರುವ ಬ್ಯಾಂಕಿನ ಜೊತೆಯಲ್ಲಿ ವಿಲೀನಮದುವುದು ಪದ್ಧತಿ ಆದರೆ ಇದಕ್ಕೆ ವಿರುದ್ಧವಾಗಿ ಲಾಭಾದಲ್ಲಿರುವಾ ವಿಜಯ ಬ್ಯಾಂಕ್ ಅನ್ನು ನಷ್ಟ ದಲ್ಲಿರುವ ಬ್ಯಾಂಕ್ ಆಫ್ ಬರೋಡಾ ದ ಜೊತೆ ವಿಲೀನ ಗೊಳಿಸಲಾಗುತಿದೆ.
ವಿಜಯ ಬ್ಯಾಂಕಿನ ಬಂಡವಾಳದ ಸಮರ್ಪಕ ಅನುಪಾತ (capital adequecy ratio )ಶೇ13.56% ರಷ್ಟಿದ್ದು ಇಂತಹ ಉತ್ತಮ ಅನುಪಾತ ಬೇರೆ ಯಾವ ಬ್ಯಾಂಕಿಗೆ ಸಾಧಿಸಲಾಗಲಿಲ್ಲ.ಯಾವುದೇ ದೊಡ್ಡ ಬ್ಯಾಂಕುಗಳಿಗಿಂತ ಹೆಚ್ಚು ಸಿ. ಆರ್. ಏ . ಆರ್ ( CRAR) ಶೇ. 13.56 ಪ್ರತಿಶತ ಹಾಗು 3.81 ಪ್ರತಿಶತ ಸುಸ್ಥಿ ಸಾಲ (NPA) ಪ್ರಮಾಣ ಮಾತು ಆಸ್ತಿ ಹಿಂತಿರುಗುವಿಕೆ ಪ್ರಮಾಣ (Return on Asset) 0.30 ಪ್ರತಿಶತ ಇವೆಲ್ಲ ನಮ್ಮ ವಿಜಯ ಬ್ಯಾಂಕ್ ನ ವೈಶಿಷ್ಟಗಳು. ಅಷ್ಟೇ ಅಲ್ಲದೆ ಸರ್ಕಾರಿ ಸಾಮ್ಯದ ಬ್ಯಾಂಕುಗಳಲ್ಲಿ ಕೇವಲ ವಿಜಯ ಬ್ಯಾಂಕ್ ಮಾತ್ರ ಶೇ. ೧೨ ಪ್ರತಿಶಿತ ಲಾಭಾಂಶ ಅಥವಾ ಡಿವಿಡೆಂಡ್ ನ್ನು ಘೋಷಿಸಿದೆ.
ಭಾರತದಲ್ಲಿ ಬ್ಯಾಂಕ್ ವಿಲೀನಗಳ ಇತಿಹಾಸ ತೆಗೆದುಕೊಂಡರೆ 1993 ರಲ್ಲಿ ನ್ಯೂ ಬ್ಯಾಂಕ್ ಆಫ್ ಇಂಡಿಯಾದ ವಿಲೀನ ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೊತೆ ಆದ ನಂತರ ಅದು 96 ಕೋಟಿಗಳ ನಷ್ಟವನ್ನು ಮೊದಲಬಾರಿಗೆ ಕಂಡಿತು. ಇದೇ ತರಹದ ನಷ್ಟ ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ , ಗ್ಲೋಬಲ್ ಟ್ರಸ್ಟ್ ಬ್ಯಾಂಕ್ ವಿಲೀನದ ನಂತರ ಕಂಡಿತು. ಇತೀಚೆಗಷ್ಟೇ ಆದ ಭಾರತೀಯ ಸ್ಟೇಟ್ ಬ್ಯಾಂಕುಗಳ ವಿಲೀನದಿಂದ ಅದು 6547.45 ಕೋಟಿ ನಿವ್ವಳ ನಷ್ಟವನ್ನು ಮಾರ್ಚ್ 31, 2018 ಕ್ಕೆ ದಾಖಲಿಸಿತು. ಇವೆಲ್ಲ ನಿದರ್ಶನಗಳು ಬ್ಯಾಂಕ್ ವಿಲೀನದಿಂದ ಯಾವುದೇ ಲಾಭವಾಗುವುದಿಲ್ಲ ಎಂದು ತೋರಿಸುತ್ತವೆ.
ರೈತರಿಂದಲೇ ಸ್ಥಾಪಿತವಾದ ವಿಜಯ ಬ್ಯಾಂಕ್ ನ ೨೨೦೦ ಶಾಖೆಗಳಲ್ಲಿ ಅರ್ಧದಷ್ಟು ಶಾಖೆಗಳು ಗ್ರಾಮೀಣ ಹಾಗು ತಾಲೂಕುಮಟ್ಟದಲ್ಲಿವೆ. ಸಮಾಜದ ಎಲ್ಲ ವರ್ಗದ ಗ್ರಾಹಕರಿಗೆ ಸೇವೆ ನೀಡಿ, ಈ ಮಣ್ಣಿನ ಬೇರು ಆಳವಾಗಿ ಬೆರೆತು ಹೋಗಿದೆ. ಬೇರೆ ಬೇರೆ ಸಂಸ್ಕೃತಿ, ಸ್ಥಳಗಳ ಬ್ಯಾಂಕುಗಳನ್ನು ವಿಲೀನಗೊಳಿಸುವುದರಿಂದ ವಹಿವಾಟು ಹಾಗು ಲಾಭದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಯಾವುದೇ ಸಂಶಯವಿಲ್ಲ.
ವಿಲೀನದ ನಂತರ ಅನೇಕ ಶಾಖೆಗಳನ್ನು ಮುಚ್ಚಲಾಗುತದೆ. ಇದು ಸ್ಟೇಟ್ ಬ್ಯಾಂಕುಗಳ ಸಮಯದಲ್ಲೂ ಆಯಿತು. ಈಗಾಗಲೇ ಸ್ಟೇಟ್ ಬ್ಯಾಂಕ್ ನ 2000 ಶಾಖೆಗಳನ್ನು ಮುಚ್ಚಲಾಗಿದೆ. ಇದರಿಂದ ರೈತರು, ಸಣ್ಣ ವ್ಯಾಪಾರಿಗಳು ಹಾಗು ಸಮಾಜದ ದುರ್ಬಲ ವರ್ಗದವರಿಗೆ ತುಂಬ ಅನಾನುಕೂಲಗಳಾಗುತ್ತವೆ
ಹಣಕಾಸು ಸಚಿವಾಲಯದ ಆದೇಶದಂತೆ ಮೂರು ಬ್ಯಾಂಕುಗಳು ವಿಲೀನದ ಸುತೋಳೆಯನ್ನು ಹೊರಡಿಸಿವೆ. ಆದರೆ ಬ್ಯಾಂಕುಗಳ ಸ್ವಾಧೀನ ಕಾಯ್ದೆ 1969/1980 ರ ಪ್ರಕಾರ ಬ್ಯಾಂಕಿನ ಆಡಳಿತ ಕಾರ್ಯಮಂಡಳಿಯಲ್ಲಿ ಕಾರ್ಮಿಕ/ ಅಧಿಕಾರಿ ನಿರ್ದೇಶಕರ ನೇಮಕವಾಗದೇ ಸುಮಾರು ಸಮಯವಾಗಿದೆ. ಆಶ್ಚರ್ಯವೆಂದರೆ ಮೂರು ಬ್ಯಾಂಕಿನ ಆಡಳಿತ ಮಂಡಳಿಗಳು ಒಂದೇ ದಿನ ಅಂದರೆ ಜನವರಿ 2, 2019 ಕ್ಕೆ ಸೇರಿ ಷೇರು ಮೌಲ್ಯಾಂಕನ ಮಾಡಿದ್ದಾವೆ ಹಾಗು ಕೆಲವೇ ಘಂಟೆಗಳಲ್ಲಿ ಮಂತ್ರಿಮಂಡಲದ ಒಪ್ಪಿಗೆ ಕೊಟ್ಟು ಗೆಜೆಟೆಡ್ ನೋಟಿಫಿಕೇಶನ್ ಹೊರಡಿಸಿದೆ ಹಾಗು ಈ ನೋಟಿಫಿಕೇಶನ್ ನಲ್ಲಿ ಹಣಕಾಸು ಮಂತ್ರಿಗಳು ತಮ್ಮ 17 ಸೆಪ್ಟೆಂಬರ್ ಪ್ರಕಟಣೆಯಲ್ಲಿ ಹೇಳಿದಂತೆ ಮೂರು ಬ್ಯಾಂಕುಗಳ ವಿಲಯವಾಗಿ ಹೊಸ ಹೆಸರು ಇಡಲಾಗುತದೆ ಮತ್ತು ಮೂರು ಬ್ಯಾಂಕುಗಳು ತನ್ನ ಸ್ವಂತ ಅಸ್ಥಿತ್ವ ವನ್ನು ಉಳಿಸಿಕೊಳ್ಳತ್ತೆ ಎಂಬ ಹೇಳಿಕೆ ಮಾಯವಾಗಿದೆ.
ಈಗಿನ ಬ್ಯಾಂಕಿಂಗ್ ಕ್ಷೇತ್ರದ ಜ್ವಲಂತ ಸಮಸ್ಸೆ ಇರುವುದೇ ಸುಸ್ಥಿ ಸಾಲಗಳು ಹಾಗು ಅದರಿಂದ ನಷ್ಟ ಅನುಭವಿಸುತಿರುವ ಬ್ಯಾಂಕುಗಳು. ಉದ್ದೇಶಪೂರ್ವಕ ಸುಸ್ತಿದಾರರ ಪಟ್ಟಿ ಪ್ರಕಟಿಸುವಂತೆ ನಾವು ಅನೇಕ ಬರಿ ಮಡಿದ ಮನವಿಗಳನ್ನು ಭಾರತೀಯ ರಿಸೆರ್ವ್ ಬ್ಯಾಂಕ್ ಗಮನಿಸಲಿಲ್ಲ ಅಥವಾ ಕಿವಿಗೊಡಲಿಲ್ಲ. ಇಂಥಹುದರಲ್ಲಿ ವಿಲೀನ ಪ್ರಕ್ರಿಯೆ ಎಂದರೆ ಬ್ಯಾಂಕುಗಳಿಗೆ ತಮ್ಮ ಆಡಳಿತ ಸುಧಾರಿಸಿಕೊಳ್ಳುವುದರಲ್ಲೇ ಸಮಯ ಕಳೆದುಹೋಗತ್ತೆ. ಬಾಕಿ ಯಾವುದೇ ಚಟುವಟಿಕೆಗಳಿಲ್ಲದೆ ಬರೀ ವಿಲೀನದ ನಂತರದ ಒಟ್ಟುಗೂಡಿಕೆಯಲ್ಲಿ ಕಳೆಯುವುದು ಬ್ಯಾಂಕುಗಳಿಗೆ ದೊಡ್ಡ ಪೆಟ್ಟು ಹಾಗು ನಷ್ಟವನ್ನು ಹಿಗ್ಗಿಸುತದೆ. ಇದು ವಿಲೀನದಿಂದ ಆಗುವ ಯಾವುದೇ ಲಾಭಕ್ಕಿಂತ ಹೆಚ್ಚಿನದು.
ಷೇರುಗಳ ಮೌಲ್ಯಮಾಪನ ಮಾಡಿದ ಸಂಸ್ಥೆ ಕೂಡ ನೋಂದಾವಣಿಯಾಗದಿರುವುದು ಮತ್ತು ಅವೈಜ್ಞಾನಿಕ ಮೌಲ್ಯಾಂಕನ ಈ ಷೇರು ಮೌಲ್ಯಾಂಕನವನ್ನೇ ಅನಧಿಕೃತಗೊಳಿಸುತದೆ.
ನಮ್ಮ ಮಾತೃಸಂಸ್ಥೆಯಾದ ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ದೆಹಲಿ ಹೈಕೋರ್ಟಿನಲ್ಲಿ ದಿನಾಂಕ 11.10.2018 ಕ್ಕೆ ರಿಟ್ ಅರ್ಜಿ ಸಲ್ಲಿಸಿರುತ್ತದೆ. ಇದಲ್ಲದೆ ದಿನಾಂಕ 14.01.2019 ಕ್ಕೆ ಗಜೆಟ್ ಆದೇಶವನ್ನು ಪುನರ್ಪರಿಶೀಲಿಸುವಂತೆ ಮನವಿ ಮಾಡಿದ್ದೇವೆ. ಈ ಎರಡು ಪ್ರಕರಣಗಳ ವಿಚಾರಣೆ 13.02.2019 ಕ್ಕೆ ಇರುತ್ತದೆ.
” ವಿಜಯ ಬ್ಯಾಂಕ್ ಉಳಿಸಿ ” ಹೋರಾಟ ಸಮಿತಿಯವರು ದಿನಾಂಕ 02.02.2019 ರಂದು ಮುಲ್ಕಿಯಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸುಮಾರು ೫೦೦೦ ಜನ ನಾಗರಿಕರು ಭಾಗವಹಿಸಿದ್ದರು. ಭಾಗವಹಿಸಿದ ಎಲ್ಲ ಸಾರ್ವಜನಿಕರು ಪಕ್ಷಬೇಧ ಮರೆತು, ವಿಜಯ ಬ್ಯಾಂಕಿನ ವಿಲೀನದ ವಿರುದ್ಧ ಧ್ವನಿಯೆತ್ತಿದರು.
ದೆಹಲಿಯಲ್ಲಿ ದಿನಾಂಕ 04-02-2019 ರಂದು ಅಖಿಲ ಭಾರತೀಯ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ ನಡೆಸಿದ ಮಹಾ ಮೋರ್ಚಾ ದಲ್ಲಿ ೨೦೦೦೦ ದಷ್ಟು ಅಧಿಕಾರಿಗಳು ಭಾಗವಹಿಸಿದ್ದರು. ಈ ವಿಲೀನವು ಗ್ರಾಹಕರು, ಸಾರ್ವಜನಿಕರು, ಬ್ಯಾಂಕಿನ ನೌಕರರ ಹಾಗೂ ದೇಶದ ಹಿತಕ್ಕೆ ಮಾರಕವಾಗಿದ್ದು ಇದರ ವಿರುದ್ಧ ಈ ಮಹಾ ಮೋರ್ಚಾ ವನ್ನು ಆಯೋಜಿಸಲಾಗಿದ್ದು ಎಲ್ಲರೂ ಒಕ್ಕೊರಲಿನಿಂದ ವಿಲೀನ ಪ್ರಕ್ರಿಯೆ ಯನ್ನು ವಿರೋಧಿಸಿದರು.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s