ಸರಕಾರದ ಮೇಲೆ ಒತ್ತಡ ತರಲು ಸಾವಿರಾರು ಅರಣ್ಯವಾಸಿಗಳು ಫೆ . 12 ರ ಮುಂಜಾನೆ ಬೆಂಗಳೂರು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ , ಬೆಂಗಳೂರು ವಿಧಾನಸೌಧ ಚಲೋ

ದಿನಾಂಕ : 9 – 2 – 2019 ರಂದು ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಜರುಗಿದ ಸುದ್ದಿ ಗೋಷ್ಠಿಯ ಅಂಶಗಳು ಬೆಂಗಳೂರು : ಜಿಲ್ಲಾ ಒಟ್ಟೂ ಭೌಗೋಳಿಕ ವಿಸ್ತೀರ್ಣ 10 . 571 ಚ . ಕಿಮೀ ಇದ್ದು , ಅದರಲ್ಲಿ ಸುಮಾರು 8 . 5೦೦ ಚ . ಕಿ . ಮೀ ಅರಣ್ಯ ಪ್ರದೇಶವಾಗಿರುವುದೆಂಬುದನ್ನು ಭೌಗೋಳಿಕವಾಗಿ ವಿಶ್ಲೇಷಿಸವಬಹುದಾಗಿದೆ . ಜಿಲ್ಲೆಯ ಒಟ್ಟೂ ಜನಸಂಖ್ಯೆ 14 ಲಕ್ಷ ಜನರು ವಾಸ್ತವ್ಯಕ್ಕಾಗಿ ಸಾಗುವಳಿಗಾಗಿ ಅರಣ್ಯ ಪ್ರದೇಶ ಅವಲಂಬಿತವಾಗಿರುವುದು ಅನಿವಾರ್ಯವಾಗಿದೆ . ಜಿಲ್ಲೆಯಲ್ಲಿ ಒಟ್ಟೂ ಅಜಮಾಸ 1 ಲಕ್ಷ ಕುಟುಂಬ ಅರಣ್ಯವಾಸಿಗಳು ಅರಣ್ಯ ಭೂಮಿಯ ಮೇಲೆ ಅವಲಂಬಿತವಾಗಿದ್ದಾರೆ . ಜಿಲ್ಲೆಯ ಒಟ್ಟೂ ಜನಸಂಖ್ಯೆಯಲ್ಲಿ 1 / 3 ಅಂಶ ಜನರು ಅರಣ್ಯ ವಾಸಿಗಳಾಗಿದ್ದಾರೆ . ಅರಣ್ಯವಾಸಿಗಳಿಗೆ ಸಾಗುವಳಿ ಹಕ್ಕು ಕೊಡುವ ದಿಶೆಯಲ್ಲಿ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ ಅರಣ್ಯ ಹಕ್ಕು ಕಾಯಿದೆ ( Schedule Tribes and other Traditional Forest Dwellers ( Forest Rights ) Act ) 2008 ಕೆ ಜಾರಿಗೆ ಬಂದು , ಅದರಂತೆ ನಿಯಮಾವಳಿಗಳು 2008 ರಲ್ಲಿ ರೂಪಿತಗೊಂಡು ನಂತರ ಕಾಯ್ದೆಗೆ ತಿದ್ದುಪಡಿ ಸೆಪ್ಟೆಂಬರ್‌ 6 , 20012 ರಂದು ಆಗಿರುವುದು .

ಶೇ . 74 , 43 ರಷ್ಟು ತಿರಸ್ಕಾರ : ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಗ್ರಾಮೀಣ ಭಾಗದ ಅತಿಕ್ರಮಣದಾರರು ವಾಸ್ತವ್ಯ ಹಾಗೂ ಸಾಗುವಳಗಾಗಿ ಸಲ್ಲಿಸಿರುವ ಒಟ್ಟೂ ಅರ್ಜಿ 87 . 625 ಅವುಗಳಲ್ಲ 65 . 220 ಅರ್ಜಿಗಳು ತಿರಸ್ತಾರವಾಗಿದ್ದು ತಿರಸ್ಕಾರವಾಗಿರುವ ಅರ್ಜಿಗಳು ಶೇ . 74 , 43 ರಷ್ಟು ಆಗಿವೆ . ಹಕ್ಕುಪತ್ರ ಶೇ . 3 . 25 : ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಜಿಲ್ಲೆಯಲ್ಲಿ ಬುಡಕಟ್ಟು 1331 , ಪಾರಂಪರಿಕ ಅರಣ್ಯವಾಸಿಗಳಗೆ 394 ಹಾಗೂ ಸಮುದಾಯ ಉದ್ದೇಶಕ್ಕೆ 1127 ಒಟ್ಟೂ 2852 ಹೀಗೆ ಶೇಕಡಾವಾರು ಬಂದಿರುವಂಥ ಗ್ರಾಮೀಣ ಭಾಗದ ಅರ್ಜಿಯಲ್ಲಿ ಶೇ . 3 . 25 ರಷ್ಟು ಮಾತ್ರ ಹಕ್ಕು ಪ್ರಾಪ್ತವಾಗಿದೆ . ಫೆಬ್ರವರಿ 12 , ಬೆಂಗಳೂರು ವಿಧಾನ ಸೌಧ ಚಲೋ : ಈ ದಿಶೆಯಲ್ಲಿ ಸರಕಾರದ ಮೇಲೆ ಒತ್ತಡ ತರಲು ಸಾವಿರಾರು ಅರಣ್ಯವಾಸಿಗಳು ಫೆ . 12 ರ ಮುಂಖಾನ ಬೆಂಗಳೂರು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ , ಬೆಂಗಳೂರು ವಿಧಾನಸೌಧ ಚಲೋ ಬೇಡಿಕೆಗಳು : 1 ) ಅರಣ್ಯ ಹಕ್ಕು ಕಾಯಿದೆಯಲ್ಲ ತಿರಸ್ಕರಿಸಿರುವ ಅರ್ಜಿಗಳನ್ನು ಪುನರ್‌ಪರಿಶೀಲಿಸಿ ಅರಣ್ಯವಾಸಿಗಳಿಗೆ ಹಕ್ಕನ್ನು ಒದಗಿಸುವುದು . 2 ) ಅರಣ್ಯ ವಾಸಿಗಳಿಗೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಹಕ್ಕನ್ನು ಪಡೆಯಲು ವಿಫಲಗೊಂಡವರಿಗೆ ಬದ ವ್ಯವಸ್ಥೆಗೆ ಆಗ್ರಹಿಸುವುದು . 3 ) ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಹಕ್ಕು ಪಡೆದಿರುವಂಥ ಅತಿಕ್ರಮಣದಾರರ ಕಂದಾಯ ಮತ್ತು ಅರಣ್ಯ ದಾಖಲೆಯಲ್ಲ ಹಕ್ಕನ್ನು ನಮೂದಿಸದೇ ಇರುವುದು . 4 ) ನಗರ ಅತಿಕ್ರಮಣಕ್ಕೆ ಸಂಬಂಧಿಸಿ ಅರಣ್ಯ ಅತಿಕ್ರಮಣದಾರರ ಅರ್ಜಿಯನ್ನು ಮಂಜೂರಿಗೆ ಶೀಘ್ರದಲ್ಲಿ ಒಳಪಡಿಸುವುದು , 5 ) ಅರಣ್ಯ ಹಕ್ಕು ಕಾಯಿದೆ ಅರ್ಜಿ ಮತ್ತು ಮೇಲ್ಮನವಿ ಮಂಜೂರಿ ಪ್ರಕ್ರಿಯೆಯಲ್ಲಿ ವ ವಿಚಾರಣೆಯಲ್ಲಿ ಇರುವಂಥ ಸಂದರ್ಭದಲ್ಲಿ ಕರ್ನಾಟಕ ಅರಣ್ಯ ಕಾಯಿದೆ ಕಲಂ : 64 ಎ ಅಡಿಯಲ್ಲಿ ಒಕ್ಕಲೆಬ್ಬಿಸುವ ಪ್ರಕ್ರಿಯೆ ತಕ್ಷಣದಿಂದ ಸ್ಥಗಿತಗೊಳಿಸಲು ಅರಣ್ಯಾಧಿಕಾರಿಗಳಿಗೆ ಆದೇಶಿಸುವುದು . ಲೋಕಸಭಾ ಚುನಾವಣಾ ಮತದಾನ ಬಹಿಷ್ಕಾರ : ಜಿಲ್ಲೆಯ ಒಂದು ಮೂರರಷ್ಟು ಜನಸಂಖ್ಯೆಯ ಅರಣ್ಯ ವಾಸಿಗಳ ಅರಣ್ಯ ಭೂಮಿ ಹಕ್ಕಿನ ಸಮಸ್ಯೆ ಬಗೆಹರಿಸಲು ರಾಜ್ಯ ಮತ್ತು ಕೇಂದ್ರ ಸರಕಾರ ವಿಫಲವಾದಲ್ಲಿ ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕರಿಸಲು ತೀರ್ಮಾನಿಸಿದ್ದೇವೆ . ಈ ದಿಶೆಯಲ್ಲಿ ಸರಕಾರದ ಮೇಲೆ ಒತ್ತಡ ತರಲು ಸಾವಿರಾರು ಅರಣ್ಯವಾಸಿಗಳು ಫೆ . 12 ರ ಮುಂಜಾನೆ ಬೆಂಗಳೂರು ವಿಧಾನಸೌಧ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ , ಫೆ 12 , 1 ಘಂಟೆಗೆ ಕಬ್ಬನ್ ಪಾರ್ಕನಲ್ಲಿರುವ ನೌಕರ ಭವನದಲ್ಲಿ ಉತ್ತರಕನ್ನಡ ಜಿಲ್ಲಾ ಅರಣ್ಯ ವಾಸಿಗಳ ಸಭೆ ಜರುಗಿಸಿ ಜಿಲ್ಲೆಯ ಶಾಸಕರರನ್ನು ಸಂಬಂಧಿಸಿದ ಸಚಿವರನ್ನು ಹಾಗೂ ಕಾನೂನುತಜ್ಞರೊಂದಿಗೆ ಸಮಾಲೋಚನೆ ಸಭೆ ಜರುಗಿಸಲಾಗುವುದು.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s