MUMUS® ಬೆಂಗಳೂರು ಪ್ರವೇಶಿಸಿದ ಜಾಗತಿಕ ಫ್ಯಾಶನ್ ಮತ್ತು ಜೀವನಶೈಲಿಯ ಬ್ರಾಂಡ್ ಮುಮುಸೊ ಮಳಿಗೆಯನ್ನು ಉದ್ಘಾಟಿಸಿದ ಖ್ಯಾತ ನಟಿ ಶ್ರದ್ಧಾ ದಾಸ್

” ಬೆಂಗಳೂರಿನ ಕಮರ್ಷಿಯಲ್ ರಸ್ತೆಯ ಮೊದಲ ಪ್ರತ್ಯೇಕ ಮಳಿಗೆಯೊಂದಿಗೆ ದಕ್ಷಿಣ ಭಾರತವನ್ನು ಪ್ರವೇಶಿಸಿದ ಜಾಗತಿಕವಾಗಿ ಅತ್ಯಂತ ನಂಬಿಕಾರ್ಹ , ಗೌರವ ಹೊಂದಿರುವ , ಕೈಗೆಟುಕುವ ಬೆಲೆಯ ಫ್ಯಾಶನ್ ಮತ್ತು ಲೈಫ್‌ಸ್ಟೈಲ್ ಬ್ರಾಂಡ್ ಮುಮುಸೊ. ”

ಬೆಂಗಳೂರು , ಫೆಬ್ರವರಿ 9 , 2019 : ಆರೋಗ್ಯ ಮತ್ತು ಸೌಂದರ್ಯ , ಫ್ಯಾಸನ್ ಹೋಮ್ ಅಕ್ಸಸರಿಗಳಿಂದ ಉಡುಪಿನ ಆಕ್ಸಸರಿಗಳು ಡಿಜಿಟಲ್ ಉತ್ಪನ್ನಗಳು , ಸ್ಟೇಷನರಿಗಳು , ಸಣ್ಣ ಎಲೆಕ್ಟ್ರಾನಿಕ್ ವಸ್ತುಗಳು ಮತ್ತು ಜೀವನಶೈಲಿ ಉತ್ಪನ್ನಗಳಿಗೆ ಜಾಗತಿಕವಾಗಿ ಅತ್ಯಂತ ನಂಬಿಕಾರ್ಹ , ಗೌರವ ಹೊಂದಿರುವ , ಕೈಗೆಟುಕುವ ಬೆಲೆಯ ಮತ್ತು ಉನ್ನತ ಗುಣಮಟ್ಟದ ಫ್ಯಾಶನ್ ಮತ್ತು ಲೈಫ್‌ಸ್ಟೈಲ್ ಬ್ರಾಂಡ್ ಮುಮುಸೊ ಬೆಂಗಳೂರಿನ ಕಮರ್ಷಿಯಲ್ ರಸ್ತೆಯ ಮೊದಲ ಪ್ರತ್ಯೇಕ ಮಳಿಗೆಯೊಂದಿಗೆ ದಕ್ಷಿಣ ಭಾರತವನ್ನು ಪ್ರವೇಶಿಸಿದೆ . ಮುಮುಸೋ ಇಂಡಿಯಾದ ಮಾರುಕಟ್ಟೆ ಮುಖ್ಯಸ್ಥರಾದ ಅನಿರ್ಬನ್ ಕುಂಡು ಅವರು ಮಾದ್ಯಮಗಳಿಗೆ ವಿವರಗಳನ್ನು ನೀಡಿದರು . ಮಳಿಗೆಯನ್ನು ಉದ್ಘಾಟಿಸಲು ಖ್ಯಾತ ನಟಿ ಶ್ರದ್ಧಾ ದಾಸ್ ಅವರು ಹಾಜರಿದ್ದರು .

30ಕ್ಕೂ ಹೆಚ್ಚಿನ ದೇಶಗಳಲ್ಲಿ ಹಾಜರಿ ಹೊಂದಿರುವ ಈ ಬ್ರಾಂಡ್ ಮುಮುಸೊ 2022ರ ಹೊತ್ತಿಗೆ 300ಕ್ಕೂ ಹೆಚ್ಚಿನ ಮಳಿಗೆಗಳನ್ನು ಆರಂಭಿಸುವ ಯೋಜನೆಯೊಂದಿಗೆ ಭಾರತೀಯ ಮಾರುಕಟ್ಟೆ ಪ್ರವೇಶಿಸಿದೆ . ಈ ಕಂಪನಿ ಸ್ವಾಮ್ಯದ ಮತ್ತು ಫ್ರಾಂಚೈಸಿ ಮಳಿಗೆಗಳಲ್ಲಿ ಸರಾಸರಿ 80 ಲಕ್ಷದಿಂದ 1 . 2 ಕೋಟಿ ರೂ . ವೆಚ್ಚ ಮಾಡಲಾಗುವುದು . ಮುಂಬೈ , ದಿಲ್ಲಿ , ಚೆನ್ನೈ , ಬೆಂಗಳೂರು , ಹೈದರಾಬಾದ್ , ಕೋಲ್ಕತಾ , ಪುಣೆ , ಗೋವಾ , ಜೈಪುರ , ಇಂದೋರ್ , ಸೂರತ್ ಮುಂತಾದ ಕಡೆಗಳಲ್ಲಿ ಮಳಿಗೆಗಳನ್ನು ಆರಂಭಿಸಲಿರುವ ಸಂಸ್ಥೆ ಆಗ್ನೆಯ ಏಷ್ಯಾದ ದೇಶಗಳಾದ ಮಲೇಷಿಯ , ಸಿಂಗಾಪುರ್ , ಚೀನಾ , ಚೀನಾ , ಇಂಡೋನೇಷ್ಯಾ ಮತ್ತು ಕೊರಿಯಾಗಳಿಂದ ಉತ್ಪನ್ನಗಳನ್ನು ಪಡೆಯುತ್ತಿದೆ . ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕೋಲ್ಕತಾದಲ್ಲಿ ಮೊದಲ ಮಳಿಗೆಯೊಂದಿಗೆ ಮುಮುಖೋ ಭಾರತ ಪ್ರವೇಶಿಸಿತ್ತು .

ಈ ಸಂದರ್ಭದಲ್ಲಿ ಮುಮುಸೊ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರಾದ ಶೌನಕ್ ಅಗರ್‌ವಾಲ್ ಮಾತನಾಡಿ , “ ಭಾರತದಲ್ಲಿ ಮಳಿಗೆಗಳ ಜೊತೆಗೆ ಇ – ವಾಣಿಜ್ಯ ಕ್ಷೇತ್ರಕ್ಕೂ ಸಂಸ್ಥೆ ಪ್ರವೇಶಿಸುತ್ತಿದೆ . ಭಾರತದಲ್ಲಿ ಇತ್ತೀಚೆಗೆ ಆನ್‌ಲೈನ್ ಖರೀದಿಗೆ ಭಾರೀ ಹೆಚ್ಚಳದ ಚಾಲನೆ ಕಂಡು ಬಂದಿದೆ , ರಿಟೇಲ್ ಕೇತ್ರದಲ್ಲಿ ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದ್ದು ಅಲ್ಪಕಾಲದಲ್ಲಿ ಭಾರಿ ಬೆಳವಣಿಗೆಯನ್ನು ನಾವು ನಿರೀಕ್ಷಿಸುತ್ತಿದ್ದೇವೆ . ಅಂತಾರಾಷ್ಟ್ರೀಯ ಬ್ಯಾಂಡ್ ಆಗಿ ಮೌಲ್ಯಯುತ ಬೆಲೆಗಳೊಂದಿಗೆ ಗ್ರಾಹಕ ಸಮೃದ್ದ ಅನುಭವವನ್ನು ಉತ್ಪನ್ನಗಳು ಹೆಚ್ಚಿಸಲಿವೆ ‘ ಎಂದರು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s