ಉತ್ತರ ವಿಭಾಗ 3 ಜನ ಸರಗಳ್ಳತನ ಆರೋಪಿಗಳ ಬಂಧನ , 9 . 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರವಾಹನ ವಶ .

ಬೆಂಗಳೂರು ನಗರ , ದಿನಾಂಕ :

11 . 02 . 2019 ,

ಉತ್ತರ ವಿಭಾಗ 3 ಜನ ಸರಗಳ್ಳತನ ಆರೋಪಿಗಳ ಬಂಧನ , 9 . 5 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ದ್ವಿಚಕ್ರವಾಹನ ವಶ . ಪಿರಾದುದಾರರಾದ ಶ್ರೀಮತಿ ಶಂಕರಿ . ಎಂ ರವರು ದಿನಾಂಕ 22 – 01 – 2019 ರಂದು ಬೆಳಗಿನ ಜಾವ 6 – 05 ಗಂಟೆಯಲ್ಲಿ ಹೆಬ್ಬಾಳ ಪೊಲೀಸ್ ಠಾಣಾ ಸರಹದ್ದಿನ ಸುಲ್ತಾನ್‌ಪಾಳ್ಯ ಮುಖ್ಯರಸ್ತೆಯಲ್ಲಿ ಆಟೋಗಾಗಿ ಕಾಯುತ್ತಿದ್ದಾಗ ಎರಡು ದ್ವಿಚಕ್ರ ವಾಹನಗಳಲ್ಲಿ ಬಂದ ಅಪರಿಚಿತ ಆಸಾಮಿಗಳು ಪಿರಾದುದಾರರಿಗೆ ಚಾಕು ತೋರಿಸಿ ಅವರ ಕತ್ತಿನಲ್ಲಿದ್ದ ಚಿನ್ನದ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದು , ಈ ಸಂಬಂಧ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಸರಗಳ್ಳತನ ಪ್ರಕರಣ ದಾಖಲಾಗಿರುತ್ತದೆ . ಈ ಪ್ರಕರಣದ ಆರೋಪಿಗಳಾದ 1 ) ಸೈಫ್ ಖಾನ್ ( @ ಸಮ್ಮು @ ಬಶೀರ್ , 28 ವರ್ಷ . ನಾಗಾವರ ಬೆಂಗಳೂರು 2 ) ಸಬ್ಬರ್‌ ಅಹಮ್ಮದ್ @ ಮಹಮ್ಮದ್ ಆಲಿ @ ನೀಗೋ , 29 ವರ್ಷ ಹೆಗ್ಗಡೆ ನಗರ , ಬೆಂಗಳೂರು . 3 ) ನಯಾಬ್ ರಸೂಲ್ @ ನಯಾಬ್ . 29 ವರ್ಷ , ಗೋವಿಂದಪುರ , ಬೆಂಗಳೂರು ರವರುಗಳನ್ನು ದಸ್ತಗಿರಿ ಮಾಡಿ ಆರೋಪಿಗಳ ನೀಡಿದ ಮಾಹಿತಿ ಮೇರೆಗೆ ಸುಮಾರು 9 . 5 ಲಕ್ಷ ರೂ . ಬೆಲೆ ಬಾಳುವ 175 ಗ್ರಾಂ ಚಿನ್ನಾಭರಣ ಮತ್ತು 4 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಹೆಬ್ಬಾಳ ಪೊಲೀಸರು ಯಶಸ್ವಿಯಾಗಿರುತ್ತಾರೆ . ಆರೋಪಿಗಳ ಬಂಧನದಿಂದ ಹೆಬ್ಬಾಳ ಪೊಲೀಸ್ ಠಾಣೆಯ 2 – ಸರಗಳ್ಳತನ , ಸುಲಿಗೆ , 2 – ಹಗಲು & ರಾತ್ರಿ ಕನ್ನಾ ಕಳವು , 2 – ದ್ವಿಚಕ್ರವಾಹನ ಕಳವು , ನಂದಿನಿಲೇಔಟ್ ಪೊಲೀಸ್ ಠಾಣೆಯ – I ಸುಲಿಗೆ , ಜಾಲಹಳ್ಳಿ ಪೊಲೀಸ್ ಠಾಣೆಯ ಸರಗಳ್ಳತನ , ಹೆಚ್ . ಎ . ಎಲ್ . ಪೊಲೀಸ್ ಠಾಣೆಯ – ಸುಲಿಗೆ ಪ್ರಕರಣ ಪತ್ತೆಯಾಗಿರುತ್ತವೆ . ಈ ಪ್ರಕರಣದಲ್ಲಿ ಯಶವಂತಪುರ ಉಪ ವಿಭಾಗದ ಎಸಿಪಿ , ಶ್ರೀ ಎಂ . ಶಿವಶಂಕರ್ ರವರ ಮಾರ್ಗದರ್ಶನದಲ್ಲಿ ಹೆಬ್ಬಾಳ ಪೊಲೀಸ್ ಠಾಣೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ಆರ್ . ಎಸ್ . ಟಿ . ಬಾನ್ , ಪಿಎಸ್‌ಐ ಶ್ರೀ ವಿ . ಎಂ . ರಾಜೇಶ್ , ಹೆಚ್ . ಸಿ . 5714 ಶ್ರೀ ರವಿಶಂಕರ್ , ಹೆಚ್ . ಸಿ . 6609 ಶ್ರೀ ಆನಂದ್ ಹೆಚ್ . ಸಿ . 7376 ಶ್ರೀ ಮಹಮ್ಮದ್ ಪಯಾಜ್ ಪಾಷ , ಹೆಚ್ . ಸಿ . 7379 ಶ್ರೀ ಖಾಲೀದ್ ಅಹಮ್ಮದ್ , ಹೆಚ್ . ಸಿ . 7313 ಶ್ರೀ ಕರೇತಿಮ್ಮಯ್ಯ ಪಿ , ಹೆಚ್ . ಸಿ . 9072 ಶ್ರೀ ಅನಂತರಾಜು , ಪಿ . ಸಿ . 11014 ಶ್ರೀ ನಂದೀಶ್ , ಪಿ . ಸಿ . 11892 ಶ್ರೀ ರಾಜಶೇಖರಯ್ಯ , ಪಿ . ಸಿ . 7123 ಶ್ರೀ ರವಿಕುಮಾರ್ , ಪಿ . ಸಿ . 7299 ಶ್ರೀ ಮಹೇಶ್ ಪಿ . ಸಿ , 11564 ಶ್ರೀ ಚಂದ್ರಶೇಖರ್ ಮ . ಪಿ . ಸಿ . 12274 ಕು | ವನಿತಾ ನಾಯಕ್ ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s