“ಬ್ಯಾಂಬೂ ಕಾಂಪೋಸಿಟ್ಸ್” ಬಿದಿರಿನ ಸಂಯೋಜನೆಗಳ ಕುರಿತಾದ ಅಂತಾರಾಷ್ಟ್ರೀಯ ಸಮಾವೇಶ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಬೆಂಗಳೂರಿನ ಐಪಿಐಆರ್‌ಟಿಐ ಆವರಣದಲ್ಲಿ ಉದ್ಘಾಟಿಸಲಾಯಿತು

ಫೆ . 11 2019 , ಬೆಂಗಳೂರು : ಇಂಡಿಯನ್ ಪ್ಲೇವುಡ್ ಇಂಡಸೀಸ್ ರಿಸರ್ಚ್ ಆ್ಯಂಡ್ ಟ್ರೇನಿಂಗ್ ಇನ್‌ಸ್ಟಿಟ್ಯೂಟ್ ( ಐಪಿಐಆರ್‌ಟಿಐ ) ಸಂಸ್ಥೆಯು ಫೆ . 09ರಿಂದ ಫೆ . 12ರವರೆಗೆ “ ಬ್ಯಾಂಬೂ ಕಾಂಪೋಸಿಟ್ಸ್ ‘ ಬಿದಿರಿನ ಸಂಯೋಜನೆಗಳ ಕುರಿತಾಗಿ ಅಂತಾರಾಷ್ಟ್ರೀಯ ಸಮಾವೇಶ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಆಯೋಜಿಸಿದೆ . ಭಾರತ ಸರಕಾರದ ಕೇಂದ್ರ ಅರಣ್ಯ ಪರಿಸರ ಮತ್ತು ಹವಾಮಾನ ವೈಪರೀತ್ಯ ( ಎಮ್ಒಇಎಫ್ & ಸಿಸಿ ) ಇಲಾಖೆ ಮತ್ತು ಐಪಿಐಆರ್‌ಟಿಐ ಜಂಟಿ ಆತಿಥ್ಯದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಜಗತ್ತಿನಾದ್ಯಂತ್ಯ ಬ್ಯಾಂಬೂ ಸರಕುಗಳ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ಸರ್ವಶ್ರೇಷ್ಠ ಪರಿಣತರು ಪಾಲ್ಗೊಂಡು , ಈ ಕ್ಷೇತ್ರದ ಅಭಿವೃದ್ಧಿ ಕಡೆಗೆ ಚರ್ಚಿಸಲಿದ್ದಾರೆ . ಅಲ್ಲದೆ ಬ್ಯಾಂಬೂ ಉದ್ಯಮದಲ್ಲಿ ಇಂದು ವಿಶ್ವದಾದ್ಯಂತ ಆಗಿರುವ ಅತ್ಯಾಧುನಿಕ ತಂತ್ರಜ್ಞಾನಗಳ ಅಭಿವೃದ್ಧಿಯನ್ನು ಜನಸಾಮಾನ್ಯರ ಎದುರು ಪ್ರದರ್ಶಿಸಲಿವೆ .

ಕಾರ್ಯಕ್ರಮದ ಮೊದಲ ದಿನದಂದು ನಾರ್ತ್ ಈಸ್ಟರ್ನ್ ವಲಯದ ಅಭಿವೃದ್ಧಿ ಸಚಿವಾಲದ ಕಾರ್ಯದರ್ಶಿ , ಐಎಎಸ್ ಶ್ರೀ ನವೀನ್ ವರ್ಮಾ ಅವರು ಮಾತನಾಡಿ , “ ಬಿದಿರು ಕೈಗಾರಿಕಾ ಕ್ಷೇತ್ರದ ಕುರಿತಾಗಿ ಬೆಳಕು ಚೆಲ್ಲುವ ಕಡೆಗೆ ಈ ಕಾರ್ಯಕ್ರಮ ಅತ್ಯಂತ ಅಗತ್ಯದ ಹಾಗೂ ಮಹತ್ವದ ಹೆಜ್ಜೆಯಾಗಿದೆ . ಈ ಮೂಲಕ ದೇಶದ ಹಾಗೂ ಜಗತ್ತಿನಾದ್ಯಂತ ಬಿದಿರಿನ ಕೈಗಾರಿಕೋದ್ಯಮದ ಅಭಿವೃದ್ಧಿ ಕಡೆಗೆ ಕೈಗೊಳ್ಳಲಾಗಿರುವ ಅಭೂತಪೂರ್ವ ಪ್ರಯತ್ನವಾಗಿದೆ . ” ಎಂದು ಹೇಳಿದರು . ಈ ಸಮಾವೇಶ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮದ ಮೂಲಕ ಬಿದಿರಿನ ಕೈಗಾರಿಕೋದ್ಯಮದ ಅಭಿವೃದ್ಧಿ ಕಡೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ . ಸ್ಥಳೀಯ , ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಬಿದಿರು ಕೈಗಾರಿಕೋದ್ಯಮದಲ್ಲಿ ಉತ್ತಮ ಹೊಂದಾಣಿಕೆ ಗಳಿಸುವುದು ಈ ಕಾರ್ಯಕ್ರಮದ ಬೆಂಬಲವಾಗಿ ನಿಂತಿರುವ ಬ್ಯಾಂಬೂ ಕಮಿಷನ್ ಆಫ್ ಇಂಡಿಯಾದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ . ಈ ಸಂದರ್ಭದಲ್ಲಿ ಕಾರ್ಯಕ್ರಮ ಆಯೋಜನಾ ಸಮಿತಿಯ ಮುಖ್ಯಸ್ಥ ಹಾಗೂ ಐಪಿಐಆರ್‌ಡಿಐನ ನಿರ್ದೇಶಕ ಡಾ . ಬಿಎನ್ ಮೊಹಾಂತಿ ಅವರು ಮಾತನಾಡಿ , “ ಈ ಸಮಾವೇಶ ಮತ್ತು ವಸ್ತು ಪ್ರದರ್ಶನ ಕಾರ್ಯಕ್ರಮವು ಬಿದಿರಿನ ಕೈಗಾರಿಕೋದ್ಯಮದಲ್ಲಿ ಆಗಿರುವ ಆವಿಷ್ಕಾರಗಳು ಮತ್ತು ತಯಾರಿಕಾ ತಂತ್ರಜ್ಞಾನಗಳ ಅಭಿವೃದ್ಧಿಯಿಂದ ಹೊರತರಲಾದ ಬಿದಿರಿನ ಕಲಾಕೃತಿಗಳು , ಬಿದಿರಿನ ಆಭರಣಗಳು ಹಾಗೂ ಬಿದಿರಿನ ನಿರ್ಮಾಣ ವಿನ್ಯಾಸಗಳ ಕಡೆಗೆ ಒಳನೋಟವನ್ನು ಒದಗಿಸಿಕೊಟ್ಟಿದೆ . ಐಪಿಐಆರ್‌ಟಿಐನ ಜಂಟಿ ನಿರ್ದೇಶಕರಾದ ಡಾ . ಮನೋಜ್ ದುಬೇ ಸಮಾವೇಶದ ಹಿನ್ನೆಲೆ ಒದಗಿಸಿದರೆ , ಮುಖ್ಯ ಅಥಿತಿಗಳಾದ ಕರ್ನಾಟಕದ ಮಾಜಿ ಪಿಸಿಸಿಎಫ್ & ಎಚ್ಓಎಫ್ಎಫ್ ಶ್ರೀ ಅವನಿ ವರ್ಮಾ , ಕರ್ನಾಟಕ ಸರಕಾರದ ಐಎಫ್ ಎಸ್ ಪಿಸಿಸಿಎಫ್ ( ಎಎಫ್ ಎಫ್ ) ಶ್ರೀ ಪುನತಿ ಶ್ರೀಧರ್ ಹಾಗೂ ನಿವೃತ್ತ ಐಎಫ್‌ಎಸ್ ಮಾಜಿ ಪಿಸಿಸಿಎಫ್ & ಎಚ್‌ಒಎಫ್ ಎಫ್ ಶ್ರೀ ಬಿ . ಕೆ ಸಿಂಗ್ ಸಮಾವೇಶದಲ್ಲಿ ಹಾಜರಿದ್ದ ಎಲ್ಲರೊಂದಿಗೂ ಬಿದಿರು ಕೈಗಾರಿಕೋದ್ಯಮ ಕುರಿತಾಗಿ ತಮ್ಮಲ್ಲಿನ ಅಮೂಲ್ಯವಾದ ವಿಚಾರಗಳನ್ನು ಹಂಚಿಕೊಂಡರು . ಈ ಕೆಳಗಿನ ವಿಷಯಗಳ ಕುರಿತಾಗಿ ಪ್ಯಾನೆಲ್ ಚರ್ಚೆಗಳು ನಡೆಯಲಿದ್ದು ವಿಚಾರಗಳ ಹಂಚಿಕೆಯಾಗಲಿದೆ . • ಬಿದಿರಿನ ಸರಕುಗಳ ಬಳಕೆ ಮತ್ತು ಅಭಿವೃದ್ಧಿಯನ್ನು ಪ್ರೋತ್ಸಾಹಿಸುವುದು . • ಈ ಕೈಗಾರಿಕೋದ್ಯಮದ ಅಭಿವೃದ್ಧಿಗಾಗಿ ಭಾರತದಾದ್ಯಂತ ಮತ್ತು ಭಾರತದಿಂದಾಚೆಗೆ ಉತ್ತಮ ಸಂಪರ್ಕ ಹೊಂದುವಂತೆ ಮಾಡುವುದು . ಈ ಮೂಲಕ ಸ್ಥಳೀಯ , ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಹೊಂದಾಣಿಕೆ ತರುವಂತೆ ಮಾಡುವುದು .

• ನ್ಯಾಷನಲ್ ಬ್ಯಾಂಬೂ ಮಿಷನ್ ಆಫ್ ಇಂಡಿಯಾದ ಕೈಗಾರೀಕರಣ ದೃಷ್ಟಿಯಿಂದ ಸಮಾವೇದಲ್ಲಿ ಕಂಡುಕೊಳ್ಳಲಾದ ಒಳನೋಟವನ್ನು ಕಾಪಾಡುವುದು . ಸಮಾವೇಶದಲ್ಲಿ ಮಾತನಾಡಿದ ಗಣ್ಯರು • ಡಾ . ಮಹಾರಾಜ್ ಕೆ . ಮೊಹಾಂತಿ – ಇಟಲಿಯ ರೋಮನ್ ಫೋರಮ್‌ನ ಅಧ್ಯಕ್ಷ . • ಶ್ರೀ ಸಿದ್ದಾಂಥ ದಾಸ್ – ಐಇಎಸ್ , ಡಿಜಿಎಫ್ & ಭಾರತ ಸರಕಾರದ ವಿಶೇಷ ಕಾರ್ಯದರ್ಶಿ , ಎಂಓಇಎಫ್ & ಸಿಸಿ . * ಶ್ರೀ ಸರುಣ್ ಕೆ , ಭನ್ಸಾಲ್ – ಐಇಎಸ್ ( ನಿವೃತ್ತ ) ಮಾಜಿಎಡಿಡಿಎಲ್ ಡಿಜಿಎಫ್ , ಭಾರತ . • ಪ್ರೊ . ಡಾ . ಎಮ್ ಅಲ್ ಅಮಿನ್ – ಪ್ರೊಫೆಸರ್ ಐಎಫ್‌ಇಎಸ್ , ಚಿತ್ತಗಾಂಗ್ ಯೂನಿವರ್ಸಿಟಿ , ಬಾಂಗ್ಲಾದೇಶ . • ಶ್ರೀಮತಿ ಮರಿಸ್ತೆಲಾ ಗಾವಾ – ಸಾವೋ ಪೌಲೊ ಸ್ಟೇಟ್ ಯೂನಿವರ್ಸಿಟಿ , ಬ್ರೆಜಿಲ್ . • ಶ್ರೀಮತಿ ಜೂಲಿಯಾ ಎಕ್ಸ್ – ಸಾವೋ ಪೌಲೊ ಯೂನಿವರ್ಸಿಟಿ , ಬ್ರಜಿಲ್ . • ಡಾ . ಎನ್ . ಭಾರತಿ – ಸಂಸ್ಥಾಪನಾ ನಿರ್ದೇಶಕರು , ಗೋ ಮೋರ್ ಬಯೋಟೆಕ್ , ಲಿ . ಹೊಸೂರು . • ಡಾ . ಓ . ಪಿ ಸುಬ್ರಮಣಿ – ಐಎನ್‌ಬಿಎಆರ್‌ನ ಸೌತ್ ಏಷ್ಯಾ ವಲಯದ ಸಂಯೋಜಕ . • ಶ್ರೀ ಸಂಜೀವ್ ಕಾರ್ಪೆ – ನೇಟಿವ್ ಕೋಸ್ಟಾಕ್‌ನ ನಿರ್ದೇಶಕ , ಬ್ಯಾಂಬೂ ಪ್ರಾಡಕ್ಟ್ ಲಿ . ಮುಂಬಯಿ .

• ಶ್ರೀ ಅಭಿನವ್ ಕಾಂತ್ – ಬ್ಯಾಂಬೂ & ಕೇನ್ ಡೆವೆಲೋಪ್‌ಮೆಂಟ್ ಇನ್‌ಸ್ಟಿಟ್ಯೂಟ್ ಅಗರ್ತಲಾದ ಮುಖ್ಯ ಅಧಿಕಾರಿ . • ಡಾ . ವ್ಯೂಮ್ ವಿಶ್ವನಾಥ್ – ಕೇರಳ ಅರಣ್ಯ ಅಧಯಯನ ಸಂಸ್ಥೆ ಇನ್ನು ಕಾರ್ಯಕ್ರಮದಲ್ಲಿ ಕೈಗಾರಿಕೋದ್ಯಮಿಗಳು , ಕೈಗಾರಿಕಾ ಮುಖ್ಯಸ್ಥರು , ವಾಸ್ತುಶಿಲ್ಪ ಪರಿಣತರು ಹಾಗೂ ಬಿದಿರು ಪ್ರಿಯರು ಪಾಲ್ಗೊಂಡಿದ್ದರು . ವಸ್ತು ಪ್ರದರ್ಶನದ ಸ್ಥಳದಲ್ಲಿ ಬಿದಿರು ಕೈಗಾರಿಕೋದ್ಯಮದ ಪರಿಣತರು ಮತ್ತು ಕಲಾವಿದರು ತಮ್ಮ ಅತ್ಯಾಧಿನಿಕ ಆವಿಷ್ಕಾರ ಮತ್ತು ಕಲಾಕೃತಿಗಳನ್ನು ಪ್ರದರ್ಶಿಸಿದರು . ಇವುಗಳಲ್ಲಿ ಫರ್ನೀಚರ್‌ಗಳು , ಕರಕುಶಲ ವಸ್ತುಗಳು ಮತ್ತು ಬಿದಿರು ಕೈಗಾರಿಕೋದ್ಯಮದಲ್ಲಿ ಬಳಕೆ ಮಾಡಲಾಗುತ್ತಿರುವ ಯಂತ್ರೋಪಕರಣಗಳು ಪ್ರಮುಖ ಆಕರ್ಷಣೆಯಾಗಿದ್ದವು . ಇತ್ತೀಚೆಗಷ್ಟೇ ಮಣಿಪುರದ ಇಂಫಾಲದಲ್ಲಿ ಆಯೋಜಿಸಲಾಗಿದ್ದ 5 ದಿನಗಳ ವಿಶ್ವ ಬ್ಯಾಂಬೂ ಕಾರ್ಯಾಗಾರದ ಮುಂದುವರಿದ ಭಾಗವಾಗಿ ಈ ಸಮಾವೇಶವನ್ನು ಆಯೋಜಿಸಲಾಗಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s