ಸಿಸಿಬಿ ಕಾರ್ಯಾಚರಣೆ- ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡಿ , ಅಕ್ರಮವಾಗಿ ಡಿಸ್ಕೋಥೆಕ್ ನಡೆಸುತ್ತಿದ್ದ ಆರೋಪಿಯ ಬಂಧನ

ಬೆಂಗಳೂರು ನಗರ : 11 . 02 . 2019 ಸಿಸಿಬಿ ಕಾರ್ಯಾಚರಣೆ ಕಾನೂನು ನಿಯಮಗಳನ್ನು ಉಲ್ಲಂಘನೆ ಮಾಡಿ , ಅಕ್ರಮವಾಗಿ ಡಿಸ್ಕೋಥೆಕ್ ನಡೆಸುತ್ತಿದ್ದ ಆರೋಪಿಯ ಬಂಧನ ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್ ಠಾಣಾ ಸರಹದ್ದಿನಲ್ಲಿರುವ PORT OF PAVILION BAR & RESTAURANT 1ನೇ ಮತ್ತು 2ನೇ ಮಹಡಿ , 1 / 3 , ಸುಜಾತ ಕಾಂಪ್ಲೆಕ್ಸ್ , 1ನೇ ಮುಖ್ಯರಸ್ತೆ , ಗಾಂಧಿನಗರ , ಬೆಂಗಳೂರು – 560009 ಇಲ್ಲಿ ಅಕ್ರಮವಾಗಿ ಮಹಿಳೆಯರನ್ನು ಇರಿಸಿಕೊಂಡು ಪರವಾನಗಿ ನಿಬಂಧನೆಗಳನ್ನು ಉಲ್ಲಂಘನೆ ಮಾಡಿ ಅಕ್ರಮವಾಗಿ ಡಿಸ್ಕೋಥೆಕ್ ನಡೆಸುತ್ತಿರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಕೇಂದ್ರ ಅಪರಾಧ ವಿಭಾಗ ( ಸಿ . ಸಿ . ಬಿ ) ದ ಪೊಲೀಸರು

ದಿನಾಂಕ 10 – 02 – 2019 ರಂದು ಮೇಲ್ಕಂಡ ಸ್ಥಳದ ಮೇಲೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ಅಕ್ರಮ ಡಿಸ್ಕೋಥೆಕ್ ನಡೆಸುತ್ತಿದ್ದ ಈ ಕೆಳಕಂಡ ಆರೋಪಿಯಾದ ಸುದೇಶ್ ಬಿನ್ ಚಂದ್ರಶೇಖರ್ , 32 ವರ್ಷ , ವಾಸ – ನಂ . 3 / 1 , 2ನೇ ಮಹಡಿ , ಸುಜಾತ ಕಾಂಪ್ಲೆಕ್ಸ್ , 1 ನೇ ಮುಖ್ಯರಸ್ತೆ , ಗಾಂಧಿನಗರ , ಬೆಂಗಳೂರು ನಗರ , ಸ್ವಂತ ಊರು : ವಿನೋದ್ ನಿವಾಸ , ನಂ . 2 / 143 ಎಸ್ , ಸೋಮೇಶ್ವರ , ತೊಕ್ಕೊಟ್ಟು , ಮಂಗಳೂರು , ದಕ್ಷಿಣ ಕನ್ನಡ ಜಿಲ್ಲೆ . ಎಂಬುವನನ್ನು ದಸ್ತಗಿರಿ ಮಾಡಿ , ಡಿಸ್ಕೋಥೆಕ್ನಲ್ಲದ್ದ 83 ಜನ ಗಿರಾಕಿಗಳನ್ನು ವಶಕ್ಕೆ ಪಡೆದಿದ್ದು . ಡಿಸ್ಕೋಥೆಕ್‌ಗೆ ಬರುವ ಗಿರಾಕಿಗಳ ಜೊತೆ ಕಪಲ್ ಎಂಟ್ರಿಗಾಗಿ ಇರಿಸಿಕೊಂಡಿದ್ದ ಬೇರೆ ಬೇರೆ ರಾಜ್ಯದ 28 ಮಹಿಳೆಯರನ್ನು ಸಂರಕ್ಷಣೆ ಮಾಡಲಾಗಿರುತ್ತದೆ . ಆರೋಪಿಯ ವಶದಿಂದ ನಗದು ರೂ . 2 , 41 , 550 / – ನಗದು ಹಣವನ್ನು ವಶಕ್ಕೆ ಪಡೆದಿರುತ್ತದೆ . ಆರೋಪಿಗಳು ಡಿಸ್ಕೋಥೆಕ್ ನಡೆಸಲು ಪರವಾನಗಿ ಪಡೆದು , ಯಾವುದೇ ಡಿಸ್ಕೋಥೆಕ್ ನಿಯಮಗಳನ್ನು ಪಾಲಿಸದೇ , ಡಿಸ್ಕೋಥೆಕ್ ಮಾಲೀಕರು ತಮ್ಮದೇ ಹುಡುಗಿಯರನ್ನು ಕಪಲ್ ಎಂಟಿ ಹೆಸರಿನಲ್ಲಿ ಗಿರಾಕಿಗಳಿಗೆ ಹುಡುಗಿಯರನ್ನು ಸರಬರಾಜು ಮಾಡಿ , ಅಶ್ಲೀಲವಾಗಿ ನೃತ್ಯ ಮಾಡಿಸುತ್ತಾ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಾ ಡಿಸ್ಕೋಥಕ್ ನಿಯಮಗಳನ್ನು ಉಲ್ಲಂಘನೆ ಮಾಡಿ , ಅಕ್ರಮ ಅಡ್ಡಗಳಾಗಿ ಮಾಡಿಕೊಂಡಿರುವುದು ಪ್ರಾಥಮಿಕ ತನಿಖೆಯಿಂದ ಕಂಡುಬಂದಿರುತ್ತದೆ . ತಲೆಮರೆಸಿಕೊಂಡಿರುವ ಆರೋಪಿಗಳ ಶೋಧ ಕಾರ್ಯ ಮುಂದುವರಿದಿದೆ . ಈ ಸಂಬಂಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ .

ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಅಪರಾಧ ವಿಭಾಗದ ಅಪರ ಪೊಲೀಸ್ ಆಯುಕ್ತರಾದ ಶ್ರೀ ಅಶೋಕ್ ಕುಮಾರ್ , ಐಪಿಎಸ್ & ಉಪ ಪೊಲೀಸ್ ಆಯುಕ್ತರಾದ ಶ್ರೀ ಗಿರೀಶ್ . ಎಸ್ , ಐಪಿಎಸ್ ರವರ ನೇರ ಮಾರ್ಗದರ್ಶನಲ್ಲಿ ಸಿಸಿಬಿಯ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀ ಬಿ . ಟಿ . ಸುಬ್ರಮಣ್ಯ ಮತ್ತು ಮಹಿಳೆ ಮತ್ತು ಮಾದಕ ದ್ರವ್ಯ ದಳದ ಎ . ಸಿ . ಪಿ . ಶ್ರೀ ಬಿ . ಎಸ್ . ಮೋಹನ್‌ಕುಮಾರ್ ರವರ ಮುಂದಾಳತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ ನಿರಂಜನ್‌ಕುಮಾರ್ , ಶ್ರೀ ಅಂಜನ್‌ಕುಮಾರ್ , ಶ್ರೀ ಪ್ರಕಾಶ್ , ಶ್ರೀಮತಿ ಎಸ್ . ಆಯಿಷಾ , ಶ್ರೀ ರಾಜು ಮತ್ತು ಪೊಲೀಸ್ ಸಬ್ – ಇನ್ಸ್‌ಪೆಕ್ಟರ್‌ ಶ್ರೀ ಲಕ್ಷ್ಮೀನರಸಿಂಹಯ್ಯ , ಎ . ಎಸ್ . ಐ . ಶ್ರೀ ದ್ವಾರಕನಾಥ್ ಹಾಗೂ ಸಿಬ್ಬಂದಿಗಳಾದ ಶ್ರೀ ರವಿಕುಮಾರ್ , ಶ್ರೀ ಅಶೋಕ್ , ಶ್ರೀ ನಾಗರಾಜ್ , ಶ್ರೀ ಅಶೋಕ್ ಕುಮಾರ್ , ಶ್ರೀ ವಿನಯ್ , ಶ್ರೀ ಯೋಗಾನಂದ , ಶ್ರೀ . ಶಶಿಧರ್ , ನಂದೀಶ್ , ಶ್ರೀ ಪರಮೇಶ್ ಮತ್ತು ರಮೇಶ್ ರವರುಗಳ ತಂಡ ಯಶಸ್ವಿಗೊಳಿಸಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s