ಪ್ಯಾಂಥರ್ ರನ್ನರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ “ ರನ್ ಫಾರ್ ಗ್ರಾಮ ಸಭಾ ”

ಪ್ರಜಾತಂತ್ರ ವ್ಯವಸ್ಥೆಯಲ್ಲಿ ಪ್ರಪಂಚದಲ್ಲೇ ಉನ್ನತ ಸ್ಥಾನದಲ್ಲಿರುವ ನಮ್ಮ ದೇಶದಲ್ಲಿ ಗ್ರಾಮೀಣಭಿವೃದ್ಧಿಗೆ ಬಹಳ ಪ್ರಾಮುಖ್ಯತೆಯನ್ನು ನೀಡಲಾಗಿರುತ್ತದೆ . ದೇಶ ಹಾಗೂ ರಾಜ್ಯಗಳು ತಮ್ಮ ತಮ್ಮ ಸರ್ಕಾರಗಳ ಅವಧಿಯಲ್ಲಿ ಗ್ರಾಮೀಣ ಆಡಳಿತ ಮತ್ತು ಪ್ರದೇಶಗಳನ್ನು ಬಲಾಡ್ಯಗೊಳಿಸಲು ಪಂಚಾಯತ್ ರಾಜ್ ವ್ಯವಸ್ಥೆ , ಸಹಕಾರ ವ್ಯವಸ್ಥೆ ಮತ್ತು ಯೋಜನೆಗಳನ್ನು ರೂಪಿಸಿ ಗ್ರಾಮೀಣ ಅಭಿವೃದ್ಧಿಗೆ ಆಧಾರ ಸ್ತಂಭಗಳಾಗಿರುವ ತಮ್ಮೆಲ್ಲರಿಗೂ ಗೊತ್ತಿರುವುದು ಸರಿಯಷ್ಟೆ . ಆದರೆ ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಕರ್ನಾಟಕ ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಯ ಅಡಿಯಲ್ಲಿ ರಾಜ್ಯದಲ್ಲಿ ಪ್ರಾರಂಭವಾದ ಗ್ರಾಮ ಪಂಚಾಯತ್‌ಗಳು ಸ್ಥಳೀಯ ಸರ್ಕಾರಗಳಾಗಿ ರೂಪುಗೊಂಡ ನಂತರ ಗ್ರಾಮೀಣಭಿವೃದ್ಧಿಯಲ್ಲಿ ವೇಗ , ಸದೃಡತೆ ಪಾರದರ್ಶಕತೆ ಮತ್ತು ಹೆಚ್ಚು ಸಶಕ್ತತೆ ಹೊಂದಿರುತ್ತವೆ . ಈ ಮೇಲ್ಕಂಡ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಸುಮಾರು 6027 ಗ್ರಾಮ ಪಂಚಾಯಿತಿಗಳು ಕಾರ್ಯನಿರ್ವಹಿಸುತ್ತಿದ್ದು ಗ್ರಾಮೀಣ ಭಾಗದಲ್ಲಿ ಎಷ್ಟೇ ವೈರುಧ್ಯಗಳಿದ್ದರು ಏಕತೆಯನ್ನು ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಾಧಿಸಿದೆ . ಸುಮಾರು 27000 ಕ್ಕೂ ಅಧಿಕ ನೌಕರ ಸಿಬ್ಬಂಧಿಗಳು ಗ್ರಾಮೀಣ ಜನರ ಸೇವೆಗಾಗಿ ಶ್ರಮಿಸಲಾಗುತ್ತಿದೆ , ಅಲ್ಲದೇ ರಾಜ್ಯದಲ್ಲಿ ಆಡಳಿತ ವಿಕೇಂದ್ರೀಕರಣದ ಅಡಿಯಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಮೂರು ಹಂತದ ಆಡಳಿತ ವ್ಯವಸ್ಥೆಯನ್ನು ರಾಜ್ಯದಲ್ಲಿ ಅಳವಡಿಸಿಕೊಂಡಿದ್ದು ಅದರಂತೆ ಗ್ರಾಮಗಳ ಮಟ್ಟದಲ್ಲಿ ಗ್ರಾಮ ಪಂಚಾಯಿತಿ , ತಾಲ್ಲೂಕು ಮಟ್ಟದಲ್ಲಿ ತಾಲ್ಲೂಕು ಪಂಚಾಯಿತಿ , ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯಿತಿಗಳನ್ನು ಪ್ರಾರಂಭಗೊಳಿಸಿ 1993ರಲ್ಲಿ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿನಿಯಮ ಜಾರಿಗೆ ತರಲಾಯಿತು . ಗ್ರಾಮೀಣಭಿವೃದ್ಧಿಯನ್ನು ಸಾಧಿಸಲು ಪಕ್ಷಾತೀತವಾದ ಸಂಸ್ಥೆಯನ್ನಾಗಿ ಗ್ರಾಮ ಪಂಚಾಯಿತಿಗಳನ್ನು ಸ್ಥಳೀಯ ಸರ್ಕಾರಗಳನ್ನಾಗಿಸುತ್ತಾ ಸ್ಥಳೀಯ ಅಭಿವೃದ್ಧಿಗೆ ಒತ್ತು ನೀಡುವ ದೆಸೆಯಲ್ಲಿ ಸರ್ಕಾರವು ಗ್ರಾಮಸ್ಥರಿಗೆ , ಗ್ರಾಮಸ್ಥರಿಗಾಗಿ ಸ್ಥಳೀಯ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಹಾಗೂ ಸರ್ಕಾರ ಅನುದಾನ ಹಾಗೂ ಯೋಜನೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಪಾರದರ್ಶಕತೆಯಿಂದ ಸೇವೆಯನ್ನು ನೀಡಲು ಗ್ರಾಮೀಣ ಜನರೇ ತಮ್ಮ ಮನೆ ಬಾಗಿಲಲ್ಲಿ ಗುಂಪು ಸೇರಿ ಗ್ರಾಮ ಯೋಜನೆಗಳನ್ನು ವಾರ್ಡ್ ಸಭೆಗಳ ಮೂಲಕ ರೂಪಿಸಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳ ಯೋಜನೆಗಳನ್ನು ಒಟು , ಗೂಡಿಸಿ ಅವರುಗಳೇ ಗ್ರಾಮ ಪಂಚಾಯಿತಿಯ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಂಪನ್ಮೂಲಗಳ ಆಧಾರದಲ್ಲಿ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ನಕ್ಷೆಯನ್ನು ತಯಾರಿಸುವ ಅಧಿಕಾರವನ್ನು ಗ್ರಾಮೀಣ ಜನರಿಗೆ ನಮ್ಮ ರಾಜ್ಯ ಸರ್ಕಾರವು ಸಂವಿಧಾನಾತ್ಮಕವಾಗಿ ವಿಕೇಂದ್ರಿತ ವ್ಯವಸ್ಥೆಯಲ್ಲಿ ನೀಡಿರುತ್ತದೆ .

ಆದರೆ ಹಲವಾರು ಕಾರಣಗಳಿಂದ ಗ್ರಾಮೀಣ ಜನರು ಸರ್ಕಾರದಿಂದ ಹುಟ್ಟಿದ ಮಗುವಿನಿಂದ ಹಿಡಿದು ವೃದ್ದರ ವರೆಗೂ ಹಲವರಾರು ಯೋಜನೆಗಳನ್ನು ಎಲ್ಲಾ ವರ್ಗದವರಿಗೂ ತಲುಪುವಂತೆ ನೀಡಿರುವ ಅಧಿಕಾರವನ್ನು ಬಳಸಿಕೊಳ್ಳದೇ ವಾರ್ಡ್ ಮತ್ತು ಗ್ರಾಮ ಸಭೆಗಳಲ್ಲಿ ಸರಿಯಾದ ರೀತಿಯಲ್ಲಿ ಭಾಗಿಯಾಗದೇ ಶಮ್ಮ ಸಂವಿಧಾನಾತ್ಮಕ ಹಕ್ಕುಗಳನ್ನು ನಿರ್ಲಕ್ಷಿಸುತ್ತಿರುವುದರಿಂದ ಗ್ರಾಮ ಸಭೆಗಳಲ್ಲಿ ತಮ್ಮ ಪಾಲುದಾರಿಕೆಯನ್ನು ತೋರ್ಪಡಿಸಲು ವಿಫಲ ಆಗುತ್ತಿರುವುದರಿಂದ ಇಂದಿಗೂ ಸಹ ಸಮಾಜದ ಹಲವು ಸಮಸ್ಯೆಗಳಾದ ಮಕ್ಕಳಲ್ಲಿ ಅಪೌಷ್ಟಿಕತೆ , ಮಹಿಳೆಯರ ಹಕ್ಕುಗಳು , ಆರೋಗ್ಯ ಮತ್ತು ನೈರ್ಮಲ್ಯ , ವಲಸೆ ಹೋಗುವುದು , ಯವಜನರ ಕ್ರೀಡಾ ಪ್ರೋತ್ಸಾಹ ಇತರೆ ಒಟ್ಟಾರೆಯಾಗಿ ಎಲ್ಲಾ ಮೂಲ ಭೂತ ಸಮಸ್ಯೆಗಳಿಗೆ ಜನ ಸಹಭಾಗಿತ್ವದ ಕೊರತೆಯು ಮೂಲ ಕಾರಣವಾಗಿರುವುದರಿಂದ ಗ್ರಾಮೀಣ ಜನರ ಹಕ್ಕುಗಳನ್ನು ಪ್ರತಿನಿಧಿಸುವ ಗ್ರಾಮ ಸಭೆಯ ಬಗ್ಗೆ ಗ್ರಾಮೀಣ ಜನರಲ್ಲಿ ಅರಿವು ಮೂಡಿಸುವ ತುರ್ತು ಅವಶ್ಯಕತೆ ಇರುತ್ತದೆ .ಮೇಲ್ಕಂಡ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ನಮ್ಮ ಪ್ಯಾಂಥರ್ ರನ್ನರ್ಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ “ ರನ್ ಫಾರ್ ಗ್ರಾಮ ಸಭಾ ” ಎಂಬ ಸಾಮಾಜಿಕ ಅರಿವು ಕಾರ್ಯಕ್ರಮವನ್ನು ಗ್ರಾಮೀನ ಜನರ ಹಕ್ಕುಗಳನ್ನು ಸಶಕ್ತಗೊಳಿಸುವ ಮೂಲಕ ಗ್ರಾಮ ಸಭೆಯಲ್ಲಿ ಭಾಗಿಯಾಗಲು ಪ್ರೇರೇಪಿಸಿ ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಸಹಭಾಗಿತ್ವದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಆಶ್ರಯದಲ್ಲಿ ರಾಜ್ಯಾದ್ಯಂತ ಮಾರಾಥಾನ್ ಓಟ ಹಮ್ಮಿಕೊಂಡಿದ್ದು ಮೊದಲ ಹಂತದಲ್ಲಿ ಬೆಂಗಳೂರಿನ ಬಾಗಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ದಿನಾಂಕ : 17 – 03 2019 ರಂದು ಪ್ರಥಮ ಬಾರಿಗೆ ಹಮ್ಮಿಕೊಳ್ಳಲಾಗಿರುತ್ತದೆ .ಕಾರ್ಯಕ್ರಮದ ಭಾಗವಾಗಿ ಮೊದಲ ಹೆಜ್ಜೆಯಾಗಿ .Www .panthersrunnersSportsclub .com ಅಂತರ್ಜಾಲ ಲೋಕಾರ್ಪಣೆ ಮತ್ತು ಗ್ರಾಮ ಸಭೆಗಾಗಿ , ಓಟದ ಟಿ – ಶರ್ಟ್ ಉದ್ಘಾಟನೆ ಕಾರ್ಯಕ್ರಮವನ್ನು ಈ ದಿನ ತಮ್ಮೆಲ್ಲರ ಸಮ್ಮುಖದಲ್ಲಿ ಮಾನ್ಯ ಪ್ರಧಾನ ಕಾರ್ಯದರ್ಶಿಗಳು , ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಅಧ್ಯಕ್ಷರುಗಳು , ಅಧ್ಯಕ್ಷರು , ಕರ್ನಾಟಕ ರಾಜ್ಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ದಿ ಸಂಘ ಹಾಗೂ ನಮ್ಮ ಸಂಘದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿರುತ್ತದೆ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s