ರಾಜ್ಯ ಮಟ್ಟದ ಕೊರವಂಜಿ ಸಾಂಸ್ಕೃತಿಕ ಉತ್ಸವಹಬ್ಬ

ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿ ಅತ್ಯಂತ ಹಿಂದುಳಿದ ಅಲೆಮಾರಿ ಬುಡಕಟ್ಟು ಜನಾಂಗವಾದ ಕೊರಚ / ಕೊರಮ / ಕುಂಚಿಕೊರವ ಜನಾಂಗ ರಾಜ್ಯದಲ್ಲಿ ಸುಮಾರು 25 ಲಕ್ಷ ಜನಸಂಖ್ಯೆ ಇದ್ದು ವಿವಿಧ ಕಡೆ ಹರಿದು ಹಂಚಿಹೋಗಿರುತ್ತಾರೆ , ಮೀಸಲಾತಿ ಸೌಲಭ್ಯವಿದ್ದರೂ ಪಡೆಯಬೇಕಾದ ಸವಲತ್ತುಗಳನ್ನು ಪಡೆಯದೇ ಸ್ವಾತಂತ್ರ್ಯ ಪೂರ್ವ ಮತ್ತು ನಂತರ ದಿನಗಳಿಂದಲೂ ಅಧಿಕಾರ , ಅವಕಾಶ , ಸ್ಥಾನಮಾನಗಳಿಂದ ವಂಚಿತರಾಗಿದ್ದಾರೆ . ನಮ್ಮ ಜನ ಅಸಂಘಟಿತರೂ ಅಲ್ಪತೃಪ್ತರೂ ಪರಿಶಿಷ್ಟ ಜಾತಿಯಲ್ಲಿ ಶೋಷಿತರೂ ನಿರ್ಲಕ್ಷಿತರೂ ಆಗಿರುತ್ತಾರೆ . ಮನೆಯಲ್ಲಿ ಕಿತ್ತುತಿನ್ನುವ ಬಡತನ , ಭಿಕ್ಷಾಟನೆ , ಹೋದ ಹೋದಲ್ಲಿ ಸಾಮಾಜಿಕ ಅವಹೇಳನ ನಮ್ಮ ಸಮಾಜದ ನಮ್ಮ ಜನಾಂಗದ ಒಡಲ ಕತೆ ನಿತ್ಯ ವ್ಯಥೆಯಾಗಿರುತ್ತದೆ . ನಮ್ಮ ಸಮಾಜದಲ್ಲಿ ಬಹು ಹಿಂದಿನಿಂದಲೂ ಕೊರವಂಜಿಗಳು ಕಣಿ ಹೇಳುತ್ತಿದ್ದರು . ಸನಾದಿ ಅಪ್ಪಣ್ಣನವರು , ಸನಾದಿ ಊದುವುದರಲ್ಲಿ ಅಗ್ರಗಣ್ಯರು . ನಮ್ಮ ಸಮಾಜದ 12ನೇ ಶತಮಾನದ ಶಿವಶರಣ ವಚನಕಾರ ಶ್ರೀ ನೂಲಿಯಚಂದಯ್ಯ ನವರು ವಚನ ಸಾಹಿತ್ಯದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ . ಇವರು ಹಗ್ಗ ವಸೆದು ಕಾಯಕ ಮಾಡುತ್ತಿದ್ದರು .

ಹಿಂದೆ ಭಗವಂತನಾದ ಶ್ರೀನಿವಾಸನು ಪದ್ಮಾವತಿಗೆ ಕಣಿ ಹೇಳಲು ಕೋರವಂಜಿ ವೇಷಧರಿಸಿ ಬಂದು ಕಣಿ ಹೇಳಿದರು ಎಂಬ | ಪುರಾಣ ಕಥೆ ಇದೆ . ನಂತರದ ದಿನಗಳಲ್ಲಿ ನಮ್ಮ ಸಮಾಜದ ಶರಣ ಶರಣೆಯರು ಕಣಿ ಹೇಳುವ ಕಾಯಕ ಮಜ ರೂಢಿಗೆ ಬಂದಿತು . ಕೊರವಂಜಿ ಸಾಹಿತ್ಯ ಜ್ಞಾನಾಮೃತ ಕಾರಂಜಿ ಇದು ಭಾವಶುದ್ಧತೆಯಲ್ಲಿ ಅಪರಂಜಿ ಕೊರವಂಜಿ ಸಂಗೀತಕ್ಕೆ ಶರಣ ಶರಣೆಯರ ಸ್ವಾನುಭವ ಕಾವ್ಯವಾಣಿಯಾಗಿದೆ . ಈಗಲೂ ಕೆಲವು ಕಡೆ ಕಣಿ ಹೇಳುವವರು ತಮ್ಮ ವೃತ್ತಿ ಬದುಕನ್ನಾಗಿ ಮಾಡಿಕೊಂಡು ಮನೆ ಮನೆಗೂ ಹೋಗಿ ಹೇಳುತ್ತಿರುತ್ತಾರೆ . ಸವದತ್ತಿ , ರಾಮದುರ್ಗ , ಸಿಗ್ಗಾವು , ತಡಸಾ , ಸಾಗರ , ಹುಬ್ಬಳ್ಳಿ , ಇತ್ಯಾದಿಗಳಲ್ಲಿ ಈಗಲೂ ಕಣಿ ಹೇಳುವವರು ಮನೆ ಮನೆಗೂ ಹೋಗಿ ಕಣಿ ಹೇಳುತ್ತಿರುತ್ತಾರೆ . ಈ ಕೊರವಂಜಿ ಗಳನ್ನು ಒಂದೆಡೆ ಸೇರಿಸಿ ಅವರಿಗೆ ಸರ್ಕಾರದಿಂದ ಸವಲತ್ತುಗಳನ್ನು ಒದಗಿಸಿಕೊಡುವುದು . ನಮ್ಮ ಸಮಾಜದ ಈ ಕೊರವಂಜಿಗಳನ್ನು ಬೆಳಕಿಗೆ ತರುವ ಕಾರ್ಯವನ್ನು ನಾವೆಲ್ಲರು ಸೇರಿ ಮಾಡಬೇಕಾಗಿದೆ . ಸರ್ಕಾರಕ್ಕೆ ಈ ಕೊರವಂಜಿ ಬಗ್ಗೆ ಮನವರಿಕೆ ಮಾಡ ಬೇಕಾಗಿದೆ ಹಾಗೂ ರಾಷ್ಟ್ರ ಮಟ್ಟದಲ್ಲಿ ಈ ಕೊರವಂಜಿಗಳನ್ನು ಬೆಳಕಿಗೆ ತಂದು ಇವರಿಗೇ ಆದ ಒಂದು ಬದುಕನ್ನು ರೂಪಿಸಿಕೊಡಬೇಕಾಗಿದೆ . ಕೊರವಂಜಿಗಳು ಕಣಿ ಹೇಳುತ್ತಿದ್ದುದನ್ನು ಜನ ನಂಬುತ್ತಿದ್ದರು . ಹಾಗೂ ಅವರು ಹೇಳುವುದೆಲ್ಲಾ ನಿಜವಾಗಿ ನಡೆಯುತ್ತಿದ್ದುದನ್ನು ಜನ ನೋಡಿದ್ದರು . ಈಗಲೂ ಹಲವೆಡೆ ಈ ಕಣಿ ಹೇಳುವವರು ಇದ್ದು , ಕೊರವಂಜಿ ಸಾಹಿತ್ಯ ಬೆಳೆಸಲು , ಅವರಿಗೆ ಸರ್ಕಾರದಿಂದ ನೆರವು ಒದಗಿಸಲು ನಾವು ಶ್ರಮಿಸೋಣ , ನಮ್ಮ ಬಹುದಿನದ ಕನಸು ನನಸಾಗಲು ನಮ್ಮ ಜನ ಸಂಘಟನೆಯ ಕೂಗು ಸರ್ಕಾರ ಕೇಳುವಂತಾಗಲು ಮನವರಿಕೆ ಮಾಡಬೇಕಾಗಿದೆ . ಜನಪ್ರತಿನಿಧಿಗಳು ಹಾಗೂ ಜನನಾಯಕರಾದ ತಾವು ಮನವರಿಕೆ ಮಾಡಬೇಕಾಗಿದೆ . ಜನಪ್ರತಿನಿಧಿಗಳು ಹಾಗೂ ಜನನಾಯಕರು ತಾವು ಮಾವನೀಯತೆ ಮತ್ತು ಅನುಕಂಪದಿಂದ ಈ ಕಾರ್ಯಕ್ರಮದಲ್ಲಿ ನಮ್ಮ ಜನಾಂಗದವರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಲು ಸಾರಿಗೆ ಸೌಲಭ್ಯ ಹಾಗೂ ಇನ್ಯಾವುದೇ ಅಗತ್ರ ರೀತಿ ಸಹಾಯ ನೀಡುವುದರ ಜೊತೆಗೆ ಕಾರ್ಯಕ್ರಮಕ್ಕೆ ತಾವುಗಳು ಆಗಮಿಸಿ ಈ ಜನಾಂಗದ ಬೆಳವಣಿಗೆಗೆ ಸಹಕರಿಸಬೇಕಾಗಿ ಈ ಮೂಲಕ ಜನಾಂಗದ ಪರವಾಗಿ ಸವಿನಯ ಪ್ರಾರ್ಥನೆ . – ಶರಣರು , ವಿವಿಧ ರಾಜಕೀಯ ಪಕ್ಷದ ಮುಖಂಡರು , ಸಾಹಿತಿಗಳು ಭಾಗವಹಿಸುವುದರೊಂದಿಗೆ ಕೊರವಂಜೆ ಸಾಂಸ್ಕೃತಿಕ ಉತ್ಸವಹಬ್ಬವನ್ನು ದಿನಾಂಕ : 16 – 02 – 2019 ರಂದು ಶನಿವಾರ ಬೆಳಿಗ್ಗೆ 10 – 00ಕೆ . ಡಾ . ಬಿ . ಆರ್ . ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s