ಕರ್ನಾಟಕ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯ : ಎಸ್‌ಡಿಪಿಐ

ಬೆಂಗಳೂರು : ಮುಖ್ಯಮಂತ್ರಿ ಕುಮಾರಸ್ವಾಮಿ ಫೆಬ್ರವರಿ 8ರಂದು ಸದನದಲ್ಲಿ ಮಂಡಿಸಿರುವ ಬಜೆಟ್‌ನಲ್ಲಿ ಅಲ್ಪಸಂಖ್ಯಾತರಿಗೆ ಅನ್ಯಾಯವಾಗಿದೆ . . ಜೆಡಿಎಸ್ – ಕಾಂಗ್ರೆಸ್ ಪಕ್ಷ ಕಳೆದ ಚುನಾವಣೆ ಸಂದರ್ಭದಲ್ಲಿ ಮುಸ್ಲಿಮರ ಅಭಿವೃದ್ಧಿ ಬಗ್ಗೆ ಶಿಫಾರಸ್ಸು ಮಾಡಿದ ಸಾಚಾರ್ ಮತ್ತು ಮಿಶ್ರಾ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿತ್ತು . ರಾಜ್ಯದಲ್ಲಿ ಅತೀ ಹಿಂದುಳಿದ ಜನಸಮುದಾಯವಾಗಿದೆ ಮುಸ್ಲಿಂ ಸಮುದಾಯ . ಸಮಗ್ರ ಕರ್ನಾಟಕ ಅಭಿವೃದ್ಧಿಯಾಗಬೇಕಾದರೆ ಹಿಂದುಳಿದ ಮುಸ್ಲಿಮರು ಪ್ರಗತಿ ಸಾಧಿಸಬೇಕಾಗಿದೆ . ಈ ನಿಟ್ಟಿನಲ್ಲಿ ಸಮ್ಮಿಶ್ರ ಸರಕಾರ ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಬೇಕಾಗಿತ್ತು . ಆದರೆ ಬಜೆಟ್‌ನಲ್ಲಿ ಯಾವುದೇ ವಿಶೇಷ ಹಣಕಾಸು ಮಂಜೂರು ಮಾಡದೆ ಸಮ್ಮಿಶ್ರ ಸರಕಾರ ಮುಸ್ಲಿಮರಿಗೆ ಮತ್ತೊಮ್ಮೆ ವಂಚಿಸಿದೆ . ಜಾತ್ಯಾತೀತ ಪಕ್ಷಗಳು ಅಧಿಕಾರಕ್ಕೆ ಬರಬೇಕು , ಬಿಜೆಪಿಯನ್ನು ಸೋಲಿಸಬೇಕು ಎಂದು ಮುಸ್ಲಿಮರು ಶೇಕಡಾ 95 % ಮತಗಳನ್ನು ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ನೀಡಿದ್ದವು . ಆದರೆ ಸಮ್ಮಿಶ್ರ ಸರಕಾರ ಮುಸ್ಲಿಂ ಮತದಾರರ ನಿರೀಕ್ಷೆಗಳನ್ನು ಹುಸಿ ಮಾಡಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ( ಎಸ್‌ಡಿಪಿಐ ) ಪಕ್ಷ ಆರೋಪಿಸುತ್ತದೆ .

ರಾಜ್ಯದ ಒಟ್ಟು ಬಜೆಟ್ ಮೊತ್ತ 2ಲಕ್ಷ 34 ಸಾವಿರದ 153 ಕೋಟಿ ರೂಪಾಯಿಗಳ ಪೈಕಿ ಎಲ್ಲಾ ಅಲ್ಪಸಂಖ್ಯಾತ ಜನಸಮುದಾಯಗಳಿಗೆ ಕೇವಲ 1 ಸಾವಿರ ಕೋಟಿಗೂ ಕಡಿಮೆ ಹಣವನ್ನು ನೀಡಲಾಗಿದೆ . ಕಳೆದ ವರ್ಷ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 2 , 300 ಕೋಟಿ ರೂಪಾಯಿಗಳನ್ನು ನೀಡಿತ್ತು , ಅಲ್ಪಸಂಖ್ಯಾತ ಜನಸಮುದಾಯಗಳಾದ ಮುಸ್ಲಿಮ್ , ಕ್ರೈಸ್ತ , ಜೈನ್ , ಸಿಖ್ , ಪಾರ್ಸಿ , ಭೌದ್ದ ಒಟ್ಟು ಜನಸಂಖ್ಯೆಯು ರಾಜ್ಯದಲ್ಲಿನ ಒಟ್ಟು ಜನಸಂಖ್ಯೆಯ ಶೇಕಡಾ 20 % ಕ್ಕಿಂತ ಹೆಚ್ಚಿದೆ . ಈ ಸಣ್ಣ ಮೊತ್ತದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿ ಅಸಾಧ್ಯ . ಇತ್ತೀಚೆಗೆ ಮಾಜಿ ಮುಖ್ಯಮಂತ್ರಿ ಹೇಳಿಕೆ ನೀಡಿ ನಾನು ಮುಖ್ಯಮಂತ್ರಿಯಾಗಿದ್ದರೆ ಅಲ್ಪಸಂಖ್ಯಾತರ ಋಣ ತೀರಿಸಲು ಕನಿಷ್ಠ 10ಸಾವಿರ ಕೋಟಿ ಅಲ್ಪಸಂಖ್ಯಾತರಿಗೆ ನೀಡುತ್ತಿದ್ದೆ ಎಂದಿದ್ದರು . ಎಸ್‌ಡಿಪಿಐ ಪಕ್ಷವು ಕಳೆದ 3 ವರ್ಷಗಳಿಂದ 10 ಸಾವಿರ ಕೋಟಿ ರೂಪಾಯಿ ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಿ ಮೀಸಲಿಡಬೇಕೆಂದು ಹೋರಾಡುತ್ತಿದೆ . ರಾಜ್ಯ ಸರಕಾರವು ಬಿಜೆಪಿ ಮತ್ತು ಕೋಮುವಾದಿ ಶಕ್ತಿಗಳ ಒತ್ತಡಕ್ಕೆ ಮಣಿದು ಈ ರೀತಿಯ ತಾರತಮ್ಯ ಮಾಡಿದೆ . ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜಾತ್ಯಾತೀತ ಪಕ್ಷಗಳಿಗೆ ಅಲ್ಪಸಂಖ್ಯಾತರು ಬೆಂಬಲಿಸಬೇಕೆಂದಾದರೆ ಕೂಡಲೇ 10 ಸಾವಿರ ಕೋಟಿ ರೂಪಾಯಿ ಬಜೆಟ್ ನೀಡಿ ಆ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಒತ್ತು ನೀಡಬೇಕು ಮತ್ತು ಅಲ್ಪಸಂಖ್ಯಾತರ ವಿಶ್ವಾಸ ಗಳಿಸುವ ಕೆಲಸವಾಗಬೇಕೆಂದು ಎಂದು ಎಸ್‌ಡಿಪಿಐ ಒತ್ತಾಯಿಸುತ್ತದೆ . ಪಕ್ಷದ ವತಿಯಿಂದ ರಾಜ್ಯಾದ್ಯಂತ ಪ್ರತಿಭಟನೆ , ಪತ್ರಿಕಾಗೋಷ್ಠಿ , ಸಭೆ ಸಮಾರಂಭ ಮಾಡಿ ಈ ನಿಟ್ಟಿನಲ್ಲಿ ಸರಕಾರಕ್ಕೆ ಒತ್ತಡ ಹೇರಲು ತೀರ್ಮಾನಿಸಿದೆ . ರಾಜ್ಯದ ಎಲ್ಲಾ ಹಿಂದೂ , ಮುಸ್ಲಿಂ , ಕ್ರೈಸ್ತರೆಲ್ಲರೂ ಸೇರಿ ಅಲ್ಪಸಂಖ್ಯಾತರ ಹಕ್ಕು , ಸಾಮಾಜಿಕ ನ್ಯಾಯ ಕಲ್ಪನೆಯ ಈ ಸಂವಿಧಾನಬದ್ದ ಹೋರಾಟಕ್ಕೆ ಬೆಂಬಲ ನೀಡಬೇಕು . ಅಲ್ಪಸಂಖ್ಯಾತರ ಮತ ಪಡೆದು ಗೆದ್ದಿರುವ ಶಾಸಕರುಗಳು ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಒತ್ತಡಹಾಕಿ ಅಲ್ಪಸಂಖ್ಯಾತರ ನ್ಯಾಯಬದ್ದ ಬೇಡಿಕೆಯನ್ನು ಈಡೇರಿಸಬೇಕೆಂದು ಎಸ್‌ಡಿಪಿಐ ಆಗ್ರಹಿಸುತ್ತದೆ .

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತಿ : ಅಬ್ದುಲ್ ಹನ್ನಾನ್ ( ರಾಜ್ಯ ಪ್ರಧಾನ ಕಾರ್ಯದರ್ಶಿ , ಎಸ್‌ಡಿಪಿಐ ಕರ್ನಾಟಕ ) ಅಪ್ಪರ್ ಕೊಡ್ಲಿಪೇಟೆ ( ರಾಜ್ಯ ಕಾರ್ಯದರ್ಶಿ , ಎಸ್‌ಡಿಪಿಐ ಕರ್ನಾಟಕ ) ಜಾವೀದ್ ಆಝಾಂ ( ರಾಜ್ಯ ಕೋಶಾಧಿಕಾರಿ , ಎಸ್‌ಡಿಪಿಐ ಕರ್ನಾಟಕ ) ಶರೀಫ್ ಬೆಂಗಳೂರು ( ಜಿಲ್ಲಾಧ್ಯಕ್ಷರು , ಎಸ್‌ಡಿಪಿಐ ಬೆಂಗಳೂರು ) ಹೆಚ್ . ಎಂ . ಗಂಗಪ್ಪ ( ಉಪಾಧ್ಯಕ್ಷರು , ಎಸ್‌ಡಿಪಿಐ ಬೆಂಗಳೂರು ) ಸಮಿ ಹಝುತ್ ( ರಾಜ್ಯ ಸಮಿತಿ ಸದಸ್ಯರು , ಎಸ್‌ಡಿಪಿಐ ಕರ್ನಾಟಕ ) ಫಯಾಝ್ ಅಹ್ಮದ್ ( ರಾಜ್ಯ ಸಮಿತಿ ಸದಸ್ಯರು , ಎಸ್‌ಡಿಪಿಐ ಕರ್ನಾಟಕ )

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s