ಪ್ರವಾಸಿ ಜಾನಪದ ಲೋಕೋತ್ಸವ – 2019

ಕನ್ನಡ ನಾಡಿನ ಜಾನಪದ ಪರಂಪರೆಯ ಸಂವರ್ಧನೆ , ಸಂರಕ್ಷಣೆ , ಪ್ರಸರಣ , ದಾಖಲಾತಿ ಮತ್ತು ಪ್ರಚಾರಗಳನ್ನು ಪ್ರಧಾನ ಆಶಯಗಳನ್ನಾಗಿರಿಸಿಕೊಂಡು ವಿಶ್ರಾಂತ ಐ . ಎ . ಎಸ್ ಅಧಿಕಾರಿ ಮತ್ತು ನಾಡಿನ ಉತ್ಕೃಷ್ಟ ಸೃಜನಶೀಲ ಲೇಖಕರು ಜಾನಪದ ತಜ್ಞರೂ ಆದ ನಾಡೋಜ ಶ್ರೀ ಎಚ್ . ಎಲ್ . ನಾಗೇಗೌಡರು ಮಾರ್ಚ್ 21 , 1979 ರಂದು ಸ್ಥಾಪಿಸಿದ ಕರ್ನಾಟಕ ಜಾನಪದ ಪರಿಷತ್ತು ಕಳೆದ 39 ವರ್ಷಗಳ ಅವಧಿಯಲ್ಲಿ ಹಲವಾರು ಸಾಧನೆಯನ್ನು ಮಾಡಿದೆ . ಇವರೊಡನೆ ನಾಡೋಜ ಜಿ . ನಾರಾಯಣ ಇಂತವರುಗಳು ಕೈಜೋಡಿಸಿದ್ದಾರೆ . ಕರ್ನಾಟಕ ಜಾನಪದ ಪರಿಷತ್ತು ವರ್ಷ ಪೂರ್ತಿ ಅನೇಕ ಉತ್ಸವ ಮತ್ತು ಕಾರ್ಯಕ್ರಮಗಳನ್ನು ಮಾಡುತ್ತಿದ್ದು , ಜಾನಪದ ಲೋಕದಲ್ಲಿ ಸಂಕ್ರಾಂತಿ ಉತ್ಸವದಲ್ಲಿ ಉತ್ತಮ ರಾಸುಗಳಿಗೆ ಬಹುಮಾನ ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬರುತ್ತಿದೆ . ಹಾಗೂ ರಾಜ್ಯ ಮಟ್ಟದ ಗೀತ ಗಾಯನ ಸ್ಪರ್ಧೆ , ಗ್ರಾಮೀಣ ಆಟೋಟಗಳ ಉತ್ಸವ , ಗಾಳಿಪಟ ಉತ್ಸವ , ದಸರಾ ಉತ್ಸವಗಳಲ್ಲದೇ , ಪ್ರತಿ ತಿಂಗಳ 2ನೇ ಶನಿವಾರದಂದು ನಾಡಿನ ಹಿರಿಯ ಜಾನಪದ ಕಲಾವಿದರನ್ನು ಆಹ್ವಾನಿಸಿ ” ಲೋಕಸಿರಿ ” ಪ್ರಶಸ್ತಿಯನ್ನು ನೀಡಿ ಗೌರವಿಸುವ ಕಾರ್ಯಕ್ರಮವನ್ನು ಕಳೆದ ಮೂರು ವರ್ಷಗಳಿಂದಲೂ ನಿರಂತರವಾಗಿ ನಡೆಯುತ್ತಿದೆ . ಇದರ ಜೊತೆಗೆ ಪ್ರತಿ ಭಾನುವಾರ ಪ್ರವಾಸಿಗರ ಮನರಂಜನೆಗಾಗಿ ಜಾನಪದ ಕಲಾಪ್ರದರ್ಶನವನ್ನು ಏರ್ಪಡಿಸಲಾಗುತ್ತಿದೆ . ಬೆಂಗಳೂರು – ಮೈಸೂರು ಹೆದ್ದಾರಿಯ ರಾಮನಗರ ಬಳಿ ಇರುವ ಜಾನಪದ ಲೋಕದಲ್ಲಿ 2019ರ ಫೆಬ್ರವರಿ 16 ಮತ್ತು 17 ರಂದು ಪ್ರವಾಸಿ ಜಾನಪದ ಲೋಕೋತ್ಸವ – 2019 ಮತ್ತು ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಏರ್ಪಡಿಸಲಾಗಿದೆ . ಜಾನಪದ ಲೋಕೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು , ಈ ಎರಡು ದಿನಗಳಲ್ಲಿಯೂ ಜಾನಪದ ಸಾಂಸ್ಕೃತಿಕ ಕಾರ್ಯಕ್ರಮಗಳು ಬೆಳಿಗ್ಗೆ 9 ರಿಂದ ರಾತ್ರಿ 9 ಗಂಟೆವರೆಗೂ ನಡೆಯಲಿದ್ದು , ದಿನಾಂಕ 16 . 02 . 2019ರಂದು ಬೆಳಗ್ಗೆ 10 . 30 ಗಂಟೆಗೆ ಉದ್ಘಾಟನಾ ಕಾರ್ಯಕ್ರಮವಿದ್ದು , ಪ್ರತಿ ವರ್ಷ ಲೋಕೋತ್ಸವನ್ನು ನೋಡಲು ಕಲಾವಿದರು ವಿದ್ವಾಂಸರು ಮತ್ತು ಕಲಾಸಕ್ತರು ರಾಜ್ಯದ ಬೇರೆ ಬೇರೆ ಭಾಗದಿಂದ ಬರುತ್ತಾರೆ . ಈ ಉತ್ಸವದಲ್ಲಿ ಕರ್ನಾಟಕದ ಬೇರೆ ಬೇರೆ ಭಾಗಗಳ ಕಲೆಗಳ ಪ್ರದರ್ಶನ ಇರುತ್ತದೆ . ಹೊರರಾಜ್ಯಗಳ ಜನಪದ ಕಲಾವಿದರುಗಳನ್ನೂ ಸಹ ಆಹ್ವಾನಿಸಿ ಅವರ ಕಲಾ ಪ್ರದರ್ಶನಕ್ಕೂ ವ್ಯವಸ್ಥೆ ಮಾಡಲಾಗಿದೆ . ಹಾಗೂ ಕನ್ನಡ ಜಾನಪದ ಜಗತ್ತಿನ ಉತೃಷ್ಟ ಹಿರಿಯ ಜನಪದ ಕಲಾವಿದರಗಳನ್ನು ಗುರುತಿಸಿ ಅವರುಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ .

ಈ ವರ್ಷವೂ ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ಮೂವತ್ತಕ್ಕೂ ಹೆಚ್ಚು ಜಾನಪದ ಕಲಾತಂಡಗಳು ಭಾಗವಹಿಸಲಿದ್ದು , ನೀdnbಸಿ ತrಳಿಕ , ಲಿಲಿಂಬಿ ನೃತ್ಯ , ದೇವರ ಓಲಗ , ಉಮ್ಮತ್ತಾಟ , ಲಂಬಾಣಿ ಕುಣಿತ , Hereು ಕುಣಿತ , ಪಟಾ ಕುಣಿತ , ತಮಟೆ ಕುಣಿತ , ಪೂಜಾ ಕುಣಿತ , ಡೊಳ್ಳು ಕುಣಿತ , ಹಾಡು ಮೇಳ , ಜನಪದ ನೃತ್ಯ , ವೀರಭದ್ರ ಕುಣಿತ , ಸೋಮನ ಕುಣಿತ , ಕೋಲಾಟ , ಗೀತ ಗಾಯನ ಇತ್ಯಾದಿ ಕಲೆಗಳು ಪ್ರದರ್ಶನಗೊಳ್ಳಲಿವೆ . ಇದರ ಜೊತೆಗೆ ನಮ್ಮ ಮನವಿ ಮೇರೆಗೆ ಈ ಬಾರಿ ಈ ಎರಡು ದಿನಗಳಲ್ಲೂ ಅಂದರೆ ದಿನಾಂಕ 16 / 02 / 2019 ಮತ್ತು ದಿನಾಂಕ 17 / 02 / 2019 ರಂದು ಹೊರ ರಾಜ್ಯವಾದ ಕೇರಳದ ಕೂಡಿಯಾಟ೦ , ಮಹಾರಾಭ್ಯದ ಲಾವಣಿ , ತಮಿಳುನಾಡಿನ ತಪ್ಪಾಟಂ , ಎಲ್ಲಪಾಟಂ , ತೆರಕೊತು ಜಾನಪದ ಕಲಾವಿದರು ಜಾನಪದ ಲೋಕಕ್ಕೆ ಬಂದು ಕಲಾಪ್ರದರ್ಶನ ನೀಡಲಿದ್ದಾರೆ . ಅಲ್ಲದೆ ಉತೃಷ್ಟ ಜಾನಪದ ಕಲಾವಿದರಿಗೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಇಟ್ಟುಕೊಳ್ಳಲಾಗಿದೆ . ದಿನಾಂಕ : 15 / 02 / 2019ರ ಶನಿವಾರ ಬೆಳಗ್ಗೆ 10 . 30ಕ್ಕೆ ಲೋಕೋತ್ಸವದ ಉದ್ಘಾಟನೆಯನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ . ಡಿ . ಜಿ . ನಾಯಕ್ ಅವರು ಉದ್ಘಾಟಿಸಲಿದ್ದಾರೆ . ಮುಖ್ಯ ಅತಿಥಿಗಳಾಗಿ ರಾಮನಗರದ ಸಂಸದರು , ವಿಧಾನ ಪರಿಷತ್ ಸದಸ್ಯರುಗಳು , ಶಾಸಕರು , ಜಿಲ್ಲಾಧಿಕಾರಿಗಳು , ಜಿಲ್ಲಾ ಪಂಚಾಯತ್ ಅಧ್ಯಕ್ಷರು ಹಾಗೂ ಇತರೆ ಗಣ್ಯರು ಭಾಗವಹಿಸಲಿದ್ದಾರೆ . ಇದೇ ದಿನ ಕರಕುಶಲ ಮೇಳ ಉದ್ಘಾಟನೆಯನ್ನು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಶ್ರೀ ಬಿ . ಟಾಕಪ್ಪ ಅವರು ನಡೆಸಿಕೊಡಲಿದ್ದಾರೆ . ಅಲ್ಲದೆ , ಸಂಜೆ 5 . 30ಕ್ಕೆ ವೈವಿಧ್ಯಮಯ ಜಾನಪದ ನೃತ್ಯ ಹಾಗೂ ಗೀತಗಾಯನ ಕಾರ್ಯಕ್ರಮವಿರುತ್ತದೆ . ದಿನಾಂಕ : 17 / 02 / 2019ರಂದು ಬೆಳಗ್ಗೆ 11 ಕ್ಕೆ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕಗಳ ಅಧ್ಯಕ್ಷರುಗಳೊಂದಿಗೆ ‘ ಜಾನಪದ ಜಿಲ್ಲಾ ಉತ್ಸವ ಹಾಗೂ ಜಿಲ್ಲಾ ಘಟಕಗಳ ಕಾರ್ಯನಿರ್ವಹಣೆ ” ಕುರಿತು ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ . ಸಂಜೆ 5 ಗಂಟೆಗೆ ಜಾನಪದ ಕಲಾವಿದರುಗಳಿಗೆ ಪ್ರಶಸ್ತಿ ವಿತರಣೆ ಮತ್ತು ಸಮಾರೋಪ ಸಮಾರಂಭವಿದ್ದು , ಪ್ರಶಸ್ತಿ ಪ್ರದಾನ ಸಮಾರಂಭದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ . ನಿರ್ಮಲಾನಂದನಾಥ ಮಹಾಸ್ವಾಮಿಗಳು ವಹಿಸಲಿದ್ದಾರೆ . ಹಿರಿಯ ಜಾನಪದ ಕಲಾವಿದರುಗಳಿಗೆ ಕರ್ನಾಟಕ ಗಡಿ ಮತ್ತು ನದಿಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ನ್ಯಾಯಾಮೂರ್ತಿ ಶ್ರೀ ಕೆ . ಎಲ್ . ಮಂಜುನಾಥ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಲಿದ್ದಾರೆ . ಕಲಾವಿದರಿಗೆ ನೀಡುವ ಪ್ರಶಸ್ತಿ ಮೊತ್ತವು 15 , 000 / – , 10 , 000 / – ಮತ್ತು 5 , 000 / – ರೂ . ಗಳನ್ನು ಒಳಗೊಂಡಿದ್ದು ಜಾನಪದ ಕ್ಷೇತ್ರಕ್ಕೆ ಒಟ್ಟು 32 ಪ್ರಶಸ್ತಿಗಳನ್ನು ನೀಡಲಾಗುತ್ತಿದೆ . ಈ ಪ್ರವಾಸಿ ಜಾನಪದ ಲೋಕೋತ್ಸವವನ್ನು ರಾಜ್ಯ ಪ್ರವಾಸೋದ್ಯಮ ಇಲಾಖೆ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ನಡೆಸಲಾಗುತ್ತಿದೆ . ಸಾರ್ವಜನಿಕರಿಗೆ ಎರಡು ದಿನಗಳೂ ಜಾನಪದ ಲೋಕಕ್ಕೆ ಉಚಿತ ಪ್ರವೇಶವಿರುತ್ತದೆ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s