ಬಡ ಕಲಾವಿದರ ಸಹಾಯಾರ್ಥ ಯುವ ಸಂಭ್ರಮ – 2019

ಬೆಂಗಳೂರಿನ ಸಂಗಮ ಯುವ ವೇದಿಕೆ ಕಳೆದ ಹಲವಾರು ವರ್ಷಗಳಿಂದ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ . ಅದರಂತೆ ಈ ವರ್ಷವೂ ಸಹ ನಾಡಿನ ಬಡ ವಾದ್ಯಗೋಷ್ಟಿ ಕಲಾವಿದರ ಕ್ಷೇಮಾಭಿವೃದ್ದಿಗಾಗಿ ಇದೇ ತಿಂಗಳ 22ರಿಂದ ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಮನರಂಜನಾತ್ಮಕ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ಹಮ್ಮಿಕೊಂಡಿದೆ . ಸಂಗಮ ಯುವ ವೇದಿಕೆಯು ಅಧ್ಯಕ್ಷರಾದ ಡಾ . ಆರ್ , ಶಂಕರ್ ದಯಾನಂದ್ ಅವರ ಸಾರಥ್ಯದಲ್ಲಿ ಯುವ ಸಂಭ್ರಮ – ೨೦೧೯ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮಗಳನ್ನು ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘದಲ್ಲಿ ನೋಂದಾಯಿಸಿರುವ ಸಾವಿರಾರು ಬಡ ಕಲಾವಿದರ ಕ್ಷೇಮಾಭಿವೃದ್ದಿಗಾಗಿ ನಾಡಿನ ಎಲ್ಲ ಕಲಾವಿದರು ಹಾಗೂ ತಂತ್ರಜ್ಞರ ಸಹಕಾರದೊಂದಿಗೆ ನೆರವೇರಿಸಲಾಗುತ್ತಿದೆ . ಇದರ ಮೂಲಕ ಬಡ ಕಲಾವಿದರಿಗೆ ನೆರವು ನೀಡುವುದು ನಮ್ಮ ಮುಖ್ಯ ಉದ್ದೇಶವಾಗಿದೆ . ಮೊದಲ ದಿನವಾದ ದಿ . 22 – 2 – 2019ರ ಶುಕ್ರವಾರ ಸಂಜೆ 4 ಗಂಟೆಗೆ ಮಹರ್ಷಿ ಶ್ರೀ ಆನಂದ ಗುರೂಜಿ ಅವರಿಂದ ಲೋಕ ಕಲ್ಯಾಣಾರ್ಥವಾಗಿ ಶನೈಶ್ಚರ ಮಹಾಯಾಗ ಹಾಗೂ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮಗಳು ನಡೆಯಲಿವೆ . ಎರಡನೇ ದಿನವಾದ 23 – 2 – 2019ರ ಶನಿವಾರ ಸಂಜೆ 6 ಗಂಟೆಗೆ ಅಖಿಲ ಕರ್ನಾಟಕ ಲಘು ಸಂಗೀತ ಮತ್ತು ಸಾಂಸ್ಕೃತಿಕ ಕಲಾವಿದರ ಸಂಘ , ಜಿಲ್ಲಾ ಘಟಕದ ವತಿಯಿಂದ ಅಂಬಿ ನಮನ , ರೆಬೆಲ್ ಸ್ಟಾರ್ ಅಂಬರೀಶ್ ನೆನಪಿನ ಸಂಗೀತ ಸಂಜೆ ಕಾರ್ಯಕ್ರಮ ನಡೆಯಲಿದೆ . ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಗಾಯಕ , ಗಾಯಕಿಯರಿಂದ ಅಂಬರೀಶ್ ಅಭಿನಯಿಸಿದ ಗೀತೆಗಳ ಗಾಯನ ನಡೆಯಲಿದೆ . ಇದರಲ್ಲಿ ಶ್ರೀಮತಿ ಮಂಜುಳಾ ಗುರುರಾಜ್ ಹಾಗೂ ಇತರ ಗಾಯಕ , ಗಾಯಕಿಯರು ಭಾಗವಹಿಸಲಿದ್ದಾರೆ . ಇನ್ನು 2 or ಕಾರ್ಯಕ್ರಮದ ಕೊನೇ ದಿನವಾದ ದಿನಾಂಕ 24ರ ಭಾನುವಾರ ಸಂಜೆ 6 ಗಂಟೆಗೆ ನಾಡಿನ ಖ್ಯಾತ ಹಿನ್ನೆಲೆ ಗಾಯಕರಾದ ವಿಜಯ ಪ್ರಕಾಶ್ ಮತ್ತು ಅವರ ತಂಡದವರಿಂದ ವಿಜಯ ಪ್ರಕಾಶ್ ಮ್ಯೂಸಿಕಲ್ ನೈಟ್ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ . ಇಲ್ಲಿ ಸುಪ್ರಸಿದ್ದ ಚಲನಚಿತ್ರಗೀತೆಗಳನ್ನು ಹೆಸರಾಂತ ಗಾಯಕ , ಗಾಯಕಿಯರು ಹಾಡುವ ಮೂಲಕ ಪ್ರೇಕ್ಷಕರನ್ನು ಮನರಂಜಿಸಲಿದ್ದಾರೆ . ಹೀಗೆ ಮೂರೂ ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಸಾರ್ವಜನಿಕರಲ್ಲಿ ಧಾರ್ಮಿಕ ಮನೋಭಾವನೆಯನ್ನು ಹೆಚ್ಚಿಸುವುದು ಹಾಗೂ ಉತ್ತಮ ಮನರಂಜನೆಯನ್ನು ಸಂಗಮ ಯುವ ವೇದಿಕೆ ನೀಡಲಿದೆ . ಸಂಗಮ ಯುವ ವೇದಿಕೆ ( ರಿ ) ಯ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಈ ಯುವ ಸಂಭ್ರಮ ೨೦೧೯ ಕಾರ್ಯಕ್ರಮದ ಉಸ್ತುವಾರಿಯಯನ್ನು ಸಂಗಮ ಯುವ ವೇದಿಕೆಯ ಅಧ್ಯಕ್ಷರಾದ ಡಾ . ಆರ್‌ . ಶಂಕರ್ ದಯಾನಂದ್ ಅವರು ವಹಿಸಿಕೊಂಡಿದ್ದಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s