ವಿ ಆರ್ ಯುವರ್ ವಾಯ್ , ಚೆನ್ನೈ ಸಂಸ್ಥೆಯು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ 24ನೇ ಫೆಬ್ರವರಿ 2019ರಂದು ಬೆಂಗಳೂರಿನ ಕೆ . ಎಸ್ . ಆರ್ . ಪಿ . ಮೈದಾನ , ಮಡಿವಾಳ ಮಾರುಕಟ್ಟೆ ಹತ್ತಿರ , ಕೋರಮಂಗಲ ಇಲ್ಲಿ ವಿಕಲಚೇತನರಿಗೆ ಉದ್ಯೋಗ ಒದಗಿಸಿಕೊಡುವ ಉದ್ದೇಶದೊಂದಿಗೆ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿರುತ್ತಾರೆ

ವಿ ಆರ್ ಯುವರ್ ವಾಯ್ , ಚೆನ್ನೈ ಸಂಸ್ಥೆಯು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಸಹಯೋಗದೊಂದಿಗೆ 24ನೇ ಫೆಬ್ರವರಿ 2019ರಂದು ಬೆಂಗಳೂರಿನ ಕೆ . ಎಸ್ . ಆರ್ . ಪಿ . ಮೈದಾನ , ಮಡಿವಾಳ ಮಾರುಕಟ್ಟೆ ಹತ್ತಿರ , ಕೋರಮಂಗಲ ಇಲ್ಲಿ ವಿಕಲಚೇತನರಿಗೆ ಉದ್ಯೋಗ ಒದಗಿಸಿಕೊಡುವ ಉದ್ದೇಶದೊಂದಿಗೆ ಬೃಹತ್ ಉದ್ಯೋಗ ಮೇಳವನ್ನು ಆಯೋಜಿಸಿರುತ್ತಾರೆ . ಇದರಿಂದ ವಿದ್ಯಾವಂತ ನಿರುದ್ಯೋಗಿ ವಿಕಲಚೇತನರಿಗೆ ಬಹಳಷ್ಟು ಅನುಕೂಲಕರವಾಗಲಿದ್ದು , ಉದ್ಯೋಗವಕಾಶಗಳು ದೊರೆಯಲಿವೆ .

ಉದ್ಯೋಗ ಮೇಳದಲ್ಲಿ ಈ ಕೆಳಕಂಡ ವಿಕಲಚೇತನರು ಪಾಲ್ಗೊಳ್ಳಬಹುದಾಗಿದೆ . 1 . ದೈಹಿಕ ( ಚಲನವಲನ ) ವಿಕಲಚೇತನರು 2 . ಪಾಕ್ ಮತ್ತು ಶ್ರವಣದೋಷವುಳ್ಳವರು 3 , ದೃಷ್ಟಿದೋಷವುಳ್ಳವರು ಶೈಕ್ಷಣಿಕ ಅರ್ಹತೆಗಳು : 1 . ಎಸ್ . ಎಸ್ . ಎಲ್ . ಸಿ . 2 . ಪಿಯುಸಿ 3 . ಐಟಿಐ 4 ಡಿಪ್ಲೊಮಾ 5 . ಪದವಿ 6 , ಇಂಜಿಯರಿಂಗ್ ( ಅನುಭವ ಸಹಿತ ಉದ್ಯೋಗಾಕಾಂಕ್ಷಿಗಳು ಮತ್ತು ಅನುಭವ ರಹಿತ ಉದ್ಯೋಗಾಕಾಂಕ್ಷಿಗಳಿಗೂ ಅವಕಾಶವಿದೆ ) .

ಸದರಿ ಉದ್ಯೋಗ ಮೇಳದಲ್ಲಿ ಸುಮಾರು 7000ಕ್ಕೂ ಅಧಿಕ ಉದ್ಯೋಗಾಕಾಂಕ್ಷಿಗಳು ಮತ್ತು 150ಕ್ಕೂ ಕಂಪನಿಗಳೂ ಪಾಲ್ಗೊಳ್ಳುವ ನಿರೀಕ್ಷೆಯಿದೆ . ಈಗಾಗಲೇ 100ಕ್ಕೂ ಹೆಚ್ಚಿನ ಕಂಪನಿಗಳು ಸದರಿ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ನೋಂದಾಯಿಸಿಕೊಂಡಿದ್ದು , ಐಟಿ , ಬಿಪಿಓ , ಬ್ಯಾಂಕಿಂಗ್ , ಹೋಟೆಲ್ ಉದ್ದಿಮೆಗಳು ಸೇರಿದಂತೆ ಅನೇಕ ಖಾಸಗಿ ಕಂಪನಿಗಳು ಸಹ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿದ್ದು , ಈ ಉದ್ಯೋಗ ಮೇಳದಲ್ಲಿ ರಾಜ್ಯಾದ್ಯಾಂತ ಇರುವ ವಿವಿಧ ರೀತಿಯ ವಿಕಲತೆಯನ್ನು ಹೊಂದಿರುವ ವಿದ್ಯಾವಂತ ನಿರುದ್ಯೋಗಿ ವಿಕಲಚೇತನರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಉದ್ಯೋಗ !ಪಡೆಯಲು ಅನುಕೂಲವಾಗುವಂತೆ ಅಂತರ್ಜಾಲದ ಮೂಲಕ ಕಂಪನಿಗಳ ವಿವರಗಳನ್ನು ನೋಂದಾಯಿಸಿಕೊಳ್ಳಲು , ವ್ಯಾಪಕ ಪ್ರಚಾರ ನೀಡಲು ಸಹಕರಿಸಲು ಕೋರುತ್ತಾ ಈ ಉದ್ಯೋಗ ಮೇಳವನ್ನು ಯಶಸ್ವಿಗೊಳಿಸಲು ಕೋರಿದೆ .WWW .Weareyourvoice .org .ಈ ಅಂತರ್ಜಾಲ ತಾಣದ ಮೂಲಕ ಉದ್ಯೋಗಾಕಾಂಕ್ಷಿಗಳು / ಕಂಪನಿಗಳು / ಸ್ವಯಂ ಸೇವಕರು ನೊಂದಾಯಿಸಿಕೊಳ್ಳವುದು , ಹಾಗೂ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು .7557550888 / 7557550999 / 9700799993 / 9551500061 ವಿಶೇಷ ಸೂಚನೆ : ಉದ್ಯೋಗಾಕಾಂಕ್ಷಿಗಳು / ಕಂಪನಿಗಳು / ಸ್ವಯಂ ಸೇವಕರುಗಳು ಮೊದಲೇ ನೋಂದಾವಣೆ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ .ನೋಂದಾವಣೆಯು ಉಚಿತವಾಗಿರುತ್ತದೆ .ವಿಕಲಚೇತನರಿಗೆ ಉದ್ಯೋಗ ಒದಗಿಸಿಕೊಡುವ ಮುಲಕ ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಒಂದು ಹೆಜ್ಜೆ ಮುಂದಿಡಬೇಕಾಗಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s