ಬೆಂಗಳೂರಿನ ಹಡ್ಸನ್ ವೃತ್ತದ ಬಳಿ ಹಾಪ್ ಕಾಮ್ಸ್ ಸಂಸ್ಥೆ ಆಯೋಜಿಸಿದ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ

ಬೆಂಗಳೂರು, 18ನೇ, ಫೆಬೃವರಿ, 2019 : ಕರ್ನಾಟಕ ರಾಜ್ಯ ಕೃಷಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ . ಈ ನಿಟ್ಟಿನಲ್ಲಿ ಸರ್ಕಾರ ಕೃಷಿ ಇಲಾಖೆಗೆ 20 ಕೋಟಿ ರೂ . ಅನುದಾನ ಮಂಜೂರು ಮಾಡಲಿದೆ ಎಂದು ಕೃಷಿ ಸಚಿವ ಎನ್ . ಎಚ್ . ಶಿವಶಂಕರ ರೆಡ್ಡಿ ತಿಳಿಸಿದರು . ಸೋಮವಾರ ಬೆಂಗಳೂರಿನ ಹಡ್ರನ್ ವೃತ್ತದ ಬಳಿ ಹಾಪ್ ಕಾಮ್ಸ್ ಸಂಸ್ಥೆ ಆಯೋಜಿಸಿದ ದ್ರಾಕ್ಷಿ ಹಾಗೂ ಕಲ್ಲಂಗಡಿ ಮೇಳ ಉದ್ಘಾಟಿಸಿ ಮಾತನಾಡಿ , ರೈತರು ತಾಜಾ ಹಣ್ಣುಗಳನ್ನು ಮಾರಾಟ ಮಾಡುವುದರ ಜೊತೆಗೆ ಸಿರಿಧಾನ್ಯಗಳ ಕಡೆಯೂ ಗಮನಹರಿಸಬೇಕು . ಸರ್ಕಾರ ಇವೆಲ್ಲವುಗಳಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿ , ರೈತರಿಗೆ ಅನುಕೂಲ ಮಾಡಲು ಸದಾ ಸಿದ್ಧವಿದೆ ಎಂದರು . ಮಾಜಿ ಸಚಿವ ರಾಮಲಿಂಗರೆಡ್ಡಿ ಮಾತನಾಡಿ , ಕೃಷಿ ಇಲಾಖೆಯ ಅಧಿಕಾರಿಗಳೆಲ್ಲ ಜೊತೆಗೂಡಿ ಹೊಸ ಮಳಿಗೆಗಳನ್ನು ಸ್ಥಾಪಿಸುವ ಬಗ್ಗೆ ಚರ್ಚಿಸಿದ್ದೇವೆ . ನೀರಿನ ಸಮರ್ಪಕ ಪೂರೈಕೆ ಹಾಗೂ ಹಣಕಾಸು ವ್ಯವಸ್ಥೆ ಕಲ್ಪಿಸಿ , ಜನರಿಗೆ ತಾಜಾ ಹಣ್ಣುಗಳು ಕೈಗೆಟಕುವ ದರದಲ್ಲಿ ಸಿಗಬೇಕು ಎಂದರು . * ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಿ . ಮುನೇಗೌಡ , – ವ್ಯವಸ್ಥಾಪಕ ನಿರ್ದೇಶಕ ಬಿ . ಎನ್ . ಪ್ರಸಾದ್ , ಗೋಪಾಲಕೃಷ್ಣ – ಜೆ . ಆರ್ . ಶ್ರೀನಿವಾಸನ್ , ಜಯಕುಮಾರ್ , ಪದ್ಮಾವತಿ ಮುನೇಶ್ವರ ಮತ್ತಿತರರು ಉಪಸ್ಥಿತರಿದ್ದರು .

ವಿವಿಧ ತಳಿಗಳು : ಮೇಳದಲ್ಲಿ ಒಟ್ಟು 13 ಬಗೆಯ , ದ್ರಾಕ್ಷಿ ಹಣ್ಣುಗಳಿದ್ದು , 4 ವಿವಿಧ ಕಲ್ಲಂಗಡಿ ತಳಿಗಳಿವೆ . ಬೆಂಗಳೂರು ನೀಲಿ , ಶರದ್ , ಸೀಡ್ ಲೆಸ್ , ಕೃಷ್ಣ ಶರದ್‌ , ಪ್ಲೇಮ್ ಸೀಡ್ ಲೆಸ್ , ಥಾಮನ್ , ಸೊನಾಕ್ , ತಾಜ್ ಗಣೇಶ್‌ಮಾಣಿಕ ಚಮನ್ , ಜಂಬೂ ಶರದ್ ಇತ್ಯಾದಿ ವೈವಿಧ್ಯಮಯ ತಳಿಗಳನ್ನು ಮೇಳದಲ್ಲಿ ಕಾಣಬಹುದು . ಕಲ್ಲಂಗಡಿಯಲ್ಲಿ ನಾಮದಾರಿ , ಕಿರಣ್ , ಹಳದಿ ತಿರುಳಿನ ಕಲ್ಲಂಗಡಿ ವಿಧಗಳಿದ್ದವು . 2018 – 19 ನೇ ಸಾಲಿನ 500 ಟನ್ ಗಳಷ್ಟು ದ್ರಾಕ್ಷಿ ವಹಿವಾಟು ಹಾಗೂ ಕಲ್ಲಂಗಡಿ 1500 ಟನ್‌ಗಳಷ್ಟು ನಡೆಸಲು ಅಂದಾಜಿಸಲಾಗಿದೆ.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s