20 – 02 – 2019 ರಂದು ಶ್ರೀ . ಶಮೀದ್ ಓಲೆಕಾರ್ ರವರು ದೂರುದಾರರಿಂದ ರೂ . 1 , 00 , 000 / – ಲಂಚದ ಹಣವನ್ನು ಸ್ವೀಕರಿಸಿದ್ದು , ಎಸಿಬಿ ರಾಮನಗರ ಜಿಲ್ಲಾ ಠಾಣೆಯ ಅಧಿಕಾರಿಗಳು ದಾಳಿ ನಡೆಸಿರುತ್ತಾರೆ

ದಿನಾಂಕ : 20 . 02 . 2019 ಬೆಂಗಳೂರು ನಗರದ ಆರ್ . ಪಿ . ಸಿ ಲೇಔಟ್‌ನ ನಿವಾಸಿಯಾಗಿರುವ ವೈದ್ಯರು ಬಿಡದಿ ಹೋಬಳಿ , ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಲ್ಲ ಕೆಂಪನಹಳ್ಳಿ ಸರ್ವೆ ನಂ . 43 / 6 ರಲ್ಲಿ 0 – 33 ಗುಂಟೆ ಕೃಷಿ ಜಮೀನು ಹೊಂದಿದ್ದು , ಸದರಿ ಕೃಷಿ ಜಮೀನನ್ನು ಹಾಸ್ಪಿಟಲ್ ನಿರ್ಮಾಣದ ಉದ್ದೇಶಕ್ಕಾಗಿ ವಾಣಿಜ್ಯ ಉಪಯೋಗದ ಬದಲಾವಣೆ ಮಾಡಿಸಲು ಮೂಲಭೂತ ಸೌಕರ್ಯಗಳ ಬಗ್ಗೆ ಎನ್ . ಓ . ಸಿ ಪಡೆಯಲು ಮಂಚನಾಯಕನಹಳ್ಳಿ ಗ್ರಾಮ ಪಂಚಾಯ್ತಿ ಕಛೇರಿಯಲ್ಲಿ ಅರ್ಜಿ ಸಲ್ಲಿಸಿರುತ್ತಾರೆ . ಶ್ರೀ . ಶಮೀದ್ ಓಲೆಕರ್ , ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ , ಮಂಚನಾಯ್ಕನಹಳ್ಳಿ ಗ್ರಾಮ ಪಂಚಾಯ್ತಿ ರವರು ಎನ್ . ಓ . ಸಿ ನೀಡಲು ರೂ . 1 , 00 , 000 / – ಲಂಚದ ಹಣಕ್ಕಾಗಿ ಬೇಡಿಕೆ ಇಟ್ಟಿರುತ್ತಾರೆ . ದಿನಾಂಕ : 20 – 02 – 2019 ರಂದು ಶ್ರೀ . ಶಮೀದ್ ಓಲೆಕಾರ್ ರವರು ದೂರುದಾರರಿಂದ ರೂ . 1 , 00 , 000 / – ಲಂಚದ ಹಣವನ್ನು ಸ್ವೀಕರಿಸಿದ್ದು , ಎಸಿಬಿ ರಾಮನಗರ ಜಿಲ್ಲಾ ಠಾಣೆಯ ಅಧಿಕಾರಿಗಳು ದಾಳಿ ನಡೆಸಿರುತ್ತಾರೆ . ಲಂಚದ ಹಣವನ್ನು ಸ್ವಾಧೀನಪಡಿಸಿಕೊಂಡು ಇವರನ್ನು ದಸ್ತಗಿರಿ ಮಾಡಿದ್ದು , ಪ್ರಕರಣದ ತನಿಖೆ ಮುಂದುವರೆದಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s