ಯೂರೋಪಿನಲ್ಲಿ ಛಾಪು ಮೂಡಿಸಲು ವೆಂಚರ್ ಕ್ಯಾಟಲಿಸ್ಟ್ಸ್ ತೀರ್ಮಾನ

ಬೆಂಗಳೂರು, ಫೆಬ್ರವರಿ, 2019- ಭಾರತದ ನವೋದ್ಯಮಗಳ ಪಾಲಿಗೆ ಸಮಗ್ರ ಪರಿಪೋಷಣಾ ಕೇಂದ್ರವಾಗಿರುವ ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯು ಜಾಗತಿಕ ನವೋದ್ಯಮ (ಸ್ಟಾರ್ಟಪ್) ಕೇಂದ್ರವಾದ ಇಂಗ್ಲೆಂಡಿನಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಳ್ಳಲು ತೀರ್ಮಾನಿಸಿದೆ.

ಈ ಬಗ್ಗೆ ಮಾತನಾಡಿರುವ ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯ ಸಹ-ಸಂಸ್ಥಾಪಕ ಅನುಜ್ ಗೊಲೇಚ ಇದೇ ಮೊದಲ ಬಾರಿಗೆ ನವೋದ್ಯಮಗಳಲ್ಲಿ ಹಣ ಹೂಡುವವರನ್ನು ಯೂರೋಪ್-ಏಷ್ಯಾ ಮಟ್ಟದಲ್ಲಿ ಉತ್ತೇಜಿಸಲು ನಾವು ಹೆಸರಾಂತ ವೆಂಚರ್ ಕ್ಯಾಪಿಟಲ್ ಉದ್ದಿಮೆಯಾದ ಜೆಪಿಐಎನ್ ಜತೆ ಸಹಭಾಗಿತ್ವ ಹೊಂದಿದ್ದೇವೆ,’’ ಎಂದಿದ್ದಾರೆ.

ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯು ಈಗಾಗಲೇ 2019 ಮತ್ತು 2020ರ ನೀಲಿನಕಾಶೆಯನ್ನು ಅಭಿವೃದ್ಧಿ ಪಡಿಸಿದೆ. ಈ ವರ್ಷ ಎಚ್ಎನ್ಐ/ಕಾರ್ಪೊರೇಟ್ ಸಂಸ್ಥೆಗಳನ್ನು ಒಳಗೊಂಡಿರುವ 150ಕ್ಕೂ ಹೆಚ್ಚು ಹೂಡಿಕೆದಾರರ ಜಾಲವನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಮುಂದಿನ ವರ್ಷ ಹೂಡಿಕೆದಾರರ ಈ ಜಾಲದಲ್ಲಿ 500ಕ್ಕೂ ಹೆಚ್ಚು ಸದಸ್ಯರಿರುವಂತೆ ಮಾಡಲಾಗುವುದು,’’ ಎಂದು ಅವರು ತಿಳಿಸಿದ್ದಾರೆ.

ಅಲ್ಲದೆ, ಆರಂಭಿಕ ಹಂತದಲ್ಲಿ ನವೋದ್ಯಮಗಳಿಗೆ 125ರಿಂದ 150 ಕೋಟಿ ರೂ.ಗಳ ನಿಧಿಯನ್ನು ಪೂರೈಸಲಾಗುವುದು. ಮುಂದಿನ ಹಂತಗಳಲ್ಲಿ ಇದನ್ನು 250 ಕೋಟಿ ರೂ.ಗಳಿಗೆ ಏರಿಸಲಾಗುವುದು,’’ ಎಂದು ಗೊಲೇಚ ಹೇಳಿದ್ದಾರೆ.

ಅಲ್ಲದೆ, ನಮ್ಮ ಸಂಸ್ಥೆಯು ಸದ್ಯಕ್ಕೆ ಭಾರತದಲ್ಲಿ ಬಂಡವಾಳ ಹೂಡಿಕೆಗೆ ಅಗ್ರಗಣ್ಯ ಸಂಸ್ಥೆಯಾಗಿದ್ದು, ಏಷ್ಯಾ ಖಂಡದ ಮಟ್ಟದಲ್ಲಿ ಮುಂಚೂಣಿ ಐದು ಸ್ಥಾನಗಳಲ್ಲಿ ಒಂದನ್ನು ನಮ್ಮದಾಗಿಸಿಕೊಂಡಿದ್ದೇವೆ. ಜಗತ್ತಿನಲ್ಲಿ ಮೂರನೇ ಅತ್ಯಂತ ದೊಡ್ಡ ತಂತ್ರಜ್ಞಾನದ ಆಡುಂಬೊಲವಾಗಿರುವ ಲಂಡನ್, ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯ ಬೆಳವಣಿಗೆಗೆ ತಕ್ಕ ವಾತಾವರಣವನ್ನು ಒದಗಿಸಲಿದೆ,’’ ಎಂದು ಅವರು ಹೇಳಿದ್ದಾರೆ.ಅತ್ಯಧಿಕ ಬಂಡವಾಳ ಕ್ರೋಡೀಕರಣ, ಅಂತರರಾಷ್ಟ್ರೀಯ ಮಟ್ಟದ ಪ್ರತಿಭೆ ಮತ್ತು ವಿನೂತನ ವಾಣಿಜ್ಯ ವಹಿವಾಟು ಪರಿಕಲ್ಪನೆಗಳ ಆವಿಷ್ಕಾರವು ವೆಂಚರ್ ಕ್ಯಾಟಲಿಸ್ಟ್ಸ್ ಸಂಸ್ಥೆಯ ಶಕ್ತಿಗಳಾಗಿವೆ. ಯೂರೋಪ್ ಖಂಡದಲ್ಲಿ ಮೊದಲಿಗೆ ಲಂಡನ್ ನಗರದಲ್ಲಿ ನಾವು ಛಾಪು ಮೂಡಿಸಲಿದ್ದು, ನಂತರ ಇಡೀ ಯೂರೋಪಿನಾದ್ಯಂತ ನೆಲೆಯೂರುವ ಗುರಿ ಇಟ್ಟುಕೊಂಡಿದ್ದೇವೆ,’’ ಎಂದು ನಯನ್ ಗೊಲೇಚ ಭರವಸೆ ವ್ಯಕ್ತಪಡಿಸಿದ್ದಾರೆ.

ವೆಂಚರ್ ಕ್ಯಾಟಲಿಸ್ಟ್ಸ್ ಜೊತೆಗಿನ ಸಹಭಾಗಿತ್ವದ ಬಗ್ಗೆ ಮಾತನಾಡಿರುವ ಜೆಪಿಐಎನ್ ವ್ಯವಸ್ಥಾಪಕ ನಿರ್ದೇಶಕ ನಯನ್ ಗಾಲಾ, ನವೋದ್ಯಮಗಳ ಅಗಾಧ ಬೆಳವಣಿಗೆಗೆ ಮತ್ತು ರಚನಾತ್ಮಕ ಸಹಭಾಗಿತ್ವಕ್ಕೆ ಯೂರೋಪ್-ಏಷ್ಯಾ ವಲಯದ ಕಾರಿಡಾರ್ ಅನಿವಾರ್ಯವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಭಾರತ ಮತ್ತು ಬ್ರಿಟನ್ ನಡುವಿನ ವಾಣಿಜ್ಯ ವಹಿವಾಟು ವೃದ್ಧಿಸಿದ್ದು ಸದ್ಯಕ್ಕೆ ಇದು 20 ಶತಕೋಟಿ ಪೌಂಡ್ ಗಳಷ್ಟಿದೆ. ಹೀಗಾಗಿ, ಯೂರೋಪ್-ಏಷ್ಯಾ ಕಾರಿಡಾರ್ ವಲಯದ ಹೂಡಿಕೆದಾರರಿಗೆ ತಕ್ಕ ವೇದಿಕೆ ಒದಗಿಸುವ ಸಲುವಾಗಿ ವೆಂಚರ್ ಕ್ಯಾಟಲಿಸ್ಟ್ಸ್ ಜತೆ ಕೈ ಜೋಡಿಸಿದ್ದೇವೆ. ಇದರಿಂದಾಗಿ ಜಗತ್ತಿನೆಲ್ಲೆಡೆ ನವೋದ್ಯಮಗಳಿಗೆ ಮತ್ತಷ್ಟು ಉಜ್ವಲ ಪರಿಸರವನ್ನು ಒದಗಿಸಲು ಸಾಧ್ಯವಾಗಲಿದೆ’’ ಎಂದಿದ್ದಾರೆ.

City Today News

(citytoday.media)

9342997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.