ಸ್ವಾಧೀನ ಪುನರ್ವಸತಿ ಕಾಯ್ದೆ 2019 ಕಾಯ್ದೆಯ ಕರಾಳ ಮುಖ

ದಿನಾಂಕ 25 / 02 / 2019ರ

ಪೂಜಾವಾಣಿ ಪ್ರಕಟಣೆಯನ್ನು ಆಧರಿಸಿ ಭೂ ಸ್ವಾಧೀನ ತಿದ್ದುಪಡಿ ಮಸೂದೆ 2019 ಕ್ಕೆ ಕರ್ನಾಟಕ ರಾಜ್ಯ ಸರ್ಕಾರವು ಅನುಮೋದನೆ ಪಡೆದಿದ್ದು ರಾಜೀಪಾಲರ ಅಂಗಿಕಾರಬಾಕಿ ಇದೆ . ರಾಜ್ಯಪಾಲರ ಅಂಕಿತ ಬಿದ್ದ ತಕ್ಷಣ ಜಾರಿಗೆ ಬರುತ್ತದೆ . ಈ ಕಾಯ್ದೆಯಿಂದಾಗಿ ಸರ್ಕಾರದ ಯೋಜನೆಗೆ ಭೂಮಿ ಕಳೆದುಕೊಳ್ಳುವ ರೈತರ ಬದುಕು ಮೂರ ಬಟ್ಟೆಯಾಗಿರುತ್ತದೆ .

ಕಾಯೆಯ ಉದ್ದೇಶ

ಸರ್ಕಾರದ ಯೋಜನೆಗಳಿಗೆ ಭೂಮಿಯನ್ನು ಕಳೆದುಕೊಳ್ಳುವ ರೈತರ ಪುನರ್ವಸತಿ ಮತ್ತು ಅವರ ಪುನರ್‌ಸ್ಥಾಪನೆಯಾಗಿರುತ್ತದೆ . ಆದರೆ 2019ರ ಈ ಕಾಯ್ದೆ ಜಾರಿಗೆ ಬಂದರೆ ರೈತ ಪುನರ್‌ಸ್ಥಾಪನೆಯಾಗುವ ಬದಲು ರೈತನ ಬದುಕು ಬೀದಿಗೆ ಬರುತ್ತದೆ .

ಈ ಹಿಂದೆ ಬ್ರಿಟಿಷರ 1838 ರ ಲ್ಯಾಂಡ್ ಅಕ್ಲೀಜೆಷನ್ ಆಕ್ಸ್ ಪ್ರಕಾರ ಭೂಮಿಯನು ವಶಪಡಿಸಿಕೊಂಡು ಕಿಲುಬು ಕಾಸಿನ ಪರಿಹಾರವನ್ನು ನೀಡುತ್ತಿದ್ದ ಪರಿಸ್ಥಿತಿ ಇದ್ದಂತ ಸಮಯದಲ್ಲಿ 2014 ರಲ್ಲಿ ಯು . ಪಿ . ಎ ಸರ್ಕಾರವು ಕೇಂದ್ರದಲ್ಲಿ ಲ್ಯಾಂಡ್ ಅಕ್ಲೀಜೆಷನ್ ಬಿಲ್ಲನ್ನು ತಂದು ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಕಾಯ್ದೆ ರೂಪಿಸಿದರು . 2015 ರಲ್ಲ ಎನ್ . ಡಿ . ಎ ಸರ್ಕಾರವು ಈ ಕಾಯ್ದೆಗೆ ತಿದ್ದುಪಡಿಸಲು ಹೊರಟಾಗ ವಿರೋದ ಪಕ್ಷಗಳು ಇದನ್ನು ಪ್ರಬಲವಾಗಿ ವಿರೋಧಿಸಿದವು .

ಕರ್ನಾಟಕದಲ್ಲಿ ರೈತಪರ ಸರ್ಕಾರವೆಂದು ಹೇಳಿಕೊಂಡು ನಾವು ಮಣ್ಣಿನ ಮಕ್ಕಳೆಂದು ರೈತರ ಭೂಮಿಯಲ್ಲಿ ಪ್ರಚಾರಕ್ಕೋಸ್ಕರ ಪೈರು ನಾಟಿಮಾಡಿ ಪೋಸ್ ಕೊಡುವ ಮುಖ್ಯಮಂತ್ರಿಗಳು 2019 ರ ಭೂಸ್ವಾಧೀನ ತಿದ್ದುಪಡಿ ಮಸೂದೆಯನ್ನು ಜಾರಿಗೆ ತಂದು ನಿಜವಾದ ಮಣ್ಣಿನ ಮಕ್ಕಳನ್ನು ಗುಂಡಿಯಲ್ಲಿ ಹಾಕಿ ಗೋರಿ ಕಟ್ಟುವಂತಹ ಕೆಲಸಕ್ಕೆ ಮುಂದಾಗಿದ್ದಾರೆ . ಈ ಮಸೂದೆಯಲ್ಲಿ ಕಾಲ೦ 15 ( ಎ ) ಯನ್ನು ಸೇರಿಸಲಾಗಿದ್ದು ಇದರಿಂದ ಕೇವಲ ರಿಯಲ್ ಎಸ್ಟೇಟ್ ಕುಳಗಳಗೆ ಅನುಕೂಲವಾಗುವ ದುರುದ್ದೇಶ ಹೊಂದಿದೆ .

ಅಲ್ಲದೇ ರೈತರಿಗೆ ನೀಡುವ ಪರಿಹಾರದಲ್ಲಿ ಕಾಲಂ 23 ( ಎ ) ಯನ್ನು ಸೇರಿಸಿ ರೈತರಿಗೆ ಬಾರಿ ಅನ್ಯಾಯವನ್ನು ಎಸಗಿದ್ದಾರೆ , ರೈತನಿಗೆ ವ್ಯವಸಾಯದ ಹೊರತು ಬೇರೆ ಕೆಲಸ ಗೊತ್ತಿಲ್ಲದೇ ಇರುವುದರಿಂದ ಅವನು ಮತ್ತೆ ಭೂಮಿಯನ್ನು ಕೊಳ್ಳಬೇಕಾಗುತ್ತದೆ . ಅದರೆ ಭೂಮಿಯ ಬೆಲೆ ಗಗನಕ್ಕೇರಿರುವುದರಿಂದ ಇವರ ಘೋಷಣೆ ಮಾಡಲಿರುವ ಪರಿಹಾರದಲ್ಲಿ ಭೂಮಿ ಕೊಳ್ಳುವುದು ಕಷ್ಟ ಸಾಧ್ಯವಾಗಿದೆ . ಏಕೆಂದರೆ ಭೂಮಿಯ ನೋಂದಣಾದರಕ್ಕೂ ನಿಜ ಮಾರುಕಟ್ಟೆ ಬೆಲೆಗೂ ಭಾರಿ ವ್ಯತ್ಯಾಸವಿರುವುದು ಈ ಕಾಯ್ದೆ ರೂಪಿಸಿರುವಂತಹ ನಮ್ಮನ್ನ ಆಳುವವರಿಗೂ ತಿಳಿದಿದೆ . ಎಕೆಂದರೆ ಅನೇಕ ರಾಜಕಾರಣಿಗಳು ರಿಯಲ್ ಎಸ್ಟೇಟ್ ದಂದೆಗಳನ್ನು ನಡೆಸುವಂತಹವರೆ ಆಗಿದ್ದಾರೆ .

ಆನೇಕಲ್ ತಾಲ್ಲೂಕಿನ ಸೂರ್ಯನಗರ 4ನೇ ಹಂತಕ್ಕೆ ಕರ್ನಾಟಕ ಗೃಹಮಂಡಳಿಯು ಭೂಸ್ವಾಧೀನ ಪ್ರಕ್ರಿಯೆಯನ್ನು 2013 ರಲ್ಲಿ ಹೊರಡಿಸಿದ್ದು ಆ ಲಾಗಾಯ್ತಿನಿಂದ ಈವರೆವಿಗೂ ನೋಂದಣಾಶುಲ್ಕವನ್ನು ಸರಿಯಾದ ರೀತಿಯಲ್ಲಿ ನಿಗದಿ ಪಡಿಸಿರುವುದಿಲ್ಲ . ಅಂತಹದರಲ್ಲಿ ಕಸಬಾ ಹೋಬಳಿಯ ಇಂಢವಾಡಿ , ಬಗ್ಗನದೊಡ್ಡಿ , ಜಿಗಣಿ ಹೋಬಳಿಯ ಕಾಡುಜಕ್ಕನಹಳ್ಳಿ , ಬೊಮ್ಯಂಡಹಳ್ಳಿ , ಕೋನಸಂದ್ರ ಗ್ರಾಮಗಳ ಒಟ್ಟು 1938 ಎಕರೆ 13 ಗುಂಟೆ ಜಮೀನನ್ನು ವಶಪಡಿಸಿಕೊಂಡು ರೈತರ ಪರಿಸ್ಥಿತಿಯನ್ನು ತ್ರಿಶಂಕು ಸ್ಥಿತಿಯಲ್ಲಿ ಇದುವರೆವಿಗೂ ನಿಲ್ಲಿಸಿದ್ದರು . ಆದರೆ ಈಗ ಇದ್ದಕ್ಕಿದ್ದಂತೆ ಮಾನ್ಯ ಕುಮಾರಸ್ವಾಮಿಯವರ ಕಿಚಡಿ ಸರ್ಕಾರವು ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿ ತಂದು ರೈತರನ್ನು ನೇತು ಹಾಕಿ ಜೀವಂತವಾಗಿ ಚರ್ಮ ಸುಲಿಯಲು ಮುಂದಾಗಿದ್ದಾರೆ . ಈ ಐದು ಗ್ರಾಮಗಳ ಸುತ್ತಮುತ್ತಲ ಭೂಮಿಯ ಬೆಲೆ ಎಕರೆ ಒಂದಕ್ಕೆ 1 . 5 ಕೋಟಿಗೂ ಅಧಿಕವಾಗಿದ್ದು . ಆದರೆ ನೋಂದಣಾ ಮಾರ್ಗ ಸೂಚಿ ಬೆಲೆಯು ಕೇವಲ 18 ಲಕ್ಷದಿಂದ 50 ಲಕ್ಷದ ಅಸುಪಾಸಿನಲ್ಲಿದೆ . ಇದರಿಂದಾಗಿ ರೈತರಿಗೆ ಬಾರಿ ಅನ್ಯಾಯವಾಗುತ್ತದೆ , ಅದ್ದರಿಂದ 2019ರ ಈ ಕಾಯ್ದೆಯನ್ನು ವಾಪಸ್ಸು ಪಡೆಯಬೇಕೆಂದು ಈ ಮೂಲಕ ಆಗ್ರಹಿಸುತ್ತಿದ್ದೇವೆ . ಇಲ್ಲದೇ ಇರುವ ಪಕ್ಷದಲ್ಲಿ ರಾಜ್ಯಾದ್ಯಂತ ರೈತರ ಹೋರಾಟ ಪ್ರಾರಂಭಿಸಬೇಕಾಗುತ್ತದೆ .

ಹಕ್ಕೊತ್ತಾಯಗಳು

1 , ಕರ್ನಾಟಕ ಭೂಸ್ವಾಧೀನ ತಿದ್ದುಪಡಿ ಮಸೂದೆ 2019ನ್ನು ವಾಪಸ್ಸು ಪಡೆಯಬೇಕು . ರೈತರಿಗೆ 2014 ರ ಯು . ಪಿ . ಎ ಸರ್ಕಾರದ ಮಸೂದೆಯ ಪ್ರಕಾರ ಪರಿಹಾರ ನೀಡಬೇಕು .

2 . ಆನೇಕಲ್ ತಾಲ್ಲೂಕಿನ ಸೂರ್ಯನಗರದ 4ನೇ ಹಂತಕ್ಕೆ 2013ರಲ್ಲಿ ಸ್ವಾಧೀನಪಡಿಸಿಕೊಂಡು ಇಲ್ಲಿಯವರೆಗೂ ನೆನೆಗುದಿಗೆ ಬಿದಿದ್ದ ಯೋಜನೆಗೆ ತ್ವರಿತಗತಿಯಲ್ಲಿ ಚಾಲನೆಕೊಟ್ಟು ಈಗಿನ ಮಾರುಕಟ್ಟೆ ದರದಲ್ಲಿ ನಾಲ್ಕು ಪಟ್ಟು ಪರಿಹಾರವನ್ನು ನೀಡಬೇಕು .

3 , ಜಂಟಿ ಅಭಿವೃದ್ದಿಗೆ ಭೂಮಿ ನೀಡುವ ರೈತರುಗಳಿಗೆ ಶೇ 50ರ ದರದಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ನೀಡುವುದಲ್ಲದೇ ಯೋಜನೆಯನ್ನು ನಿಗದಿತ ಸಮಯದಲ್ಲಿ ಮುಗಿಸುವಂತಹ ಒಂದು ಅಶ್ವಾಸನೆಯನ್ನ ನೀಡುವಂತೆ ಕ್ರಮವಹಿಸುವುದು ತಪ್ಪಿದಲ್ಲಿ ಅದಕ್ಕೆ ನಷ್ಟ ಪರಿಹಾರ ಕೊಡಬೇಕು .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.