ಎಸ್ . ಜಿ . ಎಸ್ .ವಾಗ್ದೇವಿ ಸಂಪರ್ಕನೂನ್ಯತೆಯುಳ್ಳವರ ಪುನ:ಶ್ವೇತನ ಕೇಂದ್ರ ಮತ್ತು ನಾಯಕ್ ಹಿಯರಿಂಗ್ ಕೇರ್ ಕ್ಲಿನಿಕ್ ಸಹಭಾಗಿತ್ವದೊಂದಿಗೆ ವಿಶ್ವ ಶ್ರವಣ ದಿನಾಚರಣೆ 3ನೇ ಮಾರ್ಚ್ 2019ರಂದು ಬೆಳಗ್ಗೆ 8 ಗಂಟೆಗೆ WALKATHON

ಈ ದಿನ ಎಸ್ . ಜಿ . ಎಸ್ . ವಾಗ್ದೇವಿ ಸಂಪರ್ಕನ್ಯೂನ್ಯತೆಯುಳ್ಳವರ ಪುನ : ಶ್ವೇತನ ಕೇಂದ್ರದಿಂದ 5 ಕಿಲೋಮೀಟರ್‌ಗಳ ಕಾಲ್ನಡಿಗೆಯನ್ನು ಏರ್ಪಡಿಸಿದೆ . ಇದರ ಮೂಲ ಉದ್ದೇಶ ಶ್ರವಣದ ಪ್ರಾಮುಖ್ಯತೆ ಮತ್ತು ಶ್ರವಣನ್ಯೂನ್ಯತೆಯ ಬಗ್ಗೆ ಜನ ಸಾಮಾನ್ಯರಲ್ಲಿ ಅರಿವು ಮೂಡಿಸುವುದು . ಈ ಕಾಲ್ನಡಿಗೆಯ ಮುಂದಾಳತ್ವವನ್ನು ಬಸವನಗುಡಿಯ ಶಾಸಕರಾದ ಶ್ರೀರವಿಸುಬ್ರಮಣ್ಯ , ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಮತ್ತು ಬೆಂಗಳೂರು ಮಹಾನಗರ ಪಾಲಿಕೆಯ ಗಿರಿನಗರ ವಾರ್ಡ್ನ ಕಾಹೋರೇಟರ್‌ರಾದ ಶ್ರೀಮತಿ ನಂದಿನಿಯವರು ವಹಿಸಲಿದ್ದಾರೆ . ಕಾಲ್ನಡಿಗೆಯ ಮಾರ್ಗವು ಗಿರಿನಗರ , ಶ್ರೀನಿವಾಸನಗರ , ಶ್ರೀನಗರ ಮತ್ತು ಗಿರಿನಗರ . ಈ ಕಾಲ್ನಡಿಗೆಯಲ್ಲಿ ಯಾವ ವಯೋಮಿತಿಯು ಇಲ್ಲದೆ ಯಾರು ಬೇಕಾದರೂ ಭಾಗವಹಿಸಬಹುದು . ಭಾಗವಹಿಸಲು ಇಚ್ಚೆಯುಳ್ಳವರು ಕೆಳಕಂಡ ದೂರವಾಣಿ : 080 – 26727141 , 9845058544 ಸಂಖ್ಯೆಗೆ ನೊಂದಾಯಿಸಿಕೊಳ್ಳಬಹುದು . ನೊಂದಾಯಿಸಿಕೊಂಡ ಸದಸ್ಯರಿಗೆ ಉಪಹಾರ ಅಯೋಜಿಸಲಾಗಿರುತ್ತದೆ .

ದಯವಿಟ್ಟು ನೀವು ಬನ್ನಿ ಮತ್ತು ಎಲ್ಲರನ್ನು ಕರೆತನ್ನಿ ವಿಶ್ವ ಶ್ರವಣ ದಿನವನ್ನು ವಿಶ್ವಾದ್ಯಾಂತ ಆಚರಿಸಲಾಗುತ್ತದೆ . ಇದೇ ದಿನದಂದು WHO ಸಾರ್ವಜನಿಕರಿಗೆ ಉಚಿತವಾಗಿ ಶ್ರವಣ ಪರೀಕ್ಷೆ ಮಾಡಿಸಿಕೊಳ್ಳಲು ಅನುಕೂಲವಾಗುವಂತೆ ಒಂದು ಸರಳ ಸಾಫ್ಟ್ವೇರ್ ಅಪ್ಲಿಕೇಷನ್ ಬಿಡುಗಡೆ ಮಾಡಲಿದೆ . ಸುಲಭವಾಗಿ ಜನರು ಮೊಬೈಲ್ ಫೋನ್ ಬಳಸಿ ಕಿವಿ ಪರೀಕ್ಷೆ ಮಾಡಿಸಿಕೊಳ್ಳಲು ಸಹಾಯವಾಗುವಂತೆ ಡೆಮೊನ್‌ಸ್ಟೇಷನ್ ಹಾಗೂ ವಿವರಣೆ . ನಿಮಗೆ ಕಿವಿ ಕೇಳದು ಎಂದು ಸಂದೇಹವಿದೆಯೇ , ಈಗ ನಿಮ್ಮ ಮನೆಯಲ್ಲೇ ಕುಳಿತು ಕಿವಿ ತಪಾಸಣೆ ಮಾಡಿಕೊಳ್ಳಬಹುದು . ನಿಮ್ಮ ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ನಲ್ಲಿ ಈ ಹೊಸ ಪರಿಕರವನ್ನು ಬಳಸಿ ಶ್ರವಣ ಸಾಮರ್ಥ್ಯವನ್ನು ಪರೀಕ್ಷಿಸಿಕೊಳ್ಳಬಹುದು . ವಿಶ್ವಸಂಸ್ಥೆಯು ಇದೇ ಮಾರ್ಚ್ ಮೂರರಂದು ಒಂದು ಅಪ್ಲಿಕೇಷನ್ ಬಿಡುಗಡೆ ಮಾಡಲಿದೆ . ಇದರಿಂದ ಯಾವೊಬ್ಬ ವ್ಯಕ್ತಿಯ ಶ್ರವಣ ಸಾಮರ್ಥ್ಯವಾಗಿದೆಯೇ ಅಥವ ಕಿವಿಯಲ್ಲಿ ಕೇಳುವ ಸಮಸ್ಯೆ ಇದೆಯೇ ಎಂದು ಖಚಿತ ಪಡಿಸಿಕೊಳ್ಳಬಹುದು . ಶ್ರವಣ ನ್ಯೂನ್ಯತೆಯ ಆರಂಭಿಕ ಪತ್ತೆಯಿಂದ ಶ್ರವಣ ಪುನಃಶೇತನ ಪರಿಣಾಮಕಾರಿಯಾಗಬಲ್ಲದು .

ಶ್ರವಣ ನ್ಯೂನ್ಯತೆಯನ್ನು ಮೊದಲೇ ಪರಿಹರಿಸಿಕೊಳ್ಳಬಹುದು . ಶ್ರವಣ ಕೊರತೆಯನ್ನು ಎದುರಿಸುತ್ತಿರುವವರು ಆರಂಭದಲ್ಲಿಯೇ ಖಚಿತಪಡಿಸಿಕೊಳ್ಳಲು ಅನುಕೂಲವಾಗುವ ಹಾಗೆ ವಿಶ್ವಸಂಸ್ಥೆ ಹೊಸ ವಿಧಾನವನ್ನು ಪರಿಚಯಿಸಲಿದೆ . ಸಾಮಾನ್ಯವಾಗಿ ಗದ್ದಲದ , ಸಂಗೀತ ಕ್ಷೇತ್ರದಲ್ಲಿ ತೊಡಗಿರುವವರು , ಸಂಗೀತ ನುಡಿಸುವವರು ಅಥವಾ 65 ವರ್ಷಕ್ಕೆ ಶ್ರವಣ ಸಾಮರ್ಥ್ಯ ಕುಗ್ಗುವ ಸಾಧ್ಯತೆ ಹೆಚ್ಚು . ಶ್ರವಣ ತಪಾಸಣೆಗೆ ಅನುಕೂಲವಾಗುವಂತೆ ವಿಶ್ವಸಂಸ್ಥೆಯು ಮೊಬೈಲ್ ಮತ್ತು ವೆಬ್ ಜಾಲತಾಣ ಆಧಾರಿತ ಸಾಫ್ಟ್ವೇರ್ ಅಪ್ಲಿಕೇಷನನ್ನು ಸಿದ್ಧಪಡಿಸಿದೆ . ಗದ್ದಲದಲ್ಲಿ ಅಂಕಿ ಶಬ್ದ ತಂತ್ರಜ್ಞಾನವನ್ನು ಆಧರಿಸಿ ಈ ಪರಿಕರವನ್ನು ಶ್ರವಣ ಸಾಮಥ್ಯ ಪರೀಕ್ಷಿಸಲು ಮತ್ತು ಕಾಲ ಕ್ರಮೇಣ ಮೇಲ್ವಿಚಾರಣೆ ಮಾಡಲು ಉಪಯೋಗವಾಗುವಂತೆ ತಯಾರು ಮಾಡಿದೆ . ಈ ಅಪ್ಲಿಕೇಷನ್ ಬಳಸುವವರಿಗೆ ಯಾವುದೇ ವೆಚ್ಚವಿಲ್ಲದೇ ಫಲಿತಾಂಶಗಳನ್ನು ನೀಡವುದಲ್ಲದೇ ಕಾಲಾನಂತರ ಅವರ ಶ್ರವಣ ಶಕ್ತಿಯ ದಾಖಲೆಗಳನ್ನು ಹಲವಾರು ವರ್ಷಗಳವರೆಗೂ ಪರಿಶೀಲಿಸಬಹುದಾಗಿದೆ . ಹಳ್ಳಿಗಾಡಿನ ಜನ ಶ್ರವಣ ಸಮಸ್ಯೆಯನ್ನು ಕೂಡ ಆರೋಗ್ಯ ಕಾರ್ಯಕರ್ತರು ಪರಿಶೀಲಿಸಬಹುದು . ಅಪ್ಲಿಕೇಷನ್ ಆಂಗ್ಲ ಭಾಷೆಯಲ್ಲಿ ಮಾತ್ರ ಲಭ್ಯವಿದ್ದು , ಮುಂದಿನ ದಿನಗಳಲ್ಲಿ ಇತರೆ ಭಾಷೆಗಳಲ್ಲೂ ಲಭ್ಯವಾಗುವಂತೆ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ . ಕಿವಿ ಕೇಳದ ಪ್ರತಿಯೊಬ್ಬರೂ ಶ್ರವಣ ನ್ಯೂನ್ಯತೆಯನ್ನು ಖಚಿತಪಡಿಸಿಕೊಳ್ಳಬೇಕೆಂಬುದು ವಿಶ್ವಸಂಸ್ಥೆಯ ಆಶಯವಾಗಿದೆ . ಈ ಅಪ್ಲಿಕೇಷನ್ನಿನ ಮತ್ತೊಂದು ವೈಶಿಷ್ಟ್ಯವೆಂದರೆ ಅಂಡ್ರಾಯಿಡ್ ಮತ್ತು I 0 S ಪ್ಲಾಟ್‌ಫಾರಂಗಳಲ್ಲಿ ಲಭ್ಯವಿರುವ ಸ್ವಯಂಚಾಲಿತ ಪರೀಕ್ಷೆ ನೀವು ಸಂಗೀತ ಆಲಿಸಲು ಬಳಸುವ ಮೊಬೈಲ್‌ನ ಇಯರ್‌ಫೋನ್ ಬಳಸಿ 2 ನಿಮಿಷದಲ್ಲಿ ನಿಮ್ಮ ಶ್ರವಣ ಸಾಮಥ್ಯದ ಬಗ್ಗೆ ಮಾಹಿತಿ ನೀಡುತ್ತದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.