‘1 ಎಂ.ಜಿ. ಲಿಡೋ ಮಾಲ್ ನಿಂದ ‘ಬ್ಯೂಟಿಫುಲ್‍ ಒನ್’ ಅಭಿಯಾನ; ಮಹಿಳೆಯರು ಪರಸ್ಪರ ಬೆಂಬಲವಾಗಿ ನಿಲ್ಲಲು ಪ್ರೇರಣೆ’

1 ಎಂ.ಜಿ. ಲಿಡೋ ಮಾಲ್ ನಿಂದಬ್ಯೂಟಿಫುಲ್ಒನ್ಅಭಿಯಾನ; ಮಹಿಳೆಯರು ಪರಸ್ಪರ ಬೆಂಬಲವಾಗಿ ನಿಲ್ಲಲು ಪ್ರೇರಣೆ

ಅಭಿಯಾನ ಮಹಿಳೆಯರು ಸಾಮಾಜಿಕ ಜಾಲತಾಣದ #onesheforshe ಹ್ಯಾಂಡಲ್ ಮೂಲಕ ತಮ್ಮ ಸಬಲೀಕರಣದ ಗಾಥೆಗಳನ್ನು ಹಂಚಿಕೊಳ್ಳಲು ಹಾಗೂ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ‘JOY-AA-THON’ ನಲ್ಲಿ ಕೈಜೋಡಿಸುವಂತೆ ಮನವಿ ಮಾಡುತ್ತದೆ.

ಬೆಂಗಳೂರು, 28, ಫೆಬ್ರವರಿ 2019; ನಗರದ ಅತ್ಯುತ್ತಮ ಶಾಪಿಂಗ್ ಹಾಗೂ ಆಹಾರ ವೈವಿಧ್ಯತೆಯ ತಾಣ 1 ಎಂ.ಜಿ. ಲಿಡೋ ಮಾಲ್, ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿಬ್ಯೂಟಿಫುಲ್ ಒನ್ಎಂಬ ಅಭಿಯಾನಕ್ಕೆ ಚಾಲನೆ ನೀಡಲಿದೆ. ಅಭಿಯಾನ ಆಧುನಿಕ ಮಹಿಳೆಯಆಂತರಿಕ ಸೌಂದರ್ಯಹಾಗೂಬಾಹ್ಯ ಸೌಂದರ್ಯ ಮೇಲೆ ಬೆಳಕು ಚೆಲ್ಲಲಿದೆ. ಇದು ಸ್ನೇಹ ಹಾಗೂ ಸೋದರತ್ವವನ್ನು ಸಾರಲಿದೆ. 1 ಎಂಜಿ ಲಿಡೋ ಮಾಲ್ ದೇಶದ ಎಲ್ಲ ಮಹಿಳೆಯರನ್ನು #onesheforshe ಹ್ಯಾಂಡಲ್ ಮೂಲಕ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಸಬಲೀಕರಣದ ಹಾದಿಯನ್ನು ಹಂಚಿಕೊಳ್ಳುವಂತೆ ಮನವಿ ಮಾಡಿದೆ. ಅಭಿಯಾನದ ಅಂಗವಾಗಿ 8 ಮಾರ್ಚ್ 2019ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ‘JOY-AA-THON’ ಅನ್ನು ಕೂಡ ಹಮ್ಮಿಕೊಳ್ಳಲಾಗಿದೆ. ಇದು ಮಹಿಳೆಯರು ಪರಸ್ಪರ ಒಬ್ಬರಿಗೊಬ್ಬರು ಸದಾ ಬೆಂಬಲವಾಗಿ ನಿಲ್ಲಲು ಪ್ರೇರೇಪಿಸುವ ಗುರಿ ಹೊಂದಿದೆ.

ಮಹಿಳೆಯರ ಕುರಿತು ಲಿಂಗಾಧಾರಿತ ಪೂರ್ವಾಗ್ರಹ ಭಾವನೆಗಳನ್ನು ಬದಲಾಯಿಸಿ, ಮಹಿಳೆಯರ ಅಭಿವೃದ್ಧಿಗೆ ಬೆಂಬಲ ನೀಡುವ ಉದ್ದೇಶವನ್ನು ಅಭಿಯಾನ ಹೊಂದಿದೆ. ‘ಬ್ಯೂಟಿಫುಲ್ ಒನ್ಮಹಿಳೆಯರಿಗೆ ತಮ್ಮ ಆಂತರಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು, ಪರಸ್ಪರ ಪ್ರೇರಣೆಯಾಗಿರಲು ಕಲಿಸುತ್ತದೆ. 1 ಎಂ.ಜಿ. ಲಿಡೋ ಮಾಲ್ , ‘ಓರ್ವ ಮಹಿಳೆ ಇನ್ನೋರ್ವ ಮಹಿಳೆಯನ್ನು ಬೆಂಬಲಿಸಿದರೆ ಸಿಗುವ ಶಕ್ತಿ ಹಾಗೂ ಅದರಿಂದ ಸಾಧಿಸಬಹುದಾದುದನ್ನು ಅನಾವರಣಗೊಳಿಸಲು ಸಜ್ಜಾಗಿದೆ.

ಇಂದು ನಾವು, ‘ಲಿಂಗ ಸಮಾನತೆಹಾಗೂತಾರತಮ್ಯ ನೀತಿಗಳ ವಿರೋಧ ಬಗ್ಗೆ ಮಾತನಾಡುವ ಬದಲು, ಮಹಿಳೆಯರು ತಮ್ಮನ್ನು ಸಕಾರಾತ್ಮಕತೆ ಹಾಗೂ ಪರಸ್ಪರ ಬೆಂಬಲದಿಂದ ಸಬಲೀಕರಣಗೊಳಿಸಿಕೊಳ್ಳಬೇಕು. ಅಭಿಯಾನ ಮಹಿಳೆಯರು ಸಾಮಾಜಿಕ ಜಾಲತಾಣದಲ್ಲಿ #onesheforshe ಅಭಿಯಾನದಡಿ ತನ್ನ ಸಬಲೀಕರಣದ ಕತೆಯನ್ನು ಹಂಚಿಕೊಳ್ಳುವಂತೆ ಮನವಿ ಮಾಡುತ್ತಿದೆ. ದೇಶದಾದ್ಯಂತ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಮತ್ತೋರ್ವರನ್ನು ಪ್ರೇರೇಪಿಸಬೇಕು. ಮತ್ತೋರ್ವ ಮಹಿಳೆಯಲ್ಲಿ ಹೊಸ ಶಕ್ತಿ ಹಾಗೂ ಸಾಧನೆಯ ಸ್ಪೂರ್ತಿ ತುಂಬಿ ಅವರ ಭವ್ಯ ಭವಿಷ್ಯಕ್ಕೆ ಬುನಾದಿಯಾಗಬೇಕು.

ಬ್ಯೂಟಿಫುಲ್ ಒನ್ಕ್ಲಿನಿಕ್, ಕಾಮ ಆಯುರ್ವೇದ, ಎಸ್ಟಿ ಲಾಡರ್, ಮ್ಯಾಕ್, ದಿ ಬಾಡಿ ಶಾಪ್ ಉತ್ಪನ್ನಗಳ ಸಹಯೋಗದೊಂದಿಗೆಬಾಹ್ಯ ಸೌಂದರ್ಯಕುರಿತ ಎರಡನೇ ಹಂತದ ಅಭಿಯಾನವನ್ನು ಕೂಡ ಆರಂಭಿಸಲಿದೆ. 1st to 7th ಮಾರ್ಚ್ 2019 ರಂದು ಮಾಲ್ಗೆ ಆಗಮಿಸುವ ಮಹಿಳೆಯರಿಗೆ ಆಲ್ ಬ್ಯೂಟಿ ಶಾಪ್ ವತಿಯಿಂದ ಉಚಿತ ಸೌಂದರ್ಯವರ್ಧಕ ಹಾಗೂ ಮೇಕ್ಓವರ್ ಒದಗಿಸಲಿದೆ.

ಬ್ಯೂಟಿಫುಲ್ ಒನ್ಅಭಿಯಾನ 2019 ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ‘JOY-AA-THON’ ಎಂಬ ಮೆಗಾ ಈವೆಂಟ್ ನೊಂದಿಗೆ ಮುಕ್ತಾಯಗೊಳ್ಳಲಿದೆ. ‘JOY-AA-THON ಅಭಿಯಾನ ಎಲ್ಲ ಮಹಿಳೆಯರನ್ನು ಒಟ್ಟಾಗಿಸಿ, ಒಂದು ಸದೃಢ ಸಂಪರ್ಕವನ್ನು ನಿರ್ಮಿಸುವ ಉದ್ದೇಶ ಹೊಂದಿದೆ. ಇದರ ಘೋಷವಾಕ್ಯದಲ್ಲಿshe’ ಎಂದರೆ ಇತರರಿಗೆ ಪ್ರೇರಣೆ ಎಂದರ್ಥ ಬರುತ್ತದೆ. ಇದು ಹಲವರನ್ನು ಅಭಿಯಾನಕ್ಕೆ ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿ, ಅದನ್ನು ಜಾಗತಿಕ ಒಗ್ಗಟ್ಟಿನ ಕಾರ್ಯಕ್ರಮವನ್ನಾಗಿ ರೂಪಿಸಲಿದೆ.

ಕಾರ್ಯಕ್ರಮದಲ್ಲಿ ಪ್ರಭಾವಿ ಮಹಿಳೆಯರು, ಕಾರ್ಪೊರೇಟ್ ನಾಯಕರು, ಉದ್ಯೋಗಸ್ಥ ಮಹಿಳೆಯರು, ಗೃಹಿಣಿಯರು ಹಾಗೂ ಮಕ್ಕಳು ಸೇರಿ 500ಕ್ಕೂ ಹೆಚ್ಚು ಮಹಿಳೆಯರು ಪಾಲ್ಗೊಳ್ಳಲಿದ್ದಾರೆ. ಮಹಿಳೆಯರ ಹೆಮ್ಮೆಯ ನಡಿಗೆ ‘JOY-AA-THON’ ಅನ್ನು ಸುಲ್ತಾನ್ಡೈಮಂಡ್ಸ್ ಆ್ಯಂಡ್ ಗೋಲ್ಡ್ ಜ್ಯುವೆಲ್ಲರಿಯ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ. ಇದು ಮಾರ್ಚ್ 8 ರಂದು ಸಂಜೆ 4.30ಕ್ಕೆ 1 ಎಂ.ಜಿ. ಲಿಡೋ ಮಾಲ್‍ ನಿಂದ ಆರಂಭಗೊಂಡು, ಮಣಿಪಾಲ್‍ ಸೆಂಟರ್ ಮೂಲಕ ಸಾಗಿ ಮತ್ತೆ 1 ಎಂ.ಜಿ. ಲಿಡೋ ಮಾಲ್‍ ಬಳಿ ಅಂತ್ಯಗೊಳ್ಳಲಿದೆ.

‘JOY-AA-THON’ ನಲ್ಲಿ ಪಾಲ್ಗೊಳ್ಳುವ ಮಹಿಳೆಯರಿಗೆ 1 ಎಂ.ಜಿ. ಲಿಡೋ ಮಾಲ್ವತಿಯಿಂದ ಆಕರ್ಷಕ ಉಡುಗೊರೆ ಹಾಗೂ ಗಿಫ್ಟ್ ವೋಚರ್ಗಳು ದೊರೆಯಲಿವೆ.

25 ದಿನಗಳ ಸುದೀರ್ಘ ಅವಧಿಯ ‘JOY-AA-THON’ ಕಾರ್ಯಕ್ರಮದ ಕುರಿತು ಮಾತನಾಡಿದ 1 ಎಂ.ಜಿ. ಲಿಡೋ ಮಾಲ್ ಮಾರ್ಕೆಟಿಂಗ್ ಮ್ಯಾನೇಜರ್, ಭಾನು ಪ್ರವೀಣ್, ‘ಬ್ಯೂಟಿಫುಲ್ಒನ್ಅಭಿಯಾನಕ್ಕೆ ಎಲ್ಲ ಮಹಿಳೆಯರನ್ನು ರಾಯಭಾರಿಯನ್ನಾಗಿಸುವ ಮೂಲಕ ನಾವು ಒಬ್ಬ ಮಹಿಳೆ ಮತ್ತೋರ್ವರನ್ನು ಬೆಂಬಲಿಸುವಂತಹ ವಾತಾವರಣ ಸೃಷ್ಟಿಸಲು ಪ್ರಯತ್ನಿಸುತ್ತಿದ್ದೇವೆ. ಶತಮಾನಗಳಿಂದ ಮಹಿಳೆಯರು ಲಿಂಗ ತಾರತಮ್ಯ, ಪುರುಷ ಪ್ರಧಾನ ನೀತಿಯ ಕುರಿತು ಧ್ವನಿ ಎತ್ತುತ್ತಲೇ ಬಂದಿದ್ದಾಳೆ. ಆದರೆ, ಇದಕ್ಕೆ ನಿಜವಾದ ಪರಿಹಾರ ಅಡಗಿರುವುದು ಮಹಿಳೆಯರನ್ನು ಸಹೋದರತ್ವ ಭಾವದಡಿಯಲ್ಲಿ ಸದೃಢಗಳಿಸುವುದು, ಇದರಿಂದ ಓರ್ವ ಮಹಿಳೆ ಇನ್ನೋರ್ವಳನ್ನು ಬೆಂಬಲಿಸುವ ಮೂಲಕ ಇಬ್ಬರೂ ಯಶಸ್ಸು ಕಾಣಬಹುದು. ಮಹಿಳೆ ಇನ್ನೋರ್ವ ಮಹಿಳೆಯರಲ್ಲಿ ಸಹೋದರಿಯ ಭಾವ ಕಂಡುಕೊಂಡಲ್ಲಿ ಅದಕ್ಕಿಂತ ಸದೃಢವಾದ ಬೆಂಬಲ ಬೇರೊಂದಿಲ್ಲ ಎಂದರು.

ಸಾಮಾಜಿಕ ಜಾಲತಾಣದಲ್ಲಿ ನಾವು ಆರಂಭಿಸಿರುವ #onesheforshe ಅಭಿಯಾನ ಸಾಕಷ್ಟು ಮಹಿಳೆಯರನ್ನು ಒಟ್ಟುಗೂಡಿಸಿ, ಸಾವಿರಾರು ಮಹಿಳೆಯರ ಬದುಕನ್ನು ಬದಲಿಸಲಿದೆ ಎಂಬ ಭರವಸೆ ನಮಗಿದೆ. ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ನಾವು ಸಂಪೂರ್ಣ ಮಹಿಳೆಯರ ಸಹಯೋಗದೊಂದಿಗೆ ಆಚರಿಸಲಿದ್ದೇವೆ ‘JOY-AA-THON’ ಎಂಬ ಮೆಘಾ ಕಾರ್ಯಕ್ರಮ ಸಮಾಜದ ಎಲ್ಲ ವರ್ಗದ ಮಹಿಳೆಯರನ್ನು ಒಟ್ಟುಗೂಡಿಸಿ ಅವರ ಯಶಸ್ಸಿನ ಗಾಥೆಗೆ ಕಿವಿಯಾಗಲಿದೆಎಂದರು.

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.