“ಭೂಸ್ವಾಧಿನ ಕಾಯಿದೆಗೆ ತಿದ್ದುಪಡಿಯನ್ನು ತಂದಿರುವುದು ರೈತರಿಗೆ ಮರಣ ಶಾಸನವಾಗಿದೆ” – ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

ಕಳೆದ ಅಧೀವೇಶನದ ಕಡೆಯ ದಿನ ಅಂಗಿಕಾರ ಪಡೆದ ಪ್ರಮುಖವಾದ ಅಂಶವೆಂದರೆ , ಅದು ಭೂಸ್ವಾಧಿನ ಕಾಯಿದೆಗೆ ತಿದ್ದುಪಡಿಯನ್ನು ತಂದಿರುವುದು ರೈತರಿಗೆ ಮರಣ ಶಾಸನವಾಗಿದೆ . ಕಳೆದ 2013 – 2014 ರ ಸಾಲಿನಲ್ಲಿ ಭಾರತ ಸರ್ಕಾರ ತಂದಂತಹ ಪ್ರಮುಖ ಕಾಯಿದೆ ದೇಶ ರೈತರ ವಿರೋಧದ ನಡುವೆ ಸ್ವಲ್ಪ ಸಮಾಧಾನ ತರುವಂತಹ ಕಾನೂನುನಾಗಿದೆ . ಇಂತಹ ಕಾನೂನುನಿಗೆ ತಿದ್ದುಪಡಿಯನ್ನು ತರುವಲ್ಲಿ ಮಾನ್ಯ ಮುಖ್ಯಮಂತ್ರಿ ಎಚ್ , ಡಿ . ಕುಮಾರಸ್ವಾಮಿಯವರು ತೆಗೆದುಕೊಂಡಿರುವ ತೀರ್ಮಾನ . ಇದಕ್ಕೆ ಮುಖ್ಯ ಕಾರಣ . ನೈಸ್ ಕಂಪನಿಯ ಹಾಗೂ ರೈತರ ವಿರುದ್ಧ ನಡೆಯುತ್ತಿದ್ದ ಕೇಸ್‌ನಲ್ಲಿ ಕರ್ನಾಟಕ ಸರ್ಕಾರವು ಸರ್ವೋಚ್ಚ ನ್ಯಾಯಲಯದಲ್ಲಿ ಮಾನ್ಯ ಸಿದ್ದರಾಮಯ್ಯ ಮುಖ್ಯಮಂತ್ರಿ ಇರುವಾಗ 24 / 01 / 2018 ರಲ್ಲಿ ಸರ್ಕಾರವು ತನ್ನ ಹೇಳಿಕೆಯನ್ನು ನ್ಯಾಯಲಯದಲ್ಲಿ ಲಿಖಿತವಾಗಿ ದಾಖಲೆ ಮಾಡಲಾಗಿದೆ . ಈ ಸಂದರ್ಭದಲ್ಲಿ ಹೇಳಿಕೆಯು ರೈತರ ಪರ ಇರಲಿಲ್ಲ ಮತ್ತು ನೈಸ್ ಕಂಪನಿಯ ಪರವೂ ಇರಲಿಲ್ಲ , ಇಲ್ಲಿಗೆ ರಾಜ್ಯ ಸರ್ಕಾರದ ಕೆಲಸ ಮುಗಿಯಿತು . ಈಗ ಮಾನ್ಯ ಮಖ್ಯಮಂತ್ರಿ ಎಚ್ . ಡಿ . ಕುಮಾರಸ್ವಾಮಿಯವರು ಮುಖ್ಯಮಂತ್ರಿ ಆದಮೇಲೆ ಸರ್ಕಾರವನ್ನು ಕೋರ್ಟ್ ಪ್ರಶ್ನೆ ಕೇಳದೆ ಇದ್ದರೂ , ಕರೆಯದೆ ಇದ್ದರೂ ಇವರುಗಳೇ ಸ್ವಂತ ಆಸಕ್ತಿ ವಹಿಸಿ ; ಸರ್ಕಾರದ ಅಡ್ವಾಕೇಟ್ ಜನರಲ್ ಉದಯ ಹೊಳ್ಳ ಅವರನ್ನು ಕೋರ್ಟ್‌ಗೆ ಕಳುಹಿಸಿ ನೈಸ್ ಕಂಪನಿಯ ಪರವಾಗಿ ಮತ್ತೊಂದು ಹೇಳಿಕೆ 30 / 08 / 2018 ಕ್ಕೆ ಸಲ್ಲಿಕೆ ಮಾಡುತ್ತಾರೆ . ಇದನ್ನ ಗಮನಿಸಿ ಸುಪ್ರೀಂ ಕೋರ್ಟ್ ತಕ್ಷಣವೆ ತನ್ನ ತಿರ್ಮಾನವನ್ನು 05 / 09 / 2018 ಕ್ಕೆ ರೈತರ ದೂರನ್ನು ವಜಾಮಾಡಿ ನೈಸ್ ಕಂಪನಿಯ ಪರ ಆದೇಶವನ್ನು ಮಾಡುತ್ತದೆ , ಇದರಿಂದ ಸುಮಾರು 21 ಸಾವಿರ ಎಕರೆ ಪ್ರದೇಶ ಭೂಮಿಗೆ 5 ಟೌನ್‌ಶಿಪ್‌ಗಳು ಒಳಗೊಂಡಂತೆ ಎಲ್ಲ ಭೂಮಿಯ ಹಕ್ಕು ನೈಸ್ ಕಂಪನಿಯದಾಗಿದ್ದು , ಇದರ ಸೂತ್ರದಾರಿಯಾಗಿ ಕೆಲಸ ಮಾಡುತ್ತ ಬಂದಿದ್ದ ಡಿ . ಕೆ . ಶಿವಕುಮಾರ್ ಕಳೆದ ಸರ್ಕಾರದಲ್ಲಿ ತನ್ನ ಪ್ರಭಾವ ಬೀರಿದರು ಪರಿಣಾಮವಾಗಿರಲಿಲ್ಲ . ನೈಸ್ ಕಂಪನಿಗೆ ಭೂಮಿ ಪಡೆಯಲು ರೈತರಿಗೆ ಪರಿಹಾರ ನೀಡಲು ದುಬಾರಿ ಹಣ ಬೇಕಾಗಿದೆ . ಇಷ್ಟು ಪ್ರಮಾಣ ಭೂಮಿ ಬೆಲೆ ಕಮ್ಮಿ ಮಾಡಿ ಖರೀದಿ ಮಾಡಲು ಒಂದು ಕಾನೂನಿನ ಮಾರ್ಗವೊಂದು ಬೇಕಾಗಿದೆ . ಅದುವೇ “ ಭೂಸ್ವಾಧೀನ ಕಾಯಿದೆ ತಿದ್ದುಪಡಿ ” ಇದರಿಂದ ಸರ್ಕಾರದ ಪ್ರಮುಖ ಯೋಜನೆಗಳಿಗೆ ಭೂಮಿ ಪಡೆಯುವ ಉದ್ದೇಶವನ್ನು ಉಲ್ಲೇಖಿಸಿ ಇದರ ಜೊತೆಯಲ್ಲಿ ಪಿ . ಪಿ . ಪಿ . ಯೋಜನೆ ಕೂಡ ಸೇರಿಸಲಾಗಿದೆ . ಈ ಅಧಿಸೂಚನೆ 2019 ಎಂದು ತಿದ್ದುಪಡಿ ಮಾಡಿ ರಾಜ್ಯಪಾಲರಿಗೆ ಅನುಮೋದನೆಗಾಗಿ ಕಳುಹಿಸಲಾಗಿದೆ , ಈ ತಿದ್ದುಪಡಿಯನ್ನು ಮಾನ್ಯ ಹೆಚ್ . ಡಿ . ದೇವೇಗೌಡರು ಸರ್ಕಾರಕ್ಕೆ ತಿಳುವಳಿಕೆಯನ್ನು ನೀಡಬೇಕು . ನೈಸ್ ಕಂಪನಿಯ ಪರ ಸುಪ್ರೀಂಕೋರ್ಟ್ ನೀಡಿರುವ ತೀರ್ಮಾನವನ್ನು ಸರಿಪಡಿಸಲು ಸದನ ಸಮಿತಿಯ ವರದಿಯನ್ನು ಅನುಷ್ಠಾನಗೊಳಿಸಲು ನಿರ್ದೇಶನವನ್ನು ನೀಡಬೇಕೆಂದು ಸನ್ಮಾನ್ಯ ಹೆಚ್ . ಡಿ . ದೇವೇಗೌಡರಿಗೆ ಮನವಿ ಮಾಡುತ್ತೇವೆ ಮತ್ತು ಮುಂದಿನ ತೀರ್ಮಾನವನ್ನು ನಾಳೆ ನಡೆಯುವ ಚಿಕ್ಕಬಳ್ಳಾಪುರದ ರೈತ ಸಮಾವೇಶದಲ್ಲಿ ಕೈಗೊಳ್ಳಲಿದೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.