ಸಿ . ಸಿ . , ಪೊಲೀಸರ ಕಾರ್ಯಾಚರಣೆ ನಿರುದ್ಯೋಗಿ ಯುವಕ – ಯುವತಿಯರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚಿಸುತ್ತಿದ್ದ ನರಗುಂದದ ಶ್ರೀ ಸಿದ್ದಅಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೀರನಗೌಡ ಬಸನಗೌಡ ಪಾಟೀಲ ಎಂಬಾತನ ಬಂಧನ

ದಿನಾಂಕ : 18 – 02 – 2018 ರಂದು ಮಾನ್ಯ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣದಲ್ಲಿ ನಡೆದ ಜನತಾ ದರ್ಶನದಲ್ಲಿ ಬಿಜಾಪುರ , ಗದಗ , ಬಾಗಲಕೋಟೆ , ಕೊಪ್ಪಳ , ರಾಮನಗರ ಜಿಲ್ಲೆಗಳಿಂದ ಬಂದ ಸುಮಾರು 10ಕ್ಕೂ ಹೆಚ್ಚಿನ ನಿರುದ್ಯೋಗಿ ವಿದ್ಯಾವಂತ ಯುವಕ – ಯುವತಿಯರು ಮಾನ್ಯ ಮುಖ್ಯಮಂತ್ರಿಗಳನ್ನು ಭೇಟಿಯಾಗಿ 205 ರಿಂದ ಈವರೆಗೆ ಕರ್ನಾಟಕ ಲೋಕ ಸೇವಾ ಆಯೋಗ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳು ಹಾಗೂ ರಾಜ್ಯ ಸರ್ಕಾರದ ಇನ್ನಿತರೆ ಇಲಾಖೆಗಳು ನಡೆಸುವ ಸ್ಪರ್ಧಾತ್ಮಕ ಪಲಕ್ಷೆಗಳಲ್ಲಿ ಕೇಂದ್ರ ರೈಲ್ವೆ ನಿಗಮ ನಡೆಸುವ ಪಲಕ್ಷೆಗಳಲ್ಲಿ ಕೆಲಸ ಕೊಡಿಸುವುದಾಗಿ ನರಗುಂದದ ಶ್ರೀ ಸಿದ್ದಲಂಗೆಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷನಾದ ವೀರನಗೌಡ ಬಸನಗೌಡ ಪಾಟೀಲ ಎಂಬಾತನು ಆಮಿಷ ಒಡ್ಡಿ ಪ್ರತಿಯೊಬ್ಬರಿಂದ 2 ಲಕ್ಷ ದಿಂದ 5 ಲಕ್ಷ ರೂವರೆಗೆ ಹಣವನ್ನು ಪಡೆದು ನಂತರ ಸರ್ಕಾಲ ಉದ್ಯೋಗವನ್ನು ಕೋಗಿಸದೇ , ಕೊಟ್ಟಂತಹ ಹಣವನ್ನು ವಾಪಸ್ಸು ಕೊಡದೆ ಮೋಸ ಮಾಡಿರುತ್ತಾರೆಂದು ಮಾನ್ಯ ಮುಖ್ಯಮಂತ್ರಿಗಳಿಗೆ ದೂರನ್ನು ಸಲ್ಲಿಸಿದ್ದರು . ಈ ಬಗ್ಗೆ ದಿ : 07 – 03 – 2019 ರಂದು ವೀರನಗೌಡ ಬಸನಗೌಡ ಪಾಟೀಲನಿಂದ ವಂಚನೆಗೊಳಗಾದ ಕನಕಪುರದ ವಾಸಿ ಶಿವು ಎಂಬುವರು ಬೆಂಗಳೂರು ನಗರದ ಉಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮೋಸದ ದಾಖಲಿಸಿದ್ದರು . ಪ್ರಕರಣದ ಗಂಭೀರತೆಯನ್ನು ಅಲತ ಪೋಲೀಸ್ ಆಯುಕ್ತರು ಪ್ರಕರಣವನ್ನು ತನಿಖೆಗಾಗಿ ಸಿಸಿಬಿ ಘಟಕಕ್ಕೆ ವರ್ಗಾಯಿಸಿರುತ್ತಾರೆ . ಅದರಂತೆ ಶ್ರೀ ಅಶೋಕ್ ಕುಮಾರ್ , ಐಪಿಎಸ್ , ಅಪರ ಪೊಲೀಸ್ ಆಯುಕ್ತರು , ಅಪರಾಧ ರವರ ಮಾರ್ಗದರ್ಶನದಲ್ಲಿ , ಶ್ರೀ , ಇಲಿಶ್ ಎಸ್ , ಐಪಿಎಸ್ , ಉಪ ಪೊಲೀಸ್ ಆಯುಕ್ತರು , ಅಪರಾಧ ರವರ ಮೇಲ್ವಿಚಾರಣೆಯಲ್ಲಿ ತನಿಖೆ ಆರಂಭಿಸಿದ ಸಿಸಿಬಿ ಅಧಿಕಾರಿಗಳು , ಈ ದಿನ ನರಗುಂದದ ಶ್ರೀ ಸಿದ್ದeಂಗೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷನಾದ ವೀರನಗೌಡ ಬಸನಗೌಡ ಪಾಟೀಲ ಎಂಬುವರನ್ನು ದಸ್ತಗಿರಿ ಮಾಡಿ , ಆತನನ್ನು ವಿಚಾರಣೆಗೆ ಒಳಪಡಿಸಿರುತ್ತಾರೆ . ವಿಚಾರಣಾ ಕಾಲದಲ್ಲಿ ಈತನು ಮೂಲತ : ಗದಗ ಜಿಲ್ಲೆಯ ನರಗುಂದದಲ್ಲಿ ಶ್ರೀ ಸಿದ್ದeಂಗೇಶ್ವರ ಶಿಕ್ಷಣ ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷನಾಗಿದ್ದು , ಸುಮಾರು 4 – 5 ವರ್ಷಗಳಿಂದ ಉತ್ತರ ಕರ್ನಾಟಕದ ಮುಗ್ಧ ಜನರೊಂದಿಗೆ ಅತ್ಯಂತ ನೈಪುಣ್ಯತೆಯಿಂದ ಮಾತನಾಡಿ ಅವಲಗೆ ಸುಳ್ಳು ಭರವಸೆಗಳನ್ನು ನೀಡಿ , ಬಡವರು ಹಾಗೂ ಮದ್ಯಮ ವರ್ಗದ ಪೋಷಕರಿಗೆ ಅವರ ಮಕ್ಕಳಿಗೆ ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಿಗೆ ಕರೆಸಿಕೊಂಡು , ಅವಲಂದ ತಲಾ 2 ರಿಂದ 5 ಲಕ್ಷ ರೂಗಳವರೆಗೆ ಹಣ ಹಾಗೂ ಬಯೋಡಾಟಾವನ್ನು ಸರ್ಕಾಲಿ ನಕಲ ಕೊಡಿಸುವುದಾಗಿ ಹೇಳಿ ಸಂಗ್ರಹಿಸಿರುತ್ತಾನೆ .

ಈತನು ಇಲ್ಲಿಯವರೆಗಿನ ಸುಮಾರು 75 ರಿಂದ 80 ಲಕ್ಷ ರೂಗಳನ್ನು ಪಡೆದು ವಂಚಿಸಿರುವುದು ತನಿಖೆಯಿಂದ ಕಂಡು ಬಂದಿರುತ್ತದೆ . ಈ ಕಾರ್ಯಾಚರಣೆಯನ್ನು ಬೆಂಗಳೂರು ನಗರದ ಕೇಂದ್ರ ಅಪರಾಧ ವಿಭಾಗದ ಅಪರ ಆಯುಕ್ತರಾದ ಶ್ರೀ . ಅಲೋಕ್ ಕುಮಾರ್ , ಐ . ಪಿ . ಎಸ್ , ಮತ್ತು ಉಪ ಪೊಲೀಸ್ ಆಯುಕ್ತರು , ಅಪರಾಧ ರವರಾದ ಶ್ರೀ ಗಿರೀಶ್ ಎಸ್ , ಐ . ಪಿ . ಎಸ್ . ರವರ ನೇರ ಮಾರ್ಗದರ್ಶನದಲ್ಲಿ ಎ . ಸಿ . ಪಿ . ರವರಾದ ಶ್ರೀ . ಬಿ . ಆರ್ . ವೇಣುಗೋಪಾಲ್ ರವರ ನೇತೃತ್ವದಲ್ಲಿ , ಪೋಲೀಸ್ ಇನ್ಸ್‌ಪೆಕ್ಟರ್‌ಗಳಾದ ಶ್ರೀ ಕೆ . ಸಿ , ಲಲಿ , ಶ್ರೀ ಪಿ . ಎಂ . ಐವಾಕರ್ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡವು ಯಶಸ್ವಿಗೊಳಿಸಿರುತ್ತಾರೆ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.