“LARR ACT , 2013 ಕರ್ನಾಟಕ ತಿದ್ದುಪಡಿ ವಿಧೇಯಕ – 2019” ಬಿ . ವಿ . ರಾಮಚಂದ್ರ ರೆಡ್ಡಿ , ಮಾಜಿ ಶಾಸಕರಿಂದ- ಪತ್ರಿಕಾ ಘೋಷ್ಠಿ

“LARR ACT , 2013 ಕರ್ನಾಟಕ ತಿದ್ದುಪಡಿ ವಿಧೇಯಕ – 2019”

* ರಾಜ್ಯ ತಿದ್ದುಪಡಿಗಳು ರಾಜ್ಯಾಂಗದತ್ತವಾಗಿ ಬಂದ ರೈತರ ಹಕ್ಕುಗಳನ್ನು ಉಲ್ಲಂಘನೆ ಮಾಡಿದೆ . ಭೂ ಸ್ವಾಧೀನಕ್ಕೆ ಮುಂಚಿತವಾಗಿ ರೈತರ ಒಪ್ಪಿಗೆ , ಸಾಮಾಜಿಕ ಪರಿಣಾಮಗಳ ಅಧ್ಯಯನಗಳನ್ನು ಕೈಬಿಡಲಾಗಿದೆ .

* ರೈತರ ರಕ್ತ ಹೀರುತ್ತಿದ್ದ ಭೂ ಸ್ವಾಧೀನ ಕಾಯ್ದೆ 1994ರ ಬ್ರಿಟಿಷ್ ಕಾಯ್ದೆಯಾಗಿದ್ದು , ರೈತರ ಸಂಕಷ್ಟಗಳ ವಿಮೋಚನೆಗೆ ಯುಪಿಎ ಸರ್ಕಾರ 2013ರಲ್ಲಿ LARR ಕಾಯ್ದೆಯನ್ನು ಜಾರಿಗೆ ತಂದಿತು , ಇದರಿಂದ ಸಂಪೂರ್ಣ ಅಲ್ಲದಿದ್ದರು ಬಹಳ ಮಟ್ಟಿಗೆ ರೈತರ ಕಷ್ಟಗಳನ್ನು ನಿವಾರಣೆ ಮಾಡಲಾಯಿತು . *LARR ACT , 2013 ಜಾರಿಗೆ ತರಲು ಯುಪಿಎ ಆಡಳಿತದಲ್ಲಿ ಸಂಸತ್ತಿಗೆ 7 ವರ್ಷಗಳ ಬೇಕಾಯಿತು . ಶ್ರೀ ಕಲ್ಯಾಣ್ ಸಿಂಗ್ , ಶ್ರೀಮತಿ ಸುಮಿತ್ರಾ ಮಹಾಜನ್ ನೇತೃತ್ವದ ಎರಡು ಜಂಟಿ ಸಮಿತಿಗಳ ಅಧ್ಯಯನದ ನಂತರ , ಹಾಗೂ ಶ್ರೀ ಅರುಣ್ ಜೇಟ್ಲಿ ಮತ್ತು ಶ್ರೀಮತಿ ಸುಷ್ಮಾ ಸ್ವರಾಜ್ ರವರ ತಿದ್ದುಪಡಿಗಳನ್ನು ಸೇರಿಸಿ LARR ACT , 2013 ಜಾರಿಗೆ ಯುಪಿಎ ಸರ್ಕಾರ ಯಶಸ್ವಿಯಾಗಿತ್ತು .

• ಯುಪಿಎ ಸರ್ಕಾರ ಏಳು ವರ್ಷಗಳ ಪ್ರಯತ್ನದಿಂದ ರೈತರ ಪರ ಕಾಯ್ದೆಯಾಗಿದ್ದು , ಈ ರಾಜ್ಯ ಸರ್ಕಾರ ಒಂದು ಘಳಿಗೆಯಲ್ಲಿ ರೈತರ ಹಿತಾಸಕ್ತಿಯನ್ನು ಕಡೆಗಣಿಸಿದೆ , ರೈತರ ಕಣ್ಣೀರು ಒರೆಸಲು ರಾಜ್ಯ ಪರದಾಡುತ್ತಿದ್ದು , ಮೊತ್ತೊಂದೆಡೆ ರೈತ ಕಣ್ಣಲ್ಲಿ ರಕ್ತ ಹರಿಸಲು ಯತ್ನಿಸುತ್ತಿದೆ .

• ಅಭಿವೃದ್ಧಿ ಕಾರ್ಯಗಳಿಗೆ ಗ್ರಾಮ ಸಭೆಯಿಂದ ಚರ್ಚೆ ಆಗಬೇಕು ಎನ್ನುವ ಸರ್ಕಾರ ಸಾಮಾಜಿಕ ಪರಿಣಾಮಗಳ ಅಧ್ಯಯನಕ್ಕೆ ತಡೆ ಹಾಕಿದ್ದು , ಪ್ರಜಾ ಪ್ರಭುತ್ವದ ವ್ಯವಸ್ಥೆಯ ಕಗ್ಗೂಲೆಯನ್ನು ಈ ತಿದ್ದುಪಡಿ ತಂದಿದೆ .

• LARR ACTನಿಂದ ಯಾವ ಯೋಜನೆಯು ತೊಂದರೆಗೆ ಸಿಕ್ಕಿಲ್ಲ . ವಿಶೇಷವಾಗಿ ಈ ಕಾಯ್ದೆ ಜಾರಿಗೆ ಬಂದ ಮೇಲೆ ಬೆಂಗಳೂರು ಮೆಟ್ರೋ ಕಾಮಗಾರಿ ಸಕಾಲದಲ್ಲಿ ಕಾಮಗಾರಿ ತ್ವರಿತಗತಿಯಲ್ಲಿ ಮುಗಿಯುತ್ತಿರುವುದು ಗಮನಿಸತಕ್ಕದ್ದು .

• LARR ಕಾಯ್ದೆ ಸರ್ಕಾರಿ ಹಾಗೂ ಸರ್ಕಾರಿ ಸಂಸ್ಥೆಗಳ ಯೋಜನೆಗಳಿಗೆ ಸೀಮಿತವಿದ್ದು , ಖಾಸಗಿ ಯೋಜನೆಗಳಿಗೆ ಶೇಕಡ 80ರಷ್ಟು ರೈತರ ಒಪ್ಪಿಗೆ ಪಡೆಯಬೇಕಾಗಿತ್ತು . ತಿದ್ದುಪಡಿ ವಿಧೇಯಕದಲ್ಲಿ ಅದನ್ನು ತೆಗೆಯಲಾಗಿದೆ . ಕೈಗಾರಿಕಾ , ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ತಲೆಬಾಗಿ ಸರ್ಕಾರ ರೈತ ವಿರೋಧಿ ತಿದ್ದುಪಡಿ ವಿಧೇಯಕವನ್ನು ತಂದಿದೆ .

*ಶಾಸನದ ತಿದ್ದುಪಡಿಶಾಸಕರ ಕರ್ತವ್ಯ , ಹಕ್ಕು ಸಹಾ . ಆದರೆ ವಿಧಾನ ಮಂಡಲದಲ್ಲಿ ಒಂದು ಘಳಗೆಯೂ ಚರ್ಚೆಯಾಗದೆ 4 ಕೋಟಿ ರೈತಾಪಿ ಜನರಿಗೆ ಪೀಡಿತವಾದ ವಿಧೇಯಕ ತಿದ್ದುಪಡಿಯಾಗಿರುವುದು ಪ್ರಜಾಪ್ರಭುತ್ವದ ಇತಿಹಾಸದಲ್ಲಿ ಇದೇ ಮೊದಲು , ನಾಚಿಕೆಗೇಡು . *ಮಸೂದೆಯನ್ನು ವಿಧಾನ ಸಭೆಯಲ್ಲಿ ಚರ್ಚಿಸಿದ ನಂತರ ಬರುವ ತಿದ್ದುಪಡಿಯನ್ನು ಜಾರಿ ಮಾಡಬೇಕು . ರಾಜ್ಯಪಾಲರಾದರೂ ಹಿಂದಿರುಗಿಸಿದಲ್ಲಿ ಅಥವಾ ಸರ್ಕಾರ ವಾಪಸ್ಸು ಪಡೆದು ವಿಧಾನಮಂಡಲದಲ್ಲಿ ಚರ್ಚೆಯಾಗಲಿ ,

• ಕಾಂಗ್ರೆಸ್ ಅಧ್ಯಕ್ಷ ಶ್ರೀ ರಾಹುಲ್ ಗಾಂಧಿಯವರು ಈ ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ , ರೈತರ ಪರ ನಿಂತಿರುವಾಗ ಮಾತೆತ್ತಿದರೆ ಹೈ ಕಮ್ಯಾಂಡ್ ಎನ್ನುವ ರಾಜ್ಯ ಕಾಂಗ್ರೆಸ್ ನಾಯಕರು ರಾಹುಲ್ ಗಾಂಧಿಯವರ ಇಟ್ಟಿಗೆ ವಿರುದ್ಧ ವರ್ತಿಸುತ್ತಿರುವುದು ಸೋಜಿಗ .

City Today News

(citytoday.media)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s