“ನನಗೆ ಬಹಳಷ್ಟು ನೋವುಂಟಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ” -ವೈಜನಾಥ ಪಾಟೀಲ ಮಾಜಿ ಸಚಿವರು , ಕಲಬುರಗಿ .

ಕರ್ನಾಟಕ ರಾಜ್ಯದಲ್ಲಿಯೇ ಶೈಕ್ಷಣಿಕ , ಆರ್ಥಿಕ ಹಾಗೂ ಅಭಿವೃದ್ಧಿಯಲ್ಲಿ ಹಿಂದುಳಿದ ಹೈದ್ರಾಬಾದ ಕರ್ನಾಟಕ ಪ್ರದೇಶದ ಅಭಿವೃದ್ದಿಗಾಗಿ ಹಾಗೂ 371ನೇ ಕಲಂ ತಿದ್ದುಪಡಿಗಾಗಿ ಹೈದ್ರಾಬಾದ ಕರ್ನಾಟಕ ಹೋರಾಟ ಸಮಿತಿ ಹಾಗೂ ಅನೇಕ ಕನ್ನಡಪರ ಸಂಘಟನೆಗಳು ಸೇರಿ ಹೋರಾಟ ಮಾಡುವ ಮೂಲಕ ಈ ಭಾಗದಲ್ಲಿ ಜನಜಾಗೃತಿ ಮೂಡಿಸಿದಾಗ , ಅಂದಿನ ಮುಖ್ಯಮಂತ್ರಿ ಶ್ರೀ ಬಿ . ಎಸ್ . ಯಡಿಯೂರಪ್ಪನವರು ವಿಧಾನಸಭೆ ಮತ್ತು ವಿಧಾನ ಪರಿಷತ್‌ಗಳಲ್ಲಿ ಸರ್ವಾನುಮತದ ನಿರ್ಣಯ ಕೈಗೊಂಡು , ಕೇಂದ್ರ ಸರ್ಕಾರಕ್ಕೆ ಕಳುಹಿಸಿದರು . ಈ ರಸ್ತಾ ರೋಕೋ , ರೈಲು ರೋಕೊ ಹಾಗೂ ಬಂದ್‌ನಂಥಹ ಉಗ್ರ ಹೋರಾಟಗಳಿಗೆ ಮತ್ತು ರಾಜ್ಯ ಸರಕಾರದ ನಿರ್ಣಯದಿಂದ ಕೇಂದ್ರ ಸರಕಾರ 371ಕ್ಕೆ ತಿದ್ದುಪಡಿ ತರಲಾಯಿತು . ಆದರೆ ದುರ್ದೈವದಿಂದ ಆ ತಿದ್ದುಪಡಿಯ ಲಾಭ ಹೈದ್ರಾಬಾದ ಕರ್ನಾಟಕದವರಿಗೆ ಸರಿಯಾಗಿ ಸಿಗದಂತೆ ನೋಡಿಕೊಳ್ಳಲಾಗುತ್ತಿದೆ . ಹೊಸದಾಗಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರಕಾರಕ್ಕೂ ಈ ವಿಷಯ ಗಮನಕ್ಕೆ ತರಲಾಗಿದೆ . ಆದರೂ ಹೊಸ ಸರಕಾರದಲ್ಲಿಯೂ ಕಾಂಗ್ರೆಸ್ ಪಕ್ಷದವರ ಪ್ರಮುಖ ಪಾತ್ರವಿದ್ದರೂ ಅನುಷ್ಠಾನಕ್ಕೆ ತರುವಲ್ಲಿ ವಿಫಲವಾಗಿದೆ . ಕಳೆದ 5 ವರ್ಷದ ಹಿಂದೆ ಸಂವಿಧಾನದ 371ನೇ ಸಂಸತ್ತಿನಲ್ಲಿ ತಿದ್ದುಪಡಿ ಮಾಡಲಾಯಿತು . ಅದರ ಪ್ರಕಾರ ಹೈದ್ರಾಬಾದ ಕರ್ನಾಟಕ ಪ್ರದೇಶದಲ್ಲಿನ ಸರಕಾರದ ಎಲ್ಲ ನೇಮಕಾತಿಗಳಲ್ಲಿ ಮೀಸಲಾತಿ ಒದಗಿಸಬೇಕೆಂದು ಅಂದಿನ ಸರಕಾರಕ್ಕೆ ಸೂಚನೆ ಕೊಡಲಾಗಿತ್ತು . ಆ ಸೂಚನೆ ಪ್ರಕಾರ ಸರ್ಕಾರಿ ಸೇವೆಗಳಲ್ಲಿ ಬರುವ ಎ ಗ್ರೇಡ್ 60 % ಬಿ ಗ್ರೇಡ್‌ದಲ್ಲಿ ಬರುವ ನೌಕರರಿಗೆ 65 % , ಸಿ ಗ್ರೇಡ್ ನೌಕರರಿಗೆ 75 % ಹಾಗೂ ಡಿ ಗ್ರೇಡ್ ನೌಕರರಿಗೆ 80 % ರಷ್ಟು ಮೀಸಲಾತಿ ಒದಗಿಸುವ ಆದೇಶ ಹೊರಡಿಸಲಾಗಿತ್ತು . ಈ ಭಾಗದಲ್ಲಿನ ಪ್ರತಿಯೊಂದು ಇಲಾಖೆಯಲ್ಲಿ ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ಸರ್ಕಾರ ಈ ಭಾಗದ ಖಾಲಿ ಸ್ಥಾನಗಳನ್ನು ತುಂಬದೇ ಹಾಗೇ ಇಟ್ಟಿರುವುದು , ಹೈದ್ರಾಬಾದ ಕರ್ನಾಟಕ ಪ್ರದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಉಪನ್ಯಾಸಕರ ಹುದ್ದೆಗಳು ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದರೂ ಅವುಗಳನ್ನು ತುಂಬದೇ ಇರುವುದರಿಂದ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುತ್ತಿವೆ . ಅದೇ ಪ್ರಕಾರ ಈ ಭಾಗದ ಅಭಿವೃದ್ದಿಗಾಗಿ ಕೋಟ್ಯಾವಧಿ ರೂಪಾಯಿ ವಿವಿಧ ಅಭಿವೃದ್ಧಿ ಕಾಮಗರಿಗಳ ಹೆಸರಿಗೆ ಮಾತ್ರ ಘೋಷಣೆ ಮಾಡಲಾಗುತ್ತಿವೆ . ಆದರೆ ಆ ಹಣ ಖರ್ಚು ಆಗದಂತೆ ಬುದ್ದಿವಂತಿಕೆಯಿಂದ ನೋಡಿಕೊಳ್ಳಲಾಗುತ್ತಿದೆ .

ಸರಕಾರದಿಂದ ಬಿಡುಗಡೆಯಾದ ಹಣ ಖರ್ಚಾಗಬೇಕಾದರೆ ಅದರ ಸಲುವಾಗಿ ಸಿಬ್ಬಂದಿಗಳನ್ನು ನೇಮಕಾತಿ ಮಾಡಬೇಕಾಗುತ್ತದೆ . ಈ ಸಿಬ್ಬಂದಿಗಳನ್ನು ಸಹ ನೇಮಕಾತಿ ಆಗದಂತೆ ನೋಡಿಕೊಳ್ಳಲಾಗುತ್ತಿದೆ . ವೈದ್ಯಕೀಯ , ಇಂಜನೀಯರಿಂಗ್ ಮತ್ತು ಮೊದಲಾದ ವೃತ್ತಿಪರ ಕೋರ್ಸ್‌ಗಳ ಪ್ರವೇಶದಲ್ಲಿ ಸರಿಯಾದ ರೀತಿಯಲ್ಲಿ ಮೀಸಲಾತಿ ಸಿಗುತ್ತಿಲ್ಲ . ಈ ಮೀಸಲತಿಗಳನ್ನು ಪಡೆಯಬೇಕಾದರೆ ಕೆಲವು ಅಧಿಕಾರಿಗಳಿಂದ ಅರ್ಹತಾ ಪತ್ರ ಪಡೆಯಬೇಕಾಗುತ್ತದೆ . ಇದರಿಂದ ಬಹುತೇಕ ಅಭ್ಯರ್ಥಿಗಳು ತೀವ್ರ ತೊಂದರೆ ಅನುಭವಿಸಬೇಕಾಗಿದೆ . ಇನ್ನೊಂದೆಡೆ ಬಹಳಷ್ಟು ಅಭ್ಯರ್ಥಿಗಳು ವಂಚಿತರಾಗುತ್ತಿದ್ದಾರೆ . ಈ ಎಲ್ಲ ವಿಷಯಗಳು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತರಲಾಯಿತು . ಆದರೆ ಅವರು ಈ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ . ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಸಮ್ಮಿಶ್ರ ಸರ್ಕಾರದಲ್ಲಿಯೂ ಕಾಂಗ್ರೆಸ್ ಪಕ್ಷವು ಅಧಿಕಾರದಲ್ಲಿ ಪ್ರಮುಖ ಪಾತ್ರವಹಿಸಿದ್ದರೂ 371 ( ಜೆ ) ಕಲಂನಲ್ಲಿ ಸಿಗಬೇಕಾದ ಲಾಭಗಳು ನಮ್ಮ ನಮ್ಮ ಹೈದ್ರಾಬಾದ ಕರ್ನಾಟಕ ಪ್ರದೇಶದ ಯುವಕರಿಗೆ ಸಿಗುತ್ತಿಲ್ಲ . ಈ ಎಲ್ಲ ವಿಷಯಗಳನ್ನು ಹೈದ್ರಾಬಾದ ಕರ್ನಾಟಕ ಪ್ರದೇಶಕ್ಕೆ ಜಾರಿಗೊಳಿಸದೇ ಇರುವುದರಿಂದ ಈ ಭಾಗದ ಹೋರಾಟಗಾರರಿಗೆ ಹಾಗೂ ವೈಯಕ್ತಿಕವಾಗಿ ನನಗೆ ಬಹಳಷ್ಟು ನೋವುಂಟಾಗಿರುವುದರಿಂದ ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದು , ಇದನ್ನು ತಾವು ಸ್ವೀಕರಿಸಬೇಕಾಗಿ ಕೋರುತ್ತೇನೆ ಎಂದರು.

City Today News

(citytoday.News)

9341997936

Leave a Reply

Please log in using one of these methods to post your comment:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

This site uses Akismet to reduce spam. Learn how your comment data is processed.